Urfi Javed: ಉರ್ಫಿ ಜಾವೇದ್ ಹುಬ್ಬು ಮಾಯ! ನ್ಯೂ ಜನರೇಷನ್ ಕಾರ್ಟೂನ್ ಎಂದ ನೆಟ್ಟಿಗರು

ಉರ್ಫಿ ಜಾವೇದ್

ಉರ್ಫಿ ಜಾವೇದ್

ಉರ್ಫಿ ಜಾವೇದ್ ಅವರ ಹುಬ್ಬು ಮಾಯವಾಗಿದೆ. ಅವರ ಲೇಟೆಸ್ಟ್ ವಿಡಿಯೋ ನೋಡಿದ ನೆಟ್ಟಿಗರು ನಿಮ್ಮ ಐಬ್ರೋ ಏನಾಯ್ತು ಎನ್ನುತ್ತಿದ್ದಾರೆ.

  • News18 Kannada
  • 2-MIN READ
  • Last Updated :
  • Mumbai, India
  • Share this:

ನಟಿ ಉರ್ಫಿ ಜಾವೇದ್ ಅವರು ಸಿಕ್ಕಾಪಟ್ಟೆ ಫೇಮಸ್. ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಹೆಸರು ಮಾಡುತ್ತಿದ್ದಾರೆ ನಟಿ. ಅವರ ಫೋಟೋ ಹಾಗೂ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತದೆ. ತನ್ನ ಹೊಸ ಹೊಸ ವಿಡಿಯೋ, ಫೋಟೋಗಳ (Photo) ಮೂಲಕ ಸಂಚಲನ ಮೂಡಿಸುತ್ತಾರೆ ಈ ನಟಿ. ಉರ್ಫಿ ತನ್ನ ಡ್ರಸ್​ ಹಾಗೂ ಲುಕ್‌ನಿಂದ ಭಾರೀ ಸುದ್ದಿಯಲ್ಲಿದ್ದಾರೆ. ಕೆಲವೊಮ್ಮೆ ಜನರು ಉರ್ಫಿಯ ಫ್ಯಾಷನ್ (Fashion) ಸೆನ್ಸ್ ಇಷ್ಟಪಡುತ್ತಾರೆ. ಇನ್ನೂ ಕೆಲವೊಮ್ಮೆ ತನ್ನ ಫ್ಯಾಷನ್​ನಿಂದಲೇ ಉರ್ಫಿ ಭಾರೀ ಟ್ರೋಲ್‌ಗಳಿಗೆ ಗುರಿಯಾಗುತ್ತಾರೆ.


ನಟಿ ಇತ್ತೀಚೆಗೆ ಹೊಸ ಫ್ಯಾಷನ್ ಅವತಾರದಲ್ಲಿ ಕಾಣಿಸಿಕೊಂಡರು. ಆದರೆ ಈ ಸಲ ಡ್ರೆಸ್​ಗಿಂತ ಹೆಚ್ಚು ಗಮನ ಸೆಳೆದಿದ್ದು ಅವರ ಹುಬ್ಬು.


ನಟಿ ಪ್ಯಾಂಟ್ ಹಾಗೂ ಟಾಪ್ ಧರಿಸಿ ಬಂದಿದ್ದರು. ಇದಕ್ಕೆ ಮಕ್ಕಳಂತೆ ಎರಡು ಕಡೆ ಜುಟ್ಟು ಮಾಡಿ ಹೇರ್​ಸ್ಟೈಲ್ ಮಾಡಿದ್ದರು. ಈ ಮೂಲಕ ನಟಿ ಕ್ಯೂಟ್ ಆಗಿ ಕಾಣಿಸಿದ್ದಾರೆ. ಆದರೆ ಅವರ ವೈರಲ್ ವಿಡಿಯೋದಲ್ಲಿ ಗಮನ ಸೆಳೆದದ್ದು ಹುಬ್ಬು.

View this post on Instagram


A post shared by @varindertchawla

ನಟಿಯ ಕಣ್ಣಿನ ಹುಬ್ಬುಗಳು ಮಾಯವಾಗಿದೆ. ಬ್ಯೂಟಿಷಿನರ್ ಏನಾದ್ರೂ ತಪ್ಪಿ ಹುಬ್ಬು ಎಲ್ಲ ತೆಗೆದರೋ ಅಥವಾ ಉದ್ದೇಶಪೂರ್ವಕವಾಗಿ ರಿಮೂವ್ ಮಾಡಲಾಗಿದೆಯೋ ಗೊತ್ತಿಲ್ಲ. ಆದರೆ ಈ ಲುಕ್ ಮಾತ್ರ ವಿಚಿತ್ರವಾಗಿದೆ.
ವೈರಲ್ ಆಗಿದೆ ವಿಡಿಯೋ


ವಿಡಿಯೋ ವೈರಲ್ ಆಗಿದ್ದು ಆರೂವರೆ ಸಾವಿರಕ್ಕೂ ಹೆಚ್ಚು ಜನರು ಲೈಕ್ಸ್ ಕೊಟ್ಟಿದ್ದಾರೆ. ನಟಿಯ ಈ ಸ್ಪೆಷಲ್ ವಿಡಿಯೋವನ್ನು ಅವರು ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿಲ್ಲ. ಆದರೆ ಅವರು ಹೊರಗೆ ಕಾಣಿಸಿಕೊಂಡಾಗ ವಿಡಿಯೋವನ್ನು ಮಾಧ್ಯಮದವರು ಸೆರೆ ಹಿಡಿದಿದ್ದಾರೆ.
ಕಮೆಂಟ್ ಏನಿದೆ?


ಮೊದಲು ಬಟ್ಟೆ ಮಾಯವಾಗುತ್ತಿತ್ತು. ಈಗ ಹುಬ್ಬುಗಳೇ ಮಾಯವಾಗಿದೆ . ಈಗ ಕಾರ್ಟೂನ್ ಥರ ಕಾಣ್ತೀರಿ ಎಂದು ಟ್ರೋಲ್ ಮಾಡಿದ್ದಾರೆ ನೆಟ್ಟಿಗರು. ಹೊಸ ಜನರೇಷನ್​ ಮಕ್ಕಳಿಗೆ ಹೊಸ ಕಾರ್ಟೂನ್ ಎಂದಿದ್ದಾರೆ ಇನ್ನೊಬ್ಬರು. ಇವತ್ತು ಮೇಕಪ್ ಏನಾಯ್ತು? ಪ್ರಾಡಕ್ಟ್ ಖಾಲಿಯಾಗಿದಾ ಎಂದು ಪ್ರಶ್ನಿಸಿದ್ದಾರೆ ಇನ್ನೊಬ್ಬರು. ಈ ಕಾರ್ಟೂನ್​ಗೆ ಇವತ್ತು ಐಬ್ರೋ ಇಲ್ಲ ಎಂದಿದ್ದಾರೆ ಮತ್ತೊಬ್ಬರು.
ಟ್ರೋಲ್​ಗೆ ಡೋಂಟ್ ಕೇರ್!


ಉರ್ಫಿ ಜಾವೇದ್ ಟ್ರೋಲ್ ಬಗ್ಗೆ ತಲೆ ಕೆಡಿಸಿಕೊಳದ್ಳುವುದಿಲ್ಲ. ಬಹಳಷ್ಟು ವಿಡಿಯೋ ಹಾಗೂ ಬೋಲ್ಡ್ ಫೋಟೋಸ್ ಶೇರ್ ಮಾಡುವ ಉರ್ಫಿ ಜಾವೇದ್ ಸಖತ್ ಹಾಟ್ ಆಗಿ ಪೋಸ್ ಕೊಡುತ್ತಾರೆ. ಅದೇ ರೀತಿ ನಟಿಯ ಲುಕ್ ನೋಡಿದ ನೆಟ್ಟಿಗರು ಅದನ್ನು ಶೇರ್ ಮಾಡಿ, ಸ್ಟೇಟಸ್​​ಗಳಲ್ಲಿ ಹಾಕುತ್ತಾರೆ. ಅಂತೂ ಇದೇ ರೀತಿ ಉರ್ಫಿಯ ಪಾಪ್ಯುಲಾರಿಟಿ ಹೆಚ್ಚುತ್ತಿದೆ.


ಸದ್ಯ ಉರ್ಫಿಗೆ 3 ಮಿಲಿಯನ್ ಫಾಲೋವರ್ಸ್


ಉರ್ಫಿ ಜಾವೇದ್​​ಗೆ ಸದ್ಯ 3.9 ಮಿಲಿಯನ್ ಫಾಲೋವರ್ಸ್ ಇದ್ದಾರೆ. ನಟಿ 380 ಜನರನ್ನು ಫಾಲೋ ಮಾಡುತ್ತಿದ್ದು 2000ಕ್ಕೂ ಹೆಚ್ಚು ಪೋಸ್ಟ್​​ಗಳನ್ನು ಇದುವರೆಗೆ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಪ್ರತಿದಿನ ಫಾಲೋವರ್ಸ್ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಲೇ ಹೋಗುತ್ತಿದ್ದಾರೆ.


ಮಾಡೋಕೆ ಬೇರೆ ಕೆಲಸ ಇಲ್ವೇ?


ಉರ್ಫಿಗೆ ಯಾವುದೇ ಕೆಲಸ ಇಲ್ವಾ ಎನ್ನುವುದು ಬಹಳಷ್ಟು ಜನರ ಡೌಟ್. ಕಾರಣ ನಟಿ ಫುಲ್ ಟೈಂ ಡ್ರೆಸ್ ಮಾಡಿಕೊಂಡು ಫೋಟೋ ವಿಡಿಯೋ ಶೇರ್ ಮಾಡುತ್ತಲೇ ಇರುತ್ತಾರೆ. ಆದರೆ ಯಾವುದೇ ಸೀರಿಯಲ್, ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಆದರೆ ಕೆಲವೊಂದು ಜಾಹೀರಾತುಗಳ ಮೂಲಕ ಸ್ವಲ್ಪಮಟ್ಟಿಗೆ ಗಳಿಸುತ್ತಾರೆ ಉರ್ಫಿ ಜಾವೇದ್.

Published by:Divya D
First published: