• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Urfi Javed: ಎರ್ರಾ ಬಿರ್ರಿ ಡ್ರೆಸ್ ತೊಟ್ಟು ಟೀ ಕುಡಿಯೋಕೆ ಪರದಾಡಿದ ಉರ್ಫಿ! ಸ್ಟ್ರಾ ಬಳಸಿ ಕುಡಿಯಲ್ಲಾ ಅಂತ ಕಾಲೆಳೆದ ನೆಟ್ಟಿಗರು!

Urfi Javed: ಎರ್ರಾ ಬಿರ್ರಿ ಡ್ರೆಸ್ ತೊಟ್ಟು ಟೀ ಕುಡಿಯೋಕೆ ಪರದಾಡಿದ ಉರ್ಫಿ! ಸ್ಟ್ರಾ ಬಳಸಿ ಕುಡಿಯಲ್ಲಾ ಅಂತ ಕಾಲೆಳೆದ ನೆಟ್ಟಿಗರು!

ಉರ್ಫಿ ಜಾವೇದ್​

ಉರ್ಫಿ ಜಾವೇದ್​

ಸದಾ ಚಿತ್ರವಿಚಿತ್ರವಾದ ಉಡುಪುಗಳು, ಅರೆ ನಗ್ನದೇಹ ಪ್ರದರ್ಶನದಿಂದ ಹೆಸರುವಾಸಿಯಾಗಿರುವ ಉರ್ಫಿ ಜಾವೇದ್ ಅವರ ವಿಡಿಯೋ ಮತ್ತೆ ವೈರಲ್ ಆಗಿದೆ. ಇದರಲ್ಲಿ ಉರ್ಫಿ ಜಾವೇದ್ ತಾನು ಧರಿಸಿರುವ ಡ್ರೆಸ್​​ನಿಂದಾಗಿ​ ಚಹಾ ಕುಡಿಯಲು ಕಷ್ಟಪಡುತ್ತಿರುವುದನ್ನು ನೋಡಬಹುದು.

 • Share this:

ಸದಾ ಚಿತ್ರವಿಚಿತ್ರವಾದ ಉಡುಪುಗಳು, ಅರೆ ನಗ್ನದೇಹ ಪ್ರದರ್ಶನದಿಂದ ಹೆಸರುವಾಸಿಯಾಗಿರುವ ಉರ್ಫಿ ಜಾವೇದ್ (Urfi Javed) ತಮ್ಮದೇ ಸ್ಟೈಲ್ ಸ್ಟೇಟ್‌ಮೆಂಟ್‌ಗಳಿಂದ ಖ್ಯಾತರಾದವರು. ನಟನಾ ಕ್ಷೇತ್ರದಲ್ಲಿ (Acting) ಹೆಸರುವಾಸಿಯಾಗಿಲ್ಲದಿದ್ದರೂ ವಿವಾದಾತ್ಮಕ ಉಡುಗೆ ತೊಡುಗೆಗಳು ಚಿತ್ರ ವಿಚಿತ್ರ ಡ್ರೆಸ್ ಥೀಮ್‌ಗಳಿಂದ ಧೈರ್ಯವಾಗಿಯೇ ಫೋಟೋಗ್ರಾಫರ್ಸ್‌ಗೆ (Photographers) ಫೋಸ್ ನೀಡುವ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಉರ್ಫಿ ಹೆಚ್ಚಿನ ಫ್ಯಾನ್ ಫಾಲೋವಿಂಗ್ ಪಡೆದುಕೊಂಡಿರುವ ಸೆಲೆಬ್ರಿಟಿ ಎಂದರೆ ಸುಳ್ಳಲ್ಲ.


ಈ ನಟಿಯ ಆತ್ಮವಿಶ್ವಾಸಕ್ಕೆ ಕೊರತೆಯೇ ಇಲ್ಲ


ಯಾವುದೇ ರೀತಿಯ ಉಡುಗೆ ತೊಡುಗೆ ಇರಲಿ ಅದನ್ನು ಸಾರ್ವಜನಿಕವಾಗಿ ಪ್ರದರ್ಶಿಸುವಲ್ಲಿ ಅಂತೆಯೇ ಮಾಧ್ಯಮ ಫೋಟೋಗ್ರಾಫರ್‌ಗಳ ಮುಂದೆ ಫೋಟೋ ಕ್ಲಿಕ್ಕಿಸಿಕೊಳ್ಳುವಲ್ಲಿ ಉರ್ಫಿ ಹಿಂದೇಟು ಹಾಕುವುದೇ ಇಲ್ಲ. ಆಕೆಯ ಆತ್ಮವಿಶ್ವಾಸ ಎಷ್ಟು ಬಲವಾಗಿದೆ ಎಂದರೆ ಸಾರ್ವಜನಿಕವಾಗಿ ತಮ್ಮ ಚಿತ್ರವಿಚಿತ್ರ ಉಡುಪುಗಳಲ್ಲಿಯೇ ಕಾಣಿಸಿಕೊಳ್ಳುತ್ತಾರೆ. ಯಾರು ಏನೇ ಹೇಳಿದರೂ ಸಾಮಾಜಿಕ ತಾಣಗಳಲ್ಲಿ ಯಾವುದೇ ಬಗೆಯ ಕಾಮೆಂಟ್ ಬಂದರೂ ತಲೆಕೆಡಿಸಿಕೊಳ್ಳದೇ ಇರುವ ಈ ನಟಿ ಬೋಲ್ಡ್ ಆಗಿರುತ್ತಾರೆ ಎಂಬುದಂತೂ ನಿಜ.


ಆಕೆ ಇನ್‌ಸ್ಟಾದಲ್ಲಿ ಯಾವುದೇ ರೀಲ್ಸ್, ವಿಡಿಯೋ ಫೋಟೋ ಹಂಚಿಕೊಂಡರೂ ಅದು ಹಂಚಿಕೊಂಡ ಕ್ಷಣ ಹೊತ್ತಿನಲ್ಲಿ ವೈರಲ್ ಆಗಿಬಿಡುತ್ತವೆ.


ಇದನ್ನೂ ಓದಿ: ಶೀಘ್ರದಲ್ಲೇ ಜೊತೆ ಜೊತೆಯಲಿ ಸೀರಿಯಲ್ ಮುಕ್ತಾಯ, ಅನು ಸಿರಿಮನೆ ಏನಂತಾರೆ?


ಬಗೆ ಬಗೆಯ ಚಿತ್ರ ವಿಚಿತ್ರ ಉಡುಗೆ ತೊಡುಗೆ ಟ್ರೈಮಾಡುವ ಉರ್ಫಿ


ಅವರ ಇನ್‌ಸ್ಟಾಗ್ರಾಮ್ ತುಂಬೆಲ್ಲಾ ಆಕೆ ವಿಧ ವಿಧ ರೀತಿಯಲ್ಲಿ ಟ್ರೈಮಾಡಿರುವ ಉಡುಗೆ ತೊಡುಗೆಗಳ ಫೋಟೋಗಳು, ವಿಡಿಯೋಗಳು, ರೀಲ್ಸ್‌ಗಳನ್ನೇ ಕಾಣಬಹುದಾಗಿದೆ. ಪ್ಲಾಸ್ಟಿಕ್ ವ್ರಾಪ್‌ ಮಾಡಿ ಮೈಮಾಟ ಮುಚ್ಚಿಕೊಂಡರೆ ಮತ್ತೊಮ್ಮೆ ಹೂಗಳನ್ನೇ ಡ್ರೆಸ್ ಆಗಿ ಧರಿಸಿಕೊಂಡು ಕ್ಯಾಟ್ ವಾಕ್ ಮಾಡುತ್ತಾರೆ ಉರ್ಫಿ ಜಾವೇದ್. ಬಬಲ್ ಗಮ್‌ಗಳಲ್ಲಿ ಮೈಮುಚ್ಚಿಕೊಂಡು ಫೋಟೋ ಶೂಟ್ ಕೂಡ ಮಾಡಿಸಿಕೊಂಡಿದ್ದಾರೆ. ಅಂತೂ ಇಂತೂ ಬಾಲಿವುಡ್‌ನ ಈ ಸೆಲೆಬ್ರಿಟಿ ಸಿನಿ ತಾರೆಯರ ರೇಂಜ್‌ನಲ್ಲಿಯೇ ಖ್ಯಾತಿ ಗಳಿಸುತ್ತಿದ್ದಾರೆ.


ಉರ್ಫಿ ಜಾವೇದ್​


ಇತ್ತೀಚೆಗೆ ನಟಿ ಸುದ್ದಿಯಾಗಿದ್ದು ತಮ್ಮ ಡ್ರೆಸ್​ನಿಂದ ಒಂದು ಕಪ್ ಚಹಾ ಹೀರಲು ತಾನು ಎಷ್ಟು ಕಷ್ಟಪಡಬೇಕಾಯಿತು ಎಂಬುದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಆಕೆ ತಾಣದಲ್ಲಿ ಹಂಚಿಕೊಂಡಿದ್ದಾರೆ.


ಚಹಾ ಹೀರಲು ಕಷ್ಟಪಟ್ಟಿರುವ ವಿಡಿಯೋ ಹಂಚಿಕೊಂಡ ತಾರೆ


ವಿಡಿಯೋ ಪೋಸ್ಟ್ ಮಾಡುತ್ತಿರುವಂತೆಯೇ ಚಹಾ ತುಂಬಾ ಮುಖ್ಯವಾದುದು ಎಂದು ಬರೆದುಕೊಂಡಿರುವ ಉರ್ಫಿ, ಚಹಾ ಸೇವಿಸುವಾಗ ತಾನು ಧರಿಸಿದ ದಿರಿಸು ಎಷ್ಟು ಪ್ರಯಾಸ ನೀಡಿತು ಎಂಬುದನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಕಾರಿನ ಪ್ರಯಾಣಿಕರ ಸೀಟಿನಲ್ಲಿ ಕುಳಿತಿದ್ದ ಉರ್ಫಿ ಬ್ಯಾರಿಕೇಡ್ ರೀತಿಯ ಉಡುಗೆ ಧರಿಸಿ ಚಹಾ ಹೀರುತ್ತಿದ್ದರು. ಆಕೆ ಚಹಾದ ಗ್ಲಾಸ್ ಅನ್ನು ಕೈಯಲ್ಲಿ ಹಿಡಿದುಕೊಂಡಿದ್ದರೂ ತುಂಬಾ ಕಷ್ಟಪಡಬೇಕಾಯಿತು. ಆದರೂ ಚಹಾ ಕುಡಿಯಲು ಸಾಹಸವನ್ನೇ ಮಾಡುತ್ತಿದ್ದರು.

View this post on Instagram


A post shared by Uorfi (@urf7i)

ವೈರಲ್ ಆಯಿತು ಆಕೆಯ ವಿಡಿಯೋ


ವಿಡಿಯೋ ಒಂದು ಗಂಟೆಯೊಳಗೆ ವೈರಲ್ ಆಗಿದ್ದು 2.6 ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಅಂತೆಯೇ ವೀಕ್ಷಣೆಯ ಸಂಖ್ಯೆ ಹೆಚ್ಚುತ್ತಲೇ ಇದೆ. ಒಟ್ಟು 30,000 ಲೈಕ್‌ಗಳನ್ನು ವಿಡಿಯೋ ಪಡೆದುಕೊಂಡಿದೆ. ವಿಡಿಯೋ ಹಲವಾರು ಟೀಕೆಗಳು ಹಾಗೂ ಹೊಗಳಿಕೆಗಳನ್ನು ಪಡೆದುಕೊಂಡಿದೆ.


ಬಳಕೆದಾರರು ನೀಡಿರುವ ಸಲಹೆಗಳೇನು?


ಚಹಾ ಕುಡಿಯಲು ಕಷ್ಟಪಡುತ್ತಿದ್ದ ಆಕೆಯ ಪರಿಸ್ಥಿತಿ ನೋಡಿ ಕಾಮೆಂಟ್ ಮಾಡಿರುವ ಬಳಕೆದಾರರೊಬ್ಬರು ಸ್ಟ್ರಾಗಳನ್ನು ಬಹುಶಃ ಇಂತಹ ಪರಿಸ್ಥಿತಿಗಾಗಿಯೇ ತಯಾರಿಸಲಾಗಿದೆ ಎಂದು ತಿಳಿಸಿದ್ದಾರೆ. ಬಿಸಿ ಚಹಾಕ್ಕೆ ಸ್ಟ್ರಾ ನಾನು ಹೇಗೆ ಬಳಸಲಿ ಎಂದು ಉರ್ಫಿ ಮರುಪ್ರಶ್ನಿಸಿದ್ದಾರೆ.


top videos  ಪ್ರತಿಯೊಬ್ಬರನ್ನೂ ಮನೋರಂಜನಾತ್ಮಕವಾಗಿ ಇರಿಸುತ್ತಿರುವುದಕ್ಕೆ ಧನ್ಯವಾದಗಳು ಎಂದು ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದು ಇದು ನಿಜಕ್ಕೂ ಕ್ಲಾಸಿಕ್ ಎಂದು ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಇದು ತುಂಬಾ ಮೋಜಿನದ್ದಾಗಿದೆ ಎಂದು ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಈ ವಿಡಿಯೋಗೆ ನಗುವಿನ ಎಮೋಟಿಕಾನ್ ಸೇರಿಸಿದ್ದು ಎಂತಹ ಹುಚ್ಚುತನ ಎಂದು ಕಾಮೆಂಟ್ ಮಾಡಿದ್ದಾರೆ.

  First published: