Urfi Javed: ಕೇವಲ 10 ರೂಪಾಯಿಯಲ್ಲಿ ರೆಡಿಯಾಯ್ತು ಫ್ಯಾಷನ್ ಉಡುಗೆ; ಇದು ಉರ್ಫಿ ಜಾವೇದ್ ಕೊಟ್ಟ ಟಿಪ್ಸ್

ಮಧ್ಯಮ ವರ್ಗದವರು ಸಹ ಫ್ಯಾಷನ್​ ಮಾಡಲು ದುಬಾರಿ ಬಟ್ಟೆಗಳೇ ಬೇಕಾಗಿಲ್ಲ. ಬದಲಿಗೆ ನೀವು ವಿನೂತನವಾಗಿ ಚಿಂತಿಸಿ ಎಂದು ಉರ್ಫಿ ಹೇಳಿದ್ದಾರೆ. ಸ್ನೇಹಿತೆಯರಿಗೆ 10 ರೂಪಾಯಿಯಲ್ಲಿ ತಯಾರಿಸಿದ ವಿನೂತನ ಡ್ರೆಸ್​​ ಹಾಕಿಸಿದ್ದಾರೆ.

ಉರ್ಫಿ ಜಾವೇದ್​

ಉರ್ಫಿ ಜಾವೇದ್​

  • Share this:
ಹಿಂದಿಯ ಬಿಗ್ ಬಾಸ್ OTT (Big boss) ಖ್ಯಾತಿಯ ಉರ್ಫಿ ಜಾವೇದ್ (Urfi Javed) ತನ್ನ ವಿಚಿತ್ರ ಫ್ಯಾಷನ್ (fashion) ಆಯ್ಕೆಗಳಿಗೆ ಹೆಸರುವಾಸಿಯಾಗಿದ್ದಾರೆ. ಯಾವಾಗಲೂ ಏನಾದರೂ ವಿಭಿನ್ನ ಹಾಗೂ ವಿಚಿತ್ರವಾಗಿ ಬಟ್ಟೆ ಹಾಕುವ ಮೂಲಕ ಸುದ್ದಿಯಲ್ಲಿರುತ್ತಾರೆ. ಜೊತೆಗೆ ಉರ್ಫಿ ತನ್ನ ಹಾಟ್‌ನೆಸ್‌ನಿಂದ ನೆಟ್ಟಿಗರ ಗಮನ ಸೆಳೆಯುತ್ತಿರುತ್ತಾರೆ. ಅದೇನೇ ಮಾಡಿದ್ರೂ ನೆಟ್ಟಿಗರು ಇವರನ್ನು ಬಿಡುವ ಲಕ್ಷಣಗಳಿಲ್ಲ. ಒಂದೆಲ್ಲಾ ಒಂದು ವಿಚಾರಕ್ಕೆ ಟ್ರೋಲ್ ಮಾಡುತ್ತಾರೆ. ಉರ್ಫಿ ಈಗ ಫ್ಯಾಷನ್ ಐಕಾನ್ ಎಂದು ಕರೆಸಿಕೊಳ್ತಿದ್ದಾರೆ. ಪ್ರತಿ ಬಾರಿಯೂ ಉರ್ಫಿ ಹೊಸ ಹೊಸ ಲುಕ್​ನಲ್ಲಿ ಮಿಂಚುತ್ತಿದ್ದಾರೆ. ಇದೀಗ ಉರ್ಫಿಯ 10 ರೂ ಖರ್ಚು ಮಾಡಿ ಡ್ರೆಸ್​​ ರೆಡಿ ಮಾಡಿ ಸ್ನೇಹತರಿಗೆ ಹಾಕಿಸಿದ್ದಾರೆ.

10 ರೂಪಾಯಿಯಲ್ಲಿ ಮಾಡ್ರೆನ್​ ಡ್ರೆಸ್ ರೆಡಿ

ಮಧ್ಯಮ ವರ್ಗದವರು ಸಹ ಫ್ಯಾಷನ್​ ಮಾಡಲು ದುಬಾರಿ ಬಟ್ಟೆಗಳೇ ಬೇಕಾಗಿಲ್ಲ. ಬದಲಿಗೆ ನೀವು ವಿನೂತನವಾಗಿ ಚಿಂತಿಸಿ ಎಂದು ಉರ್ಫಿ ಹೇಳಿದ್ದಾರೆ. ಸರಳವಾದ ಬಟ್ಟೆಗಳಿಂದ ನೀವು ಏನು ಬೇಕಾದರೂ ಫ್ಯಾಷನ್ ಮಾಡಬಹುದು ಎಂದು ಹೇಳಿದ್ರು. ನಾನು ಹೃದಯದಿಂದ ನಿಜವಾಗಲೂ ಮಧ್ಯಮ ವರ್ಗದವಳು ಹೀಗಾಗಿ ಮಧ್ಯಮವರ್ಗದವರ ಫ್ಯಾಷನ್​ಗೆ ಈ ಸಲಹೆ ನೀಡೋದಾಗಿ ಉರ್ಫಿ ವಿಡಿಯೋದಲ್ಲಿ ಹೇಳಿದ್ದಾರೆ. ಸ್ನೇಹಿತೆಯರಿಗೆ 10 ರೂಪಾಯಿಯಲ್ಲಿ ತಯಾರಿಸಿದ ವಿನೂತನ ಡ್ರೆಸ್​​ ಹಾಕಿಸಿದ್ದಾರೆ.










View this post on Instagram






A post shared by Uorfi (@urf7i)






ಅಮೃತಶಿಲೆ, ಹೂವುಗಳು, ಕನ್ನಡಿ, ಪ್ಲಾಸ್ಟಿಕ್, ಚಿಂದಿ, ಹಳೆಯ ಬಟ್ಟೆ, ನಾಣ್ಯಗಳು ಮತ್ತು ಪಿನ್‌ಗಳಿಂದ ಮಾಡಿದ ಬಟ್ಟೆಗಳನ್ನು ಉರ್ಫಿ ಹಾಕಿರೋದನ್ನು ನೋಡಿದ್ದೇವೆ.

ಉರ್ಫಿ ತನ್ನ ಸ್ನೇಹಿತರು ಹಾಗೂ ಸಹ ನಟಿಯರಿಗೆ ಹೊಸ ಫ್ಯಾಷನ್​ ಬಟ್ಟೆ ತಯಾರಿಸಿದ್ದಾರೆ. ಅದು ಯಾವ ಬಟ್ಟೆಯಲ್ಲಿ ಗೊತ್ತಾ. ಒಂದು ಗೋಣಿ ಚೀಲದಲ್ಲಿ ಮತ್ತೊಂದು ಪಿನ್​ಗಳ ಮೂಲಕ ಉರ್ಫಿ ಬಟ್ಟೆಯನ್ನು ತಯಾರಿಸಿ ನೀಡಿದ್ದಾರೆ. ಫ್ಯಾಷನ್​ ಅನ್ನೋದು ದುಬಾರಿ ಬಟ್ಟೆಯಿಂದ ಮಾತ್ರವಲ್ಲ ಕಡಿಮೆ ವೆಚ್ಚದಲ್ಲೂ ಹೊಸ ಬಗೆಯ ಬಟ್ಟೆಗಳನ್ನು ತಯಾರಿ ಹಾಕಿಕೊಳ್ಳಬಹುದು ಎಂದು ತೋರಿಸಿಕೊಟ್ಟಿದ್ದಾರೆ.

ಹೊಸ ಲುಕ್​​ನಲ್ಲಿ ಉರ್ಫಿ ಜಾವೇದ್​​
 ಉರ್ಫಿ ಜಾವೇದ್ ತಮ್ಮ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಹೊಸ ಲುಕ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಸ್ಟೋನ್​ಗಳಿಂದ ಮಾಡಿದ ಡ್ರೆಸ್​ ತೊಟ್ಟು ಉರ್ಫಿ ಮಿಂಚಿದ್ದಾರೆ.  ಸ್ಟೋನ್​ಗಳಿಂದ ಬ್ರೇಲೆಟ್ ಮತ್ತು ಮಿನಿ ಸ್ಕರ್ಟ್ ಅನ್ನು ತಯಾರಿಸಿದಂತಿದೆ ಈ ಡ್ರೆಸ್​​. ವೀಡಿಯೊದ ಆರಂಭದಲ್ಲಿ, ಟ್ರೋಲರ್‌ಗಳು ಆಕೆಯ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದಾರೆ. ಬಳಿಕ ಅದೇ ಕಲ್ಲುಗಳಿಂದ ಉರ್ಫಿ ಡ್ರೆಸ್ ತಯಾರಿಸಿದ್ದಾರೆ.












View this post on Instagram






A post shared by Uorfi (@urf7i)






ಉರ್ಫಿ ವಿಡಿಯೋಗೆ ಕಾಮೆಂಟ್​

ವೀಡಿಯೊವನ್ನು ಹಂಚಿಕೊಂಡ ಉರ್ಫಿ ಈ ರೀತಿ ಬರೆದುಕೊಂಡಿದ್ದಾರೆ. 'ನಿಮ್ಮ ಕಾಮೆಂಟ್​​ಗಳೇ ನಾನು ಈ ರೀತಿ ಡ್ರೆಸ್ ಮಾಡಲು ಸ್ಫೂರ್ತಿ ಎಂದಿದ್ದಾರೆ.. ಸದ್ಯ ಈಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನರ ಗಮನ ಸೆಳೆಯುತ್ತಿದೆ. ಉರ್ಫಿ ಅವರ ಹೊಸ ವೀಡಿಯೋಗೂ ಹಲವು ಕಾಮೆಂಟ್‌ಗಳು ಬಂದಿದೆ.  ಕೆಲವರು ಜೀನಿಯಸ್ ಅಂದಿದ್ದಾರೆ. ಆದ್ರೆ ಕೆಲವರು ಬಂಡೆಗಲ್ಲು, ಕಲ್ಲುಗಳಿಂದ ಹೊಡೆಯಬೇಕು ಎಂದು ಹೇಳುತ್ತಾರೆ. ಅಸಾಧಾರಣ ಎಂದು ಅನೇಕ ಒಳ್ಳೆಯ ಮತ್ತು ಕೆಟ್ಟ ಕಾಮೆಂಟ್‌ಗಳು ವೀಡಿಯೊದಲ್ಲಿ ಬರುತ್ತಿವೆ.

ಇದನ್ನೂ ಓದಿ: ಸೊಳ್ಳೆ ಬತ್ತಿಯಲ್ಲಿ ಮೈ ಮುಚ್ಚಿಕೊಂಡು ಬಂದ ಉರ್ಫಿ! ಕಳಚಿದ್ರೆ ನಿನ್ನ ಕಥೆ ಗೋವಿಂದ ಅಂತ ಟ್ರೋಲ್

ಉರ್ಫಿ ಕೂಡ ಪ್ರಸಿದ್ಧ ಟಿವಿ ನಟಿ

ಉರ್ಫಿ ಕೂಡ ಪ್ರಸಿದ್ಧ ಟಿವಿ ಕಾರ್ಯಕ್ರಮದ ನಟಿ. ಆಕೆಯ ಡ್ರೆಸ್ಸಿಂಗ್ ಸೆನ್ಸ್‌ ನ ಬಗ್ಗೆ  ಹೆಚ್ಚು ಚರ್ಚೆ ಆಗುತ್ತಿದೆ. ಉರ್ಫಿ ಕೂಡ ಕೆಲವು ಟಿವಿ ಧಾರಾವಾಹಿಗಳಲ್ಲಿ ನಟಿಸಿದ್ದು, ಬಿಗ್ ಬಾಸ್ ನಂತಹ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ.
Published by:Pavana HS
First published: