• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Urfi Javed: ಕತ್ತಿನಲ್ಲಿ ಹಲ್ಲಿ, ಕೈಯಲ್ಲಿ ಹಾವು ಸುತ್ತಿಕೊಂಡು ಬಂದ ಉರ್ಫಿ! ನಟಿ ನೋಡಿ ನೆಟ್ಟಿಗರು ಶಾಕ್

Urfi Javed: ಕತ್ತಿನಲ್ಲಿ ಹಲ್ಲಿ, ಕೈಯಲ್ಲಿ ಹಾವು ಸುತ್ತಿಕೊಂಡು ಬಂದ ಉರ್ಫಿ! ನಟಿ ನೋಡಿ ನೆಟ್ಟಿಗರು ಶಾಕ್

ಇತ್ತೀಚೆಗೆ ಉರ್ಫಿ ಜಾವೇದ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ನೈಸಾ ದೇವಗನ್ ಮತ್ತು ಜಾನ್ವಿ ಕಪೂರ್ ಸ್ನೇಹಿತ ಓರಿ ಜೊತೆ ಉರ್ಫಿ ಕಾಣಿಸಿಕೊಂಡಿದ್ದಾರೆ.

ಇತ್ತೀಚೆಗೆ ಉರ್ಫಿ ಜಾವೇದ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ನೈಸಾ ದೇವಗನ್ ಮತ್ತು ಜಾನ್ವಿ ಕಪೂರ್ ಸ್ನೇಹಿತ ಓರಿ ಜೊತೆ ಉರ್ಫಿ ಕಾಣಿಸಿಕೊಂಡಿದ್ದಾರೆ.

ಇತ್ತೀಚೆಗೆ ಉರ್ಫಿ ಜಾವೇದ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ನೈಸಾ ದೇವಗನ್ ಮತ್ತು ಜಾನ್ವಿ ಕಪೂರ್ ಸ್ನೇಹಿತ ಓರಿ ಜೊತೆ ಉರ್ಫಿ ಕಾಣಿಸಿಕೊಂಡಿದ್ದಾರೆ.

 • News18 Kannada
 • 3-MIN READ
 • Last Updated :
 • Karnataka, India
 • Share this:

ಬಿಗ್ ಬಾಸ್ ಒಟಿಟಿಯಿಂದ ಫೇಮಸ್ ಆಗಿರೋ ಉರ್ಫಿ ಜಾವೇದ್ (Urfi Javed) ಸೋಶಿಯಲ್​ ಮೀಡಿಯಾದಲ್ಲಿ (Social Media) ಸಖತ್ ಸುದ್ದಿಯಲ್ಲಿದ್ದಾರೆ. ತನ್ನ ಹೊಸ ಹೊಸ ವಿಡಿಯೋ, ಫೋಟೋಗಳ (Photo) ಮೂಲಕ ಸಂಚಲನ ಮೂಡಿಸಿದ್ದಾರೆ. ಉರ್ಫಿ ತನ್ನ ವಿಚಿತ್ರ ಡ್ರೆಸ್​ ನೆಸ್ಸ್​ನಿಂದ  ಎಲ್ಲರ ಗಮನಸೆಳೆಯುತ್ತಾರೆ. ಕೆಲವೊಮ್ಮೆ ಜನರು ಉರ್ಫಿಯ ಫ್ಯಾಷನ್ (Fashion) ಸೆನ್ಸ್  ಇಷ್ಟಪಡುತ್ತಾರೆ. ಇನ್ನೂ ಕೆಲವೊಮ್ಮೆ ತನ್ನ ಫ್ಯಾಷನ್​ನಿಂದಲೇ ಉರ್ಫಿ ಭಾರೀ ಟ್ರೋಲ್‌ಗಳಿಗೆ ಗುರಿಯಾಗುತ್ತಾರೆ. ಈ ಬಾರಿ ಕೂಡ ವಿಚಿತ್ರವಾಗಿ ಡ್ರೆಸ್ ಧರಿಸಿ ಜನರ ಮುಂದೆ ಬಂದಿದ್ದಾರೆ. ಉರ್ಫಿ ನೋಡಿದ ನೆಟ್ಟಿಗರು ಇದೊಂದು ಕಡಿಮೆ ಆಗಿತ್ತು ಎಂದು ಹೇಳಿದ್ದಾರೆ. 


ಈ ಬಾರಿ ಬಟ್ಟೆ ಬದಲು ನೆಕ್ಲೇಸ್​ ವಿಚಾರಕ್ಕೆ ಉರ್ಫಿ ಟ್ರೋಲ್​


ಬಿಗ್ ಬಾಸ್ ಒಟಿಟಿ ಖ್ಯಾತಿಯ ಉರ್ಫಿ ಜಾವೇದ್ ತಮ್ಮ ಸ್ಟೈಲಿಶ್ ಫ್ಯಾಶನ್ ಸ್ಟೈಲ್‌ಗಾಗಿ ಯಾವಾಗಲೂ ಸುದ್ದಿಯಲ್ಲಿದ್ದಾರೆ. ಉರ್ಫಿ ಅನೇಕ ವಸ್ತುವಿನಿಂದ ಡ್ರೆಸ್​ ತೊಟ್ಟು ಮಿಂಚುತ್ತಿದ್ದಾರೆ. ಉರ್ಫಿ ಈ ಹಿಂದೆ ಗಾಜು, ತಂತಿ, ಕಾಗದದಿಂದ ಮಾಡಿದ ಉಡುಪನ್ನು ಧರಿಸಿದ್ದರು.  ಸೋಷಿಯಲ್ ಮೀಡಿಯಾದಲ್ಲೂ ಸಾಕಷ್ಟು ಟ್ರೋಲ್ ಆಗಿದ್ದಾರೆ.  ಈ ಬಾರಿ ಉರ್ಫಿ, ಡ್ರೆಸ್​ ಬದಲು ನೆಕ್ಲೇಸ್ ವಿಚಾರಕ್ಕೆ ಸುದ್ದಿಯಾಗಿದ್ದಾರೆ.


ಜಾನ್ವಿ ಕಪೂರ್  ಸ್ನೇಹಿತ ಜೊತೆ ಉರ್ಫಿ


ಇತ್ತೀಚೆಗೆ ಉರ್ಫಿ ಜಾವೇದ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ನೈಸಾ ದೇವಗನ್ ಮತ್ತು ಜಾನ್ವಿ ಕಪೂರ್  ಸ್ನೇಹಿತ ಓರಿ ಜೊತೆ  ಕಾಣಿಸಿಕೊಂಡರು. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ. ಓರಿಯನ್ನು ನೋಡಿದ ಉರ್ಫಿ ಅಪ್ಪುಗೆಯೊಂದಿಗೆ ಸ್ವಾಗತಿಸಿದರು. ಬಳಿಕ ಇಬ್ಬರು ಮಾಧ್ಯಮಗಳಿಗೆ ಪೋಸ್ ನೀಡಿದರು.
ಕತ್ತಿನಲ್ಲಿ ಹಲ್ಲಿ, ಕೈಯಲ್ಲಿ ಹಾವು ಸುತ್ತಿಕೊಂಡು ಬಂದ ಉರ್ಫಿ
ಕಾರ್ಯಕ್ರಮದಲ್ಲಿ ಭಾಗವಹಿಸಲು ಉರ್ಫಿ ಕಪ್ಪು ಬಣ್ಣದ ಹೈಲಿಟ್ ಗೌನ್ ಧರಿಸಿದ್ದರು. ಉರ್ಫಿ ಬ್ರಾಲೆಟ್ ಗೌನ್ ನಲ್ಲಿ ಎಂದಿನಂತೆ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದರು. ಆದರೆ ಈ ಬಾರಿ ಉರ್ಫಿಯ ಡ್ರೆಸ್‌ಗಿಂತ ಆಕೆಯ ನೆಕ್ಲೇಸ್‌ ಎಲ್ಲರ ಗಮನಸೆಳೆದಿದೆ. ಉರ್ಫಿ ತನ್ನ ಕುತ್ತಿಗೆಗೆ ಏನು ಧರಿಸಿದ್ದಾನೆ ಎಂದು ನೀವು  ಕೂಡ ಆಶ್ಚರ್ಯ ಪಡುತ್ತಿರಾ. ಉರ್ಫಿ ಹಲ್ಲಿಯ ನೆಕ್ಲೇಸ್​ ಧರಿಸಿದ್ದರು. ಗಾಬರಿ ಆಗ್ಬೇಡಿ ಅದು ನಿಜವಾದ ಹಲ್ಲಿಯಲ್ಲ. ಹಲ್ಲಿಯಂತೆ ಕಾಣುವ ನೆಕ್ಲೇಸ್ ಆಗಿದೆ ಜೊತೆಗೆ ಕೈಯಿಗೆ ಹಾವಿನಂತ ಒಂದು ಚೈನ್​ ಧರಿಸಿದ್ರು.


ಟ್ರೋಲರ್ ಉರ್ಫಿ ಕ್ಲಾಸ್​​


'ಬಿಗ್ ಬಾಸ್ OTT' ನಲ್ಲಿ ಉರ್ಫಿ ಜಾವೇದ್ ಕಾಣಿಸಿಕೊಂಡರು ಬಳಿಕ ಮೊದಲ ವಾರದಲ್ಲೇ ಈ ಕಾರ್ಯಕ್ರಮದಿಂದ ಹೊರಬಂದರು. ಆದರೆ ಬಳಿಕ ಉರ್ಫಿ ತನ್ನ ಫ್ಯಾಶನ್ ಮತ್ತು ಸ್ಟೈಲ್​ನಿಂದ ಭಾರೀ ಜನಪ್ರಿಯತೆ ಪಡೆದಿದ್ದಾರೆ. ಉರ್ಫಿಯನ್ನು ಟ್ರೋಲ್ ಮಾಡುವ ಟ್ರೋಲರ್​ಗಳಿಗೂ ಓಮ್ಮೊಮ್ಮೆ ಚಳಿ ಬಿಡಿಸುತ್ತಾರೆ.
ಉರ್ಫಿ ನಿನ್ನ ಕತ್ತಲ್ಲಿ ಹಲ್ಲಿ ಸಿಕ್ಕಿ ಹಾಕಿಕೊಂಡಿದೆ

ಮಾಧ್ಯಮಗಳ ಮುಂದೆ ಪೋಸ್ ಕೊಡುತ್ತಿದ್ದ ಉರ್ಫಿಗೆ ಕ್ಯಾಮೆರಾ ಮ್ಯಾನ್ಸ್​​ ಕಾಲೆಳೆದಿದ್ದಾರೆ. ಕುತ್ತಿಗೆಯಲ್ಲಿ ಉರ್ಫಿ ನಿಮ್ಮ ಕುತ್ತಿಗೆಯಲ್ಲಿ ಹಲ್ಲಿ  ಸಿಕ್ಕಿ ಹಾಕಿಕೊಂಡಿದೆ ಎಂದು ಕೆಲವರು ಹೇಳಿದರು. ಉರ್ಫಿ ಮತ್ತು ಓರಿ ನಗುತ್ತಲೇ ಪ್ರತಿಕ್ರಿಯಿಸಿದರು. ಯಾರು ಯಾರು ಈ ಪ್ರಶ್ನೆ ಕೇಳಿದ್ದು ಎಂದು ಉರ್ಫಿ ಕೂಗಿದ್ರು ಬಳಿಕ ನಗುತ್ತಾ ಕಾರ್ಯಕ್ರಮಕ್ಕೆ ತೆರಳಿದ್ರು.   First published: