• Home
  • »
  • News
  • »
  • entertainment
  • »
  • Urfi Javed: ನಿನ್ನ ಹುಚ್ಚಾಟ ನಿಲ್ಲಿಸು! ಉರ್ಫಿ ಜಾವೇದ್​ಗೆ ವಾರ್ನಿಂಗ್ ಕೊಟ್ಟ ಹಿಂದೂಸ್ತಾನಿ ಭಾವು

Urfi Javed: ನಿನ್ನ ಹುಚ್ಚಾಟ ನಿಲ್ಲಿಸು! ಉರ್ಫಿ ಜಾವೇದ್​ಗೆ ವಾರ್ನಿಂಗ್ ಕೊಟ್ಟ ಹಿಂದೂಸ್ತಾನಿ ಭಾವು

ಉರ್ಫಿ ಜಾವೇದ್​, ಹಿಂದೂಸ್ತಾನಿ ಭಾವು

ಉರ್ಫಿ ಜಾವೇದ್​, ಹಿಂದೂಸ್ತಾನಿ ಭಾವು

ಉರ್ಫಿ ಜಾವೇದ್ ಟಾಪ್‌ಲೆಸ್ ವೀಡಿಯೋ ಬಗ್ಗೆ ಮಾತಾಡಿದ ಹಿಂದೂಸ್ತಾನಿ ಭಾವು, ಇದೆಲ್ಲಾ ನಮ್ಮ ಸಂಸ್ಕೃತಿ ಅಲ್ಲ ತಪ್ಪು ತಿದ್ದಿಕೊಳ್ಳದಿದ್ರೆ ಎಂದು ಎಚ್ಚರಿಕೆ ನೀಡಿದ್ದಾರೆ.

  • Share this:

ಮುಂಬೈ (ನ.13) 'ಬಿಗ್ ಬಾಸ್ ಒಟಿಟಿ'ಯಿಂದ ಫೇಮಸ್ ಆಗಿರೋ ಉರ್ಫಿ ಜಾವೇದ್ (Urfi Javed) ಸೋಶಿಯಲ್​ ಮೀಡಿಯಾದಲ್ಲಿ (Social Media) ಸಖತ್ ಸುದ್ದಿಯಲ್ಲಿದ್ದಾರೆ. ತನ್ನ ಹೊಸ ಹೊಸ ವಿಡಿಯೋ, ಫೋಟೋಗಳ (Photo) ಮೂಲಕ ಸಂಚಲನ ಮೂಡಿಸಿದ್ದಾರೆ. ಉರ್ಫಿ ತನ್ನ ಡ್ರಸ್​ ಹಾಗೂ ಲುಕ್‌ನಿಂದ ಭಾರೀ ಸುದ್ದಿಯಲ್ಲಿದ್ದಾರೆ. ಕೆಲವೊಮ್ಮೆ ಜನರು ಉರ್ಫಿಯ ಫ್ಯಾಷನ್ (Fashion) ಸೆನ್ಸ್ ಅನ್ನು ಇಷ್ಟಪಡುತ್ತಾರೆ, ಕೆಲವೊಮ್ಮೆ ಉರ್ಫಿ ಭಾರೀ ಟ್ರೋಲ್‌ಗಳಿಗೆ ಗುರಿಯಾಗುತ್ತಾರೆ.


ಉರ್ಫಿ ಜಾವೇದ್​ಗೆ ವಾರ್ನಿಂಗ್ ಕೊಟ್ಟ ಹಿಂದೂಸ್ತಾನಿ ಭಾವು


ಆದರೆ ಉರ್ಫಿ ಜಾವೇದ್​ ಮಾತ್ರ ಯಾವುದಕ್ಕೂ ಹೆದರೋದಿಲ್ಲ ಟ್ರೋಲಿಗರಿಗೂ ಸಖತ್​ ಆಗಿಯೇ ಉತ್ತರ ಕೊಡ್ತಾರೆ. ಇತ್ತೀಚಿಗಷ್ಟೆ ಉರ್ಫಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ ಎಂಬ ಸುದ್ದಿಯೂ ಬಂದಿತ್ತು. ಬಳಿಕ ದೂರು ಕೊಟ್ಟವರಿಗೂ ಉರ್ಫಿ ಜಾವೇದ್​ ದಿಟ್ಟ ಉತ್ತರ ನೀಡಿದ್ದಾಳೆ. ಇದೀಗ ಬಿಗ್ ಬಾಸ್ ಮೂಲಕ ಜನಪ್ರಿಯರಾಗಿರುವ ಹಿಂದೂಸ್ತಾನಿ ಭಾವು ಉರ್ಫಿ ಜಾವೇದ್​ಗೆ ವಾರ್ನಿಂಗ್ ಕೊಟ್ಟಿದ್ದಾರೆ. ಉರ್ಫಿಯ ಟಾಪ್‌ಲೆಸ್ ವೀಡಿಯೋ ಬಗ್ಗೆ  ಹಿಂದೂಸ್ತಾನಿ ಭಾವು ಕಿಡಿಕಾರಿದ್ದಾರೆ.


ಹಿಂದೂಸ್ತಾನಿ ಭಾವು ಉರ್ಫಿ ತಿರುಗೇಟು


ಉರ್ಫಿ ಜಾವೇದ್ ಟಾಪ್‌ಲೆಸ್ ವೀಡಿಯೋ ಬಗ್ಗೆ ಮಾತಾಡಿದ ಹಿಂದೂಸ್ತಾನಿ ಭಾವು , ಜೈ ಹಿಂದ್, ಇದು ನಾನು ದೊಡ್ಡ ಫ್ಯಾಷನ್ ಐಕಾನ್ ಎಂದು ಹೇಳುವ ಉರ್ಫಿ ಜಾವೇದ್‌ಗೆ ನೀಡ್ತಿರೋ ಮೆಸೇಜ್ ಎಂದು ಹೇಳುತ್ತಾ ವಿಡಿಯೋ ಶುರು ಮಾಡಿದ್ದಾರೆ. ಇದು ಭಾರತದ ಅಭ್ಯಾಸವಲ್ಲ, ಇದು ನಮ್ಮ ಸಂಸ್ಕೃತಿಯೂ ಅಲ್ಲ. ನೀವು ಹುಡುಗಿಯರಿಗೆ ತುಂಬಾ ತಪ್ಪು ಸಂದೇಶವನ್ನು ನೀಡುತ್ತಿದ್ದೀಯಾ, ನಿನ್ನ ತಪ್ಪು ತಿಳಿದು ತಿದ್ದಿ ನಡೆಯಬೇಕು ಎಂದು ಹಿಂದೂಸ್ತಾನಿ ಭಾವು ಹೇಳಿದ್ದಾರೆ.


ಉರ್ಫಿ ಜಾವೇದ್ ಫುಲ್ ಗರಂ


ಹಿಂದೂಸ್ತಾನಿ ಭಾವು ಅವರ ಈ ವೀಡಿಯೊ ನೋಡಿದ ಉರ್ಫಿ ಜಾವೇದ್ ಫುಲ್ ಗರಂ ಆಗಿದ್ದಾರೆ. ಹಿಂದೂಸ್ತಾನಿ ಭಾವುಗೆ ಖಡಕ್ ಉತ್ತರ ಕೊಟ್ಟಿರುವ ಉರ್ಫಿ, ನನಗೆ ಸುಧಾರಿಸುವುದು ಮಾತ್ರವಲ್ಲ, ಹಾಳುಮಾಡುವುದು ಕೂಡ ತಿಳಿದಿದೆ. ಈಗ ಬಹಿರಂಗವಾಗಿ ಬೆದರಿಕೆ ಹಾಕಿದರೆ ನಿನ್ನನ್ನು ಜೈಲಿಗೆ ಕಳುಹಿಸಬಹುದು ಗೊತ್ತಾ? ಎಂದು ಉರ್ಫಿ ತಿರುಗೇಟು ನೀಡಿದ್ದಾರೆ.


ಹಿಂದೂಸ್ತಾನಿ ಭಾವು ವಿರುದ್ಧ ಕಿಡಿಕಾರಿದ  ಉರ್ಫಿ, 'ಜೈಲಿಗೆ ಹೋಗಿ ನಿಮ್ಮ ಅರ್ಧ ವಯಸ್ಸಿನ ಮಗಳಿಗೆ ಬಹಿರಂಗವಾಗಿ ಬೆದರಿಕೆ ಹಾಕುವ ಮೂಲಕ ನೀವು ಯುವಕರಿಗೆ ಎಷ್ಟು ಒಳ್ಳೆಯ ಸಂದೇಶವನ್ನು ನೀಡಿದ್ದೀರಿ. ಹುಡುಗರೇ, ಅವರು ಹೆದರುವುದಿಲ್ಲ, ಅವರು ಕೇವಲ ಖ್ಯಾತಿಯನ್ನು ಬಯಸುತ್ತಾರೆ ಎಂದು ಉರ್ಫಿ ಟಾಂಗ್ ಕೊಟ್ಟಿದ್ದಾಳೆ.


urfi javed in trouble due to new song complaint filed in police pvn
ಉರ್ಫಿ ಜಾವೇದ್​


ಸೋಶಿಯಲ್​ ಮೀಡಿಯಾದಲ್ಲಿ ನನಗೆ ಬೆದರಿಕೆ


ಇದಲ್ಲದೆ, ಉರ್ಫಿ ಮತ್ತೊಂದು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. "ಸೋಶಿಯಲ್​ ಮೀಡಿಯಾದಲ್ಲಿ ನನಗೆ ಹಲವಾರು ಬೆದರಿಕೆಗಳು ಬರುತ್ತಿವೆ. ಎಂದು ಹೇಳಿದ್ದಾರೆ. ಅಂತಹ ಜನರಿಗೆ ನಾನು ಹೆದರುವುದಿಲ್ಲ, ಆದರೆ ನನ್ನ ಸುರಕ್ಷತೆಯ ಬಗ್ಗೆ ನನಗೆ ಕಾಳಜಿ ಇದೆ ಎಂದು ಬರೆದುಕೊಂಡಿದ್ದಾರೆ.


ಹೊಸ ವಿಡಿಯೋ ಹಂಚಿಕೊಂಡ ಉರ್ಫಿ


ಈಗ ನಟಿ ಹೊಸ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಉರ್ಫಿ ಜಾವೇದ್ ಅವರು ಒಳಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ನಟಿಯ ದೇಹದ ಮೇಲ್ಭಾಗವನ್ನು ಎರಡು ಕೈಗಳು ಮುಚ್ಚಿಕೊಂಡಿದ್ದು ಈ ಕೈಗಳಿಗೆ ನೇರಳೆ ಬಣ್ಣದ ಪೇಂಟ್ ಹಚ್ಚಲಾಗಿದೆ. ಇದು ನಟಿಯ ದೇಹದ ಮೇಲ್ಭಾಗವನ್ನು ಮುಚ್ಚಿಕೊಂಡಿದೆ.


8 ಸಾವಿರ ಜನರಿಂದ ಕಾಮೆಂಟ್


ಈ ವಿಡಿಯೋ ನೋಡಿದ ನೆಟ್ಟಿಗರು ತಲೆ ಕೆರೆದುಕೊಂಡಿದ್ದಾರೆ. ಆ ಕೈಗಳು ಯಾರದ್ದು ಉರ್ಫಿ ಎಂದು ನಟಿಯನ್ನು ಪ್ರಶ್ನಿಸುತ್ತಿದ್ದಾರೆ. ಎಲ್ಲೆಡೆ ಈ ವಿಡಿಯೋ ಈಗ ವೈರಲ್ ಆಗಿದೆ. 138 ಸಾವಿರ ಲೈಕ್ಸ್ ಗಳಿಸಿದ ಈ ವಿಡಿಯೋಗೆ ಎಂಟು ಸಾವಿರಕ್ಕೂ ಹೆಚ್ಚು ಜನರು ಕಾಮೆಂಟ್ ಮಾಡಿದ್ದಾರೆ.

Published by:ಪಾವನ ಎಚ್ ಎಸ್
First published: