• Home
  • »
  • News
  • »
  • entertainment
  • »
  • Urfi Javed: ಬೆದರಿಕೆ ಹೆದರಿದ್ರಾ ಉರ್ಫಿ ಜಾವೇದ್​!? ಬಿಚ್ಚಮ್ಮ ಇದೀಗ ಗೌರಮ್ಮ!

Urfi Javed: ಬೆದರಿಕೆ ಹೆದರಿದ್ರಾ ಉರ್ಫಿ ಜಾವೇದ್​!? ಬಿಚ್ಚಮ್ಮ ಇದೀಗ ಗೌರಮ್ಮ!

ಉರ್ಫಿ ಜಾವೇದ್​

ಉರ್ಫಿ ಜಾವೇದ್​

ಉರ್ಫಿ ಜಾವೇದ್ ಹೊಸ ಪೋಸ್ಟ್ ಒಂದನ್ನು ಶೇರ್ ಮಾಡುವ ಮೂಲಕ ನೆಟ್ಟಿಗರಿಗೆ ಶಾಕ್ ನೀಡಿದ್ದಾರೆ. ಉರ್ಫಿಯ ಹೊಸ ಡ್ರೆಸ್ ಕಂಡು ನೆಟ್ಟಿಗರು ಬಗೆ ಬಗೆಯ ಕಾಮೆಂಟ್ ಮಾಡಿದ್ದಾರೆ.

  • Share this:

ಮುಂಬೈ (ನ.13): ಬಿಗ್ ಬಾಸ್ ಒಟಿಟಿಯಿಂದ ಫೇಮಸ್ ಆಗಿರೋ ಉರ್ಫಿ ಜಾವೇದ್ (Urfi Javed) ಸೋಶಿಯಲ್​ ಮೀಡಿಯಾದಲ್ಲಿ (Social Media) ಸಖತ್ ಸುದ್ದಿಯಲ್ಲಿದ್ದಾರೆ. ತನ್ನ ಹೊಸ ಹೊಸ ವಿಡಿಯೋ, ಫೋಟೋಗಳ (Photo) ಮೂಲಕ ಸಂಚಲನ ಮೂಡಿಸಿದ್ದಾರೆ. ಉರ್ಫಿ ತನ್ನ ಡ್ರಸ್​ ಹಾಗೂ ಲುಕ್‌ನಿಂದ ಭಾರೀ ಸುದ್ದಿಯಲ್ಲಿದ್ದಾರೆ. ಕೆಲವೊಮ್ಮೆ ಜನರು ಉರ್ಫಿಯ ಫ್ಯಾಷನ್ (Fashion) ಸೆನ್ಸ್ ಅನ್ನು ಇಷ್ಟಪಡುತ್ತಾರೆ, ಕೆಲವೊಮ್ಮೆ ಉರ್ಫಿ ಭಾರೀ ಟ್ರೋಲ್‌ಗಳಿಗೆ ಗುರಿಯಾಗುತ್ತಾರೆ.


ಹೊಸ ಅವತಾರದಲ್ಲಿ ಉರ್ಫಿ ಜಾವೇದ್​


ಉರ್ಫಿ ಜಾವೇದ್ ಹೊಸ ಪೋಸ್ಟ್ ಒಂದನ್ನು ಶೇರ್ ಮಾಡುವ ಮೂಲಕ ನೆಟ್ಟಿಗರಿಗೆ ಶಾಕ್ ನೀಡಿದ್ದಾರೆ. ಉರ್ಫಿ ಈ ಬಾರಿ ಯಾವುದೇ ನ್ಯೂಡ್ ಫೋಟೋ ಶೂಟ್ ಹಾಕಿಲ್ಲ, ವಧುವಿನಂತೆ ಕಂಗೊಳಿಸಿದ್ದಾಳೆ. ಆದರೆ, ಸದಾ ಬೋಲ್ಡ್ ಲುಕ್ ನಲ್ಲಿ ಕಾಣಿಸಿಕೊಳ್ಳುವ ಉರ್ಫಿಯ ಈ ಟ್ರೆಡಿಷನಲ್​ ಲುಕ್ ನೋಡಿ ನೆಟ್ಟಿಗರು​ ಶಾಕ್ ಆಗಿದ್ದಾರೆ.  Urfi ಅವರ ಪೋಸ್ಟ್‌ಗೆ ಕಾಮೆಂಟ್​ಗಳ ಸುರಿಮಳೆಯಾಗಿದೆ. ಕೆಲವರು ವ್ಯಂಗ್ಯ ಕೂಡ ಮಾಡಿದ್ದಾರೆ.


Urfi Javed gets brutally trolled for going topless while wishing Diwali
ಉರ್ಫಿ ಜಾವೇದ್


ಗುಲಾಬಿ ಬಣ್ಣದ ಡ್ರೆಸ್​ನಲ್ಲಿ ಉರ್ಫಿ


ಉರ್ಫಿ ಜಾವೇದ್ ಗುಲಾಬಿ ಬಣ್ಣದ ಡ್ರೆಸ್​ ಧರಿಸಿದ್ದಾರೆ. ಇದರೊಂದಿಗೆ ಉರ್ಫಿ ತಲೆಗೆ ದುಪ್ಪಟ್ಟ ಹಾಕಿಕೊಂಡಿದ್ದಾರೆ. ಲೂಸ್​ ಹೇರ್​ನಲ್ಲಿ ಸಖತ್​ ಆಗಿ ಕಾಣ್ತಿದ್ದಾರೆ. ಈ ಹೊಸ ನೋಟದಿಂದ ಉರ್ಫಿ ಬ್ಯುಟಿ ಹೆಚ್ಚಿದೆ. ಉರ್ಫಿಯ ಹೊಸ ಲುಕ್‌ನಿಂದ ನೆಟಿಜನ್‌ಗಳು ಆಶ್ಚರ್ಯಗೊಂಡಿದ್ದಾರೆ. ಆದರೆ ಅವರ ಅಭಿಮಾನಿಗಳು ತುಂಬಾ ಖುಷಿ ಪಟ್ಟಿದ್ದಾರೆ.

View this post on Instagram


A post shared by Uorfi (@urf7i)

ಹೊಸ ಅವತಾರಕ್ಕೆ ನೆಟ್ಟಿಗರ ಕಾಮೆಂಟ್​


ಉರ್ಫಿ ಜಾವೇದ್ ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕ  ಹೊಗಳುತ್ತಿದ್ದಾರೆ. ಇನ್ನು ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಜೊತೆಗೆ  ಉರ್ಫಿ ಜಾವೇದ್​ ಅವರು ಹಿಂದೂಸ್ತಾನಿ ಭಾವು ಬೆದರಿಕೆ ಹೆದರಿ ಹೊಸ ಅವತಾರ ತಾಳಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.


ಉರ್ಫಿಯ ಈ ಪೋಸ್ಟ್‌ಗೆ ನೆಟಿಜನ್‌ಗಳು ಕಾಮೆಂಟ್ ಮಾಡುತ್ತಿದ್ದಾರೆ. 'ಹಿಂದೂಸ್ತಾನಿ ಭಾವು ಅವರ ಪವಾಡ ನೋಡಿದೆ' ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರ, 'ನೀನು ಚೆನ್ನಾಗಿದ್ದೀಯಾ?' ಇದು ಪವಾಡಕ್ಕಿಂತ ಕಡಿಮೆ ಏನಲ್ಲ’ ಎಂದು ಬರೆದಿದ್ದಾರೆ. ಉರ್ಫಿ, ಇದು ನಿಮ್ಮ ಕ್ಯೂಟೆಸ್ಟ್ ಫೋಟೋ' ಎಂದು ಕಾಮೆಂಟ್ ಮಾಡಿದ್ದಾರೆ.


ಉರ್ಫಿ ಜಾವೇದ್​ಗೆ ವಾರ್ನಿಂಗ್ ಕೊಟ್ಟ ಹಿಂದೂಸ್ತಾನಿ ಭಾವು

 ಆದರೆ ಉರ್ಫಿ ಜಾವೇದ್​ ಮಾತ್ರ ಯಾವುದಕ್ಕೂ ಹೆದರೋದಿಲ್ಲ ಟ್ರೋಲಿಗರಿಗೂ ಸಖತ್​ ಆಗಿಯೇ ಉತ್ತರ ಕೊಡ್ತಾರೆ. ಇತ್ತೀಚಿಗಷ್ಟೆ ಉರ್ಫಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ ಎಂಬ ಸುದ್ದಿಯೂ ಬಂದಿತ್ತು. ಬಳಿಕ ದೂರು ಕೊಟ್ಟವರಿಗೂ ಉರ್ಫಿ ಜಾವೇದ್​ ದಿಟ್ಟ ಉತ್ತರ ನೀಡಿದ್ದಾಳೆ. ಇದೀಗ ಬಿಗ್ ಬಾಸ್ ಮೂಲಕ ಜನಪ್ರಿಯರಾಗಿರುವ ಹಿಂದೂಸ್ತಾನಿ ಭಾವು ಉರ್ಫಿ ಜಾವೇದ್​ಗೆ ವಾರ್ನಿಂಗ್ ಕೊಟ್ಟಿದ್ದಾರೆ. ಉರ್ಫಿಯ ಟಾಪ್‌ಲೆಸ್ ವೀಡಿಯೋ ಬಗ್ಗೆ  ಹಿಂದೂಸ್ತಾನಿ ಭಾವು ಕಿಡಿಕಾರಿದ್ದಾರೆ.


ಉರ್ಫಿ ಜಾವೇದ್ ಟಾಪ್‌ಲೆಸ್ ವೀಡಿಯೋ ಬಗ್ಗೆ ಮಾತಾಡಿದ ಹಿಂದೂಸ್ತಾನಿ ಭಾವು , ಜೈ ಹಿಂದ್, ಇದು ನಾನು ದೊಡ್ಡ ಫ್ಯಾಷನ್ ಐಕಾನ್ ಎಂದು ಹೇಳುವ ಉರ್ಫಿ ಜಾವೇದ್‌ಗೆ ನೀಡ್ತಿರೋ ಮೆಸೇಜ್ ಎಂದು ಹೇಳುತ್ತಾ ವಿಡಿಯೋ ಶುರು ಮಾಡಿದ್ದಾರೆ. ಇದು ಭಾರತದ ಅಭ್ಯಾಸವಲ್ಲ, ಇದು ನಮ್ಮ ಸಂಸ್ಕೃತಿಯೂ ಅಲ್ಲ. ನೀವು ಹುಡುಗಿಯರಿಗೆ ತುಂಬಾ ತಪ್ಪು ಸಂದೇಶವನ್ನು ನೀಡುತ್ತಿದ್ದೀಯಾ, ನಿನ್ನ ತಪ್ಪು ತಿಳಿದು ತಿದ್ದಿ ನಡೆಯಬೇಕು ಎಂದು ಹಿಂದೂಸ್ತಾನಿ ಭಾವು ಹೇಳಿದ್ದಾರೆ.


Published by:ಪಾವನ ಎಚ್ ಎಸ್
First published: