Urfi Javed: ರಣವೀರ್​ ಏನ್​ ಬೆತ್ತಲಾಗೋದು, ಇಲ್ನೋಡಿ ಉರ್ಫಿನಾ! ಬಟ್ಟೆ ಇದ್ರೂ ತೆಗೆದು ಪೋಸ್​ ಕೊಟ್ಟಿದ್ದಾರೆ

Urfi Javed New Photo: ಮೊನ್ನೆಯಷ್ಟೇ ಅವರು ನಟ ರಣವೀರ್ ಸಿಂಗ್ ಅವರನ್ನು ಮದುವೆಯಾಗಲು ರೆಡಿ ಎಂದು ಬಹಿರಂಗವಾಗಿ ಹೇಳಿದ್ದಾರೆ.  

ಉರ್ಫಿ ಜಾವೇದ್​

ಉರ್ಫಿ ಜಾವೇದ್​

  • Share this:
ಬಿಗ್ ಬಾಸ್ OTT (Big boss) ಖ್ಯಾತಿಯ ಉರ್ಫಿ ಜಾವೇದ್ (Urfi Javed) ತನ್ನ ವಿಚಿತ್ರ ಫ್ಯಾಷನ್ (fashion) ಆಯ್ಕೆಗಳಿಗೆ ಹೆಸರುವಾಸಿಯಾಗಿದ್ದಾರೆ. ಯಾವಾಗಲೂ ಏನಾದರೂ ವಿಭಿನ್ನ ಹಾಗೂ ವಿಚಿತ್ರವಾಗಿ ಬಟ್ಟೆ ಹಾಕುವ ಮೂಲಕ ಸುದ್ದಿಯಲ್ಲಿರುತ್ತಾರೆ. ಅಲ್ಲದೇ, ಫ್ಯಾಷನ್​ಗೆ ಹೊಸ ಅರ್ಥವನ್ನು ನೀಡುತ್ತಿದ್ದಾರೆ ಎಂದರೆ ತಪ್ಪಲ್ಲ. ಹಾಗೆಯೇ ಉರ್ಫಿ ತನ್ನ ಹಾಟ್‌ನೆಸ್‌ನಿಂದ ನೆಟ್ಟಿಗರ ಗಮನ ಸೆಳೆಯುತ್ತಿರುತ್ತಾರೆ. ಈಗ ಅವರ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಸ್ಟೇಟಸ್​ ಒಂದನ್ನು ಹಾಕಿದ್ದು, ಏನಾಗಿದೆ ಇವರಿಗೆ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ.

ಉರ್ಫಿಯ ಹೊಸ ಸ್ಟೇಟಸ್​ 

ಉರ್ಫಿ ಜಾವೇದ್​ ಎಂಬ ಹೆಸರು ಯಾವಾಗಲೂ ಸುದ್ದಿಯಲ್ಲಿರುತ್ತದೆ. ಅದಕ್ಕೆ ಕಾರಣ ಅವರು ಹಾಕುವ ಬಟ್ಟೆ. ಅರ್ಧಂಬರ್ಧ ಬಟ್ಟೆ ಧರಿಸಿ ತಮ್ಮ ಮಾದಕತೆಯಿಂದ ಅಭಿಮಾನಿಗಳ ನಿದ್ದೆ ಹಾಳು ಮಾಡುವ ಈ ನಟಿ ಟ್ರೋಲ್​ ಆಗುವುದು ಸಾಮಾನ್ಯ ಎನ್ನುವಂತಾಗಿದೆ. ಹೇಳಬೇಕೆಂದರೆ ಅವರು ಟ್ರೋಲ್ ಆಗದೇ ಇದ್ದ ದಿನವಿಲ್ಲ ಎನ್ನಬಹುದು. ಚಿತ್ರ, ವಿಚಿತ್ರ ಬಟ್ಟೆ ಧರಿಸಿ ಕ್ಯಾಮೆರಾಗೆ ಪೋಸ್​ ಕೊಡುವ ಈ ಉರ್ಫಿ ಹಾಕಿರುವ ಸೋಷಿಯಲ್ ಮೀಡಿಯಾ ಸ್ಟೇಟಸ್​ ಮಾತ್ರ ವೈರಲ್ ಆಗುತ್ತಿದೆ.ಹೌದು, ಉರ್ಫಿ ತಮ್ಮ ಇನ್ಸ್ಟಾಗ್ರಾಂನಲ್ಲಿ ತಮ್ಮ ಎರಡು ಫೋಟೋ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಹಳದಿ ಬಣ್ಣದ ಬ್ರಾ ಧರಿಸಿದ್ದಾರೆ. ಆದರೆ ಒಂದು ಬದಿ ಮಾತ್ರ ಬಟ್ಟೆ ಇದ್ದು, ಇನ್ನೊಂದು ಬದಿ  ತಮ್ಮ ಎದೆಯನ್ನು ಕೈನಿಂದ ಮುಚ್ಚಿ ಹಿಡಿದ್ದಿದ್ದಾರೆ. ಉರ್ಫಿಯ ಈ ಅವತಾರ ನೆಟ್ಟಿಗರನ್ನು ಕೆರಳಿಸಿದೆ. ಅಲ್ಲದೇ, ಉರ್ಫಿ ಒಂದು ಎದೆಯನ್ನು ಯಾಕೆ ಕೈನಿಂದ ಮುಚ್ಚಿದ್ದು ಮತ್ತು ಈ ರೀತಿ ಫೋಟೋಗಳನ್ನು ಅವರು ಹಾಕುವುದಾದರೂ ಏಕೆ ಎಂಬ ಪ್ರಶ್ನೆ ನೆಟ್ಟಿಗರಲ್ಲಿ ಮೂಡಿದೆ.ಇನ್ನು ನಿನ್ನೆಯಷ್ಟೇ ಉರ್ಫಿ ಗುಲಾಬಿ ಹೂಗಳ ಮಧ್ಯೆ  ಮಲಗಿ ಸುದ್ದಿಯಾಗಿದ್ದರು.  ಗುಲಾಬಿಗಳ ರಾಶಿಯಲ್ಲಿ ಬಟ್ಟೆ ಹಾಕಿಕೊಳ್ಳದೇ ಪೋಸ್​ ಕೊಟ್ಟಿದ್ದು, ಈ ಹೂಗಳ ರಾಶಿಯಲ್ಲೇ ತನ್ನ ಮೈ ಮುಚ್ಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಹ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೇವಲ ಬಟ್ಟೆಗೆ ಮಾತ್ರವಲ್ಲದೇ, ಅವರ ಹೇಳಿಕೆಗಳ ಮೂಲಕ ಸಹ ಹಲವಾರು ಬಾರಿ ಟ್ರೋಲ್​ ಆಗಿದ್ದಾರೆ.
View this post on Instagram


A post shared by Uorfi (@urf7i)


ಇದನ್ನೂ ಓದಿ: ಸಿನಿ ಶೆಟ್ಟಿಗೆ ಈ ಹೀರೋ ಅಂದ್ರೆ ಇಷ್ಟವಂತೆ, ಮಿಸ್ ಇಂಡಿಯಾ ಮನ ಗೆದ್ದವರ್ಯಾರು?

ರಣವೀರ್ ಸಿಂಗ್ ಅವರನ್ನು ಮದುವೆಯಾಗಲು ಸಿದ್ದ ಎಂದಿದ್ದ ನಟಿ

ಮೊನ್ನೆಯಷ್ಟೇ ಅವರು ನಟ ರಣವೀರ್ ಸಿಂಗ್ ಅವರನ್ನು ಮದುವೆಯಾಗಲು ರೆಡಿ ಎಂದು ಬಹಿರಂಗವಾಗಿ ಹೇಳಿದ್ದಾರೆ.  ವೈರಲ್ ಆಗಿದ್ದ ವಿಡಿಯೋವೊಂದರಲ್ಲಿ, ಉರ್ಫಿ  ಜಾವೇದ್​,  “ನಾನು ರಣವೀರ್ ಅನ್ನು ಪ್ರೀತಿಸುತ್ತೇನೆ. ಅವರು ಎರಡನೇ ಮದುವೆಯಾಗುವುದಾದರೆ, ಅವರು ಆಗುವುದಿಲ್ಲ, ದೀಪಿಕಾ ಇರುವಾಗ ಇದು ಅಸಾಧ್ಯ, ಆದರೆ ನಾನು ಅವರಿಗಾಗಿ ಇದ್ದೇನೆ. ರಣವೀರ್ ಅವರ ಎರಡನೇ ಹೆಂಡತಿಯಾಗಲು ಸಿದ್ದ ಎಂದಿದ್ದಾರೆ. ಈ ಸಮಯದಲ್ಲಿ, ಉರ್ಫಿ ತುಂಬಾ ನಾಚಿಕೆಯಿಂದ ಹೇಳುತ್ತಿರುವಂತಿತ್ತು, ಆದರೆ ಅವರಿಗೆ ರಣವೀರ್ ಎಂದರೆ ಬಹಳ ಇಷ್ಟ ಎಂಬುದನ್ನ ಎಲ್ಲರ ಮುಂದೆ ಹೇಳಿಕೊಂಡಿದ್ದಾರೆ.ಇದನ್ನೂ ಓದಿ: ನನ್ ಜೊತೆ ಇಬ್ಬಿಬ್ರು ಜೊತೆಗಿದ್ರೂ ನಡೆಯುತ್ತೆ ಬಿಡಿ ಅಂದಿದ್ದಾರೆ ವಿಜಯ್, ಸುಳ್ಳಲ್ಲ ನೀವೇ ವಿಡಿಯೋ ನೋಡಿ!

ಇದೀಗ ಉರ್ಫಿ ಹೆಸರು ಹೇಳಿದರೆ ಅವರ ಬಟ್ಟೆಗಳೇ ನೆನಪಾಗುವಷ್ಟರ ಮಟ್ಟಿಗೆ ನಟಿ ಫೇಮಸ್ ಆಗಿದ್ದಾರೆ. ಇನ್ನು ಮೊನ್ನೆಯಷ್ಟೇ, ಜೇಡರ ಬಲೆ ರೀತಿ ಬಟ್ಟೆ ಹಾಕಿ ಸುದ್ದಿಯಲ್ಲಿದ್ದರು. ಉರ್ಫಿ ಜಾವೇದ್ ಅವರ ಪ್ರತಿಯೊಂದು ಲುಕ್ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಉರ್ಫಿ ಜಾವೇದ್ ಅವರ ಡ್ರೆಸ್ಸಿಂಗ್ ಶೈಲಿ ಹಾಗೂ ಕೆಲವೊಮ್ಮೆ ಅವರು ನೀಡುವ ಹೇಳಿಕೆ ಹಲವು ಬಾರಿ ಟ್ರೋಲ್ ಆಗಿದೆ. ಉರ್ಫಿ ಜಾವೇದ್ ಅವರನ್ನು ಕಾಂಟ್ರವರ್ಸಿಯಲ್ ಕ್ವೀನ್ ಎಂದು ಕರೆಯಲಾಗುತ್ತದೆ.
Published by:Sandhya M
First published: