Urfi Javed: ಅಕ್ಕನಂತಲ್ಲ ಉರ್ಫಿ ತಂಗಿ, ಚಿತ್ರ ವಿಚಿತ್ರ ಬಟ್ಟೆ ಹಾಕುವ ನಟಿಯ ಸಹೋದರಿ ಹೇಗಿದ್ದಾರೆ ನೋಡಿ

Urfi Javed Sister Asfi Javed: ಉರ್ಫಿ ಜಾವೇದ್ ಕಿರಿಯ ಸಹೋದರಿ ಆಸ್ಫಿ ಜಾವೇದ್ ನೋಡಲು ಉರ್ಫಿ ರೀತಿ ತುಂಬಾ ಬೋಲ್ಡ್ ಎನಿಸುವುದಿಲ್ಲ. ಅಲ್ಲದೇ ಅವರಿಗೆ ಡ್ರೆಸ್ಸಿಂಗ್ ಸೆನ್ಸ್ ಇದೆ.

ಉರ್ಫಿ ಜಾವೇದ್​

ಉರ್ಫಿ ಜಾವೇದ್​

  • Share this:
ಉರ್ಫಿ ಜಾವೇದ್ (Urfi Javed) ತನ್ನ ಅತಿ  ಫ್ಯಾಷನ್ (Fashion) ಆಯ್ಕೆಗಳ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಅವರು ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಆಕೆಯ ವಿಲಕ್ಷಣ ಫ್ಯಾಷನ್ ಆಯ್ಕೆಗಳು ಎಲ್ಲರನ್ನೂ ವಿಸ್ಮಯಗೊಳಿಸುತ್ತಲೇ ಇರುತ್ತವೆ. ದಿನಕ್ಕೊಮ್ಮೆಯಾದರೂ ಅವರ ಫೋಟೋ (Photo) ಹಾಗೂ ವಿಡಿಯೋಗಳು (Video) ಎಲ್ಲೆಡೆ ವೈರಲ್ ಆಗುತ್ತದೆ. ಹಾಗೆಯೆ ಅವರನ್ನು ಟ್ರೋಲ್ (troll) ​ ಮಾಡುವವರು ಕಮ್ಮಿ ಇಲ್ಲ. ಆದರೆ ಅವರ ತಂಗಿ ಮಾತ್ರ ಇದಕ್ಕೆ ವಿರುದ್ಧ ಎನ್ನಲಾಗುತ್ತಿದೆ. ಹೌದು, ಈ ಫ್ಯಾಷನ್​ ಕ್ವೀನ್​ ತಂಗಿಯ ಬಗ್ಗೆ, ಹಾಗೂ ಅವರ ಫ್ಯಾಷನ್ ಸೆನ್ಸ್​ ಬಗ್ಗೆ ಮಾಹಿತಿ ಇಲ್ಲಿದೆ.

ಅಕ್ಕನ ರೀತಿಯಲ್ಲ ಈ ತಂಗಿ

ಉರ್ಫಿ ಜಾವೇದ್ ಕಿರಿಯ ಸಹೋದರಿ ಆಸ್ಫಿ ಜಾವೇದ್ ನೋಡಲು ಉರ್ಫಿ ರೀತಿ ತುಂಬಾ ಬೋಲ್ಡ್ ಎನಿಸುವುದಿಲ್ಲ. ಅಲ್ಲದೇ ಅವರಿಗೆ ಡ್ರೆಸ್ಸಿಂಗ್ ಸೆನ್ಸ್ ಇದೆ. ಫ್ಯಾಶನ್ ಬ್ಲಾಗರ್ ಆಗಿರುವ ಆಸ್ಫಿ ಜಾವೇದ್, ಡೆನಿಮ್, ಶಾರ್ಟ್ ಡ್ರೆಸ್ ಮತ್ತು ಡಿಸೈನರ್ ಟಾಪ್ ಗಳನ್ನು ಧರಿಸಲು ಇಷ್ಟಪಡುತ್ತಾರೆ. ಆಕೆಯ ಇನ್‌ಸ್ಟಾಗ್ರಾಮ್ ಪ್ರಕಾರ, ಉರ್ಫಿ ಅವರ ಸಹೋದರಿ ಶಾಪ್ಹೋಲಿಕ್, ಅಂದರೆ ಆಕೆಗೆ ಬಹಳ ಶಾಪಿಂಗ್ ಮಾಡುವುದು ಬಹಳ ಇಷ್ಟವಂತೆ.
View this post on Instagram


A post shared by ASFI JAVED (@_asfi)


ಯಾವಾಗಲೂ ಟ್ರೊಲ್ ಆಗುವ ಉರ್ಫಿ

ಇನ್ನು ಬಿಗ್ ಬಾಸ್ OTT ಖ್ಯಾತಿಯ ಉರ್ಫಿ ಜಾವೇದ್  ತನ್ನ ವಿಚಿತ್ರ ಫ್ಯಾಷನ್  ಆಯ್ಕೆಗಳಿಗೆ ಹೆಸರುವಾಸಿಯಾಗಿದ್ದಾರೆ. ಯಾವಾಗಲೂ ಏನಾದರೂ ವಿಭಿನ್ನ ಹಾಗೂ ವಿಚಿತ್ರವಾಗಿ ಬಟ್ಟೆ ಹಾಕುವ ಮೂಲಕ ಸುದ್ದಿಯಲ್ಲಿರುತ್ತಾರೆ. ಅಲ್ಲದೇ, ಫ್ಯಾಷನ್​ಗೆ ಹೊಸ ಅರ್ಥವನ್ನು ನೀಡುತ್ತಿದ್ದಾರೆ ಎಂದರೆ ತಪ್ಪಲ್ಲ. ಹಾಗೆಯೇ ಉರ್ಫಿ ತನ್ನ ಹಾಟ್‌ನೆಸ್‌ನಿಂದ ನೆಟ್ಟಿಗರ ಗಮನ ಸೆಳೆಯುತ್ತಿರುತ್ತಾರೆ.

ಇದನ್ನೂ ಓದಿ: ಯಾರ ಬಳಿಯೂ ಇರದ ಕಾರ್ ಈಕೆ ಹತ್ರ ಇದೆ! ಈ ದುಡ್ಡಲ್ಲಿ ದೊಡ್ಡ ಬಂಗಲೆ ಕಟ್ಬಹುದಿತ್ತು
View this post on Instagram


A post shared by ASFI JAVED (@_asfi)


ಉರ್ಫಿ ಜಾವೇದ್​ ಎಂಬ ಹೆಸರು ಯಾವಾಗಲೂ ಸುದ್ದಿಯಲ್ಲಿರುತ್ತದೆ. ಅದಕ್ಕೆ ಕಾರಣ ಅವರು ಹಾಕುವ ಬಟ್ಟೆ. ಅರ್ಧಂಬರ್ಧ ಬಟ್ಟೆ ಧರಿಸಿ ತಮ್ಮ ಮಾದಕತೆಯಿಂದ ಅಭಿಮಾನಿಗಳ ನಿದ್ದೆ ಹಾಳು ಮಾಡುವ ಈ ನಟಿ ಟ್ರೋಲ್​ ಆಗುವುದು ಸಾಮಾನ್ಯ ಎನ್ನುವಂತಾಗಿದೆ. ಹೇಳಬೇಕೆಂದರೆ ಅವರು ಟ್ರೋಲ್ ಆಗದೇ ಇದ್ದ ದಿನವಿಲ್ಲ ಎನ್ನಬಹುದು. ಚಿತ್ರ, ವಿಚಿತ್ರ ಬಟ್ಟೆ ಧರಿಸಿ ಕ್ಯಾಮೆರಾಗೆ ಪೋಸ್​ ಕೊಡುವ ಈ ನಟಿ ಉರ್ಫಿ.
View this post on Instagram


A post shared by ASFI JAVED (@_asfi)


ಇದನ್ನೂ ಓದಿ: ಬಾಲಿವುಡ್​ನಲ್ಲಿ ಮತ್ತೊಂದು ಬ್ರೇಕಪ್​ ಸುದ್ದಿ, ಟೈಗರ್ ಶ್ರಾಫ್​ - ದಿಶಾ ಪಾಟ್ನಿ ಜೊತೆಗಿಲ್ವಾ?

ಇನ್ನು ಮೊನ್ನೆಯಷ್ಟೇ ಉರ್ಫಿ ಗುಲಾಬಿ ಹೂಗಳ ಮಧ್ಯೆ  ಮಲಗಿ ಸುದ್ದಿಯಾಗಿದ್ದರು.  ಗುಲಾಬಿಗಳ ರಾಶಿಯಲ್ಲಿ ಬಟ್ಟೆ ಹಾಕಿಕೊಳ್ಳದೇ ಪೋಸ್​ ಕೊಟ್ಟಿದ್ದು, ಈ ಹೂಗಳ ರಾಶಿಯಲ್ಲೇ ತನ್ನ ಮೈ ಮುಚ್ಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಹ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೇವಲ ಬಟ್ಟೆಗೆ ಮಾತ್ರವಲ್ಲದೇ, ಅವರ ಹೇಳಿಕೆಗಳ ಮೂಲಕ ಸಹ ಹಲವಾರು ಬಾರಿ ಟ್ರೋಲ್​ ಆಗಿದ್ದಾರೆ.

ಉರ್ಫಿ ಜಾವೇದ್​ ಅವರ ಮತ್ತೊಂದು ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ವಿಚಿತ್ರ ರೀತಿಯ ತುಂಡುಡುಗೆ ತೊಟ್ಟು 8 ಬಾಲ್​ ಪೂಲ್​ ಗೇಮ್​ ಆಡಿದ್ದಾರೆ. ಈಕೆ ಆಟವಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಇದಕ್ಕೂ ನೆಟ್ಟಿಗರು ನಾನಾ ರೀತಿಯ ಕಮೆಂಟ್​ ಮಾಡಿದ್ದಾರೆ. ನೀವು ಹೀಗೆ ಆಟವಾಡಿದರೆ, ನಿಮ್ಮ ಎದುರಾಳಿಯಾಗಿ ಬರೋಕೆ ನಾನು ರೆಡಿ ಎಂದು ಕಾಮೆಂಟ್​ ಮಾಡಿದ್ದಾರೆ.
Published by:Sandhya M
First published: