Urfi Javed: ಮತ್ತೆ ವಿಚಿತ್ರ ಡ್ರೆಸ್​ನಲ್ಲಿ ಕಾಣಿಸಿಕೊಂಡ ಉರ್ಫಿ, ಏನಪ್ಪಾ ಇವ್ಳ ಅವತಾರ ಎಂದ ನೆಟ್ಟಿಗರು

ಹಿಂದಿಯ ಬಿಗ್ ಬಾಸ್ OTT (Big boss) ಖ್ಯಾತಿಯ ಉರ್ಫಿ ಜಾವೇದ್ (Urfi Javed) ತನ್ನ ವಿಚಿತ್ರ ಫ್ಯಾಷನ್ (fashion) ಆಯ್ಕೆಗಳಿಗೆ ಹೆಸರುವಾಸಿಯಾಗಿದ್ದಾರೆ. ಯಾವಾಗಲೂ ಏನಾದರೂ ವಿಭಿನ್ನ ಹಾಗೂ ವಿಚಿತ್ರವಾಗಿ ಬಟ್ಟೆ ಹಾಕುವ ಮೂಲಕ ಸುದ್ದಿಯಲ್ಲಿರುತ್ತಾರೆ.

ಉರ್ಫಿ ಜಾವೇದ್​

ಉರ್ಫಿ ಜಾವೇದ್​

  • Share this:
ಹಿಂದಿಯ ಬಿಗ್ ಬಾಸ್ OTT (Big boss) ಖ್ಯಾತಿಯ ಉರ್ಫಿ ಜಾವೇದ್ (Urfi Javed) ತನ್ನ ವಿಚಿತ್ರ ಫ್ಯಾಷನ್ (fashion) ಆಯ್ಕೆಗಳಿಗೆ ಹೆಸರುವಾಸಿಯಾಗಿದ್ದಾರೆ. ಯಾವಾಗಲೂ ಏನಾದರೂ ವಿಭಿನ್ನ ಹಾಗೂ ವಿಚಿತ್ರವಾಗಿ ಬಟ್ಟೆ ಹಾಕುವ ಮೂಲಕ ಸುದ್ದಿಯಲ್ಲಿರುತ್ತಾರೆ. ಜೊತೆಗೆ ಉರ್ಫಿ ತನ್ನ ಹಾಟ್‌ನೆಸ್‌ನಿಂದ ನೆಟ್ಟಿಗರ ಗಮನ ಸೆಳೆಯುತ್ತಿರುತ್ತಾರೆ. ಅದೇನೇ ಮಾಡಿದ್ರೂ ನೆಟ್ಟಿಗರು ಇವರನ್ನು ಬಿಡುವ ಲಕ್ಷಣಗಳಿಲ್ಲ. ಒಂದೆಲ್ಲಾ ಒಂದು ವಿಚಾರಕ್ಕೆ ಟ್ರೋಲ್ ಮಾಡುತ್ತಾರೆ. ಇದರ ನಡುವೆ ಕೆಲ ದಿಗಳ ಹಿಂದೆ ರಣವೀರ್ ಸಿಂಗ್ (Ranveer Singh) ಅವರ ಬೆತ್ತಲೆ ಫೋಟೋಗೆ ಕಾಮೆಂಟ್​ ಮಾಡಿದ್ದ ಉರ್ಫಿ, ರಣವೀರ್ ಓಕೆ ಎಂದರೆ ಅವರ 2ನೇ ಹೆಂಡತಿಯಾಗಿ ಇರುವುದಾಗಿ ಹೇಳಿದ್ದರು.  ಇದೀಗ ಅವರ ಮತ್ತೊಂದು ಹೊಸ ವಿಡಿಯೋ ಇನ್ಸ್ಟಾಗ್ರಾಂನಲ್ಲಿ ಬಂದಿದ್ದು, ಸಖತ್ ವೈರಲ್ ಆಗುತ್ತಿದೆ.

ಪರದೆಯಿಂದ ಮೈ ಮುಚ್ಚಿಕೊಂಡಿರುವ ಉರ್ಫಿ:

ಹೌದು, ಈ ಬಾರಿ ಉರ್ಫಿ ಅವರು, ಬಲೆ ಆಕಾರದ ಪರದೆಯ ಮೂಲಕ ಮೈ ಮುಚ್ಚಿಕೊಂಡಿದ್ದಾರೆ. ಹಳದಿ ಬಣ್ಣದ ಬಟ್ಟೆಯಿಂದ ಕಂಗೊಳಿಸಿದ್ದಾರೆ. ಅಲ್ಲದೇ ಕೈ ಅಲ್ಲಿ ಜಾಕೇಟ್​ ಒಂದನ್ನು ಹಿಡಿದುಕೊಂಡಿರುವ ಉರ್ಫಿ ಸಖತ್ ಹಾಟ್​ ಆಗಿ ಕಾಣಿಸಿಕೊಂಡಿದ್ದಾರೆ. ಉರ್ಫಿ ಅವರ ಈ ಹೊಸ ವಿಡಿಯೋವನ್ನು ಇನ್ಸ್ಟನ್ಟ್ ಬಾಲಿವುಡ್​ ಎಂಬ ಇನ್ಸ್ಟಾಗ್ರಾಂ ಪೇಜ್​ ನಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರು ಸಖತ್ ಕಾಮೆಂಟ್​ ಮಾಡುತ್ತಿದ್ದಾರೆ. ಅಲ್ಲದೇ ಉರ್ಫಿ ಮತ್ತೊಮ್ಮೆ ಟ್ರೋಲ್​ ಆಗಿದ್ದಾರೆ.


ಹಿಗ್ಗಾ ಮುಗ್ಗಾ ಜಾಡಿಸಿದ ನೆಟ್ಟಿಗರು

ಇದೀಗ ಉರ್ಫಿ ಹೆಸರು ಹೇಳಿದರೆ ಅವರ ಬಟ್ಟೆಗಳೇ ನೆನಪಾಗುವಷ್ಟರ ಮಟ್ಟಿಗೆ ನಟಿ ಫೇಮಸ್ ಆಗಿದ್ದಾರೆ. ಇನ್ನು ಮೊನ್ನೆಯಷ್ಟೇ, ಜೇಡರ ಬಲೆ ರೀತಿ ಬಟ್ಟೆ ಹಾಕಿ ಸುದ್ದಿಯಲ್ಲಿದ್ದರು. ಉರ್ಫಿ ಜಾವೇದ್ ಅವರ ಪ್ರತಿಯೊಂದು ಲುಕ್ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಉರ್ಫಿ ಜಾವೇದ್ ಅವರ ಡ್ರೆಸ್ಸಿಂಗ್ ಶೈಲಿ ಹಾಗೂ ಕೆಲವೊಮ್ಮೆ ಅವರು ನೀಡುವ ಹೇಳಿಕೆ ಹಲವು ಬಾರಿ ಟ್ರೋಲ್ ಆಗಿದೆ. ಉರ್ಫಿ ಜಾವೇದ್ ಅವರನ್ನು ಕಾಂಟ್ರವರ್ಸಿಯಲ್ ಕ್ವೀನ್ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: Urfi Javed: ರಣವೀರ್​ ಹೀಗಿದ್ರೆ ಇಷ್ಟ ಎಂದ ಉರ್ಫಿ, ಬಾಲಿವುಡ್​ ನಟನ ಬೆಂಬಲಕ್ಕೆ ನಿಂತ ಫ್ಯಾಷನ್ ಕ್ವೀನ್​

ರಣವೀರ್​ ಬೆಂಬಲಕ್ಕೆ ನಿಂತ ಉರ್ಫಿ:

ಹೌದು, ಉರ್ಫಿ ಕಳೆದ ಕೆಲ ದಿನಗಳ ಹಿಂದೆ ರಣವೀರ್ ಸಿಂಗ್ ಅವರ ಬೆತ್ತಲೆ ಫೋಟೋಶೂಟ್​ ಬಗ್ಗೆ ಮಾತನಾಡುವಾಗ ಅವರು ಒಪ್ಪಿಗೆ ನೀಡುವುದಾದರೆ ನಾನು ಅವರ 2ನೇ ಹೆಂಡತಿ ಆಗಲು ಸಿದ್ಧ ಎಂದು ಹೇಳಿದ್ದರು. ಇದಾದ ಬಳಿಕ ರಣವೀರ್​ ಸಿಂಗ್​ ವಿರುದ್ಧ ಎಫ್ಐಆರ್​ ದಾಖಲಾಗಿದೆ. ಈ ಕುರಿತು ಮಾತನಾಡಿರುವ ಉರ್ಫಿ, ‘ರಣವೀರ್ ವಿರುದ್ಧ ಎಫ್‌ಐಆರ್? ಯಾವುದಕ್ಕಾಗಿ? ಅವರ ಫೋಟೋಗಳ ಬಗ್ಗೆ ನನಗೆ ಯಾವುದೇ ಅಭ್ಯಂತರವಿಲ್ಲ. ಅವರು ತುಂಬಾ ಹಾಟ್ ಮತ್ತು ಸೆಕ್ಸಿಯಾಗಿ ಕಾಣುತ್ತಿದ್ದಾರೆ. ಇಂದಿನ ಕಾಲದಲ್ಲಿ ಯಾರಾದರೂ ಇಂತಹ ಚಿತ್ರೀಕರಣವನ್ನು ಮಾಡಲು ಸಾಧ್ಯವಾದರೆ, ಅದು ರಣವೀರ್ ಸಿಂಗ್​ ಮಾತ್ರ ಸಾಧ್ಯ. ಹೇಗಿದ್ದರೂ ಅವರು ಟ್ರೆಂಡ್‌ಸೆಟರ್, ಅಲ್ಲವೇ? ಇವರ ಫೋಟೋಗಳು ಯಾರ ಭಾವನೆಗಳಿಗೂ ಧಕ್ಕೆಯಾಗಿಲ್ಲ‘ ಎಂದು ಹೇಳುವ ಮೂಲಕ ಉರ್ಫಿ ರಣವೀರ್ ಬೆಂಬಲಕ್ಕೆ ನಿಂತಿದ್ದಾರೆ.

ಇದನ್ನೂ ಓದಿ: Vikrant Rona: ಮೊದಲ ದಿನವೇ ಕೆಜಿಎಫ್ 2 ದಾಖಲೆ ಮುರಿದ ವಿಕ್ರಾಂತ್ ರೋಣ

ಉರ್ಫಿ  ಜಾವೇದ್​,  “ನಾನು ರಣವೀರ್ ಅನ್ನು ಪ್ರೀತಿಸುತ್ತೇನೆ. ಅವರು ಎರಡನೇ ಮದುವೆಯಾಗುವುದಾದರೆ, ಅವರು ಆಗುವುದಿಲ್ಲ, ದೀಪಿಕಾ ಇರುವಾಗ ಇದು ಅಸಾಧ್ಯ, ಆದರೆ ನಾನು ಅವರಿಗಾಗಿ ಇದ್ದೇನೆ. ರಣವೀರ್ ಅವರ ಎರಡನೇ ಹೆಂಡತಿಯಾಗಲು ಸಿದ್ದ ಎಂದಿದ್ದಾರೆ. ರಣವೀರ್ ಎಂದರೆ ಬಹಳ ಇಷ್ಟ ಎಂಬುದನ್ನ ಎಲ್ಲರ ಮುಂದೆ ಹೇಳಿಕೊಂಡಿದ್ದಾರೆ.
Published by:shrikrishna bhat
First published: