Urfi Javed: ಬಟ್ಟೆಯ ವಿಚಾರಕ್ಕೆ ಮತ್ತೆ ಟ್ರೋಲ್ ಆದ ಬಿಗ್‌ಬಾಸ್‌ ಸ್ಪರ್ಧಿ ಉರ್ಫಿ ಜಾವೇದ್‌; ದುಪಟ್ಟಾ ಹಾಕಿಲ್ಲ ಎಂದು ಕಾಲೆಳೆದ ನೆಟ್ಟಿಗರು

ನೆಟ್ಟಿಗರು ಮಾಡಿದಂತಹ ಟ್ರೋಲ್‌ಗಳಲ್ಲಿ ಒಬ್ಬರು "ಓ ದೇವರೇ ದುಪಟ್ಟಾ ಇಲ್ಲದೆ ಗಣಪತಿಯ ಮುಂದೆ ಪೋಸ್. ನೀವು ದೇವರ ಮುಂದೆ ಇರುವಾಗ ದಯವಿಟ್ಟು ನಿಯಮಗಳನ್ನು ಅನುಸರಿಸಿ. ಇದು ನಿಜಕ್ಕೂ ಕಲಿಯುಗವೇ" ಎಂದು ಬರೆದಿದ್ದಾರೆ.

ಉರ್ಫಿ ಜಾವೇದ್

ಉರ್ಫಿ ಜಾವೇದ್

  • Share this:
ಜನಪ್ರಿಯ ರಿಯಾಲಿಟಿ ಶೋ 'ಬಿಗ್‌ಬಾಸ್ ಒಟಿಟಿ' ಯ ಮಾಜಿ ಸ್ಪರ್ಧಿ ಮತ್ತು ನಟಿ ಉರ್ಫಿ ಜಾವೇದ್ ಯಾರಿಗೆ ಗೊತ್ತಿಲ್ಲಾ ಹೇಳಿ..? ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದು, ಇತ್ತೀಚಿನ ದಿನಗಳಲ್ಲಿ ಯಾವುದಾದರೊಂದು ವಿಷಯಕ್ಕೆ ಸುದ್ದಿಯಲ್ಲಿರುತ್ತಾರೆ ಎಂದರೆ ತಪ್ಪಾಗಲಾರದು. ಕೆಲವು ವಾರಗಳ ಹಿಂದೆ ವಿಮಾನ ನಿಲ್ದಾಣದಲ್ಲಿ ಸ್ಟೈಲಿಶ್ ಆದಂತಹ ಒಂದು ಡೆನಿಮ್ ಜಾಕೆಟ್ ಧರಿಸಿದ್ದರು. ಅದರಲ್ಲೇನಿದೆ ತಪ್ಪು ಅಂತೀರಾ? ಆ ಜಾಕೆಟ್ ಅನ್ನು ಸಮರ್ಪಕವಾಗಿ ಹಾಕಿಕೊಂಡಿದ್ದರೆ ಯಾರು ಏನು ಮಾತಾಡುತ್ತಿರಲಿಲ್ಲ. ಅದನ್ನು ಸಮರ್ಪಕವಾಗಿ ಧರಿಸದ ಕಾರಣ ಒಳವಸ್ತ್ರ ಕಾಣಿಸಿದ್ದು, ನೆಟ್ಟಿಗರ ಟೀಕೆಗೆ ಗುರಿಯಾಗಿದ್ದರು. ಆ ಫೋಟೋವನ್ನು ಇನ್ನೂ ಜನರು ಮರೆಯುವಷ್ಟರಲ್ಲಿಯೇ ಮತ್ತೆ ತಾವು ಧರಿಸಿದಂತಹ ಉಡುಪುಗಳಿಂದಲೇ ಮತ್ತೊಮ್ಮೆ ನೆಟ್ಟಿಗರ ಟೀಕೆಗೆ ಗುರಿಯಾಗಿದ್ದಾರೆ.

ಗಣೇಶ ಚತುರ್ಥಿಯ ಸಂದರ್ಭದಲ್ಲಿ ಉರ್ಫಿ ಗಣಪತಿಯನ್ನು ತನ್ನ ಮನೆಗೆ ಕರೆತಂದಳು. ನಂತರ ಗಣಪತಿಯ ಪೂಜೆ ಮಾಡಿ ವಿನಾಯಕನಿಗೆ ಕೈ ಮುಗಿಯುತ್ತಿರುವಂತಹ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಅಲ್ಲಿಯವರೆಗೂ ಎಲ್ಲವೂ ಚೆನ್ನಾಗಿಯೇ ಇತ್ತು. ನಂತರ ಅವರ ಫೋಟೋಗಳನ್ನು ನೋಡಿದಂತಹ ನೆಟ್ಟಿಗರು ಅವರನ್ನು ಟ್ರೋಲ್ ಮಾಡಲು ಪ್ರಾರಂಭಿಸಿದರು.

ಅಲಂಕೃತ ಗಣಪತಿ ವಿಗ್ರಹದ ಮುಂದೆ ನಿಂತು ದೇವರಿಗೆ ನಮಸ್ಕರಿಸುತ್ತಿರುವುದನ್ನು ನಾವು ಫೋಟೋದಲ್ಲಿ ಕಾಣಬಹುದಾಗಿದೆ. "ಮೊದಲ ಬಾರಿ ಗಣಪತಿಯನ್ನು ನಮ್ಮ ಮನೆಗೆ ಕರೆತಂದಿದ್ದೇವೆ, ಗಣಪತಿ ಬಪ್ಪಾ ಮೋರಿಯಾ" ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ಇದನ್ನೂ ಓದಿ:Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿದೆ..!

ಉರ್ಫಿ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ ಚಿತ್ರಗಳಲ್ಲಿ ಹಸಿರು ಮತ್ತು ಬಿಳಿ ಕಸೂತಿ ಮಾಡಿದ ಸಲ್ವಾರ್ ಕುರ್ತಾ ಧರಿಸಿರುವುದನ್ನು ಕಾಣಬಹುದಾಗಿದೆ. ಈ ಪೋಸ್ಟ್ ಇಲ್ಲಿಯವರೆಗೆ 65,000ಕ್ಕೂ ಹೆಚ್ಚು ಜನರು ಇದನ್ನು ಇಷ್ಟಪಟ್ಟಿದ್ದಾರೆ ಮತ್ತು ನೂರಾರು ಜನರು ಅದರ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಬಹುತೇಕ ನೆಟ್ಟಿಗರು ಉರ್ಫಿಗೆ ಗಣೇಶ ಚತುರ್ಥಿಗೆ ಶುಭ ಹಾರೈಸಿದ್ದರೆ, ಕೆಲವರು "ತನ್ನ ಇಸ್ಲಾಮಿಕ್ ಧರ್ಮದಂತೆ ನಡೆದುಕೊಳ್ಳುತ್ತಿಲ್ಲ" ಮತ್ತು ತಾನು ಧರಿಸಿದ್ದ ಸಲ್ವಾರ್ ಸೂಟ್‌ನೊಂದಿಗೆ ದುಪಟ್ಟಾ ಧರಿಸದ ಕಾರಣ ಅವರನ್ನು ಟ್ರೋಲ್ ಮಾಡಿದ್ದಾರೆ.

ನೆಟ್ಟಿಗರು ಮಾಡಿದಂತಹ ಟ್ರೋಲ್‌ಗಳಲ್ಲಿ ಒಬ್ಬರು "ಓ ದೇವರೇ ದುಪಟ್ಟಾ ಇಲ್ಲದೆ ಗಣಪತಿಯ ಮುಂದೆ ಪೋಸ್. ನೀವು ದೇವರ ಮುಂದೆ ಇರುವಾಗ ದಯವಿಟ್ಟು ನಿಯಮಗಳನ್ನು ಅನುಸರಿಸಿ. ಇದು ನಿಜಕ್ಕೂ ಕಲಿಯುಗವೇ" ಎಂದು ಬರೆದರೆ, ಇನ್ನೊಬ್ಬರು "ನೀನು ಮುಸ್ಲಿಂ ಧರ್ಮಕ್ಕೆ ಸೇರಿದವರಲ್ಲವೇ" ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನೊಬ್ಬರು "ಅಲ್ಲಾಹನ ಬಗ್ಗೆ ಭಯವಿದೆಯೇ? ವೀಕ್ಷಕರ ಸಂಖ್ಯೆ ಹೆಚ್ಚಿಸಿಕೊಳ್ಳಲು ನೀವು ಇದೆಲ್ಲವನ್ನೂ ಮಾಡುತ್ತಿದ್ದೀರಿ" ಎಂದು ಬರೆದಿದ್ದಾರೆ.

ಉರ್ಫಿ ಎಲ್ಲಾ ಪ್ರತಿಕ್ರಿಯೆಗಳ ಬಗ್ಗೆ ತಲೆ ಕೆಡಿಸಿಕೊಳ್ಳದಿದ್ದರೂ, ಉರ್ಫಿ ಕೆಲವರಿಗೆ ಮಾತ್ರ ತೀಕ್ಷ್ಣವಾದ ಉತ್ತರ ನೀಡಿದ್ದಾರೆ.

ಇದನ್ನೂ ಓದಿ:ಇನ್ಫೋಸಿಸ್ ಕಂಪನಿಯಲ್ಲಿ ಲಕ್ಷಗಟ್ಟಲೇ ಸಂಬಳದ ಉದ್ಯೋಗ ಬಿಟ್ಟು ಯಶಸ್ವಿ ಕೃಷಿಕಳಾದ ಮಹಿಳೆ

ಕೆಲವು ದಿನಗಳ ಹಿಂದೆ, ಉರ್ಫಿ ಜಾವೇದ್ ಪ್ರಮುಖ ಗೀತ ರಚನೆಕಾರ ಜಾವೇದ್ ಅಖ್ತರ್ ಮೊಮ್ಮಗಳು ಎಂದು ಭಾವಿಸಿದ್ದಾರೆ ಎಂಬ ತಪ್ಪು ಕಲ್ಪನೆಯ ಬಗ್ಗೆ ಪ್ರತಿಕ್ರಿಯಿಸಿದ್ದರು. "ತನ್ನ ಮತ್ತು ಜಾವೇದ್ ಅಖ್ತರ್ ನಡುವೆ ಯಾವುದೇ ಸಂಬಂಧವಿಲ್ಲ" ಎಂದು ಹೇಳಿ ವಿವಾದಕ್ಕೆ ತೆರೆ ಎಳೆದಿದ್ದರು.
Published by:Latha CG
First published: