• Home
  • »
  • News
  • »
  • entertainment
  • »
  • Urfi Javed: ಉರ್ಫಿ ಜಾವೇದ್-ಚೇತನ್ ಭಗತ್ ಫೈಟ್​; ಸರಣಿ ಪೋಸ್ಟ್‌ ಮೂಲಕ ಟಾಂಗ್‌ ನೀಡಿದ ನಟಿ

Urfi Javed: ಉರ್ಫಿ ಜಾವೇದ್-ಚೇತನ್ ಭಗತ್ ಫೈಟ್​; ಸರಣಿ ಪೋಸ್ಟ್‌ ಮೂಲಕ ಟಾಂಗ್‌ ನೀಡಿದ ನಟಿ

ಉರ್ಫಿ ಜಾವೇದ್​

ಉರ್ಫಿ ಜಾವೇದ್​

ಸಾಹಿತ್ಯ ಸಮ್ಮೇಳನದಲ್ಲಿ ನನ್ನ ಹೆಸರು ತೆಗೆದುಕೊಳ್ಳುವ ಅವಶ್ಯಕತೆ ಏನಿತ್ತು? ನಾನು ಲೇಖಕಿಯಲ್ಲ. ನನಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಉರ್ಫಿ ಕಿಡಿಕಾರಿದ್ದಾರೆ.

  • Trending Desk
  • 3-MIN READ
  • Last Updated :
  • Karnataka, India
  • Share this:

ಸದಾ ತನ್ನ ಬಟ್ಟೆ, ಬೋಲ್ಡ್‌ ಕಾಮೆಂಟ್‌ಗಳಿಂದಲೇ ಒಂದಿಷ್ಟು ಪ್ರಶಂಸೆ, ಸಾಕಷ್ಟು ಟೀಕೆ ಪಡೆದುಕೊಳ್ಳುತ್ತಿದ್ದ ನಟಿ ಉರ್ಫಿ ಜಾವೇದ್ (Urfi Javed) ಕುರಿತಂತೆ ಲೇಖಕ ಚೇತನ್ ಭಗತ್ (Chetan Bhagath) ಒಂದಷ್ಟು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಈಗ ಪರಸ್ಪರ ಕೆಸರೆರಚಾಟಕ್ಕೆ ಕಾರಣವಾಗಿದೆ. ಕಾರ್ಯಕ್ರಮವೊಂದರಲ್ಲಿ ಚೇತನ್‌ ಭಗತ್‌ ಭಾಷಣ (Speech) ಮಾಡುತ್ತಿದ್ದ ವೇಳೆ ಉರ್ಫಿಯನ್ನು ಉಲ್ಲೇಖಿಸಿದ್ದರು. ಇದಕ್ಕೆ ಕಿಡಿಕಾರಿದ ಉರ್ಫಿ ಕೂಡ ಲೇಖಕರಿಗೆ ಟಾಂಗ್‌ ನೀಡಿದ್ದರು. ಇಲ್ಲಿಗೆ ಮುಗಿಯದ ಇಬ್ಬರ ವಾದ-ವಿವಾದ (Argument-Dispute) ಮತ್ತೊಂದು ಹಂತಕ್ಕೂ ಹೋಗಿದೆ.


ಸರಣಿ ಪೋಸ್ಟ್‌ ಮೂಲಕ ಲೇಖಕರನ್ನು ತರಾಟೆಗೆ ತೆಗೆದುಕೊಂಡ ಉರ್ಫಿ


ಉರ್ಫಿ ಸದ್ಯ ಸರಣಿ ಪೋಸ್ಟ್‌ ಮೂಲಕ ಚೇತನ್‌ ಭಗತ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. #MeToo ಆಂದೋಲನದ ಸಮಯದಲ್ಲಿ ಚೇತನ್ ಭಗತ್ ಅವರ ವಾಟ್ಸಾಪ್ ಚಾಟ್‌ನ ಸ್ಕ್ರೀನ್‌ಶಾಟ್‌ಗಳು ಸೋರಿಕೆಯಾದ ನಂತರ ಕ್ಷಮೆಯಾಚಿಸಿದ್ದಾರೆ ಎಂದು ಉಲ್ಲೇಖಿಸಿರುವ ಸುದ್ದಿ ಲೇಖನದ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡ ಉರ್ಫಿ "ಇಂತಹ ಪುರುಷರು ತಮ್ಮ ನ್ಯೂನತೆಗಳನ್ನು ಒಪ್ಪಿಕೊಳ್ಳದೇ ಮಹಿಳೆಯರನ್ನು ದೂಷಿಸುತ್ತಾರೆ.


ನಿಮ್ಮ ವಿಕೃತ ಬುದ್ಧಿಗೆ ಹುಡುಗಿಯೊಬ್ಬಳು ಧರಿಸುವ ಬಟ್ಟೆ ಕಾರಣವಲ್ಲ. ಅನಾವಶ್ಯಕವಾಗಿ ನನ್ನನ್ನು ಸಂಭಾಷಣೆಯಲ್ಲಿ ಎಳೆದುಕೊಂಡು ಹೋಗುವುದು, ನನ್ನ ಬಟ್ಟೆಗಳು ಯುವ ಜನತೆಯನ್ನು ಹಾಳು ಮಾಡುತ್ತಿದೆ ಎನ್ನುವುದು ವ್ಯರ್ಥ. ನೀವು ಹುಡುಗಿಯರಿಗೆ ಮೆಸೇಜ್‌ ಮಾಡುತ್ತೀರಲ್ಲಾ ಅದು ಅವರಿಗೆ ಮುಜುಗರ ತರಿಸುವುದಿಲ್ಲವೇ ಅವರಿಗೇ ತೊಂದರೆಯಾಗುವುದಿಲ್ಲವೇ ಎಂದು" ಖಡಕ್‌ ಆಗಿ ವಾಗ್ದಾಳಿ ನಡೆಸಿದ್ದಾರೆ.


Urfi Javed Slams Chetan Bhagat Shares His Leaked WhatsApp Chats
ಉರ್ಫಿ ಜಾವೇದ್​


ವಾಟ್ಸಾಪ್‌ ಚಾಟ್‌ಗಳ ಸ್ಕ್ರೀನ್‌ ಶಾಟ್‌ ಹಂಚಿಕೆ


ಹೀಗೆ ಸರಣಿ ಪೋಸ್ಟ್‌ಗಳ ಮೂಲಕ ಚೇತನ್‌ಗೆ ಪ್ರತಿಕ್ರಿಯಿಸುತ್ತಿರುವ ಉರ್ಫಿ, ಅವರ ವಾಟ್ಸಾಪ್‌ ಸಂದೇಶಗಳ ಸ್ಕ್ರೀನ್‌ ಶಾಟ್‌ಗಳನ್ನು ಸಹ ಹಂಚಿಕೊಂಡು, " ಅತ್ಯಾಚಾರ ಸಂಸ್ಕೃತಿಯನ್ನು ಪ್ರಚಾರ ಮಾಡುವುದನ್ನು ನಿಲ್ಲಿಸಿ. ಪುರುಷರ ವರ್ತನೆಗೆ ಮಹಿಳಾ ಉಡುಪುಗಳನ್ನು ದೂಷಿಸುವುದು ಸರಿಯಲ್ಲ.


ನಿಮ್ಮ ವಯಸ್ಸಿನ ಅರ್ಧದಷ್ಟು ಹುಡುಗಿಯರಿಗೆ ನೀವು ಸಂದೇಶ ಕಳುಹಿಸಿದಾಗ ನಿಮ್ಮ ಗಮನವನ್ನು ಬೇರೆಡೆಗೆ ಸೆಳೆಯುತ್ತಿದ್ದವರು ಯಾರು? ನಿಮ್ಮ ತಪ್ಪಾದ ಮಾರ್ಗದರ್ಶನ ಯುವಕರನ್ನು ಹಾಳು ಮಾಡುತ್ತಿದೆ ಹೊರತು, ನಾನಲ್ಲ. ಮಹಿಳೆಯರ ಉಡುಪಿನಿಂದ ಅವರನ್ನು ಟೀಕಿಸುವ ಪ್ರವೃತ್ತಿಗೆ ಪುರುಷರನ್ನು ಪ್ರಚೋದಿಸಬೇಡಿ" ಎಂದು ಚೇತನ್‌ ಭಗತ್‌ ಅವರನ್ನು ಉಲ್ಲೇಖಿಸಿ ಪೋಸ್ಟ್‌ ಮಾಡಿದ್ದಾರೆ.


ಉರ್ಫಿ ಹಂಚಿಕೊಂಡ ಸ್ಕ್ರೀನ್‌ಶಾಟ್‌ಗಳಿಗೆ ಚೇತನ್ ಸ್ಪಷ್ಟನೆ


ಉರ್ಫಿ ಜಾವೇದ್ ಹಂಚಿಕೊಂಡ ವೈರಲ್ ಸ್ಕ್ರೀನ್‌ಶಾಟ್‌ಗಳಿಗೆ ಚೇತನ್ ಭಗತ್ ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿದ್ದು, ಇದು ಬರಹಗಾರರ ಆಪಾದಿತ ವಾಟ್ಸಾಪ್ ಚಾಟ್‌ನಂತೆ ಕಾಣುತ್ತದೆ. “ನಾನು ಈ ಯಾರೊಂದಿಗೂ ಮಾತನಾಡಿಲ್ಲ, ಭೇಟಿಯಾಗಿಲ್ಲ, ಅವರ ಬಗ್ಗೆಯೂ ತಿಳಿದಿಲ್ಲ. ಇದು ಸುಳ್ಳಿನ ಕಥೆ. ಅದಾಗ್ಯೂ ಇನ್‌ಸ್ಟಾಗ್ರಾಮ್‌ನಲ್ಲಿ ಸಮಯ ವ್ಯರ್ಥ ಮಾಡುವುದನ್ನು ನಿಲ್ಲಿಸಿ, ಫಿಟ್‌ನೆಸ್ ಮತ್ತು ವೃತ್ತಿಜೀವನದತ್ತ ಗಮನಹರಿಸಲು ಜನರಿಗೆ ಹೇಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ನಾನು ಭಾವಿಸುತ್ತೇನೆ" ಎಂದು ಟ್ವೀಟ್‌ ಮಾಡಿದ್ದಾರೆ.


ಚೇತನ್ ಭಗತ್ ನೀಡಿದ್ದ ಹೇಳಿಕೆ ಏನು?


ಲೇಖಕ ಚೇತನ್ ಭಗತ್ ಅವರು ಇತ್ತೀಚೆಗೆ ಸಾಹಿತ್ಯ ಸಮ್ಮೇಳನ ಒಂದರಲ್ಲಿ ಭಾಗವಹಿಸಿದ್ದರು. ‘ಯುವ ಸಮೂಹಕ್ಕೆ ಮೊಬೈಲ್​​ ದೊಡ್ಡ ಅಡ್ಡಿಯಾಗಿದೆ. ಹುಡುಗರು ಯುವತಿಯರ ಫೋಟೋಗಳನ್ನು ಲೈಕ್​​​ ಮಾಡುತ್ತ, ಕಾಮೆಂಟ್​​ ಮಾಡುತ್ತ ಕಾಲ ಕಳೆಯುತ್ತಿದ್ದಾರೆ. ಜೊತೆಗೆ ಇನ್‌ಸ್ಟಾಗ್ರಾಮ್ ರೀಲ್ಸ್​​ಗಳನ್ನು ನೋಡುತ್ತ ಸುಮ್ಮನೆ ತಮ್ಮ ಸಮಯ ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ.ಒಂದು ಕಡೆ ದೇಶವನ್ನು ಯುವಕರ ಪಡೆ ಕಾಯುತ್ತಿದ್ದರೆ, ಇನ್ನೊಂದೆಡೆ ಉರ್ಫಿ ಜಾವೇದ್ ಅವರ ಫೋಟೋ ಮತ್ತು ರೀಲ್ಸ್​​ಗಳನ್ನು ನೋಡುತ್ತಾ ಕಾಲ ಕಳೆಯುತ್ತಿದ್ದಾರೆ’ ಎಂದು ತಮ್ಮ ಮೊದಲ ಹೇಳಿಕೆಯಲ್ಲಿ ಹೇಳಿದ್ದರು.


ನನ್ನ ಹೆಸರು ತೆಗೆದುಕೊಳ್ಳುವ ಅವಶ್ಯಕತೆ ಏನಿತ್ತು? ಎಂದು ಟಾಂಗ್‌ ನೀಡಿದ್ದ ಉರ್ಫಿ


ಚೇತನ್‌ ಭಗತ್‌ ಅವರ ಈ ಹೇಳಿಕೆ ವೈರಲ್‌ ಆಗುತ್ತಿದ್ದಂತೆ ಅತ್ತ ಉರ್ಫಿ ಕೆಂಡಕಾರಿದ್ದಾರೆ. ಸಾಹಿತ್ಯ ಸಮ್ಮೇಳನದಲ್ಲಿ ನನ್ನನ್ನು ಏಕೆ ಎಳೆದಿದ್ದಾರೆ ಎಂದು ಲೇಖಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ‘ಸಾಹಿತ್ಯ ಸಮ್ಮೇಳನದಲ್ಲಿ ನನ್ನ ಹೆಸರು ತೆಗೆದುಕೊಳ್ಳುವ ಅವಶ್ಯಕತೆ ಏನಿತ್ತು? ನಾನು ಲೇಖಕಿಯಲ್ಲ. ನನಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ. ಯುವಕರು ನನ್ನ ಫೋಟೋಗಳನ್ನು ರಹಸ್ಯವಾಗಿ ನೋಡುತ್ತಿದ್ದಾರೆ ಮತ್ತು ವಿಚಲಿತರಾಗುತ್ತಿದ್ದಾರೆ ಎಂದು ನೀವು ಹೇಳಿದ್ದೀರಿ.


ಇದನ್ನೂ ಓದಿ: Urfi Javed: ಬೆದರಿಕೆ ಹೆದರಿದ್ರಾ ಉರ್ಫಿ ಜಾವೇದ್​!? ಬಿಚ್ಚಮ್ಮ ಇದೀಗ ಗೌರಮ್ಮ!


ಯುವಕರನ್ನು ಬಿಡಿ, ನಿಮಗೆ ನನ್ನ ಚಿಕ್ಕಪ್ಪನ ವಯಸ್ಸಾಗಿದೆ. ನೀವು ಮದುವೆಯಾಗಿದ್ದರೂ ನಿಮ್ಮ ಅರ್ಧ ವಯಸ್ಸಿನ ಹುಡುಗಿಯರಿಗೆ ಸಂದೇಶಗಳನ್ನು ಕಳುಹಿಸಿದ್ದೀರಿ. ನಂತರ ಅದು ನಿಮಗೆ ತೊಂದರೆಯಾಗಲಿಲ್ಲ. ನಿಮ್ಮ ದಾಂಪತ್ಯ ಹಾಳಾಗಲಿಲ್ಲ ಅಥವಾ ನಿಮ್ಮ ಮಕ್ಕಳು ಹಾಳಾಗಲಿಲ್ಲ' ಎಂದು ಕುಟುಕಿದ್ದರು ಉರ್ಫಿ.

Published by:ಪಾವನ ಎಚ್ ಎಸ್
First published: