ಉರ್ಫಿ ಜಾವೇದ್ (Urfi Javed) ಆಗಾಗ ಟ್ರೋಲ್ (Troll) ಆಗುತ್ತಾರೆ. ಮತ್ತೇನಾದರೂ ಕಿತಾಪತಿ ಡ್ರೆಸ್ ಮಾಡಿಕೊಂಡು ಬರುತ್ತಾರೆ. ಮತ್ತೆ ಟ್ರೋಲ್ ಆಗುತ್ತಾರೆ. ಇದು ರಿಪೀಟ್ ಆಗುತ್ತಲೇ ಇರುತ್ತದೆ. ನಟಿ ಉರ್ಫಿ ಜಾವೇದ್ (Urfi Javed) ಅವರು ತಮ್ಮ ಬೋಲ್ಡ್ ಫ್ಯಾಷನ್ (Bold Fashion) ಮೂಲಕ ಸಖತ್ ಸುದ್ದಿಯಾಗುತ್ತಲೇ ಇರುತ್ತಾರೆ. ಇದು ಹೊಸದೇನಲ್ಲ. ಆದರೆ ಈ ಬಾರಿ ಇನ್ನಷ್ಟು ಬೋಲ್ಡ್ ಆಗಿದ್ದಾರೆ. ದೀಪಿಕಾ ಪಡುಕೋಣೆ ಹಾಗೂ ಶಾರುಖ್ (Shah Rukh Khan) ಅಭಿನಯದ ಬೇಷರಂ ರಂಗ್ ಹಾಡಿಗೆ ಕೇಸರಿ ಕಟೌಟ್ ಡ್ರೆಸ್ ಧರಿಸಿ ವಿಡಿಯೋ (Video) ಮಾಡಿದ್ದಾರೆ.
ನಟಿ ಇನ್ಸ್ಟಾಗ್ರಾಮ್ನಲ್ಲಿ ಮಿಲಿಯನ್ ಗಟ್ಟಲೆ ಫಾಲೋವರ್ಸ್ಗಳನ್ನು ಗಳಿಸಿದ್ದು ಇದೇ ಫ್ಯಾಷನ್ನಿಂದ. ವಿಚಿತ್ರ ಫ್ಯಾಷನ್ ನೋಡೋದಕ್ಕೆಂದೇ ನೆಟ್ಟಿಗರು ನಟಿಯನ್ನು ಫಾಲೋ ಮಾಡುತ್ತಾರೆ. ಈ ಮೂಲಕ ಅವರ ಲೇಟೆಸ್ಟ್ ವಿಡಿಯೋ, ಫೋಟೊಗಳನ್ನು ನೋಡಿ ಎಂಜಾಯ್ ಮಾಡುತ್ತಾರೆ.
ಕೇಸರಿ ಕಟೌಟ್ ಡ್ರೆಸ್
ಈಗಾಗಲೇ ಕೇಸರಿ ಬಿಕಿನಿ ವಿಚಾರವಾಗಿ ದೊಡ್ಡ ವಿವಾದ ನಡೆದಿದೆ. ಇದೆಲ್ಲದರ ಮಧ್ಯೆಯೂ ಉರ್ಫಿ ಜಾವೇದ್ ಕೇಸರಿ ಕಟೌಟ್ ಡ್ರೆಸ್ ಧರಿಸಿ ದೀಪಿಕಾ ಪಡುಕೋಣೆಗಿಂತ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರೆಲ್ಲ ಈಗಿರುವ ವಿವಾದ ಸಾಲದೇ? ಅದರ ಮೇಲೆ ಇದಿಷ್ಟು ಬೇಕಾ ಎಂದಿದ್ದಾರೆ.
View this post on Instagram
ಇದನ್ನೂ ಓದಿ: Besharam Rang-Pathaan: ಪಠಾನ್ ಸಿನಿಮಾ ದೃಶ್ಯಗಳಿಗೆ ಕತ್ತರಿ! ಬೇಷರಂ ಹಾಡಿನ ದೀಪಿಕಾ ಸೀನ್ ಇರುತ್ತೆ
ಕೇಸರಿ ಬಿಕಿನಿ ಧರಿಸಿದ್ದಕ್ಕೆ ನೆಟ್ಟಿಗರ ಕೋಪ
ನೆಟ್ಟಿಗರು ದೀಪಿಕಾ ಆರೆಂಜ್ ಕಲರ್ ಬಿಕಿನಿ ಧರಿಸಿದ್ದಕ್ಕೆ ಕೋಪ ವ್ಯಕ್ತಪಡಿಸಿದ್ದಾರೆ. ಬೇಷರಂ ರಂಗ್ ಹಾಡಿನಲ್ಲಿ ಶಾರುಖ್ ಜೊತೆ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು ಇದಕ್ಕೆ ಕೇಸರಿ ಬಿಕಿನಿ ಬಳಸಿದ್ದು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಅದೇ ಕಾರಣಕ್ಕೆ ಬಾಯ್ಕಾಟ್ ಪಠಾನ್ ಟ್ರೆಂಡ್ ಆಗಿದೆ.
ಬೈಕಾಟ್ ಪಠಾಣ್ ಟ್ರೆಂಡ್
ಬೇಷರಂ ರಂಗ್ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ಹಾಕಿದ್ದಾರೆ. ಈ ಹಾಡಿನ ಸಾಲು ದೀಪಿಕಾ ಅವರು ಹಾಕಿರುವ ಡ್ರೆಸ್ಗೂ ಹೊಂದಾಣಿಕೆ ಆಗುತ್ತಿದೆ. ಕೇಸರಿ ಬಣ್ಣ ನಾಚಿಕಿಯಿಲ್ಲದ ಬಣ್ಣವೇ ಎಂದು ನೆಟ್ಟಿಗರು ಗರಂ ಆಗಿದ್ದಾರೆ. ಅದೇ ಕಾರಣದಿಂದ ಬೈಕಾಟ್ ಪಠಾಣ್ ಟ್ರೆಂಡ್ ಮಾಡಿದ್ದಾರೆ.
ಹಿಂದೂ ಸಂಘಟನೆಗಳು ಗರಂ
ಬೇಷರಂ ರಂಗ್ ಹಾಡಿನಲ್ಲಿ ಕೇಸರಿ ಬಣ್ಣಕ್ಕೆ ಅವಮಾನ ಮಾಡಲಾಗಿದೆ ಎಂದು ಹಿಂದೂ ಸಂಘಟನೆಗಳು ಗರಂ ಆಗಿವೆ. ಕೇಸರಿ ಹಿಂದುತ್ವವನ್ನು ಸೂಚಿಸುತ್ತದೆ. ಈ ಹಾಡಿನಲ್ಲಿ ಬೇಕು ಬೇಕೆಂದೇ ಕೇಸರಿ ಬಣ್ಣಕ್ಕೆ ನಾಚಿಕೆ ಇಲ್ಲದ ಬಣ್ಣ ಎಂದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಹಾಡನ್ನು ಬಹಿಷ್ಕರಿಸಿ ಎಂದು ಆಕ್ರೋಶಿತರಾಗಿದ್ದಾರೆ.
ಸೆನ್ಸಾರ್ನಿಂದ ಕತ್ತರಿ
ಪಠಾನ್ ಸಿನಿಮಾದಲ್ಲಿ ಹಲವು ಡೈಲಾಗ್, ಸೀನ್ಗಳಿಗೆ ಕತ್ತರಿ ಹಾಕಲಾಗಿದೆ. ಸುಮಾರು 10 ಕಡೆಗಳಲ್ಲಿ ಕಟ್ ಮಾಡುವಂತೆ ಚಿತ್ರತಂಡಕ್ಕೆ ಸೂಚಿಸಲಾಗಿದೆ. ಆದರೆ ದೀಪಿಕಾ ಅವರ ಆರೆಂಜ್ ಬಿಕಿನಿ ಸೀನ್ ಹಾಗೆಯೇ ಇರಲಿದೆ. ಉಳಿದ ಕೆಲವು ಕಡೆ ಸೀನ್ ಕಟ್ ಮಾಡಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ