• Home
  • »
  • News
  • »
  • entertainment
  • »
  • Urfi Javed: ನಾನೊಂದು ಬಾಂಬ್, ಎಲ್ಲಿ ಸಿಡಿಯುತ್ತೇನೆ ಗೊತ್ತಿಲ್ಲ ಎಂದ ಉರ್ಫಿ

Urfi Javed: ನಾನೊಂದು ಬಾಂಬ್, ಎಲ್ಲಿ ಸಿಡಿಯುತ್ತೇನೆ ಗೊತ್ತಿಲ್ಲ ಎಂದ ಉರ್ಫಿ

ಉರ್ಫಿ ಜಾವೇದ್

ಉರ್ಫಿ ಜಾವೇದ್

ರಿಯಾಲಿಟಿ ಶೋದ ಕಿಚ್ಚನ್ನು ಇನ್ನಷ್ಟು ಹೆಚ್ಚಿಸಲಿರುವ ಉರ್ಫಿ, ಶೋದಲ್ಲಿರುವ ಇತರ ಹುಡುಗಿಯರಿಗೆ ಹಾಗೂ ಸ್ಪರ್ಧಿಗಳಿಗೆ ಕಠಿಣ ಪೈಪೋಟಿಯನ್ನು ನೀಡುವುದು ಖಾತ್ರಿಯಾಗಿದೆ.

  • Trending Desk
  • Last Updated :
  • Bangalore, India
  • Share this:

ತಮ್ಮ ಬೋಲ್ಡ್ ಹೇಳಿಕೆಗಳು (Statement) ಹಾಗೂ ಮೈಮಾಟ ಪ್ರದರ್ಶನಗೊಳ್ಳುವ ಉಡುಗೆ ತೊಡುಗೆಗಳ ಮೂಲಕ ಮನೆಮಾತಾಗಿರುವ ಉರ್ಫಿ ಜಾವೇದ್ (Urfi Javed) ಡೇಟಿಂಗ್ ರಿಯಾಲಿಟಿ ಶೋ ಒಂದರಲ್ಲಿ ಭಾಗವಹಿಸಲಿದ್ದು, ಶೋದ ಆಕರ್ಷಣೆಯನ್ನು (Attraction) ಇನ್ನಷ್ಟು ಹೆಚ್ಚಿಸಲಿದ್ದಾರೆ ಎಂಬುದು ವರದಿಯಾಗಿದೆ. ಬಾಲಿವುಡ್‌ನ (Bollywood) ಪಟಾಕಾ ಎಂದೇ ಹೆಸರುವಾಸಿಯಾಗಿರುವ ಉರ್ಫಿ ಸ್ಪರ್ಧಿಗಳಿಗೆ ಕಠಿಣ ಸ್ಪರ್ಧೆ ಹಾಗೂ ಪೈಪೋಟಿಯನ್ನು ನೀಡಲಿದ್ದಾರೆ ಎಂಬುದು ವರದಿಯಾಗಿದೆ.


ಸ್ಟ್ರಾಂಗ್ ಹಾಗೂ ಹಾಟ್ ಸ್ಪರ್ಧಿ: ಉರ್ಫಿ


ರಿಯಾಲಿಟಿ ಶೋ ಸ್ಪ್ಲಿಟ್ಸ್‌ವಿಲ್ಲಾ X4 ಶೋದಲ್ಲಿ ಭಾಗವಹಿಸಲಿರುವ ಉರ್ಫಿ ಜಾವೇದ್ ಮುಂದಿನ ಅತಿದೊಡ್ಡ ಸುದ್ದಿಯಾಗಿ ಹೊರಹೊಮ್ಮಲಿರುವುದು ಖಚಿತವಾಗಿದೆ. ಬಿಗ್ ಬಾಸ್ ಓಟಿಟಿಯಲ್ಲಿ ತಮ್ಮ ನಟನಾ ಕೌಶಲ್ಯ ಹಾಗೂ ಕಾರ್ಯನಿರ್ವಹಣೆಯೊಂದಿಗೆ ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರರಾದ ಉರ್ಫಿ, ಸ್ಪ್ಲಿಟ್ಸ್‌ವಿಲ್ಲಾ X4 (Splitsvilla X4) ಶೋನಲ್ಲಿ ಪಾಲ್ಗೊಳ್ಳುವ ಮೂಲಕ ಸಾಮಾಜಿಕ ಮಾಧ್ಯಮ ತಾರೆ ಇನ್ನೊಮ್ಮೆ ಮನೆಮಾತಾಗುವ ನಿರ್ಧಾರ ತಾಳಿದ್ದಾರೆ. 14 ನೆ ಸೀಸನ್‌ನ ಸ್ಪರ್ಧಿಗಳಲ್ಲಿ ಒಬ್ಬರಾಗಿರುವ ಉರ್ಫಿ ಜಾವೇದ್, ಹಾಟೆಸ್ಟ್ ಹಾಗೂ ಸ್ಟ್ರಾಂಗೆಸ್ಟ್ ಸ್ಪರ್ಧಿ ಎಂದೆನಿಸಿದ್ದಾರೆ.


ತನ್ನನ್ನು ತಾನು ಬಾಂಬ್ ಎಂದು ಹೇಳಿಕೊಂಡಿರುವ ಉರ್ಫಿ


ಉರ್ಫಿ ಜಾವೇದ್ ಶೋದ ಹೊಸ ಪ್ರೋಮೋವನ್ನು ಹಂಚಿಕೊಂಡಿದ್ದು ಸ್ಪ್ಲಿಟ್ಸ್‌ವಿಲ್ಲಾದ ಲೋಕದಲ್ಲಿ ಭರ್ಜರಿಯಾದ ಸೊಗಸಾದ ಪ್ರವೇಶವನ್ನು ನಡೆಸಿದಾಗ ಉಳಿದ ಸ್ಪರ್ಧಿಗಳ ಆಶ್ಚರ್ಯ ತುಂಬಿದ ಮುಖಾರವಿಂದ ಹಾಗೂ ಅಚ್ಚರಿಯನ್ನು ನೋಡಬಹುದಾಗಿದೆ.


ಶೋಗೆ ಭರ್ಜರಿಯಾಗಿಯೇ ಎಂಟ್ರಿ ನೀಡಿದ ಉರ್ಫಿ, ನೀವು ನನ್ನನ್ನು ಇಲ್ಲಿ ನಿರೀಕ್ಷಿಸಿರಲಿಲ್ಲ ಅಲ್ಲವೇ? ಆದರೆ ನಾನು ಸ್ಪ್ಲಿಟ್ಸ್‌ವಿಲ್ಲಾದ 14 ನೇ ಸೀಸನ್‌ಗೆ ಆಗಮಿಸಿದ್ದೇನೆ. ಒಂದು ರೀತಿಯ ಪಟಾಕಾವನ್ನೇ ನಾನು ತಂದಿದ್ದು ಅದು ಏನೆಂಬುದು ಗೊತ್ತೇ? ನಾನೇ ಒಂದು ಬಾಂಬ್ ಆಗಿರುವೆ, ನಾನು ಎಲ್ಲಿ ಯಾವಾಗ ಸ್ಫೋಟಗೊಳ್ಳುತ್ತೇನೆ ಎಂಬುದು ನನಗೆ ತಿಳಿದಿಲ್ಲ ಎಂಬ ಶಾಕಿಂಗ್ ಹೇಳಿಕೆಯನ್ನು ತಮ್ಮ ಪರಿಚಯ ಮಾಡಿಕೊಳ್ಳುತ್ತಿರುವಾಗ ಉರ್ಫಿ ಹೇಳಿದ್ದಾರೆ.


ರಿಯಾಲಿಟಿ ಶೋದ ಥೀಮ್ ಏನು?


ಈ ಫ್ರೋಮೋವನ್ನು ಎಮ್‌ಟಿವಿ ಸ್ಪ್ಲಿಟ್ಸ್‌ವಿಲ್ಲಾ ಹಂಚಿಕೊಂಡಿದೆ. ರಿಯಾಲಿಟಿ ಶೋದ ಕಿಚ್ಚನ್ನು ಇನ್ನಷ್ಟು ಹೆಚ್ಚಿಸಲಿರುವ ಉರ್ಫಿ, ಶೋದಲ್ಲಿರುವ ಇತರ ಹುಡುಗಿಯರಿಗೆ ಹಾಗೂ ಸ್ಪರ್ಧಿಗಳಿಗೆ ಕಠಿಣ ಪೈಪೋಟಿಯನ್ನು ನೀಡುವುದು ಖಾತ್ರಿಯಾಗಿದೆ.


ಇದನ್ನೂ ಓದಿ: Gul Panag: ಆರೋಗ್ಯಕರ ಜೀವನದ ಸೀಕ್ರೆಟ್ ಬಿಚ್ಚಿಟ್ಟ ಬಾಲಿವುಡ್ ನಟಿ ಗುಲ್ ಪನಾಗ್!


ಶೋ ಯಾವ ಬಗೆಯ ಥೀಮ್ ಅನ್ನು ಒಳಗೊಂಡಿದೆ ಎಂಬುದನ್ನು ನೋಡುವುದಾದರೆ, ಎರಡು ದ್ವೀಪಗಳಲ್ಲಿ ವಾಸಿಸುವ 10 ಹುಡುಗಿಯರು ಹಾಗೂ 10 ಹುಡುಗರು ಬೇರೆ ಬೇರೆ ಪರೀಕ್ಷೆಗಳು ಹಾಗೂ ಸವಾಲುಗಳ ಮೂಲಕ ತಮ್ಮ ಪ್ರೀತಿಯನ್ನು ಕಂಡುಕೊಳ್ಳುತ್ತಾರೆ. ಒಂದು ಜೋಡಿ ಸಿಂಹಾಸನವನ್ನು ಪಡೆದುಕೊಳ್ಳಲಿದ್ದು ಅವರೇ ಕಾರ್ಯಕ್ರಮದ ಅಂತಿಮ ವಿಜೇತರಾಗುತ್ತಾರೆ.


ಉರ್ಫಿ ಜಾವೇದ್ ಸಾಮಾನ್ಯ ಸ್ಪರ್ಧಿಯಲ್ಲ ಏಕೆ ಗೊತ್ತೇ?


ಬಿಗ್‌ಬಾಸ್ ಓಟಿಟಿ ಸ್ಟಾರ್ ಈ ಶೋದಲ್ಲಿ ಸಾಮಾನ್ಯ ಸ್ಪರ್ಧಿಯಾಗಿ ಕಾಣಿಸಿಕೊಂಡಿಲ್ಲ ಎಂಬುದು ಇಲ್ಲಿ ಪ್ರಮುಖ ಅಂಶವಾಗಿದೆ. ಆಕೆ ಕಾಣಿಸಿಕೊಂಡಿರುವುದು ಪ್ರೀತಿಯ ಆಟವನ್ನುಇನ್ನಷ್ಟು ಕಷ್ಟಕರವಾಗಿಸಲು ಎಂಬುದು ಮೂಲಗಳಿಂದ ತಿಳಿದುಬಂದಿದೆ.
ಇನ್ನೊಂದು ಪ್ರೋಮೋದಲ್ಲಿ ಉರ್ಫಿ ಸ್ಪರ್ಧಿಗಳ ಮೇಲೆ ಕೋಪಗೊಳ್ಳುವುದನ್ನು ಕಾಣಬಹುದಾಗಿದ್ದು ನೀವು ಯಾರೊಂದಿಗೆ ಮಾತನಾಡುತ್ತಿದ್ದೀರಿ ಎಂಬುದನ್ನು ಮೊದಲು ಅರಿತುಕೊಳ್ಳಿ ಎಂದು ಸ್ಪರ್ಧಿಗಳ ಮೇಲೆ ಹರಿಹಾಯುವುದನ್ನು ಕಾಣಬಹುದು.


ನಂತರ ಶಾಂತಳಾಗುವ ಆಕೆ ಆ ಕ್ಷಣವನ್ನು ನಿರಾಳಗೊಳಿಸುವುದಕ್ಕಾಗಿ ಮೊದಲಿಗೆ ನಾನು ಹೇಳುವುದನ್ನು ಆಲಿಸಿ ಎಂದು ಮಾತು ಬದಲಾಯಿಸುವುದನ್ನು ನೋಡಬಹುದಾಗಿದೆ.


ಡೇಟಿಂಗ್ ರಿಯಾಲಿಟಿ ಶೋನಲ್ಲಿ ಉರ್ಫಿಗಿದೆಯಂತೆ ಆಸಕ್ತಿ


ಈ ಹಿಂದೆ ಉರ್ಫಿಯವರು ಡೇಟಿಂಗ್ ರಿಯಾಲಿಟಿ ಶೋ ಕುರಿತು ತೀವ್ರ ಆಸಕ್ತಿ ಹೊಂದಿದ್ದಾರೆ ಹಾಗೂ ಪಾಲ್ಗೊಳ್ಳುವ ಇರಾದೆ ಹೊಂದಿದ್ದಾರೆ ಎಂಬುದಾಗಿ ತಿಳಿಸಲಾಗಿತ್ತು. ಪ್ರಣಯ ಆಸಕ್ತರಾಗಿರುವ ನಟಿ ಉರ್ಫಿ ಈ ಕಾರ್ಯಕ್ರಮದ ಭಾಗವಾಗಿರಲು ಹೆಚ್ಚು ಉತ್ಸುಕರಾಗಿದ್ದಾರೆ ಎಂಬುದು ವರದಿಯಾಗಿದೆ. ನವೆಂಬರ್ 12 ರಿಂದ ಆರಂಭಗೊಂಡಿರುವ ಸ್ಪ್ಲಿಟ್ಸ್‌ವಿಲ್ಲಾ X4 ಪ್ರತಿ ಶನಿ ಮತ್ತು ಭಾನುವಾರ ಸಂಜೆ 7 ಗಂಟೆಗೆ ಪ್ರಾರಂಭವಾಗುತ್ತದೆ.

Published by:Divya D
First published: