Urfi Javed: ಪ್ಯಾಂಟ್​ ಹಾಕಿ, ಬಟನ್ ಹಾಕೋದು ಮರೆತಳು! ಏನಪ್ಪಾ ಇವ್ಳ ಟಾರ್ಚರ್​​- ಬಿಟ್ಬಿಡಮ್ಮಾ ತಾಯಿ ಎಂದ ನೆಟ್ಟಿಗರು

Uorfi Javed: ಇದೀಗ ಉರ್ಫಿ ಹೆಸರು ಹೇಳಿದರೆ ಅವರ ಬಟ್ಟೆಗಳೇ ನೆನಪಾಗುವಷ್ಟರ ಮಟ್ಟಿಗೆ ನಟಿ ಫೇಮಸ್ ಆಗಿದ್ದಾರೆ. ಇನ್ನು ಮೊನ್ನೆಯಷ್ಟೇ, ಜೇಡರ ಬಲೆ ರೀತಿ ಬಟ್ಟೆ ಹಾಕಿ ಸುದ್ದಿಯಲ್ಲಿದ್ದರು.

ಉರ್ಫಿ ಜಾವೇದ್​

ಉರ್ಫಿ ಜಾವೇದ್​

  • Share this:
ಬಿಗ್ ಬಾಸ್ OTT (Big boss) ಖ್ಯಾತಿಯ ಉರ್ಫಿ ಜಾವೇದ್ (Urfi Javed) ತನ್ನ ವಿಚಿತ್ರ ಫ್ಯಾಷನ್ (fashion) ಆಯ್ಕೆಗಳಿಗೆ ಹೆಸರುವಾಸಿಯಾಗಿದ್ದಾರೆ. ಯಾವಾಗಲೂ ಏನಾದರೂ ವಿಭಿನ್ನ ಹಾಗೂ ವಿಚಿತ್ರವಾಗಿ ಬಟ್ಟೆ ಹಾಕುವ ಮೂಲಕ ಸುದ್ದಿಯಲ್ಲಿರುತ್ತಾರೆ. ಅಲ್ಲದೇ, ಫ್ಯಾಷನ್​ಗೆ ಹೊಸ ಅರ್ಥವನ್ನು ನೀಡುತ್ತಿದ್ದಾರೆ ಎಂದರೆ ತಪ್ಪಲ್ಲ. ಹಾಗೆಯೇ ಉರ್ಫಿ ತನ್ನ ಹಾಟ್‌ನೆಸ್‌ನಿಂದ ನೆಟ್ಟಿಗರ ಗಮನ ಸೆಳೆಯುತ್ತಿರುತ್ತಾರೆ. ಅದೇನೇ ಮಾಡಿದ್ರೂ ನೆಟ್ಟಿಗರು ಇವರನ್ನು ಬಿಡುವ ಲಕ್ಷಣಗಳಿಲ್ಲ. ಒಂದೆಲ್ಲಾ ಒಂದು ವಿಚಾರಕ್ಕೆ ಟ್ರೋಲ್ ಮಾಡುತ್ತಾರೆ.

ಪ್ಯಾಂಟ್​ ಬಟನ್ ಹಾಕದ ಉರ್ಫಿ

ಈ ನಟಿಗೆ ಫ್ಯಾಶನ್ ವಿಚಾರವಾಗಿ ಪ್ರಯೋಗ ಮಾಡುವುದು ಎಂದರೆ ಬಹಳ ಇಷ್ಟ. ಅವರ ದಿಟ್ಟ ಆಯ್ಕೆಗಳಿಗಾಗಿ ಆಗಾಗ್ಗೆ ಟ್ರೋಲ್ ಆಗುತ್ತಾರೆ. ಇದೀಗ ಮತ್ತೊಮ್ಮೆ, ಉರ್ಫಿ ತನ್ನ ಡ್ರೆಸ್​ ಕಾರಣದಿಂದ ಟ್ರೋಲ್ ಆಗಿದ್ದಾರೆ.  ಹೌದು ಉರ್ಫಿ ಅದೆಷ್ಟೇ ಟ್ರೋಲ್​ ಆದರೂ ಸಹ ತಲೆ ಕೆಡಿಸಿಕೊಳ್ಳುವುದಿಲ್ಲ. ತಮಗೆ ಹೇಗೆ ಬೇಕೋ ಹಾಗೆಯೇ ಇರುತ್ತಾರೆ. ಇದೀಗ ಜೀನ್ಸ್​ ಬಟನ್ ಓಪನ್ ಆಗಿರುವ ಪ್ಯಾಂಟ್​ ಧರಿಸಿ ಸುದ್ದಿಯಲ್ಲಿದ್ದಾರೆ.

ಸದ್ಯ ಉರ್ಫಿಯ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಉರ್ಫಿ ತನ್ನ ಅರ್ಧ ದೇಹವನ್ನು ಪೇಪರ್ ಮೂಲಕ ಮುಚ್ಚಿಕೊಂಡಿದ್ದು, ಅದರಲ್ಲಿ ಪ್ಯಾಂಟ್​ ಬಟನ್​ ಹಾಕದೇ ವಿಡಿಯೋ ಹಂಚಿಕೊಂಡಿದ್ದಾರೆ. ಅಲ್ಲದೇ, ಆ ಪೇಪರ್​ ಮೇಲೆ ‘ಬಿ ಯುವರ್ ಸೆಲ್ಫ್’ ಎಂದು ಬರೆದಿದೆ. ಉರ್ಫಿ ಅವರ ಹೊಸ ವೀಡಿಯೊ ವೈರಲ್ ಆಗುತ್ತಿದ್ದು, ನೆಟಿಜನ್‌ಗಳು ಮತ್ತೊಮ್ಮೆ ಟ್ರೋಲ್ ಮಾಡುತ್ತಿದ್ದಾರೆ.

ಈ ವಿಡಿಯೋ ನೋಡಿದ ಒಬ್ಬ ಬಳಕೆದಾರರು, 'ಯು ನೀಡ್​ ಟು ಗ್ರೋ ಅಪ್ ಲೇಡಿ' (ನೀವು ಇನ್ನೂ ಬೆಳೆಯಬೇಕಿದೆ) ಎಂದು ಬರೆದರೆ, ಮತ್ತೊಬ್ಬರು 'ತೂ ಯೇ ಅಪ್ನಾ ದಿಖಾ ಕೆ ಯೇ ಸಬಿತ್ ಕರ್ನಾ ಚಾಹತಿ ಕ್ಯಾ ತು ವರ್ಲ್ಡ್ ಮೇ ಸಿರ್ಫ್ ತುಮ್​ ಹಿ ಹಾಟ್​ ಹೆ? ( ನೀನು ಜಗತ್ತಿನಲ್ಲಿ ಹಾಟ್​ ಇರುವ ಏಕೈಕ ಹುಡುಗಿ ಎಂದು ತೋರಿಸಲು ಇದನ್ನೆಲ್ಲಾ ಮಾಡುತ್ತಿದ್ದೀಯಾ? ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು ಜಾಸ್ತಿ ಹತ್ತಿರದಿಂದ ನೋಡಬೇಡಿ ಬ್ರಾ ಹಾಕಿದ್ದಾರೆ ಎಂದೆಲ್ಲಾ ಕಾಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ: ಹಿಂದೂ ಭಾವನೆಗಳಿಗೆ ಧಕ್ಕೆ ತಂದ ಸಿನಿಮಾ ಪೋಸ್ಟರ್, ಸ್ಪಷ್ಟನೆ ಕೊಟ್ಟ ನಿರ್ದೇಶಕಿ
View this post on Instagram


A post shared by Uorfi (@urf7i)


ಹಿಗ್ಗಾ ಮುಗ್ಗಾ ಜಾಡಿಸಿದ ನೆಟ್ಟಿಗರು

ಇದೀಗ ಉರ್ಫಿ ಹೆಸರು ಹೇಳಿದರೆ ಅವರ ಬಟ್ಟೆಗಳೇ ನೆನಪಾಗುವಷ್ಟರ ಮಟ್ಟಿಗೆ ನಟಿ ಫೇಮಸ್ ಆಗಿದ್ದಾರೆ. ಇನ್ನು ಮೊನ್ನೆಯಷ್ಟೇ, ಜೇಡರ ಬಲೆ ರೀತಿ ಬಟ್ಟೆ ಹಾಕಿ ಸುದ್ದಿಯಲ್ಲಿದ್ದರು. ಉರ್ಫಿ ಜಾವೇದ್ ಅವರ ಪ್ರತಿಯೊಂದು ಲುಕ್ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಉರ್ಫಿ ಜಾವೇದ್ ಅವರ ಡ್ರೆಸ್ಸಿಂಗ್ ಶೈಲಿ ಹಾಗೂ ಕೆಲವೊಮ್ಮೆ ಅವರು ನೀಡುವ ಹೇಳಿಕೆ ಹಲವು ಬಾರಿ ಟ್ರೋಲ್ ಆಗಿದೆ. ಉರ್ಫಿ ಜಾವೇದ್ ಅವರನ್ನು ಕಾಂಟ್ರವರ್ಸಿಯಲ್ ಕ್ವೀನ್ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: ಗಾರ್ಗಿ ಸಿನಿಮಾದ ರಿಲೀಸ್​ ಡೇಟ್​ ಅನೌನ್ಸ್​, ಸಾಯಿ ಪಲ್ಲವಿಗೆ ಸಾಥ್ ನೀಡಿದ ರಕ್ಷಿತ್ ಶೆಟ್ಟಿ

ಸದ್ಯ ಉರ್ಫಿ ಶೇರ್ ಮಾಡಿಕೊಂಡಿರುವ ವಿಡಿಯೋ ವೈರಲ್ ಆಗುತ್ತಿದ್ದು, ಆದರೆ ಅವರ ಈ ವಿಡಿಯೋ ಹಾಗೂ ಫೋಟೋ ಉರ್ಫಿ ಜಾವೇದ್ ಅಭಿಮಾನಿಗಳ ಎದೆಯಲ್ಲಿ ಸಂಚಲನ ಮೂಡಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಹೆಸರು ಇವರದ್ದು. .ಸ್ವತಃ ಉರ್ಫಿ ಜಾವೇದ್ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರ ಪ್ರತಿಯೊಂದು ಶೈಲಿಯನ್ನು ಅಭಿಮಾನಿಗಳು ತುಂಬಾ ಇಷ್ಟಪಡುತ್ತಾರೆ.
Published by:Sandhya M
First published: