ಉರ್ಫಿ ಚಾವೇದ್ (Urfi Javed) ಹೆಸರು ಕೇಳಿದ್ರೆ ಪಡ್ಡೆ ಹುಡುಗರ ಎದೆ ಬಡಿತ ಹೆಚ್ಚಾಗುತ್ತೆ. ಒಂದೆಲ್ಲಾ ಒಂದು ಕಾರಣದಿಂದ ಸದಾ ಸುದ್ದಿಯಲ್ಲಿರುವ ಉರ್ಫಿ, ತನ್ನ ಫ್ಯಾಷನ್ ನಿಂದಲೇ ಸುದ್ದಿಯಾಗೋದು. ಆಕೆ ಧರಿಸುವ ವಿಚಿತ್ರ, ವಿಚಿತ್ರ ಬಟ್ಟೆಗಳು ತೊಟ್ಟು (Dress) ಯಾವಾಗಲೂ ಟ್ರೋಲ್ (Troll) ಆಗುತ್ತಾರೆ. ಉರ್ಫಿ ಮೈ ತುಂಬಾ ಬಟ್ಟೆ ಹಾಕೋದೇ ಕಮ್ಮಿ ಅದರಲ್ಲೂ ತುಂಡು ಉಡುಗೆಯನ್ನೇ ಹೆಚ್ಚಾಗಿ ಹಾಕ್ತಾರೆ. ಆದ್ರೆ ಇದೀಗ ಉರ್ಫಿಗೆ ಬಟ್ಟೆ ಹಾಕಿದ್ದಕ್ಕೆ ನನಗೆ ಅಲರ್ಜಿ ಆಗಿದೆ ಎಂದಿದ್ದಾರೆ.
ವಿಚಿತ್ರ ಬಟ್ಟೆ ಧರಿಸುವ ಉರ್ಫಿ
ಉರ್ಫಿ ಜಾವೇದ್ ಹಿಂದಿ ಬಿಗ್ ಬಾಸ್ ಒಟಿಟಿ ಸೀಸನ್ನಿಂದ ಜನಪ್ರಿಯರಾಗಿದ್ದಾರೆ. ಅಲ್ಲಿಯೇ ಚಿತ್ರ ವಿಚಿತ್ರ ಬಟ್ಟೆ ಧರಿಸಿ ಫೇಮಸ್ ಆಗಿದ್ದರು. ಫ್ಯಾಷನ್ ಹೆಸರಲ್ಲಿ ವಿಚಿತ್ರ ಬಟ್ಟೆಗಳನ್ನು ತೊಟ್ಟು ವಿಡಿಯೋ, ಫೋಟೋಗಳನ್ನು ಅಪ್ಲೋಡ್ ಮಾಡ್ತಾರೆ. ಇದೀಗ ತನಗೆ ಅಲರ್ಜಿ ಆಗಿರುವ ಬಗ್ಗೆ ಕೂಡ ಹೇಳಿಕೊಂಡಿದ್ದಾರೆ.
ಉರ್ಫಿಯನ್ನು ಕಾಡುತ್ತಿದೆ ಅಲರ್ಜಿ ಸಮಸ್ಯೆ
ಈಗ ಉರ್ಫಿಗೆ ದೇಹದ ಮೇಲೆ ಅಲರ್ಜಿ ಆಗಿದ್ದು, ಕಾಲಿನ ಮೇಲೆ ಗುಳ್ಳೆಗಳು ಎದ್ದಿವೆ. ಮುಖ ಊದಿಕೊಂಡಿದೆ. ಇದರಿಂದ ನಟಿಯ ಮುಖಚರ್ಯೆಯೇ ಬದಲಾಗಿದೆ. ಇವರು ನಿಜವಾಗಲು ಉರ್ಫಿಯೇ ಎಂದು ಪ್ರಶ್ನೆ ಮಾಡುವಂತೆ ಅವರ ಮುಖ ಬದಲಾಗಿದೆ.
View this post on Instagram
ನೋಡಿ ನನಗೆ ಬಟ್ಟೆ ಹಾಕಿಕೊಂಡರೆ ಆಗುವ ಅಲರ್ಜಿ ಇದು. ನಾನು ಏಕೆ ಬಟ್ಟೆ ಹಾಕುವುದಿಲ್ಲ ಎಂಬುದಕ್ಕೆ ನಿಮಗೆ ಉತ್ತರ ಸಿಕ್ಕಿದೆ ಎಂದುಕೊಳ್ಳುತ್ತೇನೆ. ನನಗೆ ಈ ಸಮಸ್ಯೆ ಇದೆ. ಬಟ್ಟೆ ಹಾಕಿಕೊಂಡರೆ ನನ್ನ ದೇಹ ರಿಯಾಕ್ಟ್ ಮಾಡುತ್ತದೆ. ಇದಕ್ಕೆ ಸಾಕ್ಷಿ ಕೊಟ್ಟಿದ್ದೇನೆ. ಹೀಗಾಗಿ ನಾನು ಅರೆ ಬೆತ್ತಲಾಗಿ ಓಡಾಡುತ್ತೇನೆ ಎಂದಿದ್ದಾರೆ ಅವರು.
ಉರ್ಫಿ ಹಂಚಿಕೊಂಡ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಉರ್ಫಿ ಬಟ್ಟೆ ಹಾಕಿಕೊಂಡ ಕಾರಣಕ್ಕೇ ಈ ರೀತಿ ಆಗಿದೆಯೇ ಅಥವಾ ಇದು ಪ್ರಚಾರದ ಗಿಮಿಕ್ಕೋ ಎಂಬ ಬಗ್ಗೆ ಕೆಲವರಿಗೆ ಅನುಮಾನ ಮೂಡಿದೆ. ಸದ್ಯ, ಈ ವಿಡಿಯೋಗೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಉರ್ಫಿ ಹೊಸ ಫ್ಯಾಷನ್ ವಿಡಿಯೋ
ಉರ್ಫಿ ಮೆಶ್ನಿಂದ ಮಾಡಿದ ಮಿನಿ ಸ್ಕರ್ಟ್ನಲ್ಲಿ ಪೋಸ್ ಕೊಟ್ಟಿದ್ದು ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಪ್ಲಾಸ್ಟಿಕ್ ಜಾಲರಿಯಿಂದ ಮಾಡಿದ ಬ್ರೇಲೆಟ್ ನಿಂದ ಮೈ ಮುಚ್ಚಿಕೊಂಡು ಬಂದಿದ್ದಾಳೆ. ಉರ್ಫಿ ಡಾರ್ಕ್ ರೆಡ್ ಲಿಪ್ಟಿಕ್, ಐ ಲೈನರ್ ಮತ್ತು ಮಸ್ಕರಾ- ಹಾಕಿದ ಕಣ್ಣಿನ ನೋಟ ಪಡ್ಡೆ ಹುಡುಗರನ್ನು ಕುಕ್ಕುವಂತಿದೆ.
ಇದನ್ನೂ ಓದಿ: Hostel Hudugaru Bekagiddare: ಹಾಸ್ಟೆಲ್ ಹುಡುಗರ ಜೊತೆ ಸೇರಿಕೊಂಡ ಶೆಟ್ರು! ರಿಷಬ್ ಜೊತೆ ಇವ್ರೂ ಬಂದ್ರು ನೋಡಿ
ಉರ್ಫಿ ವಿಡಿಯೋ ವೈರಲ್
ಉರ್ಫಿ ತನ್ನ ಹೊಸ ಫ್ಯಾಷನ್ ವಿಡಿಯೋ ಹಂಚಿಕೊಳ್ಳುತ್ತಿದ್ದಂತೆ ಫುಲ್ ವೈರಲ್ ಆಗಿದ್ದು, ನೆಟ್ಟಿಗರು ಬಗೆ ಬಗೆ ಕಮೆಂಟ್ ಮಾಡ್ತಿದ್ದಾರೆ. ಉರ್ಫಿ ಅಭಿಮಾನಿ ಒಬ್ರು "ನಾನು ಅದನ್ನು ಇಷ್ಟಪಡುತ್ತೇನೆ" ಎಂದು ಕಮೆಂಟ್ ಮಾಡಿದ್ರೆ, ಇನ್ನೊಬ್ಬರು "ತುಂಬಾ ಸುಂದರ" ಎಂದು ಬೆಂಕಿ ಇಮೋಜಿ ಹಾಕಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ