• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Urfi Javed: ಉರ್ಫಿ ಚಿಟ್ಟೆ ಎಲ್ಲಿ ನಿನ್ನ ಬಟ್ಟೆ? ಟಾಪ್ ಇಲ್ಲ, ಪ್ಯಾಂಟ್ ಕೂಡ ಜಾರ್ತಿದೆ ಜಾವೇದ್ ಎಚ್ಚರ ಎಂದ್ರು ನೆಟ್ಟಿಗರು

Urfi Javed: ಉರ್ಫಿ ಚಿಟ್ಟೆ ಎಲ್ಲಿ ನಿನ್ನ ಬಟ್ಟೆ? ಟಾಪ್ ಇಲ್ಲ, ಪ್ಯಾಂಟ್ ಕೂಡ ಜಾರ್ತಿದೆ ಜಾವೇದ್ ಎಚ್ಚರ ಎಂದ್ರು ನೆಟ್ಟಿಗರು

ಉರ್ಫಿ ಜಾವೇದ್​

ಉರ್ಫಿ ಜಾವೇದ್​

OTTplay ChangeMakers ಅವಾರ್ಡ್ಸ್ ಕಾರ್ಯಕ್ರಮಕ್ಕೆ ವಿಚಿತ್ರ ಉಡುಗೆ ತೊಟ್ಟು ಉರ್ಫಿ ಜಾವೇದ್​ ಆಗಮಿಸಿದ್ರು. ಮುಂಬೈನಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಬಂದ ಉರ್ಫಿ, ಸನ್ನಿ ಲಿಯೋನ್ ಜೊತೆ ಒಟ್ಟಿಗೆ ಫೋಟೋಗೆ ಪೋಸ್​ ಕೊಟ್ಟಿದ್ದಾರೆ.

  • News18 Kannada
  • 4-MIN READ
  • Last Updated :
  • Karnataka, India
  • Share this:

ಬಿಗ್ ಬಾಸ್ ಒಟಿಟಿಯಿಂದ ಫೇಮಸ್ ಆಗಿರೋ ಉರ್ಫಿ ಜಾವೇದ್ (Urfi Javed) ಸೋಶಿಯಲ್​ ಮೀಡಿಯಾದಲ್ಲಿ (Social Media) ಸಖತ್ ಸುದ್ದಿಯಲ್ಲಿದ್ದಾರೆ. ತನ್ನ ಹೊಸ ಹೊಸ ವಿಡಿಯೋ, ಫೋಟೋಗಳ (Photo) ಮೂಲಕ ಸಂಚಲನ ಮೂಡಿಸಿದ್ದಾರೆ. ಉರ್ಫಿ ತನ್ನ ಡ್ರೆಸ್​ ಹಾಗೂ ಲುಕ್‌ನಿಂದ ಭಾರೀ ಸುದ್ದಿಯಲ್ಲಿದ್ದಾರೆ. ಕೆಲವೊಮ್ಮೆ ಜನರು ಉರ್ಫಿಯ ಫ್ಯಾಷನ್ (Fashion) ಸೆನ್ಸ್  ಇಷ್ಟಪಡುತ್ತಾರೆ. ಇನ್ನೂ ಕೆಲವೊಮ್ಮೆ ತನ್ನ ಫ್ಯಾಷನ್​ನಿಂದಲೇ ಉರ್ಫಿ ಭಾರೀ ಟ್ರೋಲ್‌ಗಳಿಗೆ ಗುರಿಯಾಗುತ್ತಾರೆ. ಈ ಬಾರಿ ಕೂಡ ವಿಚಿತ್ರ ಡ್ರೆಸ್ ಧರಿಸಿ ಜನರ ಮುಂದೆ ಬಂದಿದ್ದಾರೆ. ಉರ್ಫಿ ನೋಡಿದ ನೆಟ್ಟಿಗರು ಇದೇನಮ್ಮಾ ನಿನ್ನ ಅವತಾರ ಎನ್ನುತ್ತಿದ್ದಾರೆ.


ವಿಚಿತ್ರ ಉಡುಗೆ ತೊಟ್ಟ ಉರ್ಫಿ ಜಾವೇದ್​


OTTplay ChangeMakers ಅವಾರ್ಡ್ಸ್ ಕಾರ್ಯಕ್ರಮಕ್ಕೆ ವಿಚಿತ್ರ ಉಡುಗೆ ತೊಟ್ಟು  ಉರ್ಫಿ ಜಾವೇದ್​  ಆಗಮಿಸಿದ್ರು. ಮುಂಬೈನಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಬಂದ ಉರ್ಫಿ, ಸನ್ನಿ ಲಿಯೋನ್ ಜೊತೆ ಒಟ್ಟಿಗೆ ಫೋಟೋಗೆ ಪೋಸ್​ ಕೊಟ್ಟಿದ್ದಾರೆ. ಇಬ್ಬರನ್ನೂ ಒಟ್ಟಿಗೆ ಕಂಡ ಅಭಿಮಾನಿಗಳು ಫುಲ್​ ಖುಷ್ ಆಗಿದ್ದಾರೆ.




ಉರ್ಫಿ ಔಟ್ ಫಿಟ್ ನೋಡಿ ಶಾಕ್


ಉರ್ಫಿ ಜಾವೇದ್ ಮತ್ತೊಮ್ಮೆ ತನ್ನ ವಿಶಿಷ್ಟ ಫ್ಯಾಷನ್​ ಸೆನ್ಸ್​ನಿಂದ  ಭಾರೀ ಸುದ್ದಿಯಾಗಿದ್ದಾರೆ. ನೇರಳೆ ಬಣ್ಣದ ಬ್ಯಾಕ್‌ಲೆಸ್ ಪಕ್ಕೆಲುಬಿನ ಆಕಾರದ ವಸ್ತುವನ್ನು ಮೈ ಮೇಲೆ ಧರಿಸಿ ಬಂದಿದ್ದಾರೆ. ಉರ್ಫಿ ಔಟ್ ಫಿಟ್ ನೋಡಿ ಕಾರ್ಯಕ್ರಮದಲ್ಲಿದ್ದವರೇ ಬೆಚ್ಚಿಬಿದ್ದಿದ್ದಾರೆ.  ಫೋಟೋ, ವಿಡಿಯೋ ನೋಡಿದ ನೆಟ್ಟಿಗರು ಇದೆಂಥಾ ಡ್ರೆಸ್​ ಎಂದು ನಕ್ಕಿದ್ದಾರೆ. ಮತ್ತೆ ಉರ್ಫಿ ಸಖತ್ ಟ್ರೋಲ್ ಆಗಿದ್ದಾರೆ.




ಉರ್ಫಿಯನ್ನು ಮೆಚ್ಚಿದ ಸನ್ನಿ ಲಿಯೋನ್​


ಉರ್ಫಿಯ ಫ್ಯಾಷನ್​  ಸೆನ್ಸ್​ ಅನ್ನು ಅನೇಕರು ಹೊಗಳಿದ್ದಾರೆ. ಅವರಲ್ಲಿ ನಟಿ ಸನ್ನಿ ಲಿಯೋನ್​ ಕೂಡ ಒಬ್ಬರು. ಹಿಂದೆ ಉರ್ಫಿ ಫ್ಯಾಷನ್​ ನೋಡಿದ ಸನ್ನಿ ಆಕೆಯ ಧೈರ್ಯವನ್ನು ಮೆಚ್ಚಲೇಬೇಕು ಎಂದಿದ್ದರು. ಈ ರೀತಿ ಬಟ್ಟೆ ತೊಟ್ಟು ಹೊರಗೆ ಬರಲು ಧೈರ್ಯಬೇಕು ಎಂದಿದ್ರು. ಇದೀಗ ಉರ್ಫಿ ಜಾವೇದ್​ ಜೊತೆ ಸನ್ನಿ ಲಿಯೋನ್ ಫೋಟೋಗೆ ಪೋಸ್​ ಕೊಟ್ಟಿದ್ದಾರೆ.




ನೆಟ್ಟಿಗರ ಪ್ರತಿಕ್ರಿಯೆ ಹೇಗಿದೆ?


ಸನ್ನಿ ಲಿಯೋನ್ ಸಂತೋಷದಿಂದ ಉರ್ಫಿಯೊಂದಿಗೆ ಪೋಸ್ ಕೊಟ್ಟಿದ್ದಾರೆ.  ಆಫ್ ಶೋಲ್ಡರ್ ಮಿನುಗುವ ಬಟ್ಟೆಯಲ್ಲಿ ಸನ್ನಿ ಮಾದಕ ನೋಟ ಬೀರಿದ್ದಾರೆ. ಉರ್ಫಿ ಫ್ಯಾಷನ್​ಗೆ ನೆಟಿಜನ್‌ಗಳಿಂದ ಮಿಶ್ರ ಪ್ರತಿಕ್ರಿಯೆ ಬಂದಿದೆ. ಅಯ್ಯೋ ಉರ್ಫಿ ಏನು ಧರಿಸಿದ್ದಾರೆ ಎಂದು ಅನೇಕರು ಆಶ್ಚರ್ಯ ಪಡುತ್ತಿದ್ದಾರೆ.


ಜಡೆಯಲ್ಲಿ  ಮೈ ಮುಚ್ಚಿಕೊಂಡ ಉರ್ಫಿ


ಕೆಲ ದಿನಗಳ ಹಿಂದೆ ನಟಿ ಉರ್ಫಿ ಜಾವೇದ್​ ಜಡೆಯಲ್ಲಿ ತಮ್ಮ ಮೈ ಮುಚ್ಚಿಕೊಂಡಿದ್ದರು. ಅರೆ ಬರೆ ಬಟ್ಟೆ ತೊಟ್ಟು ವಿಡಿಯೋ ಮಾಡುತ್ತಿದ್ದ ಉರ್ಫಿ ಈ ಬಾರಿ ಬಟ್ಟೆಯನ್ನೇ ಹಾಕದೆ ಜಡೆಯಲ್ಲಿ ಮೈ ಮುಚ್ಚಿಕೊಂಡು ಜನರ ಮುಂದೆ ಬಂದು ನಿಂತಿದ್ದರು. ಉರ್ಫಿ ಹೊಸ ರೀಲ್ಸ್ ಇದೀಗ ಸಖತ್ ವೈರಲ್ ಆಗಿದೆ​.


ಉರ್ಫಿ ವಿಡಿಯೋ ಸಖತ್ ಟ್ರೋಲ್​

top videos


    ಉರ್ಫಿ ಜಾವೇದ್ ಅನೇಕ ವಿಡಿಯೋ ಹಾಗೂ ಫೋಟೋಗಳು ಸಖತ್ ಟ್ರೋಲ್ ಆಗಿದೆ. ಜಡೆಯಲ್ಲೇ ಮೈ ಮುಚ್ಚಿಕೊಂಡು ಬಂದ ಉರ್ಫಿ ಜಾವೇದ್​ ವಿಡಿಯೋ ಕೂಡ ಸಖತ್ ಟ್ರೋಲ್ ಆಗಿದ್ದು, ವಿಡಿಯೋ ನೋಡಿದ ನೆಟ್ಟಿಗರು ಬಗೆ ಬಗೆ ಕಮೆಂಟ್ ಮಾಡ್ತಿದ್ದಾರೆ. ಏನ್ ತಾಯಿ ನಿನ್ನ ಅವತಾರ ಅಂತಿದ್ದಾರೆ. ಮೊದಲು ಬಟ್ಟೆ ಧರಿಸೋದು ಕಲಿ ಅಂತಿದ್ದಾರೆ. ಇನ್ನು ಕೆಲವರು ಉರ್ಫಿ  ಜಾವೇದ್​ ಬೋಲ್ಡ್​ ಅವಾತರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    First published: