• Home
  • »
  • News
  • »
  • entertainment
  • »
  • Urfi Javed: ಇದು ತಾಲೀಬಾನ್, ಅಫ್ಘಾನಿಸ್ತಾನ್ ಅಲ್ಲ! FIR ಬಗ್ಗೆ ಉರ್ಫಿ ಹೇಳಿದ್ದೇನು?

Urfi Javed: ಇದು ತಾಲೀಬಾನ್, ಅಫ್ಘಾನಿಸ್ತಾನ್ ಅಲ್ಲ! FIR ಬಗ್ಗೆ ಉರ್ಫಿ ಹೇಳಿದ್ದೇನು?

ಉರ್ಫಿ ಜಾವೇದ್

ಉರ್ಫಿ ಜಾವೇದ್

ಉರ್ಫಿ ಜಾವೇದ್ ತಮ್ಮ ವಿರುದ್ಧ ಎಫ್​​ಐಆರ್ ದಾಖಲಾಗಿರುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ತಮ್ಮ ವಿರುದ್ಧ ಕೇಸ್ ದಾಖಲಾಗಿರುವ ಬಗ್ಗೆ ನಟಿ ಏನಂದಿದ್ದಾರೆ?

  • News18 Kannada
  • Last Updated :
  • Bangalore, India
  • Share this:

ಬಿಗ್​ಬಾಸ್ (Bigg Boss) ಒಟಿಟಿ ಮೂಲಕ ಖ್ಯಾತಿ ಗಳಿಸಿದ ನಟಿ ಉರ್ಫಿ ಜಾವೇದ್  (Urfi Javed) ವಿರುದ್ಧ ಇತ್ತೀಚೆಗೆ ಎಫ್​ಐಆರ್ (FIR) ದಾಖಲಾಗಿತ್ತು. ಹಿಂದಿ ಕಿರುತೆರೆಯ ನಟಿ ಉರ್ಫಿ ಜಾವೇದ್ ಕೆಲವೇ ಧಾರಾವಾಹಿಗಳಲ್ಲಿ (Serial) ನಟಿಸಿದ್ದರೂ ನಟಿ ಅವರ ಫ್ಯಾಷನ್​​ನಿಂದಲೇ ಸುದ್ದಿಯಾಗಿದ್ದಾರೆ. ಪ್ರತಿದಿನ ಚಿತ್ರ ವಿಚಿತ್ರವಾಗಿ ಡ್ರೆಸ್ ಮಾಡಿ ಫ್ಯಾನ್ಸ್ ಜೊತೆಗೆ ಫೋಟೋ ಹಾಗೂ ವಿಡಿಯೋಗಳನ್ನು (Videos) ಶೇರ್ ಮಾಡುವ ಉರ್ಫಿ ಜಾವೇದ್ ಹೆಚ್ಚಿನ ಸಂಖ್ಯೆಯಲ್ಲಿ ಫಾಲೋವರ್ಸ್​ಗಳನ್ನು (Followers) ಹೊಂದಿದ್ದಾರೆ. ನಟಿಯ ಫಾಲೋವರ್ಸ್ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು (Fans) ಗಳಿಸಿರುವ ಉರ್ಫಿ ಸೋಷಿಯಲ್ ಮಿಡಿಯಾದಲ್ಲಿ (Social Media) ಜನಪ್ರಿಯತೆ ಗಳಿಸಿದ್ದಾರೆ.


ಎಫ್​ಐಆರ್ ದಾಖಲು


ನಟಿಯ ವಿರುದ್ಧ ಎಫ್​​ಐಆರ್ ದಾಖಲಾದ ವಿಚಾರ ಇತ್ತೀಚೆಗೆ ಸುದ್ದಿಯಾಗಿತ್ತು. ಉರ್ಫಿ ಉಡುಗೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಕೇಸ್ ದಾಖಲು ಮಾಡಲಾಗಿತ್ತು. ಆದರೆ ಇದ್ಯಾವುದಕ್ಕೂ ಉರ್ಫಿ ತಲೆ ಕೆಡಿಸಿಕೊಂಡಿರುವಂತೆ ಕಾಣುತ್ತಿಲ್ಲ. ನಟಿ ಜಾಲಿಯಾಗಿ ಡ್ರೆಸ್ ಮಾಡಿಕೊಂಡು ಈಗಲೂ ಫೋಟೋ ವಿಡಿಯೋ ಶೇರ್ ಮಾಡುತ್ತಿದ್ದಾರೆ. ಇತ್ತೀಚೆಗೆ ನಟಿ ತಮ್ಮ ವಿರುದ್ಧ ಕೇಸ್ ದಾಖಲಾಗಿರುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.




ನಾವು ತಾಲೀಬಾನ್​ನಲ್ಲಿರುವುದಲ್ಲ


ನನಗೆ ಪಬ್ಲಿಸಿಟಿ ಬೇಕು, ಎಟೆನ್ಶನ್ ಬೇಕು ಎಂದು ಮಾತನಾಡುತ್ತಿರುವ ಜನರೇ ಪಬ್ಲಿಸಿಟಿಗಾಗಿ ನನ್ನ ವಿರುದ್ಧ ಕೇಸ್ ಮಾಡುತ್ತಾರೆ. ರೇಪಿಸ್ಟ್ ವಿರುದ್ಧ ಕೂಡಾ ಇಷ್ಟು ಎಫ್​ಐಆರ್ ಆಗಿರಲ್ಲ. ಅಷ್ಟು ನನ್ನ ಮೇಲೆ ಆಗುತ್ತಿದೆ. ನಾವಿರುವುದು ತಾಲೀಬಾನ್, ಅಫ್ಘಾನಿಸ್ತಾನವಲ್ಲ. ಒಬ್ಬಳು ಹೆಣ್ಣು ಧರಿಸುವ ಬಟ್ಟೆಗಳನ್ನು ಕಂಟ್ರೋಲ್ ಮಾಡಬೇಕು ಎನ್ನುವವರ ಬಗ್ಗೆ ನನಗೇನೂ ಹೇಳೋಕೆ ಇಲ್ಲ ಎಂದಿದ್ದಾರೆ ನಟಿ ಉರ್ಫಿ ಜಾವೇದ್.


ಮರ್ಡರ್ ಕೇಸ್, ರೇಪ್ ಕೇಸ್ ಬಾಕಿ ಇರುತ್ತೆ


ಯಾರು ಬೇಕಾದರೂ ಕಂಪ್ಲೇಂಟ್ ಮಾಡಬಹುದು. ಆದರೆ ಅದಕ್ಕೆ ಸಾಕ್ಷಿ ಸಿಕ್ಕಿದಾಗಲೇ ಆ ಕೇಸ್ ಸ್ಟ್ರಾಂಗ್ ಆಗುತ್ತದೆ. ನಾನು ನನ್ನ ದೇಹದಲ್ಲಿ ಏನು ಧರಿಸಿದ್ದೇನೆ ಎನ್ನುವುದು ಇತರರಿಗೆ ಮುಖ್ಯವಲ್ಲ. ಪೊಲೀಸರಿಗೆ ನನ್ನ ಕೇಸ್ ತನಿಖೆ ಮಾಡುವುದಕ್ಕಿಂತ ಬೇಕಾದಷ್ಟು ಕೇಸ್​​ಗಳು ಅವರಲ್ಲಿ ಇರುತ್ತದೆ. ರೇಪ್ ಕೇಸ್, ಮರ್ಡರ್ ಕೇಸ್, ದೌರ್ಜನ್ಯದಂತಹ ಬಹಳಷ್ಟು ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ಬಾಕಿ ಇರುತ್ತದೆ ಎಂದಿದ್ದಾರೆ.


ನಟಿಯ ವಿಡಿಯೋಗಳು ವೈರಲ್


ಬಹಳಷ್ಟು ವಿಚಿತ್ರವಾಗಿ ಡ್ರೆಸ್ ಆಯ್ಕೆ ಮಾಡುವ ಉರ್ಫಿ ಜಾವೇದ್ ಅವರು ದೇಹ ಪ್ರದರ್ಶಿಸುವಂತೆ ಡ್ರೆಸ್ ಮಾಡುತ್ತಾರೆ. ಈ ಹಿಂದೆ ಗ್ಲಾಸ್ ಹಿಡಿದು ಕೂಡಾ ಫೋಟೋ ಶೂಟ್ ಮಾಡಿಸಿಕೊಂಡಿದ್ದರು. ಬಹಳಷ್ಟು ಸಲ ನಟಿ ನಾರ್ಮಲ್ ಡ್ರೆಸ್ ಮಾಡಿದಾಗಲೂ ಲೈಕ್ಸ್ ಬರುವುದಿಲ್ಲ. ನೆಟ್ಟಿಗರಿಗೂ ಉರ್ಫಿ ಅವರನ್ನು ಅವರ ಫ್ಯಾಷನ್ ಅವತಾರದಲ್ಲಿ ನೋಡಿಯೇ ಅಭ್ಯಾಸವಾಗಿದೆ.




ಬ್ಯಾಂಡೇಜ್ ಸುತ್ತಿಕೊಂಡ ನಟಿ


ನಟಿ ಉರ್ಫಿ ಜಾವೇದ್ ಬ್ಯಾಂಡೇಜ್ ಕೈಯಲ್ಲಿ ಹಿಡಿದು ಕಾಣಿಸಿಕೊಂಡಿದ್ದು ಕ್ಷಣಾರ್ಧದಲ್ಲಿ ಅದರಿಂದಲೇ ಬಾಡಿ ಕವರ್ ಮಾಡಿದ ದೃಶ್ಯದಲ್ಲಿ ಕಾಣಿಸಿಕೊಳ್ಳುತ್ತಾರೆ. ಅಂತೂ ಇಂತೂ ಉರ್ಫಿಯ ಓವರ್ ಕ್ರಿಯೇಟಿವಿಟಿ ನೋಡಿ ನೆಟ್ಟಿಗರಂತೂ ಸುಸ್ತಾಗಿದ್ದಾರೆ. ನಟಿಯ ವಿಡಿಯೋ 112 ಸಾವಿರ ವೀವ್ಸ್ ಗಳಿಸಿದೆ. ಎರಡು ಸಾವಿರಕ್ಕೂ ಹೆಚ್ಚು ಜನರು ವಿಡಿಯೋ ನೋಡಿ ಕಮೆಂಟ್ ಮಾಡಿದ್ದಾರೆ. ಉರ್ಫಿಗೆ ದಿನವೂ ಹಾಲೋವೀನ್, ಬ್ಯಾಂಡೇಜ್ ಡ್ರೆಸ್ ಆಗಬಹುದೆಂದು ಎಂದಾದರೂ ಯೋಚಿಸಿದ್ದಿರಾ ಎಂದು ನಟಿ ವಿಡಿಯೋಗೆ ಕ್ಯಾಪ್ಶನ್ ಕೊಟ್ಟಿದ್ದಾರೆ.


ತಲೆಕೆಡಿಸಿಕೊಳ್ಳಲ್ಲ ನಟಿ


ಉರ್ಫಿ ಎಷ್ಟೇ ಟ್ರೋಲ್ ಮಾಡಿದರೂ, ನೆಟ್ಟಿಗರು ಕಾಲೆಳೆದು ಕಮೆಂಟ್ ಮಾಡಿದರೂ, ತಮಾಷೆ ಮಾಡಿದರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಅವರ ಪ್ರತಿ ಪೋಷ್ಟ್​​​ಗೆ ನೂರಾರು ಕಮೆಂಟ್ ಬರುತ್ತವೆ. ಯಾವುದನ್ನೂ ನಟಿ ಕೇರ್ ಮಾಡುವುದಿಲ್ಲ.

Published by:Divya D
First published: