ಉರ್ಫಿ ಚಾವೇದ್ (Urfi Javed) ಹೆಸರು ಕೇಳಿದ್ರೆ ಪಡ್ಡೆ ಹುಡುಗರ ಎದೆ ಬಡಿತ ಹೆಚ್ಚಾಗುತ್ತೆ. ಒಂದೆಲ್ಲಾ ಒಂದು ಕಾರಣದಿಂದ ಸದಾ ಸುದ್ದಿಯಲ್ಲಿರುವ ಉರ್ಫಿ, ತನ್ನ ಫ್ಯಾಷನ್ ನಿಂದಲೇ ಸುದ್ದಿಯಾಗೋದು. ಆಕೆ ಧರಿಸುವ ವಿಚಿತ್ರ, ವಿಚಿತ್ರ ಬಟ್ಟೆಗಳು ತೊಟ್ಟು (Dress) ಯಾವಾಗಲೂ ಟ್ರೋಲ್ (Troll) ಆಗುತ್ತಾರೆ. ಇತ್ತೀಚೆಗೆ ಪ್ಲಾಸ್ಟಿಕ್ ಕವರ್ನಿಂದ ಮೈ ಮುಚ್ಚಿಕೊಂಡು ಬಂದಿದ್ದರು. ಪ್ಲಾಸ್ಟಿಕ್ ಮೆಸ್ನಿಂದ ಮಾಡಿದ ಬ್ರ್ಯಾಲೆಟ್ ನಿಂದ ಮೈ ಮುಚ್ಚಿಕೊಂಡು ಬಂದಿದ್ದಾರೆ.
ಉರ್ಫಿ ಹೊಸ ಫ್ಯಾಷನ್ ವಿಡಿಯೋ
ಉರ್ಫಿ ಮೆಶ್ನಿಂದ ಮಾಡಿದ ಮಿನಿ ಸ್ಕರ್ಟ್ನಲ್ಲಿ ಪೋಸ್ ಕೊಟ್ಟಿದ್ದು ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಪ್ಲಾಸ್ಟಿಕ್ ಜಾಲರಿಯಿಂದ ಮಾಡಿದ ಬ್ರೇಲೆಟ್ ನಿಂದ ಮೈ ಮುಚ್ಚಿಕೊಂಡು ಬಂದಿದ್ದಾಳೆ. ಉರ್ಫಿ ಡಾರ್ಕ್ ರೆಡ್ ಲಿಪ್ಟಿಕ್, ಐ ಲೈನರ್ ಮತ್ತು ಮಸ್ಕರಾ- ಹಾಕಿದ ಕಣ್ಣಿನ ನೋಟ ಪಡ್ಡೆ ಹುಡುಗರನ್ನು ಕುಕ್ಕುವಂತಿದೆ.
ಉರ್ಫಿ ವಿಡಿಯೋ ವೈರಲ್
ಉರ್ಫಿ ತನ್ನ ಹೊಸ ಫ್ಯಾಷನ್ ವೀಡಿಯೋ ಹಂಚಿಕೊಳ್ಳುತ್ತಿದ್ದಂತೆ ಫುಲ್ ವೈರಲ್ ಆಗಿದ್ದು, ನೆಟ್ಟಿಗರು ಬಗೆ ಬಗೆ ಕಮೆಂಟ್ ಮಾಡ್ತಿದ್ದಾರೆ. ಉರ್ಫಿ ಅಭಿಮಾನಿ ಒಬ್ರು "ನಾನು ಅದನ್ನು ಇಷ್ಟಪಡುತ್ತೇನೆ" ಎಂದು ಕಮೆಂಟ್ ಮಾಡಿದ್ರೆ, ಇನ್ನೊಬ್ಬರು "ತುಂಬಾ ಸುಂದರ" ಎಂದು ಬೆಂಕಿ ಇಮೋಜಿ ಹಾಕಿದ್ದಾರೆ.
View this post on Instagram
ಇತ್ತೀಚೆಗಷ್ಟೆ ಉರ್ಫಿ ಜಾವೇದ್ ಟಾಪ್ ಲೆಸ್ ಆಗಿ ಬಂದು ಕೈಯಲ್ಲಿ ಒಂದು ಗ್ಲಾಸ್ ಜೂಸ್ ಹಾಗೂ ಒಂದು ಪ್ಲೇಟ್ ನಲ್ಲಿ ಬ್ರೇಕ್ ಫಾಸ್ಟ್ ಹಿಡಿದು ಬಂದು ಪೋಸ್ ಕೊಟ್ಟಿದ್ದರು. ಟಾಪ್ ಲೆಸ್ ಆಗಿ ಬ್ಲಾಕ್ ಸ್ಕರ್ಟ್ ಧರಿಸಿದ ವಿಡಿಯೋ ಈಗ ವೈರಲ್ ಆಗಿದೆ. ಇಷ್ಟೇ ಅಲ್ಲದೆ ಉರ್ಫಿ ಜಾವೇದ್ ವಿಚಿತ್ರವಾಗಿ ಡ್ರೆಸ್ ಮಾಡಿದ್ದಾರೆ.
ಡ್ರೆಸ್ ಹಾಕದೆ ಇದೆಂಥಾ ಫ್ಯಾಷನ್
ಉರ್ಫಿ ಫೋಟೋ ನೋಡಿದ ನೆಟ್ಟಿಗರು, ನಿನ್ನ ಫ್ಯಾಷಲ್ ಮಿತಿ ಮೀರಿದೆ ಎಂದಿದ್ದಾರೆ. ಬಟ್ಟೆ ಹಾಕದೆ ಇದೆಂಥಾ ಫ್ಯಾಷನ್ ಮಾಡ್ತಿಯಮ್ಮ ನೀನು ಎಂದು ನೆಟ್ಟಿಗರು ಕಾಲೆಳೆದಿದ್ದಾರೆ. ಟ್ರೋಲ್ ಮಾಡಿ ಕೇಳಿದರೆ ಫ್ಯಾಷನ್ ಡಿಸೈನಿಂಗ್ ಎನ್ನುತ್ತಿ. ಆದರೆ ಡ್ರೆಸ್ಸೇ ಇಲ್ಲದೆ ಎಂಥಾ ಫ್ಯಾಷನ್ ಮಾಡ್ತೀಯಾ ಎಂದು ಕಾಮೆಂಟ್ ಮಾಡಿದ್ದಾರೆ. ನಟಿಯ ಈ ವಿಡಿಯೋ ಈಗ ವೈರಲ್ ಆಗಿದ್ದು, ಉರ್ಫಿ ಹುಚ್ಚುತನ ನೋಡೋಕಾಗ್ತಿಲ್ಲ ಎಂದು ಅನೇಕರು ಕಾಮೆಂಟ್ ಮಾಡುತ್ತಿದ್ದಾರೆ.
View this post on Instagram
ಟ್ರೋಲ್ಗೆ ಡೋಂಟ್ ಕೇರ್!
ಉರ್ಫಿ ಜಾವೇದ್ ಟ್ರೋಲ್ ಬಗ್ಗೆ ತಲೆ ಕೆಡಿಸಿಕೊಳದ್ಳುವುದಿಲ್ಲ. ಬಹಳಷ್ಟು ವಿಡಿಯೋ ಹಾಗೂ ಬೋಲ್ಡ್ ಫೋಟೋಸ್ ಶೇರ್ ಮಾಡುವ ಉರ್ಫಿ ಜಾವೇದ್ ಸಖತ್ ಹಾಟ್ ಆಗಿ ಪೋಸ್ ಕೊಡುತ್ತಾರೆ. ಅದೇ ರೀತಿ ನಟಿಯ ಲುಕ್ ನೋಡಿದ ನೆಟ್ಟಿಗರು ಅದನ್ನು ಶೇರ್ ಮಾಡಿ, ಸ್ಟೇಟಸ್ಗಳಲ್ಲಿ ಹಾಕುತ್ತಾರೆ. ಅಂತೂ ಇದೇ ರೀತಿ ಉರ್ಫಿಯ ಪಾಪ್ಯುಲಾರಿಟಿ ಹೆಚ್ಚುತ್ತಿದೆ.
ಸದ್ಯ ಉರ್ಫಿಗೆ 3 ಮಿಲಿಯನ್ ಫಾಲೋವರ್ಸ್
ಉರ್ಫಿ ಜಾವೇದ್ಗೆ ಸದ್ಯ 3.9 ಮಿಲಿಯನ್ ಫಾಲೋವರ್ಸ್ ಇದ್ದಾರೆ. ನಟಿ 380 ಜನರನ್ನು ಫಾಲೋ ಮಾಡುತ್ತಿದ್ದು 2000ಕ್ಕೂ ಹೆಚ್ಚು ಪೋಸ್ಟ್ಗಳನ್ನು ಇದುವರೆಗೆ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಪ್ರತಿದಿನ ಫಾಲೋವರ್ಸ್ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಲೇ ಹೋಗುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ