Urfi Javed: ಅಯ್ಯೋ, ಈಕೆ ತೊಟ್ಟಿರೋ ಬಟ್ಟೆ ಹೆಸ್ರು ದೇವ್ರಾಣೆ ಗೊತ್ತಾಗ್ತಿಲ್ಲ! ವಿಡಿಯೋ ನೋಡಿ ನೀವೇ ಡಿಸೈಡ್​ ಮಾಡಿ

ಈಗಾಗಲೇ ತಮ್ಮ ಔಟ್‌ಫಿಟ್‌(Outfit)ಗಳ ವಿಚಾರದಲ್ಲಿ ಉರ್ಫಿ ಜಾವೇದ್ ಹಲವು ಬಾರಿ ಟ್ರೋಲ್ ಆಗಿದ್ದಾರೆ. ಹಾಗ್ನೋಡಿದ್ರೆ, ಉರ್ಫಿ ಜಾವೇದ್ ಯಾವುದೇ ಡ್ರೆಸ್ ತೊಟ್ಟರೂ ಟ್ರೋಲ್(Troll) ಆಗುತ್ತಿದ್ದಾರೆ.

ಉರ್ಫಿ ಜಾವೇದ್​

ಉರ್ಫಿ ಜಾವೇದ್​

  • Share this:
ಬಿಗ್ ಬಾಸ್ OTT (Big boss) ಖ್ಯಾತಿಯ ಉರ್ಫಿ ಜಾವೇದ್ (Urfi Javed) ತನ್ನ ವಿಚಿತ್ರ ಫ್ಯಾಷನ್ (fashion) ಆಯ್ಕೆಗಳಿಗೆ ಹೆಸರುವಾಸಿಯಾಗಿದ್ದಾರೆ. ಯಾವಾಗಲೂ ಏನಾದರೂ ವಿಭಿನ್ನ ಹಾಗೂ ವಿಚಿತ್ರವಾಗಿ ಬಟ್ಟೆ ಹಾಕುವ ಮೂಲಕ ಸುದ್ದಿಯಲ್ಲಿರುತ್ತಾರೆ. ಅಲ್ಲದೇ, ಫ್ಯಾಷನ್​ಗೆ ಹೊಸ ಅರ್ಥವನ್ನು ನೀಡುತ್ತಿದ್ದಾರೆ ಎಂದರೆ ತಪ್ಪಲ್ಲ. ಹಾಗೆಯೇ ಉರ್ಫಿ ತನ್ನ ಹಾಟ್‌ನೆಸ್‌ನಿಂದ ನೆಟ್ಟಿಗರ ಗಮನ ಸೆಳೆಯುತ್ತಿರುತ್ತಾರೆ. ಈಗ ಅವರ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಸ್ಟೇಟಸ್​ ಒಂದನ್ನು ಹಾಕಿದ್ದು, ಏನಾಗಿದೆ ಇವರಿಗೆ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. ಕಿರುತೆರೆ ನಟಿ ಕಮ್ ಮಾಡೆಲ್ (Small Screen Actress) ಉರ್ಫಿ ಜಾವೇದ್ ಹೆಚ್ಚಾಗಿ ಸದ್ದು ಮಾಡಿರುವುದೇ ತಮ್ಮ ಡ್ರೆಸ್‌ಗಳ ಮೂಲಕ. ಇದೀಗ ಮತ್ತೊಂದು ಹೊಸ ಅವತಾರದಲ್ಲಿ ಉರ್ಫಿ ಪೋಸ್​ ಕೊಟ್ಟಿದ್ದಾರೆ.

ಅಯ್ಯೋ ಇದೇನ್ ಬಟ್ಟೆ​ ಹಿಂಗಿದೆ!

ಈಗಾಗಲೇ ತಮ್ಮ ಔಟ್‌ಫಿಟ್‌(Outfit)ಗಳ ವಿಚಾರದಲ್ಲಿ ಉರ್ಫಿ ಜಾವೇದ್ ಹಲವು ಬಾರಿ ಟ್ರೋಲ್ ಆಗಿದ್ದಾರೆ. ಹಾಗ್ನೋಡಿದ್ರೆ, ಉರ್ಫಿ ಜಾವೇದ್ ಯಾವುದೇ ಡ್ರೆಸ್ ತೊಟ್ಟರೂ ಟ್ರೋಲ್(Troll) ಆಗುತ್ತಿದ್ದಾರೆ. ಟ್ರೋಲ್​ ಆಗುವ ರೀತಿಯಲ್ಲೇ ಪ್ರತಿಬಾರಿ ವಿಚಿತ್ರ ಉಡುಗೆಗಳನ್ನು ಧರಿಸಿ ಉರ್ಫಿ ಕ್ಯಾಮರಾಗೆ ಪೋಸ್​ ಕೊಡುತ್ತಾರೆ. ಈಗಲೂ ಅಷ್ಟೇ ಹೆಸರೆ ಹೇಳಲು ಸಾಧ್ಯವಾಗದ ಉಡುಗೆ ತೊಟ್ಟು ಕ್ಯಾಮರಾಗೆ ಪೋಸ್​ ಕೊಟ್ಟಿದ್ದಾರೆ.  ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಇದಕ್ಕೆ ನಿಜವಾಗಲೂ ಹೆಸರು ಹೇಳಲು ಅಸಾಧ್ಯ. ಚಿತ್ರ, ವಿಚಿತ್ರಕ್ಕಿಂತ ಮೇಲೆ ಏನಾದರೂ ಇದ್ದರೆ ಆ ಹೆಸರನ್ನು ಇವರಿಗೆ ಇಡಬಹುದು ಎನ್ನುತ್ತಿದ್ದಾರೆ ಅಭಿಮಾನಿಗಳು.
View this post on Instagram


A post shared by Uorfi (@urf7i)

ಬಿಗ್ಗೆಸ್ಟ್​ ಫ್ಯಾಶನ್​ ಡಿಸಾಸ್ಟರ್​ ಈ ಉರ್ಫಿ!

‘ಉರ್ಫಿ ಜಾವೇದ್​ ಟ್ರೋಲ್​ಗೆ ಒಳಗಾಗೋದು ಹೊಸದೇನಲ್ಲ. ಪ್ರತಿ ಭಾರಿ ಟ್ರೋಲ್​ಗೆ ಒಳಗಾಗ್ತಾರೆ. ಆದರೆ, ಯಾವುದಕ್ಕೂ ತಲೆಕೆಡಿಸಿಕೊಳ್ಳಲ್ಲ. ತನಗಿಷ್ಟ ಬಂದ ಉಡುಗೊರೆ ತೊಟ್ಟು ಖುಷಿ ಪಡುತ್ತಾರೆ. ಉರ್ಫಿ ಅಷ್ಟಾಗಿ ಫೇಮಸ್ ಆಗಿರಲಿಲ್ಲ. ಯಾವಾಗ ಬೋಲ್ಡ್ ಅವತಾರದಲ್ಲಿ ಏರ್​​ಪೋರ್ಟ್​ನಲ್ಲಿ(Airport) ಕಾಣಿಸಿಕೊಂಡರೋ ಅಂದಿನಿಂದ ಉರ್ಫಿ ಸಖತ್ ಫೇಮಸ್ ಆದರು.  ಕೆಲವರು ಉರ್ಫಿ ಜಾವೇದ್‌ರನ್ನ ಫ್ಯಾಶನ್ ಡಿಸಾಸ್ಟರ್(Fashion Disaster) ಅಂತಲೇ ಕರೆಯುತ್ತಿದ್ದಾರೆ. ಪ್ರತಿದಿನ ಚಿತ್ರ, ವಿಚಿತ್ರ ಬಟ್ಟೆಗಳನ್ನು ಧರಿಸಿ ಪಾಪಾರಾಜಿಗಳ ಕಣ್ಣಿಗೆ ಕಾಣಿಸಿಕೊಳ್ಳುತ್ತಾರೆ.

ಇದನ್ನೂ ಓದಿ: ಅಂಥಾ ಡ್ರೆಸ್ ಧರಿಸಿ ರಸ್ತೆಯಲ್ಲಿ ಯಾರು ಹೋಗ್ತಾರೆ? ಉರ್ಫಿ ಜೊತೆ ಬಾಲಿವುಡ್ ನಟಿಯ ಕ್ಯಾಟ್​ಫೈಟ್!

ಕ್ಯಾಂಡಿಲೇ ಮೈ ಮುಚ್ಚಿಕೊಂಡು ಬಂದಿದ್ದ ಉರ್ಫಿ!

ಅಜ್ಜಿ ಕೂದಲು ಹತ್ತಿ ಮಿಠಾಯಿ ನಿಮಗೆ ತಿಳಿದಿದೆಯೇ? ಇದು ಪ್ರತಿಯೊಬ್ಬ ವ್ಯಕ್ತಿಯ ಬಾಲ್ಯದ ಸಿಹಿ ನೆನಪು.ಇಂದಿಗೂ ಅನೇಕ ಮಕ್ಕಳು ಹತ್ತಿ ಕ್ಯಾಂಡಿಯನ್ನು ಆನಂದಿಸುತ್ತಾರೆ. ಇವಾಗ ಯಾಕಪ್ಪ ಈ ಅಜ್ಜಿ ಕೂದಲು ಅಂತ ಹೇಳುತ್ತಾ ಇದ್ದೀವಿ ಅಂತ ಶಾಕ್​ ಆಯಿತಾ? ಆಗಲೇಬೇಕು. ಯಾಕಂದರೆ ಈ ಕ್ಯಾಂಡಿಯಲ್ಲೇ ಮೈ ಮುಚ್ಚಿಕೊಂಡು ಬಂದಿದ್ದಾರೆ ಉರ್ಪಿ ಜಾವೇದ್​.

ಇದನ್ನೂ ಓದಿ: ಉರ್ಫಿ ಹಳೆ ಬಾಯ್​ಫ್ರೆಂಡ್​ ಫುಲ್ ಎಮೋಷನಲ್​​, ಅವ್ಳ್ ಚೆನಾಗಿದ್ರೆ ಅಷ್ಟೇ ಸಾಕಂತೆ

ಉರ್ಫಿ ಜಾವೇದ್ ಧರಿಸಿರುವ ಉಡುಗೆ. ಆ ಉಡುಪನ್ನು ಚಕ್ಕಿ ಕಾಟನ್ ಕ್ಯಾಂಡಿಯಿಂದ ತಯಾರಿಸಲಾಗಿದೆ ಉರ್ಫಿ ಜಾವೇದ್ ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಹಸಿರು ಮತ್ತು ಗುಲಾಬಿ ಬಣ್ಣದ ಹತ್ತಿ ಕ್ಯಾಂಡಿಯಿಂದ ಮಾಡಿದ ಉಡುಪನ್ನು ಧರಿಸಿದ್ದಾಳೆ. ಅಷ್ಟೇ ಅಲ್ಲ ಈ ಡ್ರೆಸ್ ನಲ್ಲಿದ್ದ ಕಾಟನ್ ಕ್ಯಾಂಡಿಯನ್ನೂ ತಿನ್ನುತ್ತಾ ಪೋಸ್​ ನೀಡಿದ್ದರು.
Published by:Vasudeva M
First published: