ಹಿಂದಿ ಕಿರುತೆರೆ ನಟಿ (Actress) ಉರ್ಫಿ ಜಾವೇದ್ (Urfi Javed) ಚಿತ್ರ ವಿಚಿತ್ರವಾಗಿ ಡ್ರೆಸ್ ಮಾಡಿ ನೆಟ್ಟಿಗರ ಗಮನ ಸೆಳೆಯುತ್ತಾರೆ. ತಮ್ಮ ಡ್ರೆಸ್ನಿಂದಲೇ ಫಾಲೋವರ್ಸ್ (Followers) ಸಂಖ್ಯೆಯನ್ನು ಹೆಚ್ಚಿಸಿಕೊಂಡಿರೋ ಈ ಸುಂದರಿ ಎಲ್ಲೆಡೆ ಫೇಮಸ್. ಉರ್ಫಿ ಬರೀ ಡ್ರೆಸ್ನಿಂದಲೇ ಮಿಲಯನ್ಗಟ್ಟಲೆ ಫಾಲೋವರ್ಸ್ಗಳನ್ನು ಸಂಪಾದಿಸಿದ್ದಾರೆ. ಜನರು ಟ್ರೋಲ್ ಮಾಡುತ್ತಲೇ ಉರ್ಫಿ ಜಾವೇದ್ (Urfi Javed) ಅವರನ್ನು ಫೇಮಸ್ ಮಾಡುತ್ತಲೇ ಇದ್ದಾರೆ. ಈಗ ನಟಿ ಹೊಸದೊಂದು ವಿಡಿಯೋವನ್ನು (Video) ಶೇರ್ ಮಾಡಿದ್ದಾರೆ. ಈಗ ಉರ್ಫಿ ಜಾವೇದ್ ರೆಡ್ ಟೇಪ್ನ ಬಲೆಯೊಳಗೆ ಸಿಕ್ಕಿಹಾಕಿಕೊಂಡಿದ್ದಾರೆ. ಅದರ ವಿಡಿಯೋವನ್ನು ಅಪ್ಲೋಡ್ ಮಾಡಿದ್ದು ಇದರಲ್ಲಿ ಕೆಂಪುಡುಗೆಯ ಸುಂದರಿಯಾಗಿ ಮಿಂಚಿದ್ದಾರೆ.
ರೆಡ್ ಟೇಪ್ನಲ್ಲಿ ಬಂಧಿಯಾದ ನಟ
ನಟಿ ಈ ಬಾರಿ ರೆಡ್ ಟೇಪ್ ಬಳಸಿಕೊಂಡು ದೇಹವನ್ನು ಕವರ್ ಮಾಡಿದ್ದಾರೆ. ವಿಶೇಷ ಅಂದರೆ ಫ್ಲೋರ್ ಮೇಲೆ ಫಿಕ್ಸ್ ಮಾಡಿದಂತೆ ಉರ್ಫಿಯನ್ನು ಅಂಟಿಸಲಾಗಿದೆ. 10 ಕ್ಕೂ ಹೆಚ್ಚು ಪೀಸ್ ರೆಡ್ ಟೇಪ್ಗಳನ್ನು ಬಳಸಿ ಉರ್ಫಿಯ ದೇಹವನ್ನು ಕವರ್ ಮಾಡಲಾಗಿದೆ. ಕೂದಲನ್ನು ನೀಟಾಗಿ ಬಾಚಿ ಒಂದು ಸೈಡ್ ಕೂರಿಸಲಾಗಿತ್ತು.
ಬಲೆಯಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆ
ನಟಿ ವಿಡಿಯೋವನ್ನು ಪೋಸ್ಟ್ ಮಾಡಿ ಬಲೆಯಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಕಾನ್ಸೆಪ್ಟ್ ಕೂಡಾ ಉರ್ಫಿಯದ್ದೇ ಆಗಿದೆ. ಈ ಬಾರಿ ನಟಿ ತಾವೇ ಮೇಕಪ್ ಮಾಡಿಕೊಂಡಿದ್ದಾರೆ.
View this post on Instagram
ಈ ವಿಡಿಯೋಗೆ 122 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು 4 ಸಾವಿರಕ್ಕೂ ಹೆಚ್ಚು ಜನರು ವಿಡಿಯೋ ನೋಡಿ ಕಾಮೆಂಟ್ ಮಾಡಿದ್ದಾರೆ. ಕೆಲವರಂತೂ ಬಲೆಯಿಂದ ಬಿಡಿಸೋಕೆ ನಾವು ಬರಬೇಕಾ ಎಂದು ಕಾಲೆಳೆದಿದ್ದಾರೆ.
ಟ್ರೋಲ್ಗೆ ಕೇರ್ ಮಾಡಲ್ಲ ನಟಿ
ಉರ್ಫಿ ಟ್ರೋಲ್ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳದ್ಳುವುದಿಲ್ಲ. ಬಹಳಷ್ಟು ವಿಡಿಯೋ ಹಾಗೂ ಬೋಲ್ಡ್ ಫೋಟೋಸ್ ಶೇರ್ ಮಾಡುವ ಉರ್ಫಿ ಜಾವೇದ್ ಬೋಲ್ಡ್ & ಹಾಟ್ ಆಗಿ ಪೋಸ್ ಕೊಡುತ್ತಾರೆ. ಅದೇ ರೀತಿ ನಟಿಯ ಲುಕ್ ನೋಡಿದ ನೆಟ್ಟಿಗರು ಅದನ್ನು ಶೇರ್ ಮಾಡಿ, ಸ್ಟೇಟಸ್ಗಳಲ್ಲಿ ಹಾಕುತ್ತಾರೆ. ಅಂತೂ ಇದೇ ರೀತಿ ಉರ್ಫಿಯ ಪಾಪ್ಯುಲಾರಿಟಿ ಹೆಚ್ಚುತ್ತಿದೆ.
ಉರ್ಫಿಗೆ 3 ಮಿಲಿಯನ್ ಫಾಲೋವರ್ಸ್
ಸದ್ಯ ನಟಿಗೆ 3.9 ಮಿಲಿಯನ್ ಫಾಲೋವರ್ಸ್ ಇದ್ದಾರೆ. ನಟಿ 380 ಜನರನ್ನು ಫಾಲೋ ಮಾಡುತ್ತಿದ್ದು ಇದುವರೆಗೆ 2000ಕ್ಕೂ ಹೆಚ್ಚು ಪೋಸ್ಟ್ಗಳನ್ನು ಅಪ್ಲೋಡ್ ಮಾಡಿದ್ದಾರೆ. ಈ ಮೂಲಕ ಪ್ರತಿದಿನ ಫಾಲೋವರ್ಸ್ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಲೇ ಹೋಗುತ್ತಿದ್ದಾರೆ.
ಕೆಲಸ ಇಲ್ವಾ?
ಉರ್ಫಿಗೆ ಯಾವುದೇ ಕೆಲಸ ಇಲ್ವಾ ಎನ್ನುವುದು ಬಹಳಷ್ಟು ಜನರ ಡೌಟ್. ಕಾರಣ ಉರ್ಫಿ ಜಾವೇದ್ ಫುಲ್ ಟೈಂ ಡ್ರೆಸ್ ಮಾಡಿಕೊಂಡು ಫೋಟೋ ವಿಡಿಯೋ ಶೇರ್ ಮಾಡುತ್ತಲೇ ಇರುತ್ತಾರೆ. ಆದರೆ ಯಾವುದೇ ಸೀರಿಯಲ್, ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಆದರೆ ಕೆಲವೊಂದು ಆ್ಯಡ್ ಮೂಲಕ ಸ್ವಲ್ಪಮಟ್ಟಿಗೆ ಗಳಿಸುತ್ತಾರೆ ಉರ್ಫಿ ಜಾವೇದ್.
ಎಫ್ಐಆರ್ ಕೂಡಾ ದಾಖಲಾಗಿದೆ
ಉರ್ಫಿಯ ವಿರುದ್ಧ ಎಫ್ಐಆರ್ ದಾಖಲಾದ ವಿಚಾರ ಇತ್ತೀಚೆಗೆ ಸುದ್ದಿಯಾಗಿತ್ತು. ಉರ್ಫಿ ಉಡುಗೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಕೇಸ್ ದಾಖಲು ಮಾಡಲಾಗಿತ್ತು. ಆದರೆ ಇದಕ್ಕೆ ಉರ್ಫಿ ತಲೆ ಕೆಡಿಸಿಕೊಂಡಿರುವಂತೆ ಕಾಣುತ್ತಿಲ್ಲ. ನಟಿ ಜಾಲಿಯಾಗಿ ಡ್ರೆಸ್ ಮಾಡಿಕೊಂಡು ಈಗಲೂ ಫೋಟೋ ವಿಡಿಯೋ ಶೇರ್ ಮಾಡುತ್ತಿದ್ದಾರೆ. ಇತ್ತೀಚೆಗೆ ನಟಿ ತಮ್ಮ ವಿರುದ್ಧ ಕೇಸ್ ದಾಖಲಾಗಿರುವ ಬಗ್ಗೆ ಪ್ರತಿಕ್ರಿಯಿಸಿ ಇದು ಪಾಕಿಸ್ತಾನವಲ್ಲ ಭಾರತ ಎಂದು ಹೇಳಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ