Urfi Javed: ಏಕದಂತಾಯ ವಕ್ರತುಂಡಾಯ ಭಜನೆ ಹಾಡಿದ ಉರ್ಫಿ ಜಾವೇದ್, ವಿಡಿಯೋ ವೈರಲ್

ದೇಶದ ಎಲ್ಲೆಡೆ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದ್ದು ಈ ಸಂದರ್ಭ ಉರ್ಫಿ ಜಾವೇದ್ ಫೇಮಸ್ ಹಿಂದೂ ಗಣೇಶ ಭಜನೆಯನ್ನು ಹಾಡಿದ್ದಾರೆ.

ದೇಶದ ಎಲ್ಲೆಡೆ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದ್ದು ಈ ಸಂದರ್ಭ ಉರ್ಫಿ ಜಾವೇದ್ ಫೇಮಸ್ ಹಿಂದೂ ಗಣೇಶ ಭಜನೆಯನ್ನು ಹಾಡಿದ್ದಾರೆ.

ದೇಶದ ಎಲ್ಲೆಡೆ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದ್ದು ಈ ಸಂದರ್ಭ ಉರ್ಫಿ ಜಾವೇದ್ ಫೇಮಸ್ ಹಿಂದೂ ಗಣೇಶ ಭಜನೆಯನ್ನು ಹಾಡಿದ್ದಾರೆ.

  • Share this:
ಉರ್ಫಿ ಜಾವೇದ್ (Urfi Javed) ಈಗ ಟಾಪ್ ಸೆಲೆಬ್ರಿಟಿಗಳನ್ನೂ (Celebrity) ಮೀರಿಸಿ ಫಾಲೋವರ್ಸ್​ಗಳನ್ನು ಪಡೆಯುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ (Social Media) ಅಕ್ಷರಶಃ ಉರ್ಫಿ ರಾಕಿಂಗ್. ತಮ್ಮ ಚಿತ್ರ ವಿಚಿತ್ರ ಉಡುಪುಗಳಿಂದ, ಫ್ಯಾಷನ್​ಗಳಿಂದ ನಟಿ ಟ್ರೋಲ್ (Troll) ಆಗುವುದರ ಜೊತೆ ಜೊತೆಗೆ ಸಿಕ್ಕಾಪಟ್ಟೆ ಅಭಿಮಾನಿಗಳ ಪ್ರೀತಿ ಗಳಿಸಿದ್ದಾರೆ. ಸಾಲದ್ದಕ್ಕೆ ಪಾಪ್ಪರಾಜಿಗಳ ಮೋಸ್ಟ್ ಫೇವರೇಟ್ ಆಗಿದ್ದಾರೆ. ಉರ್ಫಿ ಜಾವೇದ್ (Urfi Javed) ಹಾಟ್ ಲ್ಯಾವೆಂಡರ್ ಬ್ಯಾಕ್‌ಲೆಸ್ (Backless) ಮಿನಿ ಡ್ರೆಸ್‌ನಲ್ಲಿ ಉತ್ಕೃಷ್ಟತೆಯನ್ನು ವ್ಯಕ್ತಪಡಿಸಿದ್ದಾರೆ. ಪ್ರತಿಬಾರಿ ವಿಚಿತ್ರ ಬಟ್ಟೆಗಳಿಂದ ಸುದ್ದಿಯಾಗೋ ಉರ್ಫಿ ಜಾವೇದ್ (Urfi Javed) ಈ ಬಾರಿ ಗಣೇಶನ (Ganesha) ಭಜನೆ ಹಾಡುವ ಮೂಲಕ ವೈರಲ್ (Viral) ಆಗಿದ್ದಾರೆ. ನಟಿ ಗಣೇಶನ ಹಾಡನ್ನು ಹಾಡಿದ್ದು ವಿಡಿಯೋವನ್ನು (Video) ಅಪ್​ಲೋಡ್ ಮಾಡಿದ್ದಾರೆ. ದೇಶಾದ್ಯಂತ ಇಂದು ನಾಳೆ ಗೌರಿ ಗಣೇಶ ಹಬ್ಬವನ್ನು ಆಚರಿಸುತ್ತಿದ್ದು ಈ ಸಂದರ್ಭ ಹಬ್ಬದ ಪ್ರಯುಕ್ತ ಉರ್ಫಿಯೂ ವಿಡಿಯೋ (Video) ಮಾಡಿ ಶೇರ್ ಮಾಡಿದ್ದಾರೆ. 

ಹಬ್ಬದ ಪ್ರಯುಕ್ತ ಸಲ್ವಾರ್​ನಲ್ಲಿ ಕಾಣಿಸಿಕೊಂಡ ನಟಿ

ಫ್ಲೋರಲ್ ಪ್ರಿಂಟೆಡ್ ಸಲ್ವಾರ್ ಧರಿಸಿದ ಉರ್ಫಿ ಕೆಂಬಣ್ಣದ ಇಯರಿಂಗ್ಸ್ ಧರಿಸಿದ್ದರು. ಕೂದಲನ್ನು ಫ್ರೀಯಾಗಿ ಬಿಟ್ಟು ದುಪಟ್ಟಾ ಹರಡಿಕೊಂಡು ಧರಿಸಿಕೊಂಡಿದ್ದರು. ಹಿನ್ನೆಲೆಯಲ್ಲಿ ಏಕದಂತಾಯ ಹಾಡು ಪ್ಲೇ ಆಗುತ್ತಿದ್ದು ಉರ್ಫಿಯೂ ಅದರೊಂದಿಗೇ ಹಾಡುತ್ತಾ ಹೋಗಿದ್ದಾರೆ. ದಿನವೂ ಬರೀ ತುಂಡುಡುಗೆಯಲ್ಲಿ ಫೋಟೋಗಳನ್ನು ಶೇರ್ ಮಾಡುವ ಉರ್ಫಿಯ ಇಂದಿನ ವಿಡಿಯೋಗೆ ಅವರ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

ವಿಡಿಯೋ ವೈರಲ್

ಉರ್ಫಿ ಜಾವೇದ್ ಅವರು ಹಾಡಿರುವ ವಿಡಿಯೋ ವೈರಲ್ ಆಗಿದ್ದು, 42 ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದುಕೊಂಡಿದೆ. 1800ಕ್ಕೂ ಹೆಚ್ಚು ಮಂದಿ ಈ ವಿಡಿಯೋಗೆ ಕಮೆಂಟ್ ಮಾಡಿದ್ದಾರೆ. ಬಳಷ್ಟು ಜನರು ಅಬ್ಬಾ ಇವತ್ತಾದರೂ ಚೆನ್ನಾಗಿ ಕಾಣಿಸುತ್ತಿದ್ದೀರಿ ಎಂದು ಕಮೆಂಟ್ ಮಾಡಿದ್ದಾರೆ. ಪೂರ್ತಿ ಬಟ್ಟೆ ಧರಿಸಿದ ಕಾರಣ ನಿಮ್ಮ ಗುರುತೇ ಸಿಗಲಿಲ್ಲ ಎಂದಿದ್ದಾರೆ ಇನ್ನು ಕೆಲವರು. ಇನ್ನೂ ಕೆಲವರು ಈ ಡ್ರೆಸ್ ತುಂಬಾ ಚೆನ್ನಾಗಿದೆ ಎಂದಿದ್ದಾರೆ.










View this post on Instagram






A post shared by Uorfi (@urf7i)






ಶ್ರೀ ಗಣೇಶಾಯ ಧೀಮಹಿ

ಈ ಹಾಡನ್ನು ಶಂಕರ್ ಮಹಾದೇವನ್ ಹಾಡಿದ್ದು, ವಿರುದ್ ಸಿನಿಮಾದ ಹಾಡು ಇದಾಗಿದೆ. ಇದು 2005ರಲ್ಲಿ ರಿಲೀಸ್ ಆಗಿತ್ತು. ಅಜಯ್ ಅತುಲ್ ಹಾಡಿ 2009ರಲ್ಲಿ ಈ ಹಾಡು ಮತ್ತೊಮ್ಮೆ ರೆಕಾರ್ಡಿಂಗ್ ಆಗಿತ್ತು.



ಉರ್ಫಿಗೆ ಟ್ರೋಲ್ ಹೊಸದೇನಲ್ಲ

‘ಉರ್ಫಿ ಜಾವೇದ್​ ಟ್ರೋಲ್​ಗೆ ಒಳಗಾಗೋದು ಹೊಸದೇನಲ್ಲ. ಪ್ರತಿ ಭಾರಿ ಟ್ರೋಲ್​ಗೆ ಒಳಗಾಗ್ತಾರೆ. ಆದರೆ, ಯಾವುದಕ್ಕೂ ತಲೆಕೆಡಿಸಿಕೊಳ್ಳಲ್ಲ. ತನಗಿಷ್ಟ ಬಂದ ಉಡುಗೊರೆ ತೊಟ್ಟು ಖುಷಿ ಪಡುತ್ತಾರೆ. ಉರ್ಫಿ ಅಷ್ಟಾಗಿ ಫೇಮಸ್ ಆಗಿರಲಿಲ್ಲ. ಯಾವಾಗ ಬೋಲ್ಡ್ ಅವತಾರದಲ್ಲಿ ಏರ್​​ಪೋರ್ಟ್​ನಲ್ಲಿ(Airport) ಕಾಣಿಸಿಕೊಂಡರೋ ಅಂದಿನಿಂದ ಉರ್ಫಿ ಸಖತ್ ಫೇಮಸ್ ಆದರು.

ಇದನ್ನೂ ಓದಿ: Urfi Javed Galaxy Dress: ಪಾಪ್ಸ್ ಬಳಿ ಚೈನ್ ಕೇಳಿದ ಉರ್ಫಿ ಜಾವೇದ್! ಗ್ಯಾಲಕ್ಸಿ ಡ್ರೆಸ್​ನಲ್ಲಿ ಶೈನ್, ತಲೆಯ ಮೇಲೆ ತಾರೆಗಳು!

ಕೆಲವರು ಉರ್ಫಿ ಜಾವೇದ್‌ರನ್ನ ಫ್ಯಾಶನ್ ಡಿಸಾಸ್ಟರ್(Fashion Disaster) ಅಂತಲೇ ಕರೆಯುತ್ತಿದ್ದಾರೆ. ಪ್ರತಿದಿನ ಚಿತ್ರ, ವಿಚಿತ್ರ ಬಟ್ಟೆಗಳನ್ನು ಧರಿಸಿ ಪಾಪಾರಾಜಿಗಳ ಕಣ್ಣಿಗೆ ಕಾಣಿಸಿಕೊಳ್ಳುತ್ತಾರೆ.

ಯಾರು ಏನಾದ್ರೂ ಹೇಳಲಿ ಉರ್ಫಿ ಇರೋದೇ ಹೀಗೆ

ಬಹಳಷ್ಟು ನಟಿಯರು, ಜನರು ನಟಿಯನ್ನು ಟ್ರೋಲ್ ಮಾಡಿ ಕಾಲೆಳೆದರೂ ಉರ್ಫಿ ಒಂಚೂರು ತೆಲೆ ಕೆಡಿಸಿಕೊಳ್ಳುವುದಿಲ್ಲ. ಈ ಕಾರಣದಿಂದಲೇ ನಟಿ ಸೋಷಿಯಲ್ ಮೀಡಿಯಾದಲ್ಲಿ ದಿನದಿಂದ ದಿನಕ್ಕೆ ಫಾಲೋವರ್ಸ್ ಸಂಖ್ಯೆ ಏರಿಸಿಕೊಳ್ಳುತ್ತಲೇ ಇದ್ದಾರೆ.
Published by:Divya D
First published: