• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Urfi Javed: ಮೈತುಂಬಾ ಬಟ್ಟೆ ಯಾವಾಗ ಹಾಕ್ತೀರಿ ಎಂದ ನೆಟ್ಟಿಗರು! ಕ್ರಾಪ್ ಟಾಪ್ ಧರಿಸಿ ಉರ್ಫಿ ಕ್ಯಾಟ್ ವಾಕ್

Urfi Javed: ಮೈತುಂಬಾ ಬಟ್ಟೆ ಯಾವಾಗ ಹಾಕ್ತೀರಿ ಎಂದ ನೆಟ್ಟಿಗರು! ಕ್ರಾಪ್ ಟಾಪ್ ಧರಿಸಿ ಉರ್ಫಿ ಕ್ಯಾಟ್ ವಾಕ್

ಉರ್ಫಿ ಜಾವೇದ್​

ಉರ್ಫಿ ಜಾವೇದ್​

ಚಿತ್ರ ವಿಚಿತ್ರ ಉಡುಗೆ ತೊಡುಗೆಗಳಿಂದ ಹೆಸರುವಾಸಿಯಾಗಿರುವ ಗ್ಲಾಮರ್ ಗರ್ಲ್ ಉರ್ಫಿ ಜಾವೇದ್ (Urfi Javed) ಇದೀಗ ಮತ್ತೊಮ್ಮೆ ತಮ್ಮ ವಿಶೇಷ ಬಟ್ಟೆಯಿಂದ ನೋಡುಗರನ್ನು ಬೆಕ್ಕಸ ಬೆರಗುಗೊಳಿಸಿದ್ದಾರೆ.

 • Share this:

ಚಿತ್ರ ವಿಚಿತ್ರ ಉಡುಗೆ ತೊಡುಗೆಗಳಿಂದ ಹೆಸರುವಾಸಿಯಾಗಿರುವ ಗ್ಲಾಮರ್ ಗರ್ಲ್ ಉರ್ಫಿ ಜಾವೇದ್ (Urfi Javed) ಇದೀಗ ಮತ್ತೊಮ್ಮೆ ತಮ್ಮ ವಿಶೇಷ ಬಟ್ಟೆಯಿಂದ ನೋಡುಗರನ್ನು ಬೆಕ್ಕಸ ಬೆರಗುಗೊಳಿಸಿದ್ದಾರೆ. ಪ್ಲಾಸ್ಟಿಕ್ ಫಾಯಿಲ್‌ನಿಂದ (Plastic Foil) ಮಾಡಿದ ಆಫ್ ಶೋಲ್ಡರ್ ಕ್ರಾಪ್ ಧರಿಸಿ ತಮ್ಮ ಮಾದಕ ಮೈಮಾಟವನ್ನು ಉರ್ಫಿ ಬಹಿರಂಗಗೊಳಿಸಿದ್ದಾರೆ. ನೀಲಿ ಬಣ್ಣದ ಡೆನೀಮ್ ಪ್ಯಾಂಟ್‌ಗಳಿಗೆ ಈ ಕ್ರಾಪ್​ ಧರಿಸಿ ಉರ್ಫಿ ತಾನಿರುವುದೇ ಹೀಗೆ ಎಂದು ತಿಳಿಸಿದ್ದಾರೆ.


ಫ್ಯಾಶನ್ ಲೋಕದಲ್ಲಿ ಹೊಸ ಕ್ರಾಂತಿ


ಯಾರು ಏನು ಹೇಳಿದರೂ ಯಾವ ಬಗೆಯಲ್ಲಿ ಕಾಮೆಂಟ್ ಮಾಡಿದರೂ ಕ್ಯಾರೇ ಅನ್ನದ ನಟಿ ಉರ್ಫಿ ಜಾವೇದ್ ಅರೆತೆರೆದ ಉಡುಪು ಹಾಗೂ ಅರೆ ನಗ್ನ ಮೈಮಾಟವನ್ನು ಪ್ರದರ್ಶಿಸಿಕೊಂಡೇ ಬಾಲಿವುಡ್‌ನಲ್ಲಿ ಖ್ಯಾತಿ ಗಳಿಸಿದವರು.


ಫ್ಯಾಶನ್ ಲೋಕದಲ್ಲಿ ತಾನು ಮಾಡುತ್ತಿರುವುದು ಹೊಸ ಹೊಸ ಪ್ರಯೋಗ ಎಂದು ತನ್ನನ್ನು ತಾನು ಹೊಗಳಿಕೊಳ್ಳುವ ಉರ್ಫಿ ಏನಾದರೊಂದು ಹೊಸತನವನ್ನು ಪ್ರಯತ್ನಿಸುತ್ತಲೇ ಇರುತ್ತಾರೆ.


ಇದನ್ನೂ ಓದಿ: ಇನ್ಫೋಸಿಸ್ ಕೆಲಸ ಬಿಟ್ಟು ಮನೆಯಲ್ಲಿ ಕೂತಿದ್ರು ಡಾಲಿ! ಯಾರಿಗೂ ಹೇಳಿರಲಿಲ್ಲ


ಒಮ್ಮೊಮ್ಮೆ ಅರೆ ನಗ್ನ ದೇಹವನ್ನು ತೋರಿಸುವ ಫೋಟೋಶೂಟ್‌ಗಳನ್ನು ತನ್ನ ಖಾತೆಯಲ್ಲಿ ಹಂಚಿಕೊಂಡರೆ ಇನ್ನೊಮ್ಮೆ ಬ್ಲೇಡ್‌ಗಳು, ಚೈನ್‌ಗಳು, ಪೇಪರ್‌, ಎಲೆಗಳಿಂದ ಸುತ್ತಿದ ಉಡುಪುಗಳಿಂದ ಖ್ಯಾತರಾಗಿದ್ದಾರೆ.


ಪ್ಲಾಸ್ಟಿಕ್ ಫಾಯಿಲ್ ಕ್ರಾಪ್ ಟಾಪ್, ಡೆನೀಮ್ ಪ್ಯಾಂಟ್


ಇದೀಗ ಪಾರದರ್ಶಕ ಪ್ಲಾಸ್ಟಿಕ್ ಫಾಯಿಲ್ ಅನ್ನು ಎದೆಗೆ ಸುತ್ತಿಕೊಂಡು ಅದಕ್ಕೆ ನೀಲಿ ಬಣ್ಣದ ಡೆನೀಮ್ ಧರಿಸಿರುವ ಉರ್ಫಿ ಫ್ಯಾಶನ್ ಲೋಕದಲ್ಲಿಯೇ ಇತರ ರೂಪದರ್ಶಿಗಳಿಗೆ ಪೈಪೋಟಿ ನೀಡುತ್ತಿದ್ದಾರೆಯೋ ಎಂಬ ಅಂಶ ಕಂಡುಬರುತ್ತದೆ.


ಉರ್ಫಿ ಜಾವೇದ್​


ಫ್ಯಾಶನ್ ವಿಚಾರದಲ್ಲಿ ಉರ್ಫಿಯವರದ್ದು ಪ್ರತ್ಯೇಕವಾದ ಮನೋಭಾವ ಹಾಗೂ ಹೊಸತನದವಾಗಿರುವ ಆಲೋಚನೆಯಾಗಿದೆ. ಪ್ಲಾಸ್ಟಿಕ್ ಟಾಪ್‌ನಲ್ಲಿ ದೊಡ್ಡ ದೊಡ್ಡ ಹೂವುಗಳ ವಿನ್ಯಾಸವಿದ್ದು ಇದು ಪೂರ್ತಿಯಾಗಿ ಉರ್ಫಿಯ ಮೈಗಂಟಿದೆಯೋ ಅನ್ನಿಸುವಂತೆ ತೋರುತ್ತಿದೆ.


ವಿವಾದಾತ್ಮಕ ಉಡುಗೆಗಳಿಂದಲೇ ಹೆಸರು ಮಾಡಿರುವ ಉರ್ಫಿ ಜಾವೇದ್


ಉಡುಗೆಗೆ ತಕ್ಕಂತೆ ಕೇಶಾಲಂಕಾರ ಹಾಗೂ ಮೇಕಪ್‌ಗಳನ್ನು ಮಾಡಿಕೊಂಡಿರುವ ಉರ್ಫಿ ಪೋನಿಟೇಲ್ ಹೇರ್ ಸ್ಟೈಲ್ ಮಾಡಿಕೊಂಡಿದ್ದಾರೆ. ಅಂತೆಯೇ ಉಡುಗೆಗೆ ತಕ್ಕಂತಹ ಮ್ಯಾಚಿಂಗ್ ಕವಿಯಾಭರಣಗಳನ್ನು ತೊಟ್ಟಿದ್ದಾರೆ. ಸಿನಿಮಾಗಳಲ್ಲಿ ಬೇಡಿಕೆಯ ನಟಿಮಣಿಯಾಗಿ ಹೆಸರು ಮಾಡದೇ ಇದ್ದರೂ ಉರ್ಫಿ ತಮ್ಮ ವಿವಾದಾತ್ಮಕ ಉಡುಗೆ ತೊಡುಗೆಗಳಿಂದಲೇ ಖ್ಯಾತಿ ಗಳಿಸಿದವರು ಅಂತೆಯೇ ಇವರಿಗೂ ಫ್ಯಾನ್ ಫಾಲೋವರ್ಸ್ ಹೆಚ್ಚಿದ್ದಾರೆ.

View this post on Instagram


A post shared by Uorfi (@urf7i)

ವಿಧ ವಿಧವಾದ ಉಡುಗೆ ತೊಡುಗೆಗಳನ್ನು ತೊಟ್ಟು ಸಾಮಾಜಿಕ ತಾಣದಲ್ಲಿ ಕಿಚ್ಚು ಹಚ್ಚುವ ಉರ್ಫಿಗೆ ಅವರ ಫ್ಯಾನ್ಸೇ ಬೆಂಬಲ ನೀಡುತ್ತಾರೆ ಅಂತೆಯೇ ಕಾಮೆಂಟ್ ಮಾಡಿ ಕಾಲೆಳೆಯುತ್ತಾರೆ. ಇನ್‌ಸ್ಟಾಗ್ರಾಮ್ ರೀಲ್ಸ್‌ನಲ್ಲಿ ಉರ್ಫಿ ತಮ್ಮ ಪ್ಲಾಸ್ಟಿಕ್ ವ್ರಾಪ್ ಉಡುಗೆಯನ್ನು ಪ್ರದರ್ಶಿಸಿದ್ದು, ಯಾವುದೇ ಉಡುಗೆ ತೊಟ್ಟರೂ ಹೆಚ್ಚು ಆತ್ಮವಿಶ್ವಾಸದಿಂದ ಇರುವುದೇ ಉರ್ಫಿಯ ಪ್ಲಸ್ ಪಾಯಿಂಟ್ ಎಂದೆನಿಸಿದೆ.


ಏನೇ ಕಾಮೆಂಟ್ ಬಂದರೂ ಸಮಾನವಾಗಿ ಸ್ವೀಕರಿಸುವ ಬೆಡಗಿ ಉರ್ಫಿ


ಪ್ಲಾಸ್ಟಿಕ್ ಕ್ರಾಪ್ ಟಾಪ್ ಹಾಗೂ ನೀಲಿ ಬಣ್ಣದ ಡೆನೀಮ್‌ನಲ್ಲಿ ಕ್ಯಾಟ್ ವಾಕ್ ಮಾಡಿರುವ ಉರ್ಫಿ ನಡುವೆ ಹೀಲ್ಸ್‌ ಸ್ಲಿಪ್ ಆಗಿದ್ದರಿಂದ ಕೊಂಚ ಓರೆಕೋರೆಯಾಗಿ ನಡೆದಾಡುವುದು ವಿಡಿಯೋದಲ್ಲಿ ಕಂಡುಬಂದಿದೆ. ಅಲ್ಲಿಯೂ ಸಂಭಾಳಿಸಿಕೊಂಡೇ ಹೆಜ್ಜೆಹಾಕಿರುವ ಉರ್ಫಿ ಏನೂ ನಡೆದೇ ಇಲ್ಲವೇನೋ ಎಂಬಂತೆ ನಗುತ್ತಾ ರೀಲ್ಸ್‌ಗೆ ಪೋಸ್​ ನೀಡಿದ್ದಾರೆ.


ಪ್ರತೀ ಬಾರಿಯೂ ಉರ್ಫಿಯ ಉಡುಗೆ ತೊಡುಗೆಗೆ ಧನಾತ್ಮಕ ಕಾಮೆಂಟ್‌ಗಳು ಹರಿದು ಬರುತ್ತವೆ, ಇನ್ನು ಕೆಲವೊಮ್ಮೆ ಕೆಟ್ಟ ಕಾಮೆಂಟ್‌ಗಳು ದೊರೆಯುತ್ತವೆ. ಇದೆಲ್ಲವನ್ನೂ ಸಮಾನವಾಗಿ ಸ್ವೀಕರಿಸುವ ಉರ್ಫಿ ಯಾರಿಗೂ ಕ್ಯಾರೇ ಅನ್ನದೆ ತಮ್ಮದೇ ಫ್ಯಾಶನ್ ಸ್ಟೈಲ್‌ನಲ್ಲಿ ಐಕಾನ್ ಎಂದೆನಿಸಿದ್ದಾರೆ.
ಈ ಹೊಸ ಬಗೆಯ ಫ್ಯಾಶನ್​ಗೆ ಕೆಲವು ನೆಟ್ಟಿಗರು ಮೆಚ್ಚಿಕೊಂಡು ಕಾಮೆಂಟ್ ಮಾಡಿದ್ದರೆ, ಇನ್ನು ಕೆಲವರು ಇದು ಯಾವ ರೀತಿಯ ಡ್ರೆಸ್, ನೀವು ಮೈ ತುಂಬಾ ಬಟ್ಟೆ ಧರಿಸಿ ಪೋಸ್ ನೀಡುವುದೇ ಇಲ್ಲವೇ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ.

top videos


  ಒಟ್ಟಿನಲ್ಲಿ ಫ್ಯಾಶನ್ ಲೋಕದಲ್ಲಿ ತಮ್ಮ ಹೊಸ ಬಗೆಯ ಸ್ಟೈಲ್ ಮೂಲಕ ಉರ್ಫಿ ಜಾವೇದ್ ತಮ್ಮದೇ ಖಾತೆ ತೆರಿದಿದ್ದಾರೆ ಎಂದೇ ಹೇಳಬಹುದು.

  First published: