• Home
  • »
  • News
  • »
  • entertainment
  • »
  • Urfi Javed: ತುಂಡು ಉಡುಗೆ ತಂದ ಆಪತ್ತು; ಉರ್ಫಿ ಜಾವೇದ್ ಮೇಲೆ ಬಿತ್ತು ಪೊಲೀಸ್​ ಕೇಸ್!​

Urfi Javed: ತುಂಡು ಉಡುಗೆ ತಂದ ಆಪತ್ತು; ಉರ್ಫಿ ಜಾವೇದ್ ಮೇಲೆ ಬಿತ್ತು ಪೊಲೀಸ್​ ಕೇಸ್!​

ಉರ್ಫಿ ಜಾವೇದ್

ಉರ್ಫಿ ಜಾವೇದ್

ಉರ್ಫಿ ತನ್ನ ಹೊಸ ಸಾಂಗ್​ ಒಂದರಲ್ಲಿ ತುಂಬಾ ಚಿಕ್ಕದಾದ ಮತ್ತು ಅಶ್ಲೀಲವಾಗಿ ಕಾಣುವಂತೆ ಡ್ರೆಸ್​ ತೊಟ್ಟಿದ್ದಾರೆ ಎಂದು ವ್ಯಕ್ತಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.

  • News18 Kannada
  • Last Updated :
  • Karnataka, India
  • Share this:

ಬಿಗ್ ಬಾಸ್  ಖ್ಯಾತಿಯ ಉರ್ಫಿ ಜಾವೇದ್ (Urfi Javed) ಒಂದಲ್ಲ ಒಂದು ವಿಚಾರಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಬಿಗ್ ಬಾಸ್ ಒಟಿಟಿಯಿಂದ (Bigg Boss OTT) ಮೊದಲ ವಾರದಲ್ಲೇ ಎಲಿಮಿನೇಟ್ ಆಗಿದ್ದರು. ಆದರೆ ಮನೆಯಿಂದ ಹೊರಬಂದ ನಂತರ ಉರ್ಫಿ ಜಾವೇದ್ ಫುಲ್​ ಫೇಮಸ್​ ಆಗಿದ್ದಾರೆ. ಉರ್ಫಿ ತನ್ನ ನಟನೆ ಅಥವಾ ಸಿನಿಮಾಗಳಿಂದ (Movie) ಮಾತ್ರವಲ್ಲ ಆಕೆಯ ಫ್ಯಾಷನ್ (Fashion) ಮತ್ತು ಸ್ಟೈಲ್‌ನಿಂದಲೂ ಭಾರೀ ಹೆಸರು ಮಾಡಿದ್ದಾರೆ. ಉರ್ಫಿ ಪ್ರತಿ ಬಾರಿ ವೆರೈಟಿ ಡ್ರೆಸ್ ಧರಿಸಿ ಮಾಧ್ಯಮಗಳ ಮುಂದೆ ಬಂದು ಸುದ್ದಿಯಾಗ್ತಾನೆ ಇರ್ತಾರೆ.


ಬೇರೆಯದ್ದೇ ವಿಚಾರಕ್ಕೆ ಸುದ್ದಿಯಾದ ಉರ್ಫಿ


ಗ್ಲಾಸ್, ವೈರ್, ಬ್ಲೇಡ್ ಮತ್ತು ಪಿನ್ ಗಳಿಂದ ಮಾಡಿದ ಡ್ರೆಸ್ ಧರಿಸಿ ಉರ್ಫಿ ಜಾವೇದ್​ ಎಲ್ಲರನ್ನೂ ಬೆರಗುಗೊಳಿಸುತ್ತಾರೆ. ಕೆಲವರು ಉರ್ಫಿ ಆತ್ಮವಿಶ್ವಾಸವನ್ನು ಮೆಚ್ಚಿದರೆ ಮತ್ತೆ ಕೆಲವರು ಆಕೆಯ ಬಗ್ಗೆ ಕೆಟ್ಟದಾಗಿ ಟ್ರೋಲ್ ಮಾಡುತ್ತಾರೆ. ಆದರೆ ಈಗ ಉರ್ಫಿ ಜಾವೇದ್ ಬೇರೆಯದ್ದೇ ಕಾರಣದಿಂದ ಸುದ್ದಿಯಲ್ಲಿದ್ದಾರೆ. ಉರ್ಫಿ ಮೇಲೆ ಇದೀಗ ಪೊಲೀಸ್​ ಕೇಸ್ ದಾಖಲಾಗಿದೆಯಂತೆ.


ಉರ್ಫಿ ವಿರುದ್ಧ ದೂರು ದಾಖಲು


ಟೈಮ್ಸ್ ಆಫ್ ಇಂಡಿಯಾದಲ್ಲಿ ವರದಿ ಪ್ರಕಾರ, ಉರ್ಫಿ ವಿರುದ್ಧ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ. ಉರ್ಫಿ ತನ್ನ ಹೊಸ ಸಾಂಗ್​ ಒಂದರಲ್ಲಿ ತುಂಬಾ ಚಿಕ್ಕದಾದ ಮತ್ತು ಅಶ್ಲೀಲವಾಗಿ ಕಾಣುವಂತೆ ಡ್ರೆಸ್​ ತೊಟ್ಟಿದ್ದಾರೆ ಎಂದು ವ್ಯಕ್ತಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಉರ್ಫಿ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.


ಇದನ್ನೂ ಓದಿ: Urfi Javed: ಬೆತ್ತಲೆ ಫೋಟೋ ಶೂಟ್ ಮಾಡಿದ ಉರ್ಫಿ! ಗ್ಲಾಸ್ ಹಿಡಿದಿದ್ದಕ್ಕೆ ಬಚಾವ್


ಹಿಂದೆ ನಟ ರಣವೀರ್ ಸಿಂಗ್ ಮೇಲೆ ಕೇಸ್​


ಈ ಹಿಂದೆ ನಟ ರಣವೀರ್ ಸಿಂಗ್ ಸಂಕಷ್ಟಕ್ಕೆ ಸಿಲುಕಿದ್ದರು. ಕೆಲ ದಿನಗಳ ಹಿಂದೆ ರಣವೀರ್ ಸಿಂಗ್ ನ್ಯೂಡ್ ಫೋಟೋ ಶೂಟ್ ಮಾಡಿ ಭಾರೀ ಸುದ್ದಿಯಾಗಿದ್ರು. ಖ್ಯಾತ ನಿಯತಕಾಲಿಕೆಗಾಗಿ ರಣವೀರ್ ಈ ಫೋಟೋಶೂಟ್ ಮಾಡಿದ್ದಾರೆ. ರಣವೀರ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಸಮಾಜದಲ್ಲಿ ಅಶ್ಲೀಲತೆಯನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿ ಕೆಲವು ಸಂಘಟನೆಗಳು ರಣವೀರ್ ವಿರುದ್ಧ ಪ್ರಕರಣ ದಾಖಲಿಸಿದ್ದವು. ಆದರೆ ರಣವೀರ್ ತಮ್ಮ ಕೆಲವು ಫೋಟೋಗಳನ್ನು ಮಾರ್ಫ್ ಮಾಡಿರುವುದಾಗಿ ಹೇಳಿಕೊಂಡಿದ್ದರು. ಈಗ ಉರ್ಫಿ ಅವರು ತುಂಡು ಬಟ್ಟೆ ತೊಟ್ಟ ಹಾಡಿಗೆ ಹೆಜ್ಜೆ ಹಾಕಿದ್ದು ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.


ಸೋಶಿಯಲ್ ಮೀಡಿಯಾದಲ್ಲಿ ವೈರಲ್


ಉರ್ಫಿ ಜಾವೇದ್ ಕಳೆದ ಕೆಲವು ದಿನಗಳಿಂದ ತಮ್ಮ ಹಾಡಿನಿಂದಲೇ ಜನಮನದಲ್ಲಿದ್ದಾರೆ. ಕಳೆದ ಅಕ್ಟೋಬರ್ 11 ರಂದು ಉರ್ಫಿ ಜಾವೇದ್ ಅವರ 'ಹಿ ಹಿ ಯೇ ಮಜ್ಬೂರಿ' ಹಾಡು ಬಿಡುಗಡೆಯಾಯಿತು. ಈ ಹಾಡು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈ ಹಾಡಿನ ಹಲವು ರೀಲ್‌ಗಳು ಮತ್ತು ವೀಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಉರ್ಫಿ ಸ್ವತಃ ಅನೇಕ ಸೋಶಿಯಲ್​ ಮೀಡಿಯಾ ಸ್ಟಾರ್​ಗಳ ಜೊತೆ ತಮ್ಮ ಹಾಡಿನ ಪ್ರಚಾರಕ್ಕಾಗಿ ರೀಲ್ಸ್​ ಮಾಡಿದ್ರು.

View this post on Instagram


A post shared by Uorfi (@urf7i)

85 ಲಕ್ಷಕ್ಕೂ ಹೆಚ್ಚು ಮಂದಿಯಿಂದ ವೀಕ್ಷಣೆ


ಈ ಹಾಡನ್ನು ಸಾಮಾಜಿಕ ಜಾಲತಾಣದಲ್ಲಿ 85 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಕೆಲವರು ಈ ಹಾಡನ್ನು ತುಂಬಾ ಇಷ್ಟಪಟ್ಟಿದ್ದಾರೆ. ಕೆಲವರು ಈ ಹಾಡನ್ನು ಟ್ರೋಲ್ ಮಾಡಿದ್ದಾರೆ. ಇದೇ ವೇಳೆ ಇದೀಗ ಇದೇ ಹಾಡಿನಿಂದ ಉರ್ಫಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಾಡಿನಿಂದಾಗಿ ಉರ್ಫಿ ವಿರುದ್ಧ ದೂರು ದಾಖಲಾಗಿದೆ.

Published by:ಪಾವನ ಎಚ್ ಎಸ್
First published: