Urfi Javed: ಹಳದಿ ಡ್ರೆಸ್​ಗೆ ಮ್ಯಾಚಿಂಗ್ ಹೀಲ್ಸ್! ಟ್ರೋಲ್ ಮಾಡಿದ ನಟಿಗೆ ಟಾಂಗ್ ಕೊಟ್ಟ ಉರ್ಫಿ

Urfi Javed: ಹಿಂದಿ ಬಿಗ್​ಬಾಸ್ ಒಟಿಟಿ ಖ್ಯಾತಿಯ ಉರ್ಫಿ ಜಾವೇದ್ ಮನೆಯೊಳಗೆ ಹೋಗಿ ಫಸ್ಟ್ ಎಲಿಮಿನೇಟ್ ಆದರೂ ಸಕತ್ ಫೇಮಸ್ ಆದರು. ತಮ್ಮ ಡಿಫರೆಂಟ್ ಡ್ರೆಸ್ಸಿಂಗ್​ನಿಂದ ಮುನ್ನೆಲೆಗೆ ಬಂದ ಉರ್ಫಿ ಟ್ರೋಲ್​ಗೆ ಉತ್ತರಿಸಿದ್ದಾರೆ.

ಉರ್ಫಿ ಜಾವೇದ್

ಉರ್ಫಿ ಜಾವೇದ್

  • Share this:
ಉರ್ಫಿ ಜಾವೇದ್ (Urfi Javed) ಬಹಳಷ್ಟು ವಿಭಿನ್ನ ರೀತಿಯಲ್ಲಿ ಡ್ರೆಸ್ ಮಾಡುತ್ತಾರೆ. ನಟಿಯ ಡ್ರೆಸ್ಸಿಂಗ್ ಸ್ಟೈಲ್ ಯುನಿಕ್. ಆದರೆ ಉರ್ಫಿಗೆ ಅಭಿಮಾನಿಗಳಿದ್ದಷ್ಟೇ ಟ್ರೋಲಿಗರೂ ಇದ್ದಾರೆ. ನಟಿಯ ಡ್ರೆಸ್, ಉಡುಪುಗಳಿಗಾಗಿ ಬಹಳಷ್ಟು ಜನರು ಅವರನ್ನು ಟ್ರೋಲ್ ಮಾಡುತ್ತಾರೆ. ಆದರೆ ಉರ್ಫಿ ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ಎಲ್ಲವನ್ನೂ ಕ್ಯಾಶುವಲ್ ಆಗಿ ಸ್ವೀಕರಿಸುವ ರೀತಿಗೆ ಉರ್ಫಿ ಫೇಮಸ್. ಕಳೆದ ಕೆಲವು ದಿನಗಳಿಂದ ಉರ್ಫಿ ಹಾಗೂ ಬಾಲಿವುಡ್ (Bollywood) ನಟಿಯ ನಡುವಿನ ಕ್ಯಾಟ್ ಫೈಟ್ ವೈರಲ್ ಆಗಿದೆ. ತಮ್ಮನ್ನು ಜಡ್ಜ್ ಮಾಡಿದ ನಟಿಗೆ ಸರಿಯಾಗಿಯೇ ಬೆವರಿಳಿಸಿದ್ದರು ಉರ್ಫಿ. ಇದೀಗ ಜಗಳ ಎಲ್ಲ ಮುಗಿದ ನಂತರವೂ ನಟಿ ಇನ್​ಸ್ಟಾಗ್ರಾಮ್​ನಲ್ಲಿ ರೀಲ್ಸ್ ಶೇರ್ ಮಾಡಿ ಮತ್ತೊಮ್ಮೆ ಬೋಲ್ಡ್ ಉತ್ತರ ಕೊಟ್ಟಿದ್ದಾರೆ. ಉರ್ಫಿಯನ್ನು ಟೀಕಿಸಿದ ಇತ್ತೀಚಿನ ಪ್ರಸಿದ್ಧ ವ್ಯಕ್ತಿ ನಟಿ ಚಾಹತ್ ಖನ್ನಾ (Chahatt Khanna). ಚಾಹತ್ ಉರ್ಫಿ ಬಗ್ಗೆ ಕಮೆಂಟ್ ಮಾಡಿ, ಯಾರು ಇದನ್ನು ಧರಿಸುತ್ತಾರೆ? ಅದೂ ಕೂಡಾ ಬೀದಿಗಳಲ್ಲಿ? ನನ್ನ ಪ್ರಕಾರ ಯಾರಾದರೂ ತಮ್ಮ ಬಟ್ಟೆಗಳನ್ನು ತೆಗೆದು ಮಾಧ್ಯಮದವರು ಅವರನ್ನು ಸೆಲೆಬ್ರಿಟಿಯನ್ನಾಗಿ (Celebrity) ಮಾಡುತ್ತಾರೆಯೇ? ಎಂದು ಪ್ರಶ್ನಿಸಿದ್ದರು.

Uorfi ಬಟ್ಟೆ ಧರಿಸುವ ಈ ಅಸಹ್ಯಕರ ವಿಧಾನ ಯಾವುದು? ಅವರವರ ರೀತಿಗಳು ಇರುತ್ತವೆ.
ಸಮಾಜದ ಪ್ರಕಾರ ಮಾಜಿ ಪತಿಯಂದಿರ ಹಣ ಲೂಟಿ ಮಾಡಿ ಹೊಸ ಬಾಯ್​​ಫ್ರೆಂಡ್​​ಗಾಗಿ ಖರ್ಚು ಮಾಡುವುದು ತಪ್ಪು. ಆದರೂ ಕೆಲವರು ಮಾಡ್ತಾರಪ್ಪ ಎಂದು ಚಾಹತ್​ಗೆ ಸೈಲೆಂಟಾಗಿ ಚಮಕ್ ಕೊಟ್ಟಿದ್ದಾರೆ.

ಇದಕ್ಕೆ ಬಹಳಷ್ಟು ಜನರು ಉರ್ಫಿಯನ್ನು ಬೆಂಬಲಿಸಿ ಕಮೆಂಟ್ ಮಾಡಿದ್ದಾರೆ. ನಿನ್ನ ಗೆಲುವಿನಿಂದ ಅವರನ್ನು ಸೋಲಿಸು, ದ್ವೇಷಿಸುವವರು ದ್ವೇಷಿಸುತ್ತಿರಲಿ ಎಂದಿದ್ದಾರೆ.


View this post on Instagram


A post shared by Uorfi (@urf7i)


ಜನರು ಮುಕ್ತವಾಗಿ ಉರ್ಫಿಯನ್ನು ಬೆಂಬಲಿಸಿ ಯಾವುದಕ್ಕೂ ತಲೆಕೆಡಿಸಿಕೊಳ್ಳದಂತೆ ಸಲಹೆ ಕೊಟ್ಟಿದ್ದಾರೆ. ನಟಿಯ ಈ ಸ್ಪೆಷಲ್ ವಿಡಿಯೋ ವೈರಲ್ ಆಗಿದ್ದು ಡ್ರೆಸ್​ಗೆ ತಕ್ಕಂತೆ ಮ್ಯಾಚಿಂಗ್ ಹೀಲ್ಸ್ ಧರಿಸಿದ್ದರು. ನಟಿಯ ಉದ್ದನೆ ತಲೆಗೂದಲು ಎಲ್ಲರ ಗಮನ ಸೆಳೆದಿದೆ.

ಉರ್ಫಿ ಕಾಲೆಳೆದ ಚಾಹತ್ ಖನ್ನಾ

ಈ ಅಗ್ಗದ ಪ್ರಚಾರ ಮತ್ತು ಮಾಧ್ಯಮವನ್ನು ಖರೀದಿಸುವುದು ಸುಲಭ. ನಮ್ಮ ಪೀಳಿಗೆಗಾಗಿ ನೀವು ಪ್ರಚಾರ ಮಾಡುತ್ತಿರುವ ಈ ಅಗ್ಗದ ಪ್ರದರ್ಶನ. ಯಾರಾದರೂ ಗುರುತಿಸಲು ಪಾವತಿಸುತ್ತಾರೆ. ಏನನ್ನಾದರೂ ಮಾಡುತ್ತಾರೆ. ನಗ್ನರಾಗಿ ಹೋಗುತ್ತಾರೆ. ಅದನ್ನೂ ನೀವು ಕ್ಯಾರಿ ಮಾಡುತ್ತೀರಾ. ಇದು ಅಸಹ್ಯಕರ!! ದೇವರು ನಿಮಗೆ ಸ್ವಲ್ಪ ಬುದ್ಧಿ ನೀಡಲಿ ಎಂದಿದ್ದಾರೆ.

ಇದನ್ನೂ ಓದಿ: Urfi Javed: ಹುಡುಗರ ಹಾರ್ಟ್‌ಗೆ ಕಿಚ್ಚಿಡುತ್ತಿದ್ದ ಉರ್ಫಿಗೆ ಈಗ ಅನಾರೋಗ್ಯವಂತೆ! ಬೇಗ ಹುಷಾರಾಗಿ ಅಂತಿದ್ದಾರೆ ಫ್ಯಾನ್ಸ್

ಮಾತಿನಲ್ಲೇ ತಿರುಗೇಟು ಕೊಟ್ಟ ಉರ್ಫಿ

ಉರ್ಫಿ ಕೊಟ್ಟ ಉತ್ತರ ನೋಡಿದರೆ ನಟಿ ಫ್ಯಾಷನ್ ಮಾತ್ರ ಅಲ್ಲ ಮಾತಿನ ಚತುರೆ ಎನ್ನುವುದು ಸಾಬೀತಾಗಿದೆ. ಚಾಹತ್ ಅವರ ವೈಯಕ್ತಿಕ ಜೀವನದ ಮೇಲೆ ಉರ್ಫಿ ದಾಳಿ ಮಾಡಿದ್ದಾರೆ. ಕನಿಷ್ಠ ನಾನು ಫಾಲೋವರ್ಸ್​ಗಳನ್ನು ಖರೀದಿಸುವುದಿಲ್ಲ! ಅಲ್ಲದೆ, ನೀವು ನಿಮ್ಮ ಮನೆಕೆಲಸವನ್ನು ಮಾಡಿದರೆ, ನಾನು ಸಂದರ್ಶನಕ್ಕೆ ಇದ್ದೆ, ನಾನು ಸಂದರ್ಶನಕ್ಕೆ ಅಣಿಯಾಗಿದ್ದೆ, ಅದು ನಿಮ್ಮ ವ್ಯವಹಾರವಲ್ಲ. ಪ್ಯಾಪ್‌ಗಳಿಗೆ ಪಾವತಿಸಿದ ನಂತರವೂ ಅವರು ನಿಮ್ಮನ್ನು ಆವರಿಸುತ್ತಿಲ್ಲ ಎಂದು ನೀವು ಅಸೂಯೆಪಡುತ್ತೀರಿ ಎಂದಿದ್ದಾರೆ.

ಉರ್ಫಿ ಮಾತಿಗೆ ಅಭಿಮಾನಿಗಳಿಂದ ಬೆಂಬಲ ಸಿಕ್ಕಿದೆ. ಸರಿಯಾಗಿ ಹೇಳಿದ್ದೀರಿ ಎಂದಿ ಚಾಹತ್ ಕಾಲೆಳೆಯೋ ಪ್ರಯತ್ನವನ್ನು ವಿಫಲ ಮಾಡಿದ್ದಾರೆ ಉರ್ಫಿ ಫ್ಯಾನ್ಸ್.
Published by:Divya D
First published: