• Home
  • »
  • News
  • »
  • entertainment
  • »
  • Urfi Javed: ಕ್ಯಾಸೆಟ್ ರೀಲ್​ನಲ್ಲಿ ಉರ್ಫಿ ಅವತಾರ! ನಿಮ್ಮನೆಯಲ್ಲಿದ್ಯಾ ಹಳೆ ಕ್ಯಾಸೆಟ್?

Urfi Javed: ಕ್ಯಾಸೆಟ್ ರೀಲ್​ನಲ್ಲಿ ಉರ್ಫಿ ಅವತಾರ! ನಿಮ್ಮನೆಯಲ್ಲಿದ್ಯಾ ಹಳೆ ಕ್ಯಾಸೆಟ್?

Urfi Javed: ನಿಮ್ಮನೆಯಲ್ಲಿ ಹಳೆ ಕ್ಯಾಸೆಟ್ಸ್ ಇವೆಯಾ? ಎಸೆಯೋ ಮುನ್ನ ಉರ್ಫಿ ಜಾವೇದ್ ಅವರ ಫ್ಯಾಷನ್ ಒಮ್ಮೆ ನೋಡಿ.

Urfi Javed: ನಿಮ್ಮನೆಯಲ್ಲಿ ಹಳೆ ಕ್ಯಾಸೆಟ್ಸ್ ಇವೆಯಾ? ಎಸೆಯೋ ಮುನ್ನ ಉರ್ಫಿ ಜಾವೇದ್ ಅವರ ಫ್ಯಾಷನ್ ಒಮ್ಮೆ ನೋಡಿ.

Urfi Javed: ನಿಮ್ಮನೆಯಲ್ಲಿ ಹಳೆ ಕ್ಯಾಸೆಟ್ಸ್ ಇವೆಯಾ? ಎಸೆಯೋ ಮುನ್ನ ಉರ್ಫಿ ಜಾವೇದ್ ಅವರ ಫ್ಯಾಷನ್ ಒಮ್ಮೆ ನೋಡಿ.

  • News18 Kannada
  • Last Updated :
  • Bangalore, India
  • Share this:

ನಟಿ ಉರ್ಫಿ ಜಾವೇದ್ (Urfi Javed) ಅವರು ತಮ್ಮ ಡ್ರೆಸ್​​ನಿಂದಲೇ ಫೇಮಸ್. ಕಲ್ಲು,  ಬ್ಲೇಡ್, ಗಾಜು ಎಲ್ಲವನ್ನೂ ಉರ್ಫಿ ಬಟ್ಟೆಯಾಗಿ ಬದಲಾಯಿಸುತ್ತಾರೆ. ಉರ್ಫಿಯ ಫ್ಯಾನ್ಸ್ ಸೆನ್ಸ್ ನೋಡಿ ಒಂದಷ್ಟು ಜನ ವಾವ್ ವಾವ್ ಎಂದರೆ ಇನ್ನೊಂದಷ್ಟು ಜನರು ಸುಸ್ತಾಗಿಬಿಟ್ಟಿದ್ದಾರೆ. ಉರ್ಫಿ ಅವರ ಡ್ರೆಸ್ಸಿಂಗ್ ವಿಚಾರ ಸೋಷಿಯಲ್ ಮೀಡಿಯಾದಲ್ಲಿ (Social Media) ನಿತ್ಯ ಚರ್ಚೆಯಾಗುತ್ತಲೇ ಇರುತ್ತದೆ. ಇದರಿಂದಲೇ ಉರ್ಫಿ ತಮ್ಮ ಫಾಲೋವರ್ಸ್​ಗಳ (Followers) ಸಂಖ್ಯೆಯನ್ನು ಹೆಚ್ಚಿಕೊಂಡಿದ್ದಾರೆ. ಈಗ ಉರ್ಫಿ ಇನ್ನೊಂದು ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದು ನೋ ಛಾನ್ಸ್ ಎಂದುಬಿಟ್ಟಿದ್ದಾರೆ ನೆಟ್ಟಿಗರು. ಇದೊಂದು ಬಾಕಿ ಇತ್ತು ಎಂದು ಸೋಷಿಯಲ್ ಮೀಡಿಯಾ ಬಳಕೆದಾರರು ಕಾಮೆಂಟ್  (Comment) ಮಾಡುತ್ತಿದ್ದಾರೆ.


ನಿಮ್ಮನೆಯಲ್ಲಿದೆಯಾ ಹಳೆ ಕ್ಯಾಸೆಟ್?


ನಿಮ್ಮನೆಯಲ್ಲಿ ಹಳೆಯ ಕ್ಯಾಸೆಟ್​​ಗಳಿವೆಯಾ? ಹಾಗಿದ್ದರೆ ಅವುಗಳನ್ನು ಕಸದ ರಾಶಿಗೆ ಎಸೆದುಬಿಡಬೇಡಿ. ಉರ್ಫಿ ಕೈಗೆ ಕೊಟ್ರೆ ಪಕ್ಕಾ ಬಳಸ್ತಾರೆ. ಏನಕ್ಕೆ ಎನ್ನುವ ಡೌಟ್ ನಿಮ್ಮಲ್ಲಿದ್ದರೆ ನೀವು ನಟಿಯ ಲೇಟೆಸ್ಟ್ ವಿಡಿಯೋ ನೋಡಲೇಬೇಕು. ಹೌದು ಉರ್ಫಿ ಹಳೆ ಕ್ಯಾಸೆಟ್ ರೀಲ್ಸ್​ನ್ನು ಕೂಡಾ ಬಳಸುತ್ತಾರೆ.


ಹಳೆ ಕ್ಯಾಸೆಟ್ ರೀಲ್ಸ್ ಹೀಗೂ ಬಳಸಬಹುದು


ಉರ್ಫಿ ಜಾವೇದ್ ಇತ್ತೀಚೆಗೆ ವಿಡಿಯೋ ಒಂದನ್ನು ಶೇರ್ ಮಾಡಿದ್ದು ಇದರಲ್ಲಿ ನಟಿ ಕ್ಯಾಸೆಟ್ ರೀಲ್ಸ್ ಮೈಗೆ ಸುತ್ತಿಕೊಂಡು ಹೊಸ ಡ್ರೆಸ್ ಮಾಡಿಬಿಟ್ಟಿದ್ದಾರೆ. ಹಳೆದ ಟೇಪ್ ರೆಕಾರ್ಡರ್ ಹಾಗೂ ಕ್ಯಾಸೆಟ್ ಪಕ್ಕ ಕುಳಿತ ನಟಿ ರೀಲ್ಸ್ ಎಳೆಯುತ್ತಾ ಹೋಗುತ್ತಾರೆ. ನಂತರ ತಟ್ಟನೆ ಕ್ಯಾಸೆಟ್ ರೀಲ್ಸ್​​ನಿಂದ ಡ್ರೆಸ್ ಮಾಡಿಕೊಂಡು ಕಾಣಿಸಿಕೊಳ್ತಾರೆ.

View this post on Instagram


A post shared by Uorfi (@urf7i)

ಇದನ್ನೂ ಓದಿ: Urfi Javed: ಬೆತ್ತಲೆ ಫೋಟೋ ಶೂಟ್ ಮಾಡಿದ ಉರ್ಫಿ! ಗ್ಲಾಸ್ ಹಿಡಿದಿದ್ದಕ್ಕೆ ಬಚಾವ್


Urfi Javed Exudes Sultriness in Hot Lavender Backless Mini Dress Netizens Say Hatke Hai
ಉರ್ಫಿ ಜಾವೇದ್


ಉರ್ಫಿ ಹೊಸ ಲುಕ್ ಈಗ ವೈರಲ್ ಆಗಿದೆ. ಈ ವಿಡಿಯೋ ವೈರಲ್ ಆಗಿದ್ದು ಅಭಿಮಾನಿಗಳು ಅದನ್ನು ಶೇರ್ ಮಾಡುತ್ತಿದ್ದಾರೆ. ಅಂತೂ ಉಫ್ರಿ ಕ್ಯಾಸೆಟ್ ರೀಲ್ಸ್​ನಿಂದಲೂ ಫೇಮಸ್ ಆಗಿದ್ದಾರೆ.


ಹೇಗಿದೆ ನೆಟ್ಟಿಗರ ಪ್ರತಿಕ್ರಿಯೆ


102 ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದಿರುವ ಈ ವಿಡಿಯೋಗೆ 2 ಸಾವಿರಕ್ಕೂ ಹೆಚ್ಚು ಮಂದಿ ಕಾಮೆಂಟ್ ಮಾಡಿದ್ದಾರೆ. ನೀವು ಬಿಡಿ ಮಾಸ್ಟರ್ ಪೀಸ್ ಎಂದಿದ್ದಾರೆ ನೆಟ್ಟಿಗರು. ವಿಡಿಯೋ ನೋಡಿ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಟಾಪ್​ಲೆಸ್ ಆದ ಉರ್ಫಿ


ದೀಪಾವಳಿ ಹಬ್ಬಕ್ಕೆ ಸ್ಪೆಷಲ್ ವಿಡಿಯೋ ಶೇರ್ ಮಾಡಿದ್ದ ಉರ್ಫಿ ಇದರಲ್ಲಿ ಟಾಪ್​ಲೆಸ್ ಆಗಿ ಕಾಣಿಸಿಕೊಂಡಿದ್ದರು. ಕೈಯಿಂದ ಎದೆ ಭಾಗವನ್ನು ಮುಚ್ಚಿ ಹಿಡಿದು ನಂತರ ವಿಡಿಯೋಗೆ ಪೋಸ್ ಕೊಟ್ಟಿದ್ದಾರೆ.


ಗಣೇಶ ಹಬ್ಬಕ್ಕೆ ಭಜನೆ ಹಾಡಿದ್ದ ನಟಿ


ಉರ್ಫಿ ಜಾವೇದ್ ಗಣೇಶನ ಭಜನೆ ಹಾಡುವ ಮೂಲಕ ವೈರಲ್ ಆಗಿದ್ದರು. ನಟಿ ಗಣೇಶನ ಹಾಡನ್ನು ಹಾಡಿದ್ದು ವಿಡಿಯೋವನ್ನು ಅಪ್​ಲೋಡ್ ಮಾಡಿದ್ದರು. ಸಂದರ್ಭ ಹಬ್ಬದ ಪ್ರಯುಕ್ತ ಉರ್ಫಿಯೂ ವಿಡಿಯೋ (Video) ಮಾಡಿ ಶೇರ್ ಮಾಡಿದ್ದರು.


ಮುಸ್ಲಿಂ ಯುವತಿ ಬಾಯಲ್ಲಿ ಹಿಂದೂ ಭಜನೆ


ಉರ್ಫಿ ಜಾವೇದ್ ಹಾಡಿರುವ ವಿಡಿಯೋ ವೈರಲ್ ಆಗಿದ್ದು, 42 ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದುಕೊಂಡಿತ್ತು. 1800ಕ್ಕೂ ಹೆಚ್ಚು ಮಂದಿ ಈ ವಿಡಿಯೋಗೆ ಕಮೆಂಟ್ ಮಾಡಿದ್ದರು. ಬಳಷ್ಟು ಜನರು ಅಬ್ಬಾ ಇವತ್ತಾದರೂ ಚೆನ್ನಾಗಿ ಕಾಣಿಸುತ್ತಿದ್ದೀರಿ ಎಂದು ಕಮೆಂಟ್ ಮಾಡಿದ್ದರು. ಪೂರ್ತಿ ಬಟ್ಟೆ ಧರಿಸಿದ ಕಾರಣ ನಿಮ್ಮ ಗುರುತೇ ಸಿಗಲಿಲ್ಲ ಎಂದಿದ್ದಾರೆ ಇನ್ನು ಕೆಲವರು. ಇನ್ನೂ ಕೆಲವರು ಈ ಡ್ರೆಸ್ ತುಂಬಾ ಚೆನ್ನಾಗಿದೆ ಎಂದಿದ್ದಾರೆ.

Published by:Divya D
First published: