ಬಿಗ್ಬಾಸ್ ಒಟಿಟಿಯಿಂದ ಖ್ಯಾತಿ ಪಡೆದ ನಟಿ ಉರ್ಫಿ ಜಾವೇದ್ (Urfi Javed) ಇದೀಗ ಬ್ರೇಕ್ ಫಾಸ್ಟ್ ಮಾಡಲು ಟಾಪ್ ಲೆಸ್ ಆಗಿ ಉರ್ಫಿ ಪೋಸ್ ಕೊಟ್ಟಿದ್ದಾರೆ. ಬೆತ್ತಲೆಯಾಗಿ ಪೋಸ್ ಕೊಟ್ಟು ಕೈಯಲ್ಲಿ ಪ್ಲೇಟ್ ಹಾಗೂ ಒಂದು ಗ್ಲಾಸ್ ಹಿಡಿದುಕೊಂಡು ನಟಿ ಪೋಸ್ ಕೊಟ್ಟಿದ್ದಾರೆ. ನಟಿಯ (Actress) ಫೋಟೋ ಈಗ ವೈರಲ್ (Viral) ಆಗಿದೆ. ಫೋಟೋ ನೋಡಿದ ನೆಟ್ಟಿಗರು ಉರ್ಫಿ ಆಟ ಮಿತಿಮೀರಿದೆ ಎಂದು ಹೇಳಿದ್ದಾರೆ.
ಹಿಂದಿ ಬಿಗ್ಬಾಸ್ ಒಟಿಟಿಯಲ್ಲಿ ಸ್ಪರ್ಧಿಸಿದ ಉರ್ಫಿ ಜಾವೇದ್ ಅವರು ಒಂದೇ ವಾರಕ್ಕೆ ಎಲಿಮಿನೇಟ್ ಆಗಿದ್ದರು. ಆದರೆ ನಟಿಯ ಖ್ಯಾತಿ ಮಾತ್ರ ಬೇಗನೆ ಹೆಚ್ಚಾಗಿದೆ. ಈಗ ನಟಿ ಬೇಕಾಬಿಟ್ಟಿ ಫೋಟೋಸ್ ಹಾಗೂ ವಿಡಿಯೋಗಳನ್ನು ಶೂಟ್ ಮಾಡಿ ಸೋಷಿಯಲ್ ಮೀಡಿಯಾಗೆ (Social Media) ಶೇರ್ ಮಾಡುತ್ತಿದ್ದಾರೆ. ನಟಿಯ ವಿಡಿಯೋಗಳಂತೂ ಸಖತ್ ವೈರಲ್ ಆಗುತ್ತಿವೆ.
ಟಾಪ್ ಇಲ್ಲದೆ ಪ್ಲೇಟ್ ಹಿಡಿದು ಬಂದ ಉರ್ಫಿ
ನಟಿ ಟಾಪ್ ಲೆಸ್ ಆಗಿ ಬಂದು ಕೈಯಲ್ಲಿ ಒಂದು ಗ್ಲಾಸ್ ಜೂಸ್ ಹಾಗೂ ಒಂದು ಪ್ಲೇಟ್ ನಲ್ಲಿ ಬ್ರೇಕ್ ಫಾಸ್ಟ್ ಹಿಡಿದು ಬಂದು ಪೋಸ್ ಕೊಟ್ಟಿದ್ದಾಳೆ. ಟಾಪ್ ಲೆಸ್ ಆಗಿ ಬ್ಲಾಕ್ ಸ್ಕರ್ಟ್ ಧರಿಸಿದ ವಿಡಿಯೋ ಈಗ ವೈರಲ್ ಆಗಿದೆ. ಇಷ್ಟೇ ಅಲ್ಲದೆ ಉರ್ಫಿ ಜಾವೇದ್ ವಿಚಿತ್ರವಾಗಿ ಡ್ರೆಸ್ ಮಾಡಿದ್ದಾರೆ.
View this post on Instagram
ಉರ್ಫಿ ಫೋಟೋ ನೋಡಿದ ನೆಟ್ಟಿಗರು, ನಿನ್ನ ಫ್ಯಾಷಲ್ ಮಿತಿ ಮೀರಿದೆ ಎಂದಿದ್ದಾರೆ. ಬಟ್ಟೆ ಹಾಕದೆ ಇದೆಂಥಾ ಫ್ಯಾಷನ್ ಮಾಡ್ತಿಯಮ್ಮ ನೀನು ಎಂದು ನೆಟ್ಟಿಗರು ಕಾಲೆಳೆದಿದ್ದಾರೆ. ಟ್ರೋಲ್ ಮಾಡಿ ಕೇಳಿದರೆ ಫ್ಯಾಷನ್ ಡಿಸೈನಿಂಗ್ ಎನ್ನುತ್ತಿ. ಆದರೆ ಡ್ರೆಸ್ಸೇ ಇಲ್ಲದೆ ಎಂಥಾ ಫ್ಯಾಷನ್ ಮಾಡ್ತೀಯಾ ಎಂದು ಕಾಮೆಂಟ್ ಮಾಡಿದ್ದಾರೆ. ನಟಿಯ ಈ ವಿಡಿಯೋ ಈಗ ವೈರಲ್ ಆಗಿದ್ದು, ಉರ್ಫಿ ಹುಚ್ಚುತನ ನೋಡೋಕಾಗ್ತಿಲ್ಲ ಎಂದು ಅನೇಕರು ಕಾಮೆಂಟ್ ಮಾಡುತ್ತಿದ್ದಾರೆ.
ಟ್ರೋಲ್ಗೆ ಡೋಂಟ್ ಕೇರ್!
ಉರ್ಫಿ ಜಾವೇದ್ ಟ್ರೋಲ್ ಬಗ್ಗೆ ತಲೆ ಕೆಡಿಸಿಕೊಳದ್ಳುವುದಿಲ್ಲ. ಬಹಳಷ್ಟು ವಿಡಿಯೋ ಹಾಗೂ ಬೋಲ್ಡ್ ಫೋಟೋಸ್ ಶೇರ್ ಮಾಡುವ ಉರ್ಫಿ ಜಾವೇದ್ ಸಖತ್ ಹಾಟ್ ಆಗಿ ಪೋಸ್ ಕೊಡುತ್ತಾರೆ. ಅದೇ ರೀತಿ ನಟಿಯ ಲುಕ್ ನೋಡಿದ ನೆಟ್ಟಿಗರು ಅದನ್ನು ಶೇರ್ ಮಾಡಿ, ಸ್ಟೇಟಸ್ಗಳಲ್ಲಿ ಹಾಕುತ್ತಾರೆ. ಅಂತೂ ಇದೇ ರೀತಿ ಉರ್ಫಿಯ ಪಾಪ್ಯುಲಾರಿಟಿ ಹೆಚ್ಚುತ್ತಿದೆ.
ಸದ್ಯ ಉರ್ಫಿಗೆ 3 ಮಿಲಿಯನ್ ಫಾಲೋವರ್ಸ್
ಉರ್ಫಿ ಜಾವೇದ್ಗೆ ಸದ್ಯ 3.9 ಮಿಲಿಯನ್ ಫಾಲೋವರ್ಸ್ ಇದ್ದಾರೆ. ನಟಿ 380 ಜನರನ್ನು ಫಾಲೋ ಮಾಡುತ್ತಿದ್ದು 2000ಕ್ಕೂ ಹೆಚ್ಚು ಪೋಸ್ಟ್ಗಳನ್ನು ಇದುವರೆಗೆ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಪ್ರತಿದಿನ ಫಾಲೋವರ್ಸ್ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಲೇ ಹೋಗುತ್ತಿದ್ದಾರೆ.
ಇದನ್ನೂ ಓದಿ: Hostel Hudugaru Bekagiddare: ಹಾಸ್ಟೆಲ್ ಹುಡುಗರ ಜೊತೆ ಸೇರಿಕೊಂಡ ಶೆಟ್ರು! ರಿಷಬ್ ಜೊತೆ ಇವ್ರೂ ಬಂದ್ರು ನೋಡಿ
ಕೆಲಸ ಇಲ್ವಾ?
ಉರ್ಫಿಗೆ ಯಾವುದೇ ಕೆಲಸ ಇಲ್ವಾ ಎನ್ನುವುದು ಬಹಳಷ್ಟು ಜನರ ಡೌಟ್. ಕಾರಣ ನಟಿ ಫುಲ್ ಟೈಂ ಡ್ರೆಸ್ ಮಾಡಿಕೊಂಡು ಫೋಟೋ ವಿಡಿಯೋ ಶೇರ್ ಮಾಡುತ್ತಲೇ ಇರುತ್ತಾರೆ. ಆದರೆ ಯಾವುದೇ ಸೀರಿಯಲ್, ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಆದರೆ ಕೆಲವೊಂದು ಜಾಹೀರಾತುಗಳ ಮೂಲಕ ಸ್ವಲ್ಪಮಟ್ಟಿಗೆ ಗಳಿಸುತ್ತಾರೆ ಉರ್ಫಿ ಜಾವೇದ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ