ಹಿಂದಿಯ ಬಿಗ್ ಬಾಸ್ OTT (Big boss) ಖ್ಯಾತಿಯ ಉರ್ಫಿ ಜಾವೇದ್ (Urfi Javed) ತನ್ನ ವಿಚಿತ್ರ ಫ್ಯಾಷನ್ (fashion) ಆಯ್ಕೆಗಳಿಗೆ ಹೆಸರುವಾಸಿಯಾಗಿದ್ದಾರೆ. ಯಾವಾಗಲೂ ಏನಾದರೂ ವಿಭಿನ್ನ ಹಾಗೂ ವಿಚಿತ್ರವಾಗಿ ಬಟ್ಟೆ ಹಾಕುವ ಮೂಲಕ ಸುದ್ದಿಯಲ್ಲಿರುತ್ತಾರೆ. ಜೊತೆಗೆ ಉರ್ಫಿ ತನ್ನ ಹಾಟ್‌ನೆಸ್‌ನಿಂದ ನೆಟ್ಟಿಗರ ಗಮನ ಸೆಳೆಯುತ್ತಿರುತ್ತಾರೆ. ಅದೇನೇ ಮಾಡಿದ್ರೂ ನೆಟ್ಟಿಗರು ಇವರನ್ನು ಬಿಡುವ ಲಕ್ಷಣಗಳಿಲ್ಲ. ಒಂದೆಲ್ಲಾ ಒಂದು ವಿಚಾರಕ್ಕೆ ಟ್ರೋಲ್ ಮಾಡುತ್ತಾರೆ. ಉರ್ಫಿ ಈಗ ಫ್ಯಾಷನ್ ಐಕಾನ್ ಎಂದು ಕರೆಸಿಕೊಳ್ತಿದ್ದಾರೆ. ಪ್ರತಿ ಬಾರಿಯೂ ಉರ್ಫಿ ಹೊಸ ಹೊಸ ಲುಕ್ನಲ್ಲಿ ಮಿಂಚುತ್ತಿದ್ದಾರೆ. ಇದೀಗ ಉರ್ಫಿಯ ಹೊಸ ಲುಕ್ ಹೊರಬಿದ್ದಿದೆ.
ಹೊಸ ಲುಕ್ನಲ್ಲಿ ಉರ್ಫಿ ಜಾವೇದ್
ಉರ್ಫಿ ಜಾವೇದ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಲುಕ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಸ್ಟೋನ್ಗಳಿಂದ ಮಾಡಿದ ಡ್ರೆಸ್ ತೊಟ್ಟು ಉರ್ಫಿ ಮಿಂಚಿದ್ದಾರೆ. ಸ್ಟೋನ್ಗಳಿಂದ ಬ್ರೇಲೆಟ್ ಮತ್ತು ಮಿನಿ ಸ್ಕರ್ಟ್ ಅನ್ನು ತಯಾರಿಸಿದಂತಿದೆ ಈ ಡ್ರೆಸ್. ವೀಡಿಯೊದ ಆರಂಭದಲ್ಲಿ, ಟ್ರೋಲರ್‌ಗಳು ಆಕೆಯ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದಾರೆ. ಬಳಿಕ ಅದೇ ಕಲ್ಲುಗಳಿಂದ ಉರ್ಫಿ ಡ್ರೆಸ್ ತಯಾರಿಸಿದ್ದಾರೆ.
View this post on Instagram
ವೀಡಿಯೊವನ್ನು ಹಂಚಿಕೊಂಡ ಉರ್ಫಿ ಈ ರೀತಿ ಬರೆದುಕೊಂಡಿದ್ದಾರೆ. 'ನಿಮ್ಮ ಕಾಮೆಂಟ್ಗಳೇ ನಾನು ಈ ರೀತಿ ಡ್ರೆಸ್ ಮಾಡಲು ಸ್ಫೂರ್ತಿ ಎಂದಿದ್ದಾರೆ.. ಸದ್ಯ ಈಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನರ ಗಮನ ಸೆಳೆಯುತ್ತಿದೆ. ಉರ್ಫಿ ಅವರ ಹೊಸ ವೀಡಿಯೋಗೂ ಹಲವು ಕಾಮೆಂಟ್‌ಗಳು ಬಂದಿದೆ. ಕೆಲವರು ಜೀನಿಯಸ್ ಅಂದಿದ್ದಾರೆ. ಆದ್ರೆ ಕೆಲವರು ಬಂಡೆಗಲ್ಲು, ಕಲ್ಲುಗಳಿಂದ ಹೊಡೆಯಬೇಕು ಎಂದು ಹೇಳುತ್ತಾರೆ. ಅಸಾಧಾರಣ ಎಂದು ಅನೇಕ ಒಳ್ಳೆಯ ಮತ್ತು ಕೆಟ್ಟ ಕಾಮೆಂಟ್‌ಗಳು ವೀಡಿಯೊದಲ್ಲಿ ಬರುತ್ತಿವೆ.
View this post on Instagram
ಉರ್ಫಿ ಕೂಡ ಪ್ರಸಿದ್ಧ ಟಿವಿ ಕಾರ್ಯಕ್ರಮದ ನಟಿ. ಆಕೆಯ ಡ್ರೆಸ್ಸಿಂಗ್ ಸೆನ್ಸ್ ನ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ಉರ್ಫಿ ಕೂಡ ಕೆಲವು ಟಿವಿ ಧಾರಾವಾಹಿಗಳಲ್ಲಿ ನಟಿಸಿದ್ದು, ಬಿಗ್ ಬಾಸ್ ನಂತಹ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ.
ಈ ಮಧ್ಯೆ ಉರ್ಫಿ ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಉರ್ಫಿ ವಾಂತಿಯಿಂದ ಬಳಲುತ್ತಿದ್ದರು. ಆಕೆಗೆ 103 ರಿಂದ 104 ಡಿಗ್ರಿ ಜ್ವರ ಕಾಣಿಸಿಕೊಂಡಿತು ನಂತರ ಆಕೆಯನ್ನು ಆಸ್ಪತ್ರೆಗೆ ಸೇರಿಸಬೇಕಾಯಿತು. ಈ ಸುದ್ದಿಯಿಂದ ಉರ್ಫಿ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದರು. ಆದರೆ ಈಗ ಆಕೆ ಫಿಟ್ ಅಂಡ್ ಫೈನ್ ಆಗಿದ್ದು ಮತ್ತೆ ತನ್ನ ಕೆಲಸಕ್ಕೆ ಮರಳಿದ್ದಾಳೆ.
ಇದನ್ನೂ ಓದಿ: ಸೊಳ್ಳೆ ಬತ್ತಿಯಲ್ಲಿ ಮೈ ಮುಚ್ಚಿಕೊಂಡು ಬಂದ ಉರ್ಫಿ! ಕಳಚಿದ್ರೆ ನಿನ್ನ ಕಥೆ ಗೋವಿಂದ ಅಂತ ಟ್ರೋಲ್
ಚಕ್ಕುಲಿ ರೀತಿಯ ವಸ್ತುವಿನಿಂದ ಮೈ ಮುಚ್ಚಿಕೊಂಡು ಬಂದ ಉರ್ಫಿ!
ಟ್ರೋಲ್ ಆಗುವ ರೀತಿಯಲ್ಲೇ ಪ್ರತಿಬಾರಿ ವಿಚಿತ್ರ ಉಡುಗೆಗಳನ್ನು ಧರಿಸಿ ಉರ್ಫಿ ಕ್ಯಾಮರಾಗೆ ಪೋಸ್ ಕೊಡುತ್ತಾರೆ. ಕೆಲವರು ಉರ್ಫಿ ಜಾವೇದ್‌ರನ್ನ ಫ್ಯಾಶನ್ ಡಿಸಾಸ್ಟರ್(Fashion Disaster) ಅಂತಲೇ ಕರೆಯುತ್ತಿದ್ದಾರೆ. ಪ್ರತಿದಿನ ಏರ್ಪೋರ್ಟ್ಗೆ ಹೋಗಿ ಪೋಸ್ ಕೊಡ್ತಾರೆ ಉರ್ಫಿ. ಹಾಗಿದ್ದರೆ ಇವರು ಪ್ರತಿದಿನ ಫ್ಲೈಟ್ನಲ್ಲಿ ಓಡಾಡ್ತಾರಾ ಅಂತ ಕೇಳಬೇಡಿ. ಫ್ಲೈಟ್ ಹತ್ತೋದಿರಲಿ, ಅದರ ಹತ್ತಿರನೂ ಉರ್ಫಿ ಹೋಗಲ್ಲಾ ಎಂದು ಗೊತ್ತಾಗಿದೆ. ಈ ಬಾರಿ ಉರ್ಫಿ ಇನ್ನು ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಚಕ್ಕುಲಿ ರೀತಿಯ ವಸ್ತುವಿನಿಂದ ತನ್ನ ಮೈ ಮುಚ್ಚಿಕೊಂಡು ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ