ಬಿಗ್ ಬಾಸ್ ಒಟಿಟಿ (Bigg Boss Ott) ಖ್ಯಾತಿಯ ಉರ್ಫಿ ಜಾವೇದ್ (Urfi Javed) ಸಾಮಾಜಿಕ ಮಾಧ್ಯಮದಲ್ಲಿ ಈಗ ಹೊಸ ಸೆನ್ಸೇಷನ್ (Sensation) ಸೃಷ್ಟಿಸಿದ್ದಾರೆ. ತಮ್ಮ ಮಾದಕ ನೋಟದಿಂದಲೇ ಎಲ್ಲರನ್ನೂ ಬೆರಗುಗೊಳಿಸುವ ಉರ್ಪಿ ಜಾವೇದ್, ಆಗಾಗೊಮ್ಮೆ ತಮ್ಮ ಸಾಮಾಜಿಕ ಮಾಧ್ಯಮಗಳ ವೇದಿಕೆಯಲ್ಲಿ ಹಂಚಿಕೊಳ್ಳುವ ಪೋಸ್ಟ್ ಗಳ ಮೂಲಕ ನಿರಂತವಾಗಿ ಸುದ್ದಿಯಲ್ಲಿ ಇರುತ್ತಾರೆ. ಕಿರುತೆರೆ ನಟಿ ಕಮ್ ಮಾಡೆಲ್ (Small Screen Actress) ಉರ್ಫಿ ಜಾವೇದ್ ಹೆಚ್ಚಾಗಿ ಸದ್ದು ಮಾಡಿರುವುದೇ ತಮ್ಮ ಡ್ರೆಸ್ಗಳ ಮೂಲಕ. ಚಿತ್ರವಿಚಿತ್ರವಾದ ತರಹೇವಾರಿ ಡ್ರೆಸ್(Dress)ಗಳನ್ನ ತೊಡುವುದರಲ್ಲಿ ಉರ್ಫಿ ಜಾವೇದ್ ಸದಾ ಮುಂದು. ಈಗಾಗಲೇ ತಮ್ಮ ಔಟ್ಫಿಟ್(Outfit)ಗಳ ವಿಚಾರದಲ್ಲಿ ಉರ್ಫಿ ಜಾವೇದ್ ಹಲವು ಬಾರಿ ಟ್ರೋಲ್ ಆಗಿದ್ದಾರೆ. ಹಾಗ್ನೋಡಿದ್ರೆ, ಉರ್ಫಿ ಜಾವೇದ್ ಯಾವುದೇ ಡ್ರೆಸ್ ತೊಟ್ಟರೂ ಟ್ರೋಲ್(Troll) ಆಗುತ್ತಿದ್ದಾರೆ.
ಫಸ್ಟ್ ಟೈಂ ಬೇರೆ ವಿಚಾರಕ್ಕೆ ಸುದ್ದಿಯಾಗ್ತಿರೋ ಉರ್ಫಿ!
ಹೌದು, ಟ್ರೋಲ್ ಆಗುವ ರೀತಿಯಲ್ಲೇ ಪ್ರತಿಬಾರಿ ವಿಚಿತ್ರ ಉಡುಗೆಗಳನ್ನು ಧರಿಸಿ ಉರ್ಫಿ ಕ್ಯಾಮರಾಗೆ ಪೋಸ್ ಕೊಡುತ್ತಾರೆ. ಕೆಲವರು ಉರ್ಫಿ ಜಾವೇದ್ರನ್ನ ಫ್ಯಾಶನ್ ಡಿಸಾಸ್ಟರ್(Fashion Disaster) ಅಂತಲೇ ಕರೆಯುತ್ತಿದ್ದಾರೆ. ಪ್ರತಿದಿನ ಚಿತ್ರ, ವಿಚಿತ್ರ ಬಟ್ಟೆಗಳನ್ನು ಧರಿಸಿ ಪಾಪಾರಾಜಿಗಳ ಕಣ್ಣಿಗೆ ಕಾಣಿಸಿಕೊಳ್ಳುತ್ತಾರೆ. ಆದರೆ ಈ ಬಾರಿ ಬೇರೆ ವಿಚಾರಕ್ಕೆ ಉರ್ಫಿ ಜಾವೇದ್ ಸದ್ದು ಮಾಡುತ್ತಿದ್ದಾರೆ. ಬಾಲಿವುಡ್ ಸ್ಟಾರ್ ನಟಿಯರನ್ನೇ ಉರ್ಫಿ ಜಾವೇದ್ ಹಿಂದಿಕ್ಕಿದ್ದಾರೆ. ಈ ಬೆಳವಣಿಗೆ ಕಂಡು ಉರ್ಫಿ ಜಾವೇದ್ ಅವರನ್ನು ಟ್ರೋಲ್ ಮಾಡುತ್ತಿದ್ದವರು ಗಪ್ಚುಪ್ ಆಗಿದ್ದಾರೆ.
ಏಷ್ಯಾದಲ್ಲೇ ಅತಿ ಹೆಚ್ಚು ಸರ್ಚ್ ಮಾಡಿರೋದು ಉರ್ಫಿ ಹೆಸರು!
ಉರ್ಫಿ ಜಾವೇದ್ ಟ್ರೋಲ್ಗೆ ಒಳಗಾಗೋದು ಹೊಸದೇನಲ್ಲ. ಪ್ರತಿ ಭಾರಿ ಟ್ರೋಲ್ಗೆ ಒಳಗಾಗ್ತಾರೆ. ಆದರೆ, ಯಾವುದಕ್ಕೂ ತಲೆಕೆಡಿಸಿಕೊಳ್ಳಲ್ಲ. ತನಗಿಷ್ಟ ಬಂದ ಉಡುಗೊರೆ ತೊಟ್ಟು ಖುಷಿ ಪಡುತ್ತಾರೆ. ಉರ್ಫಿ ಅಷ್ಟಾಗಿ ಫೇಮಸ್ ಆಗಿರಲಿಲ್ಲ. ಯಾವಾಗ ಬೋಲ್ಡ್ ಅವತಾರದಲ್ಲಿ ಏರ್ಪೋರ್ಟ್ನಲ್ಲಿ(Airport) ಕಾಣಿಸಿಕೊಂಡರೋ ಅಂದಿನಿಂದ ಉರ್ಫಿ ಸಖತ್ ಫೇಮಸ್ ಆದರು.ಇದಕ್ಕೆ ಇರಬೇಕು ಏಷ್ಯಾದಲ್ಲೇ ಅತಿ ಹೆಚ್ಚು ಸರ್ಚ್ ಮಾಡಿರೋದು ಉರ್ಫಿ ಜಾವೇದ್ಗಂತೆ. ಜಾನ್ಹವಿ ಕಪೂರ್, ಕಿಯಾರ ಅಡ್ವಾಣಿ, ಕಂಗನಾ ಅವರನ್ನೇ ಹಿಂದಿಕ್ಕಿ ಉರ್ಫಿ ಜಾವೇದ್ ಮುಂದೆ ಇದ್ದಾರೆ.
ಇದನ್ನೂ ಓದಿ: ಈ ಉರ್ಫಿ ಜಾವೇದ್ಗೆ ಬಟ್ಟೆ ಅಂದ್ರೆ ಅಲರ್ಜಿನಾ? ಇಲ್ಲಿ ನೋಡಿ ಹೆಂಗೆ ಪೋಸ್ ಕೊಟ್ಟಿದ್ದಾಳೆ ಅಂತ!
ಹಳಷ್ಟು ಬೋಲ್ಡ್ ಅವತಾರಗಳಲ್ಲಿ ಕಾಣಿಸಿಕೊಂಡಿರೋ ಉರ್ಫಿ ಜಾವೇದ್ ಪ್ರತಿಬಾರಿಯೂ ಟ್ರೋಲ್(Troll) ಆಗುತ್ತಾರೆ. ಚಿತ್ರ ವಿಚಿತ್ರ ಉಡುಗೆ, ಎಕ್ಸ್ಪೋಸಿಂಗ್ (Exposing) ಸೀರೆಗಳ ಮೂಲಕ ಅವರು ಸುದ್ದಿಯಲ್ಲಿರುತ್ತಾರೆ. ಈ ಬಾರಿ ಹೆಸರೇ ಹೇಳಲಾಗದಂಥ ಉಡುಗೆ ತೊಟ್ಟು ಪೋಸ್ ಕೊಟ್ಟಿದ್ದಾರೆ. ಇನ್ನೂ ಉರ್ಫಿ ಜಾವೇದ್ ಕಂಡರೆ ಪಾಪರಾಜಿಳಿಗೂ ಅಚ್ಚು ಮೆಚ್ಚು. ಯಾಕೆಂದರೆ ಹೇಳಿದ ಹಾಗೇ ಉರ್ಫಿ ಜಾವೇದ್ ಪೋಸ್ ಕೊಡುತ್ತಾರೆ.
ಇದನ್ನೂ ಓದಿ: ಇವಳೇನು ಉರ್ಫಿಯೋ, ಸ್ವರ್ಗದಿಂದ ಧರೆಗಿಳಿದ ಊರ್ವಶಿಯೋ! ಮತ್ತೆ ವೈರಲ್ ಆಯ್ತಪ್ಪಾ ಹೊಸ ಅವತಾರ
ಸರಪಳಿ ಧರಿಸಿ ಬಂದಿದ್ದ ಉರ್ಫಿ
ಮುಂಬೈನಲ್ಲಿ ಕಪ್ಪು ಸ್ಕರ್ಟ್ನೊಂದಿಗೆ ಚಂಕಿ ಸರಪಳಿಗಳನ್ನು ಧರಿಸಿ ಉರ್ಫಿ ಹೊರಬಂದಿದ್ದರು. ಸಾಮಾನ್ಯ ಟಾಪ್ ಬದಲಿಗೆ ತನ್ನ ಕುತ್ತಿಗೆಗೆ ಭಾರವಾದ ಮತ್ತು ಉದ್ದವಾದ ಪದರದ ಸರಪಳಿಗಳನ್ನು ಧರಿಸಿದ್ದರು. ಈ ಫೋಟೋ ಕೂಡ ಸಾಕಷ್ಟು ವೈರಲ್ ಆಗಿದ್ದವು.
ಮ್ಯೂಸಿಕ್ ಆಲ್ಬಂನಲ್ಲಿ ಮ್ಯಾಜಿಕ್
ಉರ್ಫಿ ಜಾವೇದ್ ಇತ್ತೀಚೆಗೆ ತನ್ನ ಗೆಳೆಯ, ಗಾಯಕ ಕುನ್ವಾರ್ ಜೊತೆಗೆ ಮ್ಯೂಸಿಕ್ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದಾಳೆ. ಇದಲ್ಲದೆ, ಉರ್ಫಿ ಕಳೆದ ವರ್ಷ ಬಿಗ್ ಬಾಸ್ ಒಟಿಟಿಯಲ್ಲಿ ಭಾಗವಹಿಸಿದ್ದರು. ಆದರೆ ಕಾರ್ಯಕ್ರಮದಿಂದ ಎಲಿಮಿನೇಟ್ ಆದ ಮೊದಲ ಸ್ಪರ್ಧಿಯಾಗಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ