• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Urfi Javed: ವಿಚಿತ್ರವಾಗಿ ಬಟ್ಟೆ ಹಾಕ್ಕೊಂಡು ರೆಸ್ಟೋರೆಂಟ್​ಗೆ ಹೋದ ಉರ್ಫಿಗೆ ಎಂಟ್ರಿ ಸಿಗಲಿಲ್ವಂತೆ! ಮುಂದೇನಾಯ್ತು ಅಂತ ನೀವೇ ನೋಡಿ

Urfi Javed: ವಿಚಿತ್ರವಾಗಿ ಬಟ್ಟೆ ಹಾಕ್ಕೊಂಡು ರೆಸ್ಟೋರೆಂಟ್​ಗೆ ಹೋದ ಉರ್ಫಿಗೆ ಎಂಟ್ರಿ ಸಿಗಲಿಲ್ವಂತೆ! ಮುಂದೇನಾಯ್ತು ಅಂತ ನೀವೇ ನೋಡಿ

ಉರ್ಫಿ ಜಾವೇದ್ ಮತ್ತು ರೆಸ್ಟೋರೆಂಟ್​ ಮ್ಯಾನೇಜರ್​

ಉರ್ಫಿ ಜಾವೇದ್ ಮತ್ತು ರೆಸ್ಟೋರೆಂಟ್​ ಮ್ಯಾನೇಜರ್​

ಸದಾ ಒಂದಲ್ಲ ಒಂದು ಮಾದಕವಾಗಿ ಕಾಣಿಸುವ ಬಟ್ಟೆಗಳನ್ನು ಧರಿಸಿ ಪಡ್ಡೆ ಹೈಕ್ಳ ನಿದ್ದೆ ಕೆಡಿಸುವ ಉರ್ಫಿ ಈ ಬಾರಿ ರೆಸ್ಟೋರೆಂಟ್​​ಗೆ ಬಂದು ಅಲ್ಲಿ ಎಂಟ್ರಿ ನೀಡಲಿಲ್ಲ ಅಂತ ಅಲ್ಲಿರುವ ಮ್ಯಾನೇಜರ್ ಜೊತೆ ಜಗಳವಾಡಿದ್ದಾರೆ.

  • Share this:

ಸದಾ ತಾನು ಹಾಕುವ ತುಂಡುಡೆಗಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗುವ ಉರ್ಫಿ ಜಾವೇದ್ (Urfi Javed) ಈ ಬಾರಿ ಬೇರೆಯದ್ದೆ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಹೌದು, ಸದಾ ಒಂದಲ್ಲ ಒಂದು ಮಾದಕವಾಗಿ ಕಾಣಿಸುವ ಬಟ್ಟೆಗಳನ್ನು ಧರಿಸಿ ಪಡ್ಡೆ ಹೈಕ್ಳ ನಿದ್ದೆ ಕೆಡಿಸುವ ಉರ್ಫಿ ಈ ಬಾರಿ ರೆಸ್ಟೋರೆಂಟ್​​ಗೆ ಬಂದು ಅಲ್ಲಿ ಎಂಟ್ರಿ ನೀಡಲಿಲ್ಲ ಅಂತ ಅಲ್ಲಿರುವ ಮ್ಯಾನೇಜರ್ (Manager) ಜೊತೆ ಜಗಳವಾಡಿದ್ದಾರೆ. ಏಪ್ರಿಲ್ 25 ರಂದು ಉರ್ಫಿ ಜಾವೇದ್ ರೆಸ್ಟೋರೆಂಟ್ (Restaurant) ಮ್ಯಾನೇಜರ್ ಜೊತೆ ರೆಸ್ಟೋರೆಂಟ್​ನಲ್ಲಿ ನಡೆಯುತ್ತಿರುವ ಯಾವುದೋ ಒಂದು ಕಾರ್ಯಕ್ರಮಕ್ಕೆ ಸೀಟ್ ವಿಚಾರವಾಗಿ ವಾಗ್ವಾದ ನಡೆಸಿದ್ದಾರೆ.


ಅಲ್ಲೇ ಇದ್ದಂತಹ ಜನರು ಈ ವಾಗ್ವಾದವನ್ನು ಮೊಬೈಲ್ ಫೋನ್ ನಲ್ಲಿ ರೆಕಾರ್ಡ್ ಸಹ ಮಾಡಿಕೊಂಡಿದ್ದಾರೆ. ಯಾವುದೇ ಸೀಟ್ ಖಾಲಿ ಇಲ್ಲ ಅಂತ ರೆಸ್ಟೋರೆಂಟ್ ನ ಮ್ಯಾನೇಜರ್ ಹೇಳಿದ್ದಕ್ಕೆ ಉರ್ಫಿ ಫುಲ್ ಗರಂ ಆಗಿ, ತನಗೆ ಸೀಟು ತನ್ನ ಬಟ್ಟೆಗಳಿಂದಾಗಿ ಕೊಡುತ್ತಿಲ್ಲ ಅಂತ ದೊಡ್ಡ ಜಗಳವನ್ನೇ ಶುರು ಮಾಡಿದರು.


ತನ್ನ ಶಾಂತತೆಯನ್ನು ಕಳೆದುಕೊಂಡು ರೆಸ್ಟೋರೆಂಟ್ ನ ಮ್ಯಾನೇಜರ್ ಮೇಲೆ ಹರಿಹಾಯ್ದರು. ನಂತರ ತನ್ನ ಸೋಶಿಯಲ್ ಮೀಡಿಯಾ ಹ್ಯಾಂಡಲ್ ನಲ್ಲಿ ಅದನ್ನು ಶೇರ್​​ ಮಾಡಿಕೊಂಡು ಅದಕ್ಕೆ ತನ್ನ ಫ್ಯಾಷನ್ ಆಯ್ಕೆಯಿಂದಾಗಿ ತನಗೆ ರೆಸ್ಟೋರೆಂಟ್ ನಲ್ಲಿ ಎಂಟ್ರಿ ನಿರಾಕರಿಸಲಾಗಿದೆ ಎಂದು ಉರ್ಫಿ ಹೇಳಿಕೊಂಡಿದ್ದಾರೆ.


ಇದನ್ನೂ ಓದಿ: ಪ್ಲೀಸ್ ಹೇರ್​ಸ್ಟೈಲ್ ಚೇಂಜ್ ಮಾಡಿ! ಅದ್ಭುತವಾಗಿ ಕಾಣಿಸಿದ್ರೂ ಐಶ್ ಟ್ರೋಲ್


ರೆಸ್ಟೋರೆಂಟ್ ಒಳಗೆ ಹೋಗಲು ಉರ್ಫಿಗೆ ಎಂಟ್ರಿ ಏಕೆ ನಿರಾಕರಿಸಲಾಯಿತು?


ಈಗ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಉರ್ಫಿ ಅವರು ರೆಸ್ಟೋರೆಂಟ್ ಕಡೆಗೆ ಕಾರಿನಿಂದ ಇಳಿದು ಬರುವುದನ್ನು ವಿಡಿಯೋ ಆರಂಭದಲ್ಲಿ ನೋಡಬಹುದು. ಮ್ಯಾನೇಜರ್ ತಕ್ಷಣವೇ ಅವರನ್ನು ನೋಡಿ ಯಾವುದೇ ಸೀಟ್ ಖಾಲಿ ಇಲ್ಲ ಅಂತ ಹೇಳಿದರು. ಇದನ್ನು ಕೇಳಿದ ಉರ್ಫಿಗೆ ಕೋಪ ಬಂದು, ತನಗೆ ತನ್ನ ಬಟ್ಟೆಯ ಕಾರಣದಿಂದಾಗಿ ರೆಸ್ಟೋರೆಂಟ್ ಒಳಗೆ ಎಂಟ್ರಿ ನೀಡುತ್ತಿಲ್ಲ ಅಂತ ದೊಡ್ಡ ರಾದ್ದಾಂತವನ್ನೇ ಮಾಡಿದರು.


ಕೋಪಗೊಂಡ ಉರ್ಫಿ "ನನ್ನ ಹೆಸರು ನಿನಗೆ ಗೊತ್ತಾ? ಉರ್ಫಿ ಜಾವೇದ್. ನನ್ನ ಸಲುವಾಗಿ ಸ್ಥಳ ಕೇಳುವುದಕ್ಕೂ ಮುಂಚೆಯೇ ಖಾಲಿ ಇರುತ್ತದೆ. ಒಳಗೆ ಹೋಗಿ ನೋಡಿಕೊಂಡು ಬಾ" ಅಂತ ಮ್ಯಾನೇಜರ್ ಗೆ ಹೇಳಿದರು. ಉರ್ಫಿ ಇಷ್ಟಕ್ಕೆ ಸುಮ್ಮನಿರದೆ "ಇದು ಸೀಟಿನ ನಾಟಕವಲ್ಲ, ನನ್ನ ಬಟ್ಟೆಯ ಸಲುವಾಗಿ ಇವರು ನನಗೆ ಎಂಟ್ರಿ ಕೊಡುತ್ತಿಲ್ಲ. ನನಗೆ ಇದೆಲ್ಲವೂ ಅರ್ಥವಾಗುತ್ತದೆ" ಅಂತ ಹೇಳಿದರು.


ಉರ್ಫಿ ಜಾವೇದ್ ಮತ್ತು ರೆಸ್ಟೋರೆಂಟ್​ ಮ್ಯಾನೇಜರ್​


ಇದಕ್ಕೆ ಮ್ಯಾನೇಜರ್ ಸಹ ಸುಮ್ಮನಿರದೆ “ಮೇಡಂ ನಿಮ್ಮ ಬಟ್ಟೆ ವಿಷಯವಲ್ಲ, ಸೀಟ್ ಖಾಲಿ ಇಲ್ಲ, ಕಾರ್ನೀವಾಲ್ ನಡೀತಾ ಇದೆ, ಬೇಕಾದರೆ ಆನ್ಲೈನ್ ನಲ್ಲಿ ನೀವು ಬುಕ್ ಮಾಡಿಕೊಳ್ಳಿ, ಅದರಲ್ಲಿ ನಿಮಗೆ ಡಿಸ್ಕೌಂಟ್ ಸಹ ಸಿಗುತ್ತೆ. ದಯವಿಟ್ಟು ವೀಡಿಯೋ ಮಾಡಬೇಡಿ” ಅಂತ ಕೇಳುತ್ತಿರುವುದು ಈ ವೀಡಿಯೋದಲ್ಲಿ ನೋಡಬಹುದು.




ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಏನಂತ ಬರೆದುಕೊಂಡಿದ್ದಾಳೆ ಉರ್ಫಿ?


ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ, ಉರ್ಫಿ ಜಾವೇದ್ ರೆಸ್ಟೋರೆಂಟ್ ಕುರಿತು "ಇದು ನಿಜವಾಗಿಯೂ 21ನೇ ಶತಮಾನದ ಮುಂಬೈ ನಗರವೇ? ಇಂದು ರೆಸ್ಟೋರೆಂಟ್ ನಲ್ಲಿ ನನಗೆ ಎಂಟ್ರಿ ನಿರಾಕರಿಸಲಾಯಿತು.


ನನ್ನ ಫ್ಯಾಷನ್ ಆಯ್ಕೆಗಳನ್ನು ನೀವು ಒಪ್ಪದಿದ್ದರೆ ಪರವಾಗಿಲ್ಲ. ಅದಕ್ಕಾಗಿ ನನ್ನನ್ನು ವಿಭಿನ್ನವಾಗಿ ಪರಿಗಣಿಸುವುದು ಸರಿಯಲ್ಲ ಮತ್ತು ನಿಮಗೆ ಇಷ್ಟವಿದ್ದರೆ ಅದನ್ನು ಒಪ್ಪಿಕೊಳ್ಳಿ. ಕೆಲವು ಕುಂಟು ನೆಪಗಳನ್ನು ನೀಡಬೇಡಿ. ತುಂಬಾನೇ ಬೇಸರವಾಗಿದೆ ನನಗೆ! ದಯವಿಟ್ಟು ಈ ವಿಡಿಯೋವನ್ನು ನೋಡಿ" ಎಂದು ಬರೆದು ಕೊಂಡಿದ್ದಾರೆ.




ಉರ್ಫಿ ಜಾವೇದ್ ಒಟಿಟಿಯಲ್ಲಿ ಪ್ರಸಾರವಾದ ಹಿಂದಿ ಬಿಗ್‌ಬಾಸ್ ನಲ್ಲಿ ಭಾಗವಹಿಸಿದ ನಂತರ ಖ್ಯಾತಿಯನ್ನು ಗಳಿಸಿದರು. ಉರ್ಫಿ ಜಾವೇದ್ ಕೊನೆಯ ಬಾರಿಗೆ ಸ್ಪ್ಲಿಟ್ ವಿಲ್ಲಾ ಎಕ್ಸ್ 4 ನಲ್ಲಿ ಕಾಣಿಸಿಕೊಂಡಿದ್ದರು.

top videos
    First published: