• Home
  • »
  • News
  • »
  • entertainment
  • »
  • Urfi Javed: ಬ್ಲ್ಯಾಕ್ ಪ್ಯಾಂಟ್ ಧರಿಸಿ ಟಾಪ್ ಧರಿಸೋದನ್ನೇ ಮರೆತರಾ ಉರ್ಫಿ! ಅಕ್ಕ ಏನ್ ಅವತಾರ ಅಂತಿದ್ದಾರೆ ನೆಟ್ಟಿಗರು

Urfi Javed: ಬ್ಲ್ಯಾಕ್ ಪ್ಯಾಂಟ್ ಧರಿಸಿ ಟಾಪ್ ಧರಿಸೋದನ್ನೇ ಮರೆತರಾ ಉರ್ಫಿ! ಅಕ್ಕ ಏನ್ ಅವತಾರ ಅಂತಿದ್ದಾರೆ ನೆಟ್ಟಿಗರು

ಉರ್ಫಿ ಜಾವೇದ್

ಉರ್ಫಿ ಜಾವೇದ್

ಉರ್ಫಿ ಜಾವೇದ್ ಚಿತ್ರ ವಿಚಿತ್ರವಾಗಿ ಡ್ರೆಸ್ ಮಾಡೋದು ಹೊಸದೇನಲ್ಲ. ಆದರೂ ನಟಿಯ ಫೋಟೋ ಪ್ರತಿಬಾರಿಯೂ ಹತ್ರತ್ರ 1 ಲಕ್ಷದಷ್ಟು ಲೈಕ್ಸ್ ಪಡೆಯುತ್ತೆ ಎನ್ನುವುದು ವಿಶೇಷ.

  • Share this:

ಹಿಂದಿ ಕಿರುತೆರೆ ನಟಿ ಉರ್ಫಿ ಜಾವೇದ್ (Urfi Javed) ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯವೇ ಇಲ್ಲ. ಸಿಕ್ಕಾಪಟ್ಟೆ ಫೇಮಸ್ ಈಕೆ. ಸೋಷಿಯಲ್ ಮೀಡಿಯಾದಲ್ಲಿ (Social Media) ಸಖತ್ ಆ್ಯಕ್ಟಿವ್ ಆಗಿರುವ ಈ ನಟಿ (Actress) ನಟಿಗಿಂತ ಹೆಚ್ಚು ಈಗ ಸೋಷಿಯಲ್ ಮಿಡಿಯಾ ಇನ್​ಫ್ಲುಯೆನ್ಸರ್. ಬಿಗ್​​ಬಾಸ್ ಒಟಿಟಿಯಲ್ಲಿ (Bigg Boss) ಕಾಣಿಸಿಕೊಂಡಿದ್ದ ಉರ್ಫಿ ಅವರಿಗೆ ಮೊದಲು ಪಬ್ಲಿಸಿಟಿ (Publicity) ಸಿಕ್ಕಿದ್ದು ಇಲ್ಲಿಯೇ. ಸೀರಿಯಲ್ ಮಾಡಿದರೂ ಅಷ್ಟಾಗಿ ಫೇಮಸ್ (Famous) ಆಗದ ನಟಿ ನಂತರದಲ್ಲಿ ಬಿಗ್​​ಬಾಸ್ (Bigg Boss) ಮನೆಗೆ ಹೋಗಿ ಒಂದೇ ವಾರಕ್ಕೆ ಹೊರಗೆ ಬಂದರೂ ಬೇಕಾದಷ್ಟು ಪಬ್ಲಿಸಿಟಿ ಪಡೆದುಕೊಂಡರು. ಉರ್ಫಿ ಜಾವೇದ್ ಬಿಗ್​ಬಾಸ್​ನಿಂದ ಹೊರ ಬಂದಾಗ ಎರ್ಪೋರ್ಟ್​ನಲ್ಲಿ ಕಾಣಿಸಿಕೊಂಡಾಗ ನಟಿಯ ವಿಚಿತ್ರ ಡ್ರೆಸ್ಸಿಂಗ್ ಸ್ಟೈಲ್ ದೊಡ್ಡ ಚರ್ಚೆಯಾಯಿತು. ಆಗಲೇ ನಟಿ ಈ ರೀತಿ ಡ್ರೆಸ್ (Dress) ಮಾಡುತ್ತಾರೆ ಎನ್ನುವ ವಿಚಾರ ರಿವೀಲ್ ಆಗಿತ್ತು. ಈಗ ನಟಿ ಮತ್ತೊಂದು ಹೊಸ ಅವತಾದಲ್ಲಿ ಕಾಣಿಸಿಕೊಂಡಿದ್ದಾರೆ.


ಬ್ಲ್ಯಾಕ್ ಪ್ಯಾಂಟ್, ಆದ್ರೆ ಟಾಪ್ ಇಲ್ಲ


ಉರ್ಫಿ ಜಾವೇದ್ ಈಗ ಬ್ಲ್ಯಾಕ್ ಪ್ಯಾಂಟ್ ಧರಿಸಿ ಕಾಣಿಸಿಕೊಂಡಿದ್ದಾರೆ. ಇದಕ್ಕೆ ನಟಿ ಟಾಪ್ ಮಾತ್ರ ಧರಿಸಿಲ್ಲ. ಉರ್ಫಿ ಹೀಗೆ ಕಾಣಿಸೋದು ಇದೇ ಮೊದಲ ಬಾರಿ ಏನಲ್ಲ. ಆದರೆ ಈ ಬಾರಿ ನಟಿ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ನಟಿ ಕಪ್ಪು ಬಣ್ಣದ ಪ್ಯಾಂಟ್ ಧರಿಸಿ ಟಾಪ್ ಬದಲಿಗೆ ಏನೋ ವಸ್ತುವಿನಿಂದ ಎದೆ ಭಾಗವನ್ನು ಮುಚ್ಚಿಕೊಂಡಿರುವುದನ್ನು ಕಾಣಬಹುದು.


ಬ್ಲರ್ ವಿಡಿಯೋ


ಈಗ ಸೋಷಿಯಲ್ ಮೀಡಿಯಾ ನ್ಯೂಡಿಟಿ ಬಗ್ಗೆ ಸ್ವಲ್ಪ ಹೆಚ್ಚೇ ಸ್ಟ್ರಿಕ್ಟ್ ಆಗಿದ್ದು ಉರ್ಫಿ ಈ ನಿಟ್ಟಿನಲ್ಲಿ ಸ್ವಲ್ಪ ಎಚ್ಚರಿಕೆ ವಹಿಸಿದ್ದಾರೆ. ವಿಡಿಯೋ ಝೂಮ್ ಆಗುತ್ತಿರುವಾಗ ಸ್ವಲ್ಪ ಮಟ್ಟಿಗೆ ಬ್ಲರ್ ಆಗಿರುವುದನ್ನು ಕಾಣಬಹುದು.


ಇದನ್ನೂ ಓದಿ: Urfi Javed: ಲ್ಯಾವೆಂಡರ್ ಬಣ್ಣದ ಬ್ಯಾಕ್​ಲೆಸ್ ಡ್ರೆಸ್​ನಲ್ಲಿ ಮಿಂಚಿದ ಉರ್ಫಿ!


ವೈರಲ್ ಆಯ್ತು ಶಾರ್ಟ್ ವಿಡಿಯೋ ಕ್ಲಿಪ್


ಚಿಕ್ಕ ವಿಡಿಯೋವನ್ನು  ಶೇರ್ ಮಾಡಿದ್ದರೂ ಈ ವಿಡಿಯೋ ಈಗ ವೈರಲ್ ಆಗಿದೆ. ನಟಿಯ ಈ ಟಾಪ್ ಲೆಸ್ ಲುಕ್ ಸಖತ್ ವೈರಲ್ ಆಗಿದ್ದು ಇದಕ್ಕೆ 84 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿದೆ. 1800ಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿ ಕಮೆಂಟ್ ಮಾಡಿದ್ದಾರೆ.









View this post on Instagram






A post shared by Uorfi (@urf7i)





ಉರ್ಫಿ ಜಾವೇದ್​​ಗೆ ಟ್ರೋಲ್ ಹೊಸದಲ್ಲ


ನಟಿ, ರೂಪದರ್ಶಿ ‘ಉರ್ಫಿ ಜಾವೇದ್​ ಟ್ರೋಲ್​ಗೆ ಒಳಗಾಗೋದು ಹೊಸದೇನಲ್ಲ. ಪ್ರತಿ ಭಾರಿ ಟ್ರೋಲ್​ಗೆ ಒಳಗಾಗುತ್ತಾರೆ. ವಿಶೇಷ ಎಂದರೆ ನಟಿ ಯಾವುದಕ್ಕೂ ತಲೆಕೆಡಿಸಿಕೊಳ್ಳಲ್ಲ. ತನಗಿಷ್ಟ ಬಂದ ಉಡುಗೆಯನ್ನು ತೊಟ್ಟು ಖುಷಿ ಪಡುತ್ತಾರೆ. ಕೆಲವರು ಉರ್ಫಿ ಜಾವೇದ್‌ರನ್ನ ಫ್ಯಾಶನ್ ಡಿಸಾಸ್ಟರ್(Fashion Disaster) ಅಂತಲೇ ಕರೆಯುತ್ತಿದ್ದಾರೆ. ಪ್ರತಿದಿನ ಚಿತ್ರ, ವಿಚಿತ್ರ ಬಟ್ಟೆಗಳನ್ನು ಧರಿಸಿ ಪಾಪಾರಾಜಿಗಳ ಕಣ್ಣಿಗೆ ಕಾಣಿಸಿಕೊಳ್ಳುತ್ತಾರೆ.


ಇದನ್ನೂ ಓದಿ: Urfi Javed: ಬೆತ್ತಲೆ ಫೋಟೋ ಶೂಟ್ ಮಾಡಿದ ಉರ್ಫಿ! ಗ್ಲಾಸ್ ಹಿಡಿದಿದ್ದಕ್ಕೆ ಬಚಾವ್


ಜನರಷ್ಟೇ ಅಲ್ಲ ಸೆಲೆಬ್ರಿಟಿಗಳು ಕೂಡಾ ನಟಿಯನ್ನು ಟ್ರೋಲ್ ಮಾಡಿ ಕಾಲೆಳೆದರೂ ಉರ್ಫಿ ಒಂಚೂರು ತೆಲೆ ಕೆಡಿಸಿಕೊಳ್ಳುವುದಿಲ್ಲ. ಈ ಕಾರಣದಿಂದಲೇ ನಟಿ ಸೋಷಿಯಲ್ ಮೀಡಿಯಾದಲ್ಲಿ ದಿನದಿಂದ ದಿನಕ್ಕೆ ಫಾಲೋವರ್ಸ್ ಸಂಖ್ಯೆ ಏರಿಸಿಕೊಳ್ಳುತ್ತಲೇ ಇದ್ದಾರೆ. ಉರ್ಫಿ ಸೋಷಿಯಲ್ ಮೀಡಿಯಾದಲ್ಲಿ ಜಾಹೀರಾತುಗಳನ್ನು ಕೂಡಾ ಪಡೆಯುತ್ತಾರೆ.


ತಮ್ಮ ಔಟ್‌ಫಿಟ್‌ಗಳ ವಿಚಾರದಲ್ಲಿ ಉರ್ಫಿ ಹಲವು ಬಾರಿ ಟ್ರೋಲ್ ಆಗಿ ಸುದ್ದಿ ಆಗಿದ್ದಾರೆ. ಉರ್ಫಿ ಜಾವೇದ್ ಯಾವುದೇ ಡ್ರೆಸ್ ತೊಟ್ಟರೂ ಟ್ರೋಲ್ಆಗುತ್ತಿದ್ದಾರೆ. ಟ್ರೋಲ್​ ಆಗುವ ರೀತಿಯಲ್ಲೇ ಪ್ರತಿಬಾರಿ ವಿಚಿತ್ರ ಉಡುಗೆಗಳನ್ನು ಧರಿಸಿ ಉರ್ಫಿ ಕ್ಯಾಮರಾಗೆ ಪೋಸ್​ ಕೊಡುತ್ತಾರೆ.

Published by:Divya D
First published: