• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Urfi Javed: ರಣವೀರ್​ ಹೀಗಿದ್ರೆ ಇಷ್ಟ ಎಂದ ಉರ್ಫಿ, ಬಾಲಿವುಡ್​ ನಟನ ಬೆಂಬಲಕ್ಕೆ ನಿಂತ ಫ್ಯಾಷನ್ ಕ್ವೀನ್​

Urfi Javed: ರಣವೀರ್​ ಹೀಗಿದ್ರೆ ಇಷ್ಟ ಎಂದ ಉರ್ಫಿ, ಬಾಲಿವುಡ್​ ನಟನ ಬೆಂಬಲಕ್ಕೆ ನಿಂತ ಫ್ಯಾಷನ್ ಕ್ವೀನ್​

ರಣವೀರ್​ ಮತ್ತು ಉರ್ಫಿ

ರಣವೀರ್​ ಮತ್ತು ಉರ್ಫಿ

ಉರ್ಫಿ ಕಳೆದ ಕೆಲ ದಿನಗಳ ಹಿಂದೆ ರಣವೀರ್ ಸಿಂಗ್ ಅವರ ಬೆತ್ತಲೆ ಫೋಟೋಶೂಟ್​ ಬಗ್ಗೆ ಮಾತನಾಡುವಾಗ ಅವರು ಒಪ್ಪಿಗೆ ನೀಡುವುದಾದರೆ ನಾನು ಅವರ 2ನೇ ಹೆಂಡತಿ ಆಗಲು ಸಿದ್ಧ ಎಂದು ಹೇಳಿದ್ದರು. ಇದೀಗ ರಣವೀರ್​ ಸಿಂಗ್​ ವಿರುದ್ಧ ಎಫ್ಐಆರ್​ ದಾಖಲಾಗಿರುವುದರ ಕುರಿತು ಉರ್ಫಿ ಮಾತನಾಡಿದ್ದಾರೆ.

  • Share this:

ಹಿಂದಿಯ ಬಿಗ್ ಬಾಸ್ OTT (Big boss) ಖ್ಯಾತಿಯ ಉರ್ಫಿ ಜಾವೇದ್ (Urfi Javed) ತನ್ನ ವಿಚಿತ್ರ ಫ್ಯಾಷನ್ (fashion) ಗಳಿಂದ ಪದೇ ಪದೇ ಸುದ್ದಿಯಲ್ಲಿರುತ್ತಾರೆ. ವಿಚಿತ್ರವಾಗಿ ಬಟ್ಟೆ ಹಾಕುವ ಮೂಲಕ ಸುದ್ದಿಯಲ್ಲಿರುತ್ತಾರೆ. ಜೊತೆಗೆ ಉರ್ಫಿ ತನ್ನ ಹಾಟ್‌ನೆಸ್‌ನಿಂದ ನೆಟ್ಟಿಗರ ಗಮನ ಸೆಳೆಯುತ್ತಿರುತ್ತಾರೆ. ಇದರ ನಡುವೆ ಕೆಲ ದಿಗಳ ಹಿಂದೆ ರಣವೀರ್ ಸಿಂಗ್ (Ranveer Singh) ಅವರ ಬೆತ್ತಲೆ ಫೋಟೋಗೆ ಕಾಮೆಂಟ್​ ಮಾಡಿದ್ದ ಉರ್ಫಿ, ರಣವೀರ್ ಓಕೆ ಎಂದರೆ ಅವರ 2ನೇ ಹೆಂಡತಿಯಾಗಿ ಇರುವುದಾಗಿ ಹೇಳಿದ್ದರು. ಇದೀಗ ಮುಂದುವರೆದು ರಣವೀರ್ ಅವರ ನ್ಯೂಡ್​ ಪೋಟೋ ಕುರಿತು ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.


ರಣವೀರ್​ ಬೆಂಬಲಕ್ಕೆ ನಿಂತ ಉರ್ಫಿ:


ಹೌದು, ಉರ್ಫಿ ಕಳೆದ ಕೆಲ ದಿನಗಳ ಹಿಂದೆ ರಣವೀರ್ ಸಿಂಗ್ ಅವರ ಬೆತ್ತಲೆ ಫೋಟೋಶೂಟ್​ ಬಗ್ಗೆ ಮಾತನಾಡುವಾಗ ಅವರು ಒಪ್ಪಿಗೆ ನೀಡುವುದಾದರೆ ನಾನು ಅವರ 2ನೇ ಹೆಂಡತಿ ಆಗಲು ಸಿದ್ಧ ಎಂದು ಹೇಳಿದ್ದರು. ಇದಾದ ಬಳಿಕ ರಣವೀರ್​ ಸಿಂಗ್​ ವಿರುದ್ಧ ಎಫ್ಐಆರ್​ ದಾಖಲಾಗಿದೆ. ಈ ಕುರಿತು ಮಾತನಾಡಿರುವ ಉರ್ಫಿ, ‘ರಣವೀರ್ ವಿರುದ್ಧ ಎಫ್‌ಐಆರ್? ಯಾವುದಕ್ಕಾಗಿ? ಅವರ ಫೋಟೋಗಳ ಬಗ್ಗೆ ನನಗೆ ಯಾವುದೇ ಅಭ್ಯಂತರವಿಲ್ಲ. ಅವರು ತುಂಬಾ ಹಾಟ್ ಮತ್ತು ಸೆಕ್ಸಿಯಾಗಿ ಕಾಣುತ್ತಿದ್ದಾರೆ. ಇಂದಿನ ಕಾಲದಲ್ಲಿ ಯಾರಾದರೂ ಇಂತಹ ಚಿತ್ರೀಕರಣವನ್ನು ಮಾಡಲು ಸಾಧ್ಯವಾದರೆ, ಅದು ರಣವೀರ್ ಸಿಂಗ್​ ಮಾತ್ರ ಸಾಧ್ಯ. ಹೇಗಿದ್ದರೂ ಅವರು ಟ್ರೆಂಡ್‌ಸೆಟರ್, ಅಲ್ಲವೇ? ಇವರ ಫೋಟೋಗಳು ಯಾರ ಭಾವನೆಗಳಿಗೂ ಧಕ್ಕೆಯಾಗಿಲ್ಲ‘ ಎಂದು ಹೇಳುವ ಮೂಲಕ ಉರ್ಫಿ ರಣವೀರ್ ಬೆಂಬಲಕ್ಕೆ ನಿಂತಿದ್ದಾರೆ.


ರಣವೀರ್ ವಿರುದ್ದ FIR ದಾಖಲು:


ಇನ್ನು, ನಗ್ನವಾಗಿ ಫೋಟೋಶೂಟ್​ ಮಾಡಿಸಿದ್ದು ನಟ ರಣವೀರ್ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ತನ್ನ ನಗ್ನ ಫೋಟೋಗಳ ಮೂಲಕ ಮಹಿಳೆಯರ ಭಾವನೆಗಳನ್ನು ಧಕ್ಕೆತರುವ ಪ್ರಯತ್ನ ಎಂದು ಎಫ್​ಐಆರ್​ ದಾಖಲಿಸುವಂತೆ ಕೋರಿ ಮುಂಬೈ ಪೊಲೀಸರಿಗೆ ಸೋಮವಾರ ಅರ್ಜಿ ಸಲ್ಲಿಸಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.


ಇದನ್ನೂ ಓದಿ: Urfi Javed: ರಣವೀರ್ ಸಿಂಗ್ ಓಕೆ ಅಂದ್ರೆ ನಾನ್​ ರೆಡಿ ಅಂದ ಉರ್ಫಿ ಜಾವೇದ್​, ನಾಚಿ ನೀರಾದ ಫ್ಯಾಷನ್​ ಕ್ವೀನ್!


ರಣವೀರ್ ಸಿಂಗ್​ ಮದುವೆಯಾಗಲು ರೆಡಿ ಎಂದ ಉರ್ಫಿ:


ಉರ್ಫಿ  ಜಾವೇದ್​,  “ನಾನು ರಣವೀರ್ ಅನ್ನು ಪ್ರೀತಿಸುತ್ತೇನೆ. ಅವರು ಎರಡನೇ ಮದುವೆಯಾಗುವುದಾದರೆ, ಅವರು ಆಗುವುದಿಲ್ಲ, ದೀಪಿಕಾ ಇರುವಾಗ ಇದು ಅಸಾಧ್ಯ, ಆದರೆ ನಾನು ಅವರಿಗಾಗಿ ಇದ್ದೇನೆ. ರಣವೀರ್ ಅವರ ಎರಡನೇ ಹೆಂಡತಿಯಾಗಲು ಸಿದ್ದ ಎಂದಿದ್ದಾರೆ. ರಣವೀರ್ ಎಂದರೆ ಬಹಳ ಇಷ್ಟ ಎಂಬುದನ್ನ ಎಲ್ಲರ ಮುಂದೆ ಹೇಳಿಕೊಂಡಿದ್ದಾರೆ.

View this post on Instagram


A post shared by Uorfi (@urf7i)

ಇತ್ತೀಚೆಗೆ ರಣವೀರ್ ಸಿಂಗ್, ಪೇಪರ್ ಮ್ಯಾಗಜೀನ್ ಫೋಟೋಶೂಟ್ ಮಾಡಿಸಿದ್ದು, ರಣವೀರ್ ಸಿಂಗ್ ಸಂಪೂರ್ಣ ಬೆತ್ತಲೆಯಾಗಿ ಪೋಸ್ ಕೊಟ್ಟಿದ್ದರು. ಅದು ಎಲ್ಲೆಡೆ ವೈರಲ್ ಆಗಿ, ಚರ್ಚೆಯ ವಿಚಾರವಾಗಿತ್ತು. ಅಲ್ಲದೇ ಕಾಫಿ ವಿತ್ ಕರಣ್ ಶೋನಲ್ಲಿ ಆಲಿಯಾ ಭಟ್​ ಜೊತೆ ಭಾಗವಹಿಸಿದ್ದ ರಣವೀರ್ ಸೀಂಗ್ ಉರ್ಫಿ ಜಾವೇದ್​ ಬಗ್ಗೆ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದರು. ನಟ ರಣವೀರ್ ಸಹ ವಿಭಿನ್ನ ರೀತಿಯಾಗಿ ಬಟ್ಟೆ ಹಾಕುವುದಕ್ಕೆ ಫೇಮಸ್​.

top videos
    First published: