• Home
  • »
  • News
  • »
  • entertainment
  • »
  • Urfi Javed: ಕೋಲಾ ಕ್ಯಾಪ್​ನಲ್ಲಿ ರೆಡಿಯಾಯ್ತು ಉರ್ಫಿಯ ಡ್ರೆಸ್!

Urfi Javed: ಕೋಲಾ ಕ್ಯಾಪ್​ನಲ್ಲಿ ರೆಡಿಯಾಯ್ತು ಉರ್ಫಿಯ ಡ್ರೆಸ್!

ಉರ್ಫಿ ಜಾವೇದ್​

ಉರ್ಫಿ ಜಾವೇದ್​

ಕೋಲಾ ಸೇರಿದಂತೆ ಕೂಲ್ ಡ್ರಿಂಕ್ಸ್ ಯೂಸ್ & ಥ್ರೋ ಕ್ಯಾನ್​ನಲ್ಲಿ ಬರುವ ಕ್ಯಾಪ್​ನಿಂದ ಡ್ರೆಸ್ ತಯಾರಿಸಿದ್ದಾರೆ ನಟಿ. ಸಿಂಗಲ್ ಶೋಲ್ಡರ್ ಟಾಪ್ ಧರಿಸಿ ಕಾಣಿಸಿಕೊಂಡಿದ್ದಾರೆ ನಟಿ ಉರ್ಫಿ.

  • News18 Kannada
  • 2-MIN READ
  • Last Updated :
  • Bangalore, India
  • Share this:

ಉರ್ಫಿ ಜಾವೇದ್ (Urfi Javed) ತಮ್ಮ ಡಿಫರೆಂಟ್ ಡ್ರೆಸ್​ನಿಂದ (Dress) ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ನಟಿ (Actress) ಹೊಸದೊಂದು ಟ್ರೆಂಡ್ ಟ್ರೈ ಮಾಡಿದ್ದಾರೆ. ಕೋಲಾ ಸೇರಿದಂತೆ ಕೂಲ್ ಡ್ರಿಂಕ್ಸ್ ಯೂಸ್ & ಥ್ರೋ ಕ್ಯಾನ್​ನಲ್ಲಿ ಬರುವ ಕ್ಯಾಪ್​ನಿಂದ ಡ್ರೆಸ್ ತಯಾರಿಸಿದ್ದಾರೆ ನಟಿ. ಸಿಂಗಲ್ ಶೋಲ್ಡರ್ ಟಾಪ್ ಧರಿಸಿ ಕಾಣಿಸಿಕೊಂಡಿದ್ದಾರೆ ನಟಿ ಉರ್ಫಿ. ನಟಿ ಇದರ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಮ್ (Instagram) ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹಾಗೆಯೇ ಸಖತ್ ಕ್ಯೂಟ್ ಆಗಿ ಕಾಣಿಸಿದ್ದಾರೆ. ಆದರೆ ನೆಟ್ಟಿಗರು ನಟಿಯನ್ನು (Actress) ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದಾರೆ.


ವೈರಲ್ ಆಯ್ತು ಉರ್ಫಿ ವಿಡಿಯೋ


ಉರ್ಫಿ ಜಾವೇದ್ ಶೇರ್ ಮಾಡಿದ ವಿಡಿಯೋಗೆ ಒಂದೂವರೆ ಲಕ್ಷ ಲೈಕ್ಸ್ ಬಂದಿದೆ. ಬಹಳಷ್ಟು ಜನರು ವಿಡಿಯೋ ನೋಡಿ ಮೆಚ್ಚಿ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೊಂದಷ್ಟು ಜನರು ವಿಡಿಯೋಗೆ ಟ್ರೋಲ್ ಕೂಡಾ ಮಾಡಿದ್ದಾರೆ. ಅಂತೂ ಇಂತೂ ಉರ್ಫಿ ಟ್ರೋಲ್ ಆಗುತ್ತಲೇ ವೈರಲ್ ಆಗುತ್ತಿದ್ದಾರೆ ಎನ್ನುವುದರಲ್ಲಿ ನೋ ಡೌಟ್.




ಏನಂದಿದ್ದಾರೆ ನೆಟ್ಟಿಗರು?


ಕಾಮೆಂಟ್ ಮಾಡಿರುವ ಜನರು ನೀವು ಡೀಸೆಂಟ್ ಡ್ರೆಸ್​ನಲ್ಲಿ ತುಂಬಾ ಕ್ಯೂಟ್ ಕಾಣಿಸುತ್ತೀರಿ. ಸುಮ್ಮನೆ ಎಕ್ಸ್​ಪೋಸಿಂಗ್ ಬಟ್ಟೆ ಧರಿಸಬೇಡಿ ಎಂದಿದ್ದಾರೆ. ಇನ್ನೊಬ್ಬರು ಕ್ರಿಸ್ಮಸ್ ಸ್ಪೆಷಲ್ ಡ್ರೆಸ್ ಎಲ್ಲಿದೆ ಎಂದು ಕೇಳುತ್ತಿದ್ದಾರೆ. ಇನ್ನು ಕೆಲವರು ಈ ಐಡಿಯಾ ಫ್ಯಾಬುಲಸ್ ಆಗಿದೆ ಎಂದು ಹೇಳಿದ್ದಾರೆ.









View this post on Instagram






A post shared by Uorfi (@urf7i)





ಇದನ್ನೂ ಓದಿ: Urfi Javed: ಉರ್ಫಿ ಜಾವೇದ್​ಗೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಹಾಕಿದವನ ಕಥೆ ಏನಾಯ್ತು!?


ಟ್ರೋಲ್​ಗೆ ಕೇರ್ ಮಾಡಲ್ಲ ನಟಿ


ಉರ್ಫಿ ಜಾವೇದ್ ಅವರು ಟ್ರೋಲ್ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳದ್ಳುವುದಿಲ್ಲ. ಬಹಳಷ್ಟು ವಿಡಿಯೋ ಹಾಗೂ ಬೋಲ್ಡ್ ಫೋಟೋಸ್ ಶೇರ್ ಮಾಡುವ ಉರ್ಫಿ ಜಾವೇದ್ ಬೋಲ್ಡ್ & ಹಾಟ್ ಆಗಿ ಪೋಸ್ ಕೊಡುತ್ತಾರೆ. ಅದೇ ರೀತಿ ನಟಿಯ ಲುಕ್ ನೋಡಿದ ನೆಟ್ಟಿಗರು ಅದನ್ನು ಶೇರ್ ಮಾಡಿ, ಸ್ಟೇಟಸ್​​ಗಳಲ್ಲಿ ಹಾಕುತ್ತಾರೆ. ಅಂತೂ ಇದೇ ರೀತಿ ಉರ್ಫಿಯ ಪಾಪ್ಯುಲಾರಿಟಿ ಹೆಚ್ಚುತ್ತಲೇ ಇದೆ.


ಉರ್ಫಿಗೆ 3 ಮಿಲಿಯನ್ ಫಾಲೋವರ್ಸ್


ಸದ್ಯ ನಟಿಗೆ 3.9 ಮಿಲಿಯನ್ ಫಾಲೋವರ್ಸ್ ಇದ್ದಾರೆ. ನಟಿ 380 ಜನರನ್ನು ಫಾಲೋ ಮಾಡುತ್ತಿದ್ದು ಇದುವರೆಗೆ 2000ಕ್ಕೂ ಹೆಚ್ಚು ಪೋಸ್ಟ್​​ಗಳನ್ನು ಅಪ್​ಲೋಡ್ ಮಾಡಿದ್ದಾರೆ. ಈ ಮೂಲಕ ಪ್ರತಿದಿನ ಫಾಲೋವರ್ಸ್ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಲೇ ಹೋಗುತ್ತಿದ್ದಾರೆ.


ಕೆಲಸ ಇಲ್ವಾ?


ಉರ್ಫಿಗೆ ಯಾವುದೇ ಕೆಲಸ ಇಲ್ವಾ ಎನ್ನುವುದು ಬಹಳಷ್ಟು ಜನರ ಡೌಟ್. ಕಾರಣ ಉರ್ಫಿ ಜಾವೇದ್ ಫುಲ್ ಟೈಂ ಡ್ರೆಸ್ ಮಾಡಿಕೊಂಡು ಫೋಟೋ ವಿಡಿಯೋ ಶೇರ್ ಮಾಡುತ್ತಲೇ ಇರುತ್ತಾರೆ. ಆದರೆ ಯಾವುದೇ ಸೀರಿಯಲ್, ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಆದರೆ ಕೆಲವೊಂದು ಆ್ಯಡ್ ಮೂಲಕ ಸ್ವಲ್ಪಮಟ್ಟಿಗೆ ಗಳಿಸುತ್ತಾರೆ ಉರ್ಫಿ ಜಾವೇದ್.


ಎಫ್​ಐಆರ್ ಕೂಡಾ ದಾಖಲಾಗಿದೆ


ಉರ್ಫಿಯ ವಿರುದ್ಧ ಎಫ್​​ಐಆರ್ ದಾಖಲಾದ ವಿಚಾರ ಇತ್ತೀಚೆಗೆ ಸುದ್ದಿಯಾಗಿತ್ತು. ಉರ್ಫಿ ಉಡುಗೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಕೇಸ್ ದಾಖಲು ಮಾಡಲಾಗಿತ್ತು. ಆದರೆ ಇದಕ್ಕೆ ಉರ್ಫಿ ತಲೆ ಕೆಡಿಸಿಕೊಂಡಿರುವಂತೆ ಕಾಣುತ್ತಿಲ್ಲ. ನಟಿ ಜಾಲಿಯಾಗಿ ಡ್ರೆಸ್ ಮಾಡಿಕೊಂಡು ಈಗಲೂ ಫೋಟೋ ವಿಡಿಯೋ ಶೇರ್ ಮಾಡುತ್ತಿದ್ದಾರೆ. ಇತ್ತೀಚೆಗೆ ನಟಿ ತಮ್ಮ ವಿರುದ್ಧ ಕೇಸ್ ದಾಖಲಾಗಿರುವ ಬಗ್ಗೆ ಪ್ರತಿಕ್ರಿಯಿಸಿ ಮಾತನಾಡಿ ಇದು ಪಾಕಿಸ್ತಾನವಲ್ಲ ಭಾರತ ಎಂದು ಹೇಳಿದ್ದರು.

Published by:Divya D
First published: