Urfi Javed: ಸೊಳ್ಳೆ ಬತ್ತಿಯಲ್ಲಿ ಮೈ ಮುಚ್ಚಿಕೊಂಡು ಬಂದ ಉರ್ಫಿ! ಕಳಚಿದ್ರೆ ನಿನ್ನ ಕಥೆ ಗೋವಿಂದ ಅಂತ ಟ್ರೋಲ್​

ಟ್ರೋಲ್​ ಆಗುವ ರೀತಿಯಲ್ಲೇ ಪ್ರತಿಬಾರಿ ವಿಚಿತ್ರ ಉಡುಗೆಗಳನ್ನು ಧರಿಸಿ ಉರ್ಫಿ ಕ್ಯಾಮರಾಗೆ ಪೋಸ್​ ಕೊಡುತ್ತಾರೆ. ಕೆಲವರು ಉರ್ಫಿ ಜಾವೇದ್‌ರನ್ನ ಫ್ಯಾಶನ್ ಡಿಸಾಸ್ಟರ್(Fashion Disaster) ಅಂತಲೇ ಕರೆಯುತ್ತಿದ್ದಾರೆ.

ಉರ್ಫಿ ಜಾವೇದ್​

ಉರ್ಫಿ ಜಾವೇದ್​

  • Share this:
ಬಿಗ್ ಬಾಸ್ ಒಟಿಟಿ (Bigg Boss Ott) ಖ್ಯಾತಿಯ ಉರ್ಫಿ ಜಾವೇದ್ (Urfi Javed) ಸಾಮಾಜಿಕ ಮಾಧ್ಯಮದಲ್ಲಿ ಈಗ ಹೊಸ ಸೆನ್ಸೇಷನ್ (Sensation) ಸೃಷ್ಟಿಸಿದ್ದಾರೆ. ತಮ್ಮ ಮಾದಕ ನೋಟದಿಂದಲೇ ಎಲ್ಲರನ್ನೂ ಬೆರಗುಗೊಳಿಸುವ ಉರ್ಪಿ ಜಾವೇದ್, ಆಗಾಗೊಮ್ಮೆ ತಮ್ಮ ಸಾಮಾಜಿಕ ಮಾಧ್ಯಮಗಳ ವೇದಿಕೆಯಲ್ಲಿ ಹಂಚಿಕೊಳ್ಳುವ ಪೋಸ್ಟ್ ಗಳ ಮೂಲಕ ನಿರಂತವಾಗಿ ಸುದ್ದಿಯಲ್ಲಿ ಇರುತ್ತಾರೆ. ಕಿರುತೆರೆ ನಟಿ ಕಮ್ ಮಾಡೆಲ್ (Small Screen Actress) ಉರ್ಫಿ ಜಾವೇದ್ ಹೆಚ್ಚಾಗಿ ಸದ್ದು ಮಾಡಿರುವುದೇ ತಮ್ಮ ಡ್ರೆಸ್‌ಗಳ ಮೂಲಕ. ಚಿತ್ರವಿಚಿತ್ರವಾದ ತರಹೇವಾರಿ ಡ್ರೆಸ್‌(Dress)ಗಳನ್ನ ತೊಡುವುದರಲ್ಲಿ ಉರ್ಫಿ ಜಾವೇದ್ ಸದಾ ಮುಂದ. ಈಕೆಯನ್ನು ಹೀರೋಯಿನ್​ ಅನ್ನೋದಾ? ಇಲ್ಲ ಸೀರಿಯಲ್​ ನಟಿ? ಎನ್ನಬೇಕಾ ಎಂದು ನೀವು ಕೇಳಿದರೆ, ಈಕೆಯನ್ನು ಫ್ಯಾಶನ್​ ಡಿಸಾಸ್ಟರ್ (​ Fashion Disaster) ಎಂದು ಕರೆಯುತ್ತಾರೆ ನೆಟ್ಟಿಗರು.

ಚಕ್ಕುಲಿ ರೀತಿಯ ವಸ್ತುವಿನಿಂದ ಮೈ ಮುಚ್ಚಿಕೊಂಡು ಬಂದ ಉರ್ಫಿ!

ಟ್ರೋಲ್​ ಆಗುವ ರೀತಿಯಲ್ಲೇ ಪ್ರತಿಬಾರಿ ವಿಚಿತ್ರ ಉಡುಗೆಗಳನ್ನು ಧರಿಸಿ ಉರ್ಫಿ ಕ್ಯಾಮರಾಗೆ ಪೋಸ್​ ಕೊಡುತ್ತಾರೆ. ಕೆಲವರು ಉರ್ಫಿ ಜಾವೇದ್‌ರನ್ನ ಫ್ಯಾಶನ್ ಡಿಸಾಸ್ಟರ್(Fashion Disaster) ಅಂತಲೇ ಕರೆಯುತ್ತಿದ್ದಾರೆ. ಪ್ರತಿದಿನ ಏರ್​​ಪೋರ್ಟ್​ಗೆ ಹೋಗಿ ಪೋಸ್​ ಕೊಡ್ತಾರೆ ಉರ್ಫಿ. ಹಾಗಿದ್ದರೆ ಇವರು ಪ್ರತಿದಿನ ಫ್ಲೈಟ್​ನಲ್ಲಿ ಓಡಾಡ್ತಾರಾ ಅಂತ ಕೇಳಬೇಡಿ. ಫ್ಲೈಟ್​ ಹತ್ತೋದಿರಲಿ, ಅದರ ಹತ್ತಿರನೂ ಉರ್ಫಿ ಹೋಗಲ್ಲಾ ಎಂದು ಗೊತ್ತಾಗಿದೆ. ಈ ಬಾರಿ ಉರ್ಫಿ ಇನ್ನು ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಚಕ್ಕುಲಿ ರೀತಿಯ ವಸ್ತುವಿನಿಂದ ತನ್ನ ಮೈ ಮುಚ್ಚಿಕೊಂಡು ಕ್ಯಾಮರಾಗೆ ಪೋಸ್​ ಕೊಟ್ಟಿದ್ದಾರೆ.


View this post on Instagram


A post shared by Uorfi (@urf7i)


ಸಿಕ್ಕಾಪಟ್ಟೆ ಟ್ರೋಲ್​ ಆಯ್ತು ಉರ್ಫಿ ಜಾವೇದ್​ ಲುಕ್​!

ಈ ರೀತಿ ಮೊದಲೆನಲ್ಲಾ ಈಕೆ ಕಾಣಿಸಿಕೊಳ್ಳುತ್ತಿರುವುದು. ಸದಾ ವಿಚಿತ್ರ ಬಟ್ಟೆ ತೊಟ್ಟು ಉರ್ಫಿ ಜಾವೇದ್​ ಕಾಣಿಸಿಕೊಳ್ಳುತ್ತಾರೆ. ಈ ರೀತಿ ಬಟ್ಟೆ ತೊಟ್ಟು ಬಂದಿದನ್ನು ಕಂಡು ನೆಟ್ಟಿಗರು ಟ್ರೋಲ್​ ಮಾಡುತ್ತಿದ್ದಾರೆ. ಈ ಚಕ್ಕುಲಿ ಕಳಚಿದ್ರೆ ನಿನ್ನ ಕಥೆ ಗೋವಿಂದಾ ಎಂದು ಟ್ರೋಲ್​ ಮಾಡುತ್ತಿದ್ದಾರೆ. ಚಕ್ಕುಲಿಯ ಬೆಲೆ ಎಷ್ಟು ಎಂದು ಕಿಂಡಲ್​ ಮಾಡುತ್ತಿದ್ದಾರೆ. ಇನ್ನೂ ಕೆಲವರು ಸಾಕಮ್ಮ  ನಿನ್ನ ಅವತಾರ. ನಮ್ಮ ಕಣ್ಣುಗಳನ್ನು ನಾವು ದಾನ ಮಾಡಲು ರೆಡಿಯಾಗಿದ್ದೆವೆ ಎಂದು ಕಾಮೆಂಟ್​ ಮಾಡಿದ್ದಾರೆ.

ನೆಟ್ಟಿಗರ ವಿಚಿತ್ರ ಕಾಮೆಂಟ್


ಇದನ್ನೂ ಓದಿ: ಕಿಯಾರಾ, ಜಾನ್ಹವಿ, ಕಂಗನಾರನ್ನೇ ಹಿಂದಿಕ್ಕಿದ ಉರ್ಫಿ ಜಾವೇದ್​! ಟ್ರೋಲ್​ ಮಾಡ್ತಿದ್ದವರೆಲ್ಲ ಈಗ ಗಪ್​ಚುಪ್​

ಕೌಂಟರ್​ ಕೊಟ್ಟ ಉರ್ಫಿ ಜಾವೇದ್​

ಇತ್ತೀಚೆಗೆ, ಉರ್ಫಿ ಜಾವೇದ್ ಅವರು ಎರಡು ನಿಕ್ಕರ್‌ಗಳಲ್ಲಿ ಕಾಣಿಸಿಕೊಂಡಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ನೆಟ್ಟಿಗರು ತಮ್ಮ ಡ್ರೆಸ್ ಬಗ್ಗೆ ಕಮೆಂಟ್ ಮಾಡುತ್ತಾರೆ ಎಂದು ತಿಳಿದು ಡೈರೆಕ್ಟ್ ಕೌಂಟರ್ ಕೊಟ್ಟಿದ್ದಾರೆ. ನಾನು ನಡೆಯುತ್ತೇನೆ, ನಾನು ಜಿಗಿಯುತ್ತೇನೆ, ನಾನು ಯಾರೊಂದಿಗಾದರೂ ಎಲ್ಲಿಯಾದರೂ ಹೋಗುತ್ತೇನೆ, ಅಥವಾ ನಾನು ಒಬ್ಬಂಟಿಯಾಗಿರುತ್ತೇನೆ.. ನಾನು ಆಡುತ್ತೇನೆ, ನಾನು ಹಾಡುತ್ತೇನೆ, ನಾನು ಪ್ರೀತಿಸುತ್ತೇನೆ, ನಿಮಗೆ ಏನು ಕಷ್ಟ ಎಂದು ಬರೆದುಕೊಂಡಿದ್ದಾರೆ.,

ಇದನ್ನೂ ಓದಿ: ಬಗೆಬಗೆಯ ಬಟ್ಟೆ ತೊಡುವ ಉರ್ಫಿ ಜಾವೇದ್ ಒಟ್ಟು ಆದಾಯ, ಆಸ್ತಿ ಮೌಲ್ಯ ಎಷ್ಟು?

ಬಡೇ ಭಯ್ಯಾಕಿ ಉರ್ಫಿ ಜಾವೇದ್ ಆಗಿ ದುಲ್ಮೇನಿಯಾ ಧಾರಾವಾಹಿಯಿಂದ ಪ್ರೇಕ್ಷಕರನ್ನು ಮೆಚ್ಚಿಸಿದರು. ದುರ್ಗಾ ಚಿತ್ರದ ಮೂಲಕ ನಟಿಯಾಗಿ ಸಾಕಷ್ಟು ಜನಮನ್ನಣೆ ಗಳಿಸಿದ್ದಾರೆ. ಅದರ ನಂತರ, ಅವರು ಒಟಿಟಿಯಲ್ಲಿ ಪ್ರಸಾರವಾದ ಬಿಗ್ ಬಾಸ್‌ನಲ್ಲಿ ಸ್ಪರ್ಧಿಯಾಗಿ ಉತ್ತಮ ಪ್ರದರ್ಶನ ನೀಡಿದರು. ಬಿಗ್ ಬಾಸ್ ಶೋನಲ್ಲಿ ಎಲಿಮಿನೇಟ್ ಆದ ನಂತರ ಅವರ ಜನಪ್ರಿಯತೆ ಸಾಮಾಜಿಕ ಜಾಲತಾಣಗಳಲ್ಲಿ ಗಗನಕ್ಕೇರಿದೆ. ಅದನ್ನೇ ಮುಂದುವರಿಸುವ ಸಲುವಾಗಿ ಈ ರೀತಿ ಟೂ ಪೀಸ್ ಡ್ರೆಸ್, ಹರಿದ ಪೇಪರ್, ಹಗ್ಗ, ತಂತಿ, ಪೇಂಟಿಂಗ್ ಚಿತ್ರಗಳನ್ನು ತೆಗೆದು ನೆಟ್ಟಿಗರು ತನ್ನತ್ತ ನೋಡುವಂತೆ ಮಾಡುತ್ತಿದ್ದಾಳೆ.
Published by:Vasudeva M
First published: