Urfi Javed: ಕೂದಲಲ್ಲೇ ಮೈ ಮುಚ್ಚಿಕೊಂಡು ಬಂದ ಉರ್ಫಿ, ನಡೆಯೋದು ಹೇಗೆ ಮೇಡಂ ಅಂತ ಕಾಲೆಳೆದ ನೆಟ್ಟಿಗರು!

Urfi Javed Latest Bold Video: ಈಗಾಗಲೇ ತಮ್ಮ ಔಟ್‌ಫಿಟ್‌(Outfit)ಗಳ ವಿಚಾರದಲ್ಲಿ ಉರ್ಫಿ ಜಾವೇದ್ ಹಲವು ಬಾರಿ ಟ್ರೋಲ್ ಆಗಿದ್ದಾರೆ. ಹಾಗ್ನೋಡಿದ್ರೆ, ಉರ್ಫಿ ಜಾವೇದ್ ಯಾವುದೇ ಡ್ರೆಸ್ ತೊಟ್ಟರೂ ಟ್ರೋಲ್(Troll) ಆಗುತ್ತಿದ್ದಾರೆ.

ಉರ್ಫಿ ಜಾವೇದ್​

ಉರ್ಫಿ ಜಾವೇದ್​

  • Share this:
ಬಿಗ್ ಬಾಸ್ OTT (Big boss) ಖ್ಯಾತಿಯ ಉರ್ಫಿ ಜಾವೇದ್ (Urfi Javed) ತನ್ನ ವಿಚಿತ್ರ ಫ್ಯಾಷನ್ (fashion) ಆಯ್ಕೆಗಳಿಗೆ ಹೆಸರುವಾಸಿಯಾಗಿದ್ದಾರೆ. ಯಾವಾಗಲೂ ಏನಾದರೂ ವಿಭಿನ್ನ ಹಾಗೂ ವಿಚಿತ್ರವಾಗಿ ಬಟ್ಟೆ ಹಾಕುವ ಮೂಲಕ ಸುದ್ದಿಯಲ್ಲಿರುತ್ತಾರೆ. ಅಲ್ಲದೇ, ಫ್ಯಾಷನ್​ಗೆ ಹೊಸ ಅರ್ಥವನ್ನು ನೀಡುತ್ತಿದ್ದಾರೆ ಎಂದರೆ ತಪ್ಪಲ್ಲ. ಹಾಗೆಯೇ ಉರ್ಫಿ ತನ್ನ ಹಾಟ್‌ನೆಸ್‌ನಿಂದ ನೆಟ್ಟಿಗರ ಗಮನ ಸೆಳೆಯುತ್ತಿರುತ್ತಾರೆ. ಈಗ ಅವರ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಸ್ಟೇಟಸ್​ ಒಂದನ್ನು ಹಾಕಿದ್ದು, ಏನಾಗಿದೆ ಇವರಿಗೆ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. ಕಿರುತೆರೆ ನಟಿ ಕಮ್ ಮಾಡೆಲ್ (Small Screen Actress) ಉರ್ಫಿ ಜಾವೇದ್ ಹೆಚ್ಚಾಗಿ ಸದ್ದು ಮಾಡಿರುವುದೇ ತಮ್ಮ ಡ್ರೆಸ್‌ಗಳ ಮೂಲಕ. ಇದೀಗ ಮತ್ತೊಂದು ಹೊಸ ಅವತಾರದಲ್ಲಿ ಉರ್ಫಿ ಪೋಸ್​ ಕೊಟ್ಟಿದ್ದಾರೆ.

ಕೂದಲಲ್ಲೇ ಮೈ ಮುಚ್ಚಿಕೊಂಡು ಬಂದ ಉರ್ಫಿ!

ಈಗಾಗಲೇ ತಮ್ಮ ಔಟ್‌ಫಿಟ್‌(Outfit)ಗಳ ವಿಚಾರದಲ್ಲಿ ಉರ್ಫಿ ಜಾವೇದ್ ಹಲವು ಬಾರಿ ಟ್ರೋಲ್ ಆಗಿದ್ದಾರೆ. ಹಾಗ್ನೋಡಿದ್ರೆ, ಉರ್ಫಿ ಜಾವೇದ್ ಯಾವುದೇ ಡ್ರೆಸ್ ತೊಟ್ಟರೂ ಟ್ರೋಲ್(Troll) ಆಗುತ್ತಿದ್ದಾರೆ. ಟ್ರೋಲ್​ ಆಗುವ ರೀತಿಯಲ್ಲೇ ಪ್ರತಿಬಾರಿ ವಿಚಿತ್ರ ಉಡುಗೆಗಳನ್ನು ಧರಿಸಿ ಉರ್ಫಿ ಕ್ಯಾಮರಾಗೆ ಪೋಸ್​ ಕೊಡುತ್ತಾರೆ. ಈಗಲೂ ಅಷ್ಟೇ ಕೂದಲಲ್ಲೇ ಮೈ ಮುಚ್ಚಿಕೊಂಡು ಕ್ಯಾಮರಾಗೆ ಪೋಸ್ಟ್​ ಕೊಟ್ಟಿದ್ದಾರೆ. ಕಪ್ಪು ಬಣ್ಣದ ಒಳುಡುಪಿನ ಮೇಲೆ ಬಿಳಿ ಬಣ್ಣದ ಕೂದಲಿನಂತಿರುವ ಡಿಸೈನ್​ನಲ್ಲಿ ಮೈ ಮುಚ್ಚಿಕೊಂಡು ಪೋಸ್​ ಕೊಟ್ಟಿದ್ದಾರೆ. 









View this post on Instagram






A post shared by Uorfi (@urf7i)





ಬಿಗ್ಗೆಸ್ಟ್​ ಫ್ಯಾಶನ್​ ಡಿಸಾಸ್ಟರ್​ ಈ ಉರ್ಫಿ!

ಉರ್ಫಿ ಜಾವೇದ್​ ಟ್ರೋಲ್​ಗೆ ಒಳಗಾಗೋದು ಹೊಸದೇನಲ್ಲ. ಪ್ರತಿ ಭಾರಿ ಟ್ರೋಲ್​ಗೆ ಒಳಗಾಗ್ತಾರೆ. ಆದರೆ, ಯಾವುದಕ್ಕೂ ತಲೆಕೆಡಿಸಿಕೊಳ್ಳಲ್ಲ. ತನಗಿಷ್ಟ ಬಂದ ಉಡುಗೊರೆ ತೊಟ್ಟು ಖುಷಿ ಪಡುತ್ತಾರೆ. ಉರ್ಫಿ ಅಷ್ಟಾಗಿ ಫೇಮಸ್ ಆಗಿರಲಿಲ್ಲ. ಯಾವಾಗ ಬೋಲ್ಡ್ ಅವತಾರದಲ್ಲಿ ಏರ್​​ಪೋರ್ಟ್​ನಲ್ಲಿ(Airport) ಕಾಣಿಸಿಕೊಂಡರೋ ಅಂದಿನಿಂದ ಉರ್ಫಿ ಸಖತ್ ಫೇಮಸ್ ಆದರು.  ಕೆಲವರು ಉರ್ಫಿ ಜಾವೇದ್‌ರನ್ನ ಫ್ಯಾಶನ್ ಡಿಸಾಸ್ಟರ್(Fashion Disaster) ಅಂತಲೇ ಕರೆಯುತ್ತಿದ್ದಾರೆ. ಪ್ರತಿದಿನ ಚಿತ್ರ, ವಿಚಿತ್ರ ಬಟ್ಟೆಗಳನ್ನು ಧರಿಸಿ ಪಾಪಾರಾಜಿಗಳ ಕಣ್ಣಿಗೆ ಕಾಣಿಸಿಕೊಳ್ಳುತ್ತಾರೆ.

ಇದನ್ನೂ ಓದಿ: ಇಲ್ನೋಡ್ರಿ ಈಕೆಗೆ​ ಉರ್ಫಿನೇ ಸ್ಫೂರ್ತಿ ಅಂತೆ! 12 ವರ್ಷದ ಹುಡುಗಿ ಅವತಾರ ಕಂಡು ನೆಟ್ಟಿಗರು ಶಾಕ್​

ಕ್ಯಾಂಡಿಲೇ ಮೈ ಮುಚ್ಚಿಕೊಂಡು ಬಂದಿದ್ದ ಉರ್ಫಿ!

ಅಜ್ಜಿ ಕೂದಲು ಹತ್ತಿ ಮಿಠಾಯಿ ನಿಮಗೆ ತಿಳಿದಿದೆಯೇ? ಇದು ಪ್ರತಿಯೊಬ್ಬ ವ್ಯಕ್ತಿಯ ಬಾಲ್ಯದ ಸಿಹಿ ನೆನಪು.ಇಂದಿಗೂ ಅನೇಕ ಮಕ್ಕಳು ಹತ್ತಿ ಕ್ಯಾಂಡಿಯನ್ನು ಆನಂದಿಸುತ್ತಾರೆ. ಇವಾಗ ಯಾಕಪ್ಪ ಈ ಅಜ್ಜಿ ಕೂದಲು ಅಂತ ಹೇಳುತ್ತಾ ಇದ್ದೀವಿ ಅಂತ ಶಾಕ್​ ಆಯಿತಾ? ಆಗಲೇಬೇಕು. ಯಾಕಂದರೆ ಈ ಕ್ಯಾಂಡಿಯಲ್ಲೇ ಮೈ ಮುಚ್ಚಿಕೊಂಡು ಬಂದಿದ್ದಾರೆ ಉರ್ಪಿ ಜಾವೇದ್​.

ಇದನ್ನೂ ಓದಿ: ನೀಲಿ ನೀಲಿ ನೀಲಿ ನಿನ್ನ ಬಟ್ಟೆಯೋ, ನೀಲಿ ಉಡುಗೆ ತೊಟ್ಟ ಚಿಟ್ಟೆಯೋ! ಬ್ಲ್ಯೂ ಬಟರ್‌ಫ್ಲೈ ಆದ ಉರ್ಫಿ ಜಾವೇದ್

ಹಳೆ ಬಾಯ್​ಫ್ರೆಂಡ್​ ವಿರುದ್ದ ಆರೋಪ ಮಾಡಿದ್ದ ಉರ್ಫಿ‘

ಪಾರಸ್ ಕಲ್ನಾವತ್ ಈ ನಟನ ಬಗ್ಗೆ ಹೆಚ್ಚಾಗಿ ಗೊತ್ತಿಲ್ಲದಿರಬಹುದು. ಆದರೆ ಅನುಪಮಾ ಎನ್ನುವ ಹಿಂದಿ ಸೀರಿಯಲ್ ನೋಡುವ ಹಲವಾರು ಜನರಿಗೆ ಅದರಲ್ಲಿ ಅಮರ್ ಪಾತ್ರ ಮಾಡುವ ನಟ ಗೊತ್ತಿರುತ್ತಾರೆ. ಅಮ್ಮನ ಮುದ್ದಿನ ಮಗನಾಗಿ, ತಾಯಿಯನ್ನು ಬಹಳ ಇಷ್ಟಪಡುವ ಈ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದರು. ಈ ನಟನೇ ಉರ್ಫಿಯ ಹಳೆ ಬಾಯ್​ಫ್ರೆಂಡ್.  ಈ ನಟ ಕಳೆದ ಕೆಲ ದಿನಗಳ ಹಿಂದೆ ಜನಪ್ರಿಯ ದೈನಂದಿನ ಧಾರಾವಾಹಿ ಅನುಪಮಾದಿಂದ ಹೊರಹಾಕಲ್ಪಟ್ಟಿರುವ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.
Published by:ವಾಸುದೇವ್ ಎಂ
First published: