• Home
  • »
  • News
  • »
  • entertainment
  • »
  • Urfi Javed: ಫ್ಯಾಷನ್ ಹೆಸರಲ್ಲಿ ಅನ್ಯರಿಂದ ಮೈಮುಚ್ಚಿಸಿಕೊಂಡ ಉರ್ಫಿ! ಇನ್ನೂ ಏನೇನ್ ನೋಡ್ಬೇಕು ಅಂತಿದ್ದಾರೆ ನೆಟ್ಟಿಗರು

Urfi Javed: ಫ್ಯಾಷನ್ ಹೆಸರಲ್ಲಿ ಅನ್ಯರಿಂದ ಮೈಮುಚ್ಚಿಸಿಕೊಂಡ ಉರ್ಫಿ! ಇನ್ನೂ ಏನೇನ್ ನೋಡ್ಬೇಕು ಅಂತಿದ್ದಾರೆ ನೆಟ್ಟಿಗರು

ಉರ್ಫಿ ಜಾವೇದ್​

ಉರ್ಫಿ ಜಾವೇದ್​

ನಟಿ ಉರ್ಫಿ ಜಾವೇದ್ ಲೇಟೆಸ್ಟ್ ವಿಡಿಯೋ ಒಂದನ್ನು ಶೇರ್ ಮಾಡಿದ್ದು ಇದರಲ್ಲಿ ನಟಿಯ ದೇಹವನ್ನು ಮೂರನೇ ವ್ಯಕ್ತಿಯ ಕೈಯಿಂದ ಮುಚ್ಚಿರುವುದನ್ನು ಕಾಣಬಹುದು.

  • News18 Kannada
  • Last Updated :
  • Bangalore, India
  • Share this:

ಹಿಂದಿ ಕಿರುತೆರೆ ನಟಿ ಉರ್ಫಿ ಜಾವೇದ್ (Urfi Javed) ವಿಚಿತ್ರ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಪ್ರತಿ ದಿನ ಫ್ಯಾಷನ್ ಹೆಸರಲ್ಲಿ ತನ್ನಿಷ್ಟದ ಉಡುಗೆ (Dress) ಧರಿಸಿ ಫೋಟೊ ಹಾಗೂ ವಿಡಿಯೋಗಳನ್ನು (Videos) ಶೇರ್ ಮಾಡುವ ನಟಿ ಈಗ ಮತ್ತಷ್ಟು ವಿಚಿತ್ರವಾಗಿ ವಿಡಿಯೋ (Video) ಶೂಟ್ ಮಾಡಿಸಿಕೊಂಡಿದ್ದಾರೆ. ಚಿತ್ರ ವಿಚಿತ್ರವಾಗಿ ಡ್ರೆಸ್ ಮಾಡಿಕೊಂಡು ಏರ್ಪೋರ್ಟ್​ನಲ್ಲಿ (Airport) ಕಾಣಿಸಿಕೊಳ್ಳುವ ನಟಿ ಅಲ್ಲಿ ಪಾಪ್ಪರಾಜಿಗಳಿಗೆ ಪೋಸ್ ಕೊಡುತ್ತಾರೆ. ಇದೇ ಕಾರಣಕ್ಕಾಗಿ ಬಹಳಷ್ಟು ಸಲ ನಟಿ ಟ್ರೋಲ್ ಆಗಿದ್ದಾರೆ. ಸುಮ್ಮನೆ ಏರ್ಪೋರ್ಟ್​ಗೆ ಹೋಗಿ ಬಿಟ್ಟಿಯಾಗಿ ಪೋಸ್ ಕೊಡಬೇಡಿ ಎಂದು ಬೇರೆ ನಟಿಯರು ಉರ್ಫಿಯ ಕಾಲೆಳೆದಿದ್ದರು. ಆದರೆ ಇದಕ್ಕೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ನಟಿ ತಮ್ಮ ಫ್ಯಾಷನ್ ಮುಂದುವರಿಸಿದ್ದಾರೆ.


ಈಗ ನಟಿ ಹೊಸ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಉರ್ಫಿ ಜಾವೇದ್ ಅವರು ಒಳಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ನಟಿಯ ದೇಹದ ಮೇಲ್ಭಾಗವನ್ನು ಎರಡು ಕೈಗಳು ಮುಚ್ಚಿಕೊಂಡಿದ್ದು ಈ ಕೈಗಳಿಗೆ ನೇರಳೆ ಬಣ್ಣದ ಪೇಂಟ್ ಹಚ್ಚಲಾಗಿದೆ. ಇದು ನಟಿಯ ದೇಹದ ಮೇಲ್ಭಾಗವನ್ನು ಮುಚ್ಚಿಕೊಂಡಿದೆ.




8 ಸಾವಿರ ಜನರಿಂದ ಕಾಮೆಂಟ್


ಈ ವಿಡಿಯೋ ನೋಡಿದ ನೆಟ್ಟಿಗರು ತಲೆ ಕೆರೆದುಕೊಂಡಿದ್ದಾರೆ. ಆ ಕೈಗಳು ಯಾರದ್ದು ಉರ್ಫಿ ಎಂದು ನಟಿಯನ್ನು ಪ್ರಶ್ನಿಸುತ್ತಿದ್ದಾರೆ. ಎಲ್ಲೆಡೆ ಈ ವಿಡಿಯೋ ಈಗ ವೈರಲ್ ಆಗಿದೆ. 138 ಸಾವಿರ ಲೈಕ್ಸ್ ಗಳಿಸಿದ ಈ ವಿಡಿಯೋಗೆ ಎಂಟು ಸಾವಿರಕ್ಕೂ ಹೆಚ್ಚು ಜನರು ಕಾಮೆಂಟ್ ಮಾಡಿದ್ದಾರೆ.


ಸಹಾಯದ ಕೈಗಳು


ನಟಿ ತಮ್ಮ ವಿಡಿಯೋಗೆ ಸಹಾಯ ಹಸ್ತ ಎಂದು ಕ್ಯಾಪ್ಶನ್ ಬರೆದಿದ್ದಾರೆ. ಅವರ ಕ್ಯಾಪ್ಶನ್ ಪ್ರಕಾರ ಈ ವಿಡಿಯೋದಲ್ಲಿ ಅವರ ಗೆಳತಿ ಶ್ವೇತ ಶ್ರೀ ಅವರ ಕೈಗಳು ಉರ್ಫಿ ಅವರ ದೇಹವನ್ನು ಮುಚ್ಚಿದೆ ಎಂದು ತಿಳಿದು ಬಂದಿದೆ.


ಬ್ಯಾಂಡೇಜ್​​ನಿಂದ ಮೈ ಮುಚ್ಚಿಕೊಂಡ ನಟಿ


ಉರ್ಫಿ ಜಾವೇದ್ ಇತ್ತೀಚೆಗೆ ಬ್ಯಾಂಡೇಜ್​ನಿಂದ ದೇಹ ಸುತ್ತಿಕೊಂಡಿದ್ದರು. ಬ್ಯಾಂಡೇಜ್ ಬಟ್ಟೆಯಿಂದ ದೇಹವನ್ನು ಸುತ್ತಿ ಖಾಸಗಿ ಭಾಗವ ಮರೆಯಾಗುವಂತೆ ಮಾಡಿ ವಿಡಿಯೋ ಮಾಡಿದ್ದರು ಉರ್ಫಿ ಜಾವೇದ್. ಈ ಹಿಂದೆ ಪಾರದರ್ಶಕ ಕನ್ನಡಿ ಹಿಡಿದು ಅದರ ಮೇಲೆ ಬಣ್ಣ ಹಚ್ಚಿ ಅದನ್ನು ಕೈಯಲ್ಲಿ ಹಿಡಿದು ಕೂಡಾ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದರು.


urfi javed in trouble due to new song complaint filed in police pvn
ಉರ್ಫಿ ಜಾವೇದ್​


ಎಫ್​​ಐಆರ್ ದಾಖಲು


ನಟಿ ಉರ್ಫಿ ಜಾವೇದ್ ವಿರುದ್ಧ ಎಫ್​​ಐಆರ್ ದಾಖಲಾಗಿದ್ದು ಬಹಳಷ್ಟು ಜನರು ನಟಿಯ ಡ್ರೆಸ್ಸಿಂಗ್ ವಿಚಾರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಹಳಷ್ಟು ಟ್ರೋಲ್ ಮಧ್ಯೆ ನಟಿ ವಿಡಿಯೋ ಹಾಗೂ ಫೋಟೊಗಳನ್ನು ನಿರಂತರವಾಗಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದು ನೆಟ್ಟಿಗರು ಸಹ ನಟಿಗೆ ಟೀಕಿಸುವುದನ್ನು ಮುಂದುವರಿಸಿದ್ದಾರೆ.









View this post on Instagram






A post shared by Uorfi (@urf7i)





ನಟಿ ತನ್ನ ವಿರುದ್ಧ ದಾಖಲಾಗಿರುವ ಎಫ್​ಐಆರ್​​ಗೆ ಪ್ರತಿಕ್ರಿಯಿಸಿದ್ದಾರೆ. ನಾವು ತಾಲೀಬಾನ್ ಅಥವಾ ಅಫ್ಘಾನಿಸ್ತಾನದಲ್ಲಿಲ್ಲ. ಹೆಣ್ಣು ತಾನು ಧರಿಸಬೇಕಾದ ಬಟ್ಟೆಯನ್ನೂ ಇನ್ನೊಬ್ಬರು ನಿಯಂತ್ರಿಸಬೇಕೇ ಎಂದು ನಟಿ ಪ್ರಶ್ನೆ ಮಾಡಿದ್ದಾರೆ. ಅಂತೂ ಉರ್ಫಿ ಮಾತ್ರ ಏನೇ ಆದರೂ ತಮ್ಮ ಡ್ರೆಸ್ಸಿಂಗ್ ಸ್ಟೈಲ್ ಬದಲಾಯಿಸಿಕೊಳ್ಳುವ ಯಾವ ಲಕ್ಷಣವೂ ಕಾಣಿಸುತ್ತಿಲ್ಲ.


Fashion King Masaba Gupta Clean Bold For Urfi Javed Dressing Style stg asp
ಉರ್ಫಿ ಜಾವೇದ್


ಟೀಕೆಗಳಿಗೆ ತಲೆ ಕೆಡಿಸಿಕೊಳ್ಳಲ್ಲ ನಟಿ


ಉರ್ಫಿ ಜಾವೇದ್ ಅವರು ಟ್ರೋಲ್ ಹಾಗೂ ಟೀಕೆಗಳಿಗೆ ಒಂಚೂರು ತಲೆ ಕೆಡಿಸಿಕೊಳ್ಳುವುದಿಲ್ಲ. ಬಹಳಷ್ಟು ಸಲ ನಟಿ ಹೀಗೆ ಟೀಕೆ ಹಾಗೂ ಟ್ರೋಲ್​​ಗಳಿಗೆ ಖಡಕ್ ಆಗಿ ಉತ್ತರಿಸುತ್ತಾರೆ. ನನ್ನ ಡ್ರೆಸ್, ನನ್ನ ದೇಹ ಎಂದು ನಟಿ ತಮಗೆ ಇಷ್ಟಬಂದಂತೆ ಡ್ರೆಸ್ ಮಾಡಿಕೊಂಡು ಓಡಾಡುತ್ತಾರೆ.

Published by:Divya D
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು