Urfi Javed: ಇವ್ಳ್​ ಅವತಾರ ನೋಡೋಕೆ ಆಗ್ತಿಲ್ಲ.. ವಿಚಿತ್ರ ಕಾಸ್ಟ್ಯೂಮ್​ ಕಂಡು ಫ್ಯಾಶನ್​ ಡಿಸಾಸ್ಟರ್​ ಅಂದ್ರು ನೆಟ್ಟಿಗರು!

ಉರ್ಫಿ ಜಾವೇದ್​ ಟ್ರೋಲ್​ಗೆ ಒಳಗಾಗೋದು ಹೊಸದೇನಲ್ಲ. ಪ್ರತಿ ಭಾರಿ ಟ್ರೋಲ್​ಗೆ ಒಳಗಾಗ್ತಾರೆ. ಆದರೆ, ಯಾವುದಕ್ಕೂ ತಲೆಕೆಡಿಸಿಕೊಳ್ಳಲ್ಲ. ತನಗಿಷ್ಟ ಬಂದ ಉಡುಗೊರೆ ತೊಟ್ಟು ಖುಷಿ ಪಡುತ್ತಾರೆ. 

ನಟಿ ಉರ್ಫಿ ಜಾವೇದ್​

ನಟಿ ಉರ್ಫಿ ಜಾವೇದ್​

  • Share this:
ಬಿಗ್ ಬಾಸ್ ಒಟಿಟಿ(Bigg Boss Ott) ಖ್ಯಾತಿಯ ಉರ್ಫಿ ಜಾವೇದ್(Urfi Javed) ಸಾಮಾಜಿಕ ಮಾಧ್ಯಮದಲ್ಲಿ ಈಗ ಹೊಸ ಸೆನ್ಸೇಷನ್(Sensation) ಸೃಷ್ಟಿಸಿದ್ದಾರೆ. ತಮ್ಮ ಮಾದಕ ನೋಟದಿಂದಲೇ ಎಲ್ಲರನ್ನೂ ಬೆರಗುಗೊಳಿಸುವ ಉರ್ಪಿ ಜಾವೇದ್, ಆಗಾಗೊಮ್ಮೆ ತಮ್ಮ ಸಾಮಾಜಿಕ ಮಾಧ್ಯಮಗಳ ವೇದಿಕೆಯಲ್ಲಿ ಹಂಚಿಕೊಳ್ಳುವ ಪೋಸ್ಟ್ ಗಳ ಮೂಲಕ ನಿರಂತವಾಗಿ ಸುದ್ದಿಯಲ್ಲಿ ಇರುತ್ತಾರೆ. ಕಿರುತೆರೆ ನಟಿ ಕಮ್ ಮಾಡೆಲ್(Small Screen Actress) ಉರ್ಫಿ ಜಾವೇದ್ ಹೆಚ್ಚಾಗಿ ಸದ್ದು ಮಾಡಿರುವುದೇ ತಮ್ಮ ಡ್ರೆಸ್‌ಗಳ ಮೂಲಕ. ಚಿತ್ರವಿಚಿತ್ರವಾದ ತರಹೇವಾರಿ ಡ್ರೆಸ್‌(Dress)ಗಳನ್ನ ತೊಡುವುದರಲ್ಲಿ ಉರ್ಫಿ ಜಾವೇದ್ ಸದಾ ಮುಂದು. ಈಗಾಗಲೇ ತಮ್ಮ ಔಟ್‌ಫಿಟ್‌(Outfit)ಗಳ ವಿಚಾರದಲ್ಲಿ ಉರ್ಫಿ ಜಾವೇದ್ ಹಲವು ಬಾರಿ ಟ್ರೋಲ್ ಆಗಿದ್ದಾರೆ. ಹಾಗ್ನೋಡಿದ್ರೆ, ಉರ್ಫಿ ಜಾವೇದ್ ಯಾವುದೇ ಡ್ರೆಸ್ ತೊಟ್ಟರೂ ಟ್ರೋಲ್(Troll) ಆಗುತ್ತಿದ್ದಾರೆ. ಟ್ರೋಲ್​ ಆಗುವ ರೀತಿಯಲ್ಲೇ ಪ್ರತಿಬಾರಿ ವಿಚಿತ್ರ ಉಡುಗೆಗಳನ್ನು ಧರಿಸಿ ಉರ್ಫಿ ಕ್ಯಾಮರಾಗೆ ಪೋಸ್​ ಕೊಡುತ್ತಾರೆ. ಕೆಲವರು ಉರ್ಫಿ ಜಾವೇದ್‌ರನ್ನ ಫ್ಯಾಶನ್ ಡಿಸಾಸ್ಟರ್(Fashion Disaster) ಅಂತಲೇ ಕರೆಯುತ್ತಿದ್ದಾರೆ. ಪ್ರತಿದಿನ ಚಿತ್ರ, ವಿಚಿತ್ರ ಬಟ್ಟೆಗಳನ್ನು ಧರಿಸಿ ಪಾಪಾರಾಜಿಗಳ ಕಣ್ಣಿಗೆ ಕಾಣಿಸಿಕೊಳ್ಳುತ್ತಾರೆ. ಈ ಬಾರಿ ಮತ್ತಷ್ಟು ವಿಚಿತ್ರವಾಗಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ. 

ಮತ್ತೆ ಟ್ರೋಲ್​ ಆದ ಉರ್ಫಿ ಜಾವೇದ್!

ಉರ್ಫಿ ಜಾವೇದ್​ ಟ್ರೋಲ್​ಗೆ ಒಳಗಾಗೋದು ಹೊಸದೇನಲ್ಲ. ಪ್ರತಿ ಭಾರಿ ಟ್ರೋಲ್​ಗೆ ಒಳಗಾಗ್ತಾರೆ. ಆದರೆ, ಯಾವುದಕ್ಕೂ ತಲೆಕೆಡಿಸಿಕೊಳ್ಳಲ್ಲ. ತನಗಿಷ್ಟ ಬಂದ ಉಡುಗೊರೆ ತೊಟ್ಟು ಖುಷಿ ಪಡುತ್ತಾರೆ. ಉರ್ಫಿ ಅಷ್ಟಾಗಿ ಫೇಮಸ್ ಆಗಿರಲಿಲ್ಲ. ಯಾವಾಗ ಬೋಲ್ಡ್ ಅವತಾರದಲ್ಲಿ ಏರ್​​ಪೋರ್ಟ್​ನಲ್ಲಿ(Airport) ಕಾಣಿಸಿಕೊಂಡರೋ ಅಂದಿನಿಂದ ಉರ್ಫಿ ಸಖತ್ ಫೇಮಸ್ ಆದರು. ಇದೀಗ ಉರ್ಫಿ ಹೆಸರು ಹೇಳಿದರೆ ಅವರ ಬಟ್ಟೆಗಳೇ ನೆನಪಾಗುವಷ್ಟರ ಮಟ್ಟಿಗೆ ನಟಿ ಫೇಮಸ್ ಆಗಿದ್ದಾರೆ. ಇದೀಗ ಪಿಂಕ್​ ಕಲರ್​ ವಿಚಿತ್ರ ಉಡುಗೊರೆಯಲ್ಲಿ ಕಾಣಿಸಿಕೊಂಡು ಟ್ರೋಲ್​ಗೆ ಒಳಗಾಗಿದ್ದಾರೆ.



ಇದನ್ನೂ ಓದಿ: ಅಯ್ಯಯ್ಯೋ.. ಹೈಹೀಲ್ಸ್ ಧರಿಸಿ ನಡೆಯೋಕೆ ಪರದಾಡಿದ ಉರ್ಫಿ​, ವಿಡಿಯೋ ಸಿಕ್ಕಾಪಟ್ಟೆ ಟ್ರೋಲ್​!

ಇದ್ಯಾವ ಸೀಮೆ ಬಟ್ಟೆ ಗುರೂ ಅಂತಿದ್ದಾರೆ ನಟ್ಟಿಗರು!

ಹಳಷ್ಟು ಬೋಲ್ಡ್ ಅವತಾರಗಳಲ್ಲಿ ಕಾಣಿಸಿಕೊಂಡಿರೋ ಉರ್ಫಿ ಜಾವೇದ್ ಪ್ರತಿಬಾರಿಯೂ ಟ್ರೋಲ್(Troll) ಆಗುತ್ತಾರೆ. ಚಿತ್ರ ವಿಚಿತ್ರ ಉಡುಗೆ, ಎಕ್ಸ್​​ಪೋಸಿಂಗ್​ (Exposing) ಸೀರೆಗಳ ಮೂಲಕ ಅವರು ಸುದ್ದಿಯಲ್ಲಿರುತ್ತಾರೆ. ಈ ಬಾರಿ ಹೆಸರೇ ಹೇಳಲಾಗದಂಥ ಉಡುಗೆ ತೊಟ್ಟು ಪೋಸ್​ ಕೊಟ್ಟಿದ್ದಾರೆ. ಇನ್ನೂ ಉರ್ಫಿ ಜಾವೇದ್​ ಕಂಡರೆ ಪಾಪರಾಜಿಳಿಗೂ ಅಚ್ಚು ಮೆಚ್ಚು. ಯಾಕೆಂದರೆ ಹೇಳಿದ ಹಾಗೇ ಉರ್ಫಿ ಜಾವೇದ್​ ಪೋಸ್​ ಕೊಡುತ್ತಾರೆ.

ಇದನ್ನೂ ಓದಿ: ಅಯ್ಯೋ.. ಇದೇನ್​ ಹಿಂಗಿದೆ ಬಟ್ಟೆ.. ಅದನ್ನೂ ಹಾಕ್ಬೇಡಿ ಹಂಗೇ ಓಡಾಡಿ ಎಂದ ನೆಟ್ಟಿಗರು!

ಹೈಹೀಲ್ಸ್ ಧರಿಸಿ ನಡೆಯೋಕೆ ಪರದಾಡಿದ ಉರ್ಫಿ
 ಲೆದರ್ ಮೆಟೀರಿಯಲ್ ಡ್ರೆಸ್ನಲ್ಲಿ ಉರ್ಫಿ ಎಂದಿನಂತೆ ಹಾಟ್ ಕಾಣಿಸಿದ್ದರೂ ಈ ಬಾರಿ ಹೀಲ್ಸ್ನಿಂದಾಗಿ ಎಡವಟ್ಟು ಮಾಡಿಕೊಂಡಿದ್ದಾರೆ. ತಮ್ಮ ಸ್ಥಿತಿಗೆ ತಾವೇ ನಕ್ಕಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು, ನನ್ನ ಮನೆಯಲ್ಲಿ ಬಿನ್ ಬ್ಯಾಗ್ ಇಲ್ಲ, ಯಾರಾದ್ರೂ ಈಕೆಯನ್ನು ಎತ್ತಿ ನನ್ನ ಮನೆಗೆ ತರುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬರು ಈಕೆ ದಿನಾ ದಿನಾ ಎಲ್ಲಿ ತಿರುಗೋಕೆ ಹೋಗ್ತಾಳೆ ಎಂದು ಪ್ರಶ್ನಿಸಿದ್ದಾರೆ. ಇವಳನ್ನು ನಾವೇ ಅರ್ಧ ಫೇಮಸ್ ಮಾಡ್ಬಿಟ್ವಿ ಎಂದಿದ್ದಾರೆ ಇನ್ನೊಬ್ಬರು. ಇನೊಬ್ಬರು ಕಮೆಂಟ್ ಮಾಡಿ, ಅರೆರೆ ಸ್ಪೈಡರ್ ವುಮನ್ ಬೀಳಲ್ಲ, ಹಾರ್ತಾಳೆ ಎಂದಿದ್ದಾರೆ.
Published by:Vasudeva M
First published: