• Home
 • »
 • News
 • »
 • entertainment
 • »
 • Urfi Javed: ಜಡೆಯಲ್ಲೇ ಮೈ ಮುಚ್ಚಿಕೊಂಡ ಉರ್ಫಿ ಜಾವೇದ್​; ಏನಮ್ಮಾ ನಿನ್ನ ಅವತಾರ ಅಂತಿದ್ದಾರೆ ನೆಟ್ಟಿಗರು?

Urfi Javed: ಜಡೆಯಲ್ಲೇ ಮೈ ಮುಚ್ಚಿಕೊಂಡ ಉರ್ಫಿ ಜಾವೇದ್​; ಏನಮ್ಮಾ ನಿನ್ನ ಅವತಾರ ಅಂತಿದ್ದಾರೆ ನೆಟ್ಟಿಗರು?

ಉರ್ಫಿ ಜಾವೇದ್

ಉರ್ಫಿ ಜಾವೇದ್

ನಟಿ ಉರ್ಫಿ ಜಾವೇದ್​ ಜಡೆಯಲ್ಲಿ ತಮ್ಮ ಮೈ ಮುಚ್ಚಿಕೊಂಡಿದ್ದಾರೆ. ಅರೆ ಬರೆ ಬಟ್ಟೆ ತೊಟ್ಟು ವಿಡಿಯೋ ಮಾಡುತ್ತಿದ್ದ ಉರ್ಫಿ ಈ ಬಾರಿ ಬಟ್ಟೆಯನ್ನೇ ಹಾಕದೆ ಜಡೆಯಲ್ಲಿ ಮೈ ಮುಚ್ಚಿಕೊಂಡು ಜನರ ಮುಂದೆ ಬಂದು ನಿಂತಿದ್ದಾರೆ.

 • News18 Kannada
 • 4-MIN READ
 • Last Updated :
 • Karnataka, India
 • Share this:

ಬಿಗ್ ಬಾಸ್ ಒಟಿಟಿಯಿಂದ ಫೇಮಸ್ ಆಗಿರೋ ಉರ್ಫಿ ಜಾವೇದ್ (Urfi Javed) ಸೋಶಿಯಲ್​ ಮೀಡಿಯಾದಲ್ಲಿ (Social Media) ಸಖತ್ ಸುದ್ದಿಯಲ್ಲಿದ್ದಾರೆ. ತನ್ನ ಹೊಸ ಹೊಸ ವಿಡಿಯೋ, ಫೋಟೋಗಳ (Photo) ಮೂಲಕ ಸಂಚಲನ ಮೂಡಿಸಿದ್ದಾರೆ. ಉರ್ಫಿ ತನ್ನ ಡ್ರಸ್​ ಹಾಗೂ ಲುಕ್‌ನಿಂದ ಭಾರೀ ಸುದ್ದಿಯಲ್ಲಿದ್ದಾರೆ. ಕೆಲವೊಮ್ಮೆ ಜನರು ಉರ್ಫಿಯ ಫ್ಯಾಷನ್ (Fashion) ಸೆನ್ಸ್  ಇಷ್ಟಪಡುತ್ತಾರೆ. ಇನ್ನೂ ಕೆಲವೊಮ್ಮೆ ಉರ್ಫಿ ಭಾರೀ ಟ್ರೋಲ್‌ಗಳಿಗೆ ಗುರಿಯಾಗುತ್ತಾರೆ. ಈ ಬಾರಿ ಕೂಡ ವಿಚಿತ್ರ ಡ್ರೆಸ್ ಧರಿಸಿ ಜನರ ಮುಂದೆ ಬಂದಿದ್ದಾರೆ.


ಉರ್ಫಿ ಜಾವೇದ್ ಹೊಸ ಅವತಾರ


ಉರ್ಫಿ ಜಾವೇದ್ ಹೊಸ ಪೋಸ್ಟ್ ಒಂದನ್ನು ಶೇರ್ ಮಾಡುವ ಮೂಲಕ ನೆಟ್ಟಿಗರಿಗೆ ಶಾಕ್ ನೀಡಿದ್ದಾರೆ. ಉರ್ಫಿ ಜಾವೇದ್ ಬಟ್ಟೆ ಹಾಕೋದೇ ಕಮ್ಮಿ ಈ ಬಾರಿ ಬಟ್ಟೆ ಹಾಕದೆ ಜಡೆಯನ್ನೇ ಬಟ್ಟೆಯಾಗಿಸಿ ವಿಡಿಯೋ ಮಾಡಿದ್ದಾರೆ. ಅಬ್ಬಾ ಏನ್​ ತಾಯಿ ನಿನ್ನ ಹೊಸ ಅವತಾರ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಜಡೆಯಲ್ಲೇ ಮೈ ಮುಚ್ಚಿಕೊಂಡ ಉರ್ಫಿ


ನಟಿ ಉರ್ಫಿ ಜಾವೇದ್​ ಜಡೆಯಲ್ಲಿ ತಮ್ಮ ಮೈ ಮುಚ್ಚಿಕೊಂಡಿದ್ದಾರೆ. ಅರೆ ಬರೆ ಬಟ್ಟೆ ತೊಟ್ಟು ವಿಡಿಯೋ ಮಾಡುತ್ತಿದ್ದ ಉರ್ಫಿ ಈ ಬಾರಿ ಬಟ್ಟೆಯನ್ನೇ ಹಾಕದೆ ಜಡೆಯಲ್ಲಿ ಮೈ ಮುಚ್ಚಿಕೊಂಡು ಜನರ ಮುಂದೆ ಬಂದು ನಿಂತಿದ್ದಾರೆ. ಉರ್ಫಿ ಹೊಸ ರೀಲ್ಸ್ ಇದೀಗ ಸಖತ್ ವೈರಲ್ ಆಗಿದೆ​.


ಉರ್ಫಿ ವಿಡಿಯೋ ಸಖತ್ ಟ್ರೋಲ್​


ಉರ್ಫಿ ಜಾವೇದ್ ಅನೇಕ ವಿಡಿಯೋ ಹಾಗೂ ಫೋಟೋಗಳು ಸಖತ್ ಟ್ರೋಲ್ ಆಗಿದೆ. ಜಡೆಯಲ್ಲೇ ಮೈ ಮುಚ್ಚಿಕೊಂಡು ಬಂದ ಉರ್ಫಿ ಜಾವೇದ್​ ವಿಡಿಯೋ ಕೂಡ ಸಖತ್ ಟ್ರೋಲ್ ಆಗಿದ್ದು, ವಿಡಿಯೋ ನೋಡಿದ ನೆಟ್ಟಿಗರು ಬಗೆ ಬಗೆ ಕಮೆಂಟ್ ಮಾಡ್ತಿದ್ದಾರೆ. ಏನ್ ತಾಯಿ ನಿನ್ನ ಅವತಾರ ಅಂತಿದ್ದಾರೆ. ಮೊದಲು ಬಟ್ಟಿ ಧರಿಸೋದು ಕಲಿ ಅಂತಿದ್ದಾರೆ. ಇನ್ನು ಕೆಲವರು ಉರ್ಫಿ  ಜಾವೇದ್​ ಬೋಲ್ಡ್​ ಅವಾತರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವೈರಲ್ ಆಗಿದೆ ಉರ್ಫಿಯ ಟ್ವೀಟ್


ಇತ್ತೀಚೆಗಷ್ಟೇ ಉರ್ಫಿ ಜಾವೇದ್ ವಿರುದ್ದ ಬಿಜೆಪಿ ನಾಯಕಿ ದೂರು ದಾಖಲಿಸಿದ್ದರು. ಇದರ ನಂತರ ಉರ್ಫಿಯನ್ನು 2 ಗಂಟೆಗಳ ಕಾಲ ವಿಚಾರಣೆ ಕೂಡಾ ಮಾಡಲಾಗಿತ್ತು. ಇದಕ್ಕೆ ಉತ್ತರಿಸಿದ ಉರ್ಫಿ ಬಿಜೆಪಿ ನಾಯಕಿ ಆರೋಪ ಮಾಡೋ ಮೊದಲು ಪ್ರಾಚೀನ ಹಿಂದೂ ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳಬೇಕು ಎಂದು ಉತ್ತರ ನೀಡಿದ್ದಾರೆ.ಹಿಂದೂಗಳು ಉದಾರವಾದಿಗಳು, ವಿದ್ಯಾವಂತರು, ಮಹಿಳೆಯರಿಗೆ ಬಟ್ಟೆಗಳನ್ನು ಆಯ್ಕೆ ಮಾಡಲು ಸ್ವತಂತ್ರ ನೀಡಿದ್ದರು ಅಂತ ಹೇಳಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಾಚೀನ ಶಿಲೆಯ ಫೋಟೋ ಹಂಚಿಕೊಂಡಿದ್ದರು.
ನನ್ನನ್ನು ಟೀಕಿಸುವ ಮೊದಲು ಭಾರತೀಯ ಸಂಸ್ಕೃತಿಯ ಬಗ್ಗೆ ನೀವೂ ಕಲಿಯಿರಿ ಎಂದು ಹೇಳಿದ್ದರು. ಏನೇ ಆದ್ರೂ ಉರ್ಫಿ ಜಾವೇದ್ ತಮ್ಮ ಡ್ರೆಸ್ಸಿಂಗ್ ಸ್ಟೈಲ್ ಬದಲಾಯಿಸೋ ಯಾವ ಸೂಚನೆಯೂ ಕಾಣಿಸುತ್ತಿಲ್ಲ.

Published by:ಪಾವನ ಎಚ್ ಎಸ್
First published: