Urfi Javed: ಇವಳೇನು ಉರ್ಫಿಯೋ, ಸ್ವರ್ಗದಿಂದ ಧರೆಗಿಳಿದ ಊರ್ವಶಿಯೋ! ಮತ್ತೆ ವೈರಲ್ ಆಯ್ತಪ್ಪಾ ಹೊಸ ಅವತಾರ

ಉರ್ಫಿ ಚಾವೇದ್ ಹೆಸರು ಕೇಳಿದ್ರೆ ಪಡ್ಡೆ ಹುಡುಗರ ಎದೆ ಬಡಿದುಕೊಳ್ಳುತ್ತೆ. ಅವರ ಪೋಲಿ ಕಣ್ಣುಗಳಲ್ಲಿ ನೂರಾರು ಕಾಮನ ಬಿಲ್ಲು ಹುಟ್ಟಿಕೊಳ್ಳುತ್ತೆ. “ಬೆಳಿಗ್ಗೆ ಎದ್ದಾಗಿನಿಂದ, ರಾತ್ರಿ ಮಲಗೋವರೆಗೂ ಉರ್ಫಿ ಏನೇನ್ ಮಾಡ್ತಾರೆ” ಅಂತ ಪಡ್ಡೆಗಳು ತಿಳಿದುಕೊಳ್ತಾನೇ ಇರ್ತಾರೆ. ಆಕೆ ನಿದ್ದೆ ಮಾಡಿದ್ರೂ, “ಉರ್ಫಿ ಈಗ್ ಏನ್ ಮಾಡ್ತಿರಬಹುದು?” ಅಂತ ಸೋಶಿಯಲ್ ಮೀಡಿಯಾದ ಕಿಂಡಿಯಿಂದಲೇ ಒಮ್ಮೆ ಇಣುಕಿ ನೋಡ್ತಾರೆ. ಇದೀಗ ಉರ್ಫಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಆಕೆಯ ‘ಬೆನ್ನು’ ನೋಡಿದ ಪಡ್ಡೆ ಹೈಕ್ಳು, “ಇವಳು ಉರ್ಫಿಯೋ, ಧರೆಗಿಳಿದ ಊರ್ವಶಿಯೋ” ಅಂತ ಮತ್ತೆ ಆಕೆಯ ‘ಬೆನ್ನು’ ಬಿದ್ದಿದ್ದಾರಂತೆ!

ಉರ್ಫಿ ಜಾವೇದ್

ಉರ್ಫಿ ಜಾವೇದ್

  • Share this:
ಸಿನಿಮಾ (Cinema) ಮಾಡಿದ್ದಕ್ಕಿಂತ ಹೆಚ್ಚು ಸುದ್ದಿ ಮಾಡುತ್ತಿರುವುದು ಬಾಲಿವುಡ್ (Bollywood) ನಟಿ (Actress) ಉರ್ಫಿ ಜಾವೇದ್ (Urfi Javed). ಬಿಗ್‌ ಬಾಸ್‌ನಿಂದ (Big Boss) ಖ್ಯಾತಿ ಗಳಿಸಿದ ಉರ್ಫಿ, ಸಾಮಾಜಿಕ ಜಾಲತಾಣಗಳಲ್ಲಿ (Social Media) ಸಾಕಷ್ಟು ಸುದ್ದಿ ಹಾಗೂ ಸದ್ದು ಮಾಡ್ತಾನೆ ಇರ್ತಾರೆ. ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ಈ ಉರ್ಫಿ, ಪ್ರತಿ ದಿನ ತಮ್ಮ ಫೋಟೋ, ವಿಡಿಯೋಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾ ಇರುತ್ತಾರೆ. ನಮ್ಮ ಪಡ್ಡೆ ಹುಡುಗರೇನು ಕಡಿಮೆನಾ? ಉರ್ಫಿ ಜಾವೇದ್‌ರನ್ನು ಇನ್ಸ್ಟ್ರಾಗ್ರಾಮ್ (Instagram) ಸೇರಿದಂತೆ ಸಿಕ್ಕ ಸಿಕ್ಕ ಸಾಮಾಜಿಕ ಜಾಲತಾಣದಲ್ಲೆಲ್ಲ ಫಾಲೋ ಮಾಡ್ತಾನೇ ಇರ್ತಾರೆ. “ಬೆಳಿಗ್ಗೆ ಆಕೆ ಎದ್ದಾಗಿನಿಂದ, ರಾತ್ರಿ ಮಲಗೋವರೆಗೂ ಉರ್ಫಿ ಏನೇನ್ ಮಾಡ್ತಾರೆ” ಅಂತ ತಿಳಿದುಕೊಳ್ತಾನೇ ಇರ್ತಾರೆ. ರಾತ್ರಿ ಆಕೆ ನಿದ್ದೆ ಮಾಡಿದ್ರೂ, “ಉರ್ಫಿ ಈಗ್ ಏನ್ ಮಾಡ್ತಿರಬಹುದು?” ಅಂತ ಸೋಶಿಯಲ್ ಮೀಡಿಯಾದ ಕಿಂಡಿಯಿಂದಲೇ ಒಮ್ಮೆ ಇಣುಕಿ ನೋಡ್ತಾರೆ. ಪಾಪ, ಉರ್ಫಿನೂ ಅಷ್ಟೇ ಅಭಿಮಾನಿಗಳಿಗೆ ಯಾವತ್ತೂ ನಿರಾಶೆ ಮಾಡಿದ್ದೇ ಇಲ್ಲ. ಪ್ರತಿದಿನ ಒಂದಿಲ್ಲೊಂದು ಅವತಾರದಲ್ಲಿ ಪ್ರತ್ಯಕ್ಷ ಆಗ್ತಾನೇ ಇರ್ತಾರೆ. ಇದೀಗ ಉರ್ಫಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಆಕೆಯ ‘ಬೆನ್ನು’ ನೋಡಿದ ಪಡ್ಡೆ ಹೈಕ್ಳು, “ಇವಳು ಉರ್ಫಿಯೋ, ಧರೆಗಿಳಿದ ಊರ್ವಶಿಯೋ” ಅಂತ ಮತ್ತೆ ಆಕೆಯ ‘ಬೆನ್ನು’ ಬಿದ್ದಿದ್ದಾರಂತೆ!

ಬಂತಪ್ಪಾ ಉರ್ಫಿ ಜಾವೇದ್ ಹೊಸ ಅವತಾರ!

ಉರ್ಫಿ ಜಾವೇದ್ ತನ್ನ ವಿಲಕ್ಷಣ ಮತ್ತು ವಿಲಕ್ಷಣ ಬಟ್ಟೆಗಳಿಗಾಗಿ ಟ್ರೋಲ್ ಆಗುವ ದಿನಗಳು ಕಳೆದುಹೋಗಿವೆ. ನಟಿ ಈಗ ತಮ್ಮ ತುಂಬಾ ಹಾಟ್ ಟು ಹ್ಯಾಂಡಲ್ ಲುಕ್‌ನಿಂದ ಸಾಮಾಜಿಕ ಮಾಧ್ಯಮಕ್ಕೆ ಬೆಂಕಿ ಹಚ್ಚುತ್ತಿದ್ದಾರೆ. ಇದೀಗ ತಮ್ಮ ಬೆತ್ತಲೆ ಬೆನ್ನು ತೋರಿಸಿರುವ ಉರ್ಫಿ, ಹುಡುಗರ ಎದೆಗೆ ಕಿಚ್ಚು ಹಚ್ಚಿದ್ದಾರೆ.

ಬೆತ್ತಲೆ ಬೆನ್ನು ತೋರಿಸಿದ ನಟಿ

ವೀಡಿಯೊದಲ್ಲಿ, ಉರ್ಫಿ ಜಾವೇದ್ ಕಂದು ಬಣ್ಣದ ಪ್ಯಾಂಟ್ ಮತ್ತು ಬ್ಯಾಕ್‌ಲೆಸ್ ಟಾಪ್ ಧರಿಸಿದ್ದಾಳೆ. ಬೆತ್ತಲೆ ಬೆನ್ನ ಮೇಲೆ ಹರಡಿರುವ ಕೂದಲ ರಾಶಿ ಸರಿ ಮಾಡಿಕೊಳ್ಳುತ್ತಾ ಫೋಸ್ ಕೊಡುತ್ತಾರೆ.

ಇದನ್ನೂ ಓದಿ: Urfi Javed: ಪಡ್ಡೆ ಹುಡುಗರ ಎದೆಗೆ ಕಿಚ್ಚು ಹಚ್ಚಿದ ಉರ್ಫಿ ಅವತಾರ! ಚೈನ್‌ನಲ್ಲೇ ಮೈ ಮುಚ್ಚಿಕೊಳ್ತಾಳೆ ಈಕೆ!

ನಮಗೆ ಹಬ್ಬದೂಟ ಎಂದ ಅಭಿಮಾನಿಗಳು

ಉರ್ಫಿ ಜಾವೇದ್ ಹೊಸ ಫೋಟೋ ಹಾಗೂ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. ಇದನ್ನು ನೋಡಿದ ಅಭಿಮಾನಿಗಳು ತರಹೇವಾರಿ ಕಮೆಂಟ್ ಮಾಡಿದ್ದಲ್ಲದೇ, ಲೈಕ್ ಒತ್ತಿದ್ದಾರೆ. ಸಿಕ್ಕ ಸಿಕ್ಕಲ್ಲಿ ಶೇರ್ ಮಾಡುತ್ತಿದ್ದಾರೆ.

urfi Javed s new photo viral again
ವೈರಲ್ ಆಗಿರುವ ಉರ್ಫಿ ಜಾವೇದ್ ಫೋಟೋ


ಸರಪಳಿ ಧರಿಸಿ ಬಂದಿದ್ದ ಉರ್ಫಿ

ಮುಂಬೈನಲ್ಲಿ ಕಪ್ಪು ಸ್ಕರ್ಟ್‌ನೊಂದಿಗೆ ಚಂಕಿ ಸರಪಳಿಗಳನ್ನು ಧರಿಸಿ ಉರ್ಫಿ ಹೊರಬಂದಿದ್ದರು. ಸಾಮಾನ್ಯ ಟಾಪ್ ಬದಲಿಗೆ ತನ್ನ ಕುತ್ತಿಗೆಗೆ ಭಾರವಾದ ಮತ್ತು ಉದ್ದವಾದ ಪದರದ ಸರಪಳಿಗಳನ್ನು ಧರಿಸಿದ್ದರು. ಈ ಫೋಟೋ ಕೂಡ ಸಾಕಷ್ಟು ವೈರಲ್ ಆಗಿದ್ದವು.

ಮ್ಯೂಸಿಕ್ ಆಲ್ಬಂನಲ್ಲಿ ಮ್ಯಾಜಿಕ್

ಉರ್ಫಿ ಜಾವೇದ್ ಇತ್ತೀಚೆಗೆ ತನ್ನ ಗೆಳೆಯ, ಗಾಯಕ ಕುನ್ವಾರ್ ಜೊತೆಗೆ ಮ್ಯೂಸಿಕ್ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದಾಳೆ. ಇದಲ್ಲದೆ, ಉರ್ಫಿ ಕಳೆದ ವರ್ಷ ಬಿಗ್ ಬಾಸ್ ಒಟಿಟಿಯಲ್ಲಿ ಭಾಗವಹಿಸಿದ್ದರು. ಆದರೆ ಕಾರ್ಯಕ್ರಮದಿಂದ ಎಲಿಮಿನೇಟ್ ಆದ ಮೊದಲ ಸ್ಪರ್ಧಿಯಾಗಿದ್ದರು.

ಇದನ್ನೂ ಓದಿ: Urfi Javed: ಪೋರ್ನ್ ಸಿನಿಮಾ ಶೂಟಿಂಗ್​ ವೇಳೆ ಖಾಕಿ ಕೈಲಿ ಉರ್ಫಿ ಲಾಕ್​? ಇದೆಲ್ಲಾ ಬೇಕಿತ್ತಾ ನಿಮ್ಗೆ ಎಂದ ನೆಟ್ಟಿಗರು!

ಅವರು ಬಡೇ ಭಯ್ಯಾ ಕಿ ದುಲ್ಹನಿಯಾ, ಮೇರಿ ದುರ್ಗಾ, ಬೇಪನ್ನಾ ಮತ್ತು ಪಂಚ್ ಬೀಟ್ ಸೀಸನ್ 2 ಸೇರಿದಂತೆ ಹಲವಾರು ಟಿವಿ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ‘ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ’ ಧಾರಾವಾಹಿಯಲ್ಲಿ ಸ್ವಲ್ಪ ಸಮಯದವರೆಗೆ ನಟಿಸಿದ್ದರು. ಬಳಿಕ ‘ಕಸೌಟಿ ಜಿಂದಗಿ ಕೇ 2’ ನಲ್ಲಿ ತನಿಶಾ ಚಕ್ರವರ್ತಿ ಪಾತ್ರದಲ್ಲಿ ನಟಿಸಿದ್ದರು.
Published by:Annappa Achari
First published: