Urfi Javed: ಹುಡುಗರ ಹಾರ್ಟ್‌ಗೆ ಕಿಚ್ಚಿಡುತ್ತಿದ್ದ ಉರ್ಫಿಗೆ ಈಗ ಅನಾರೋಗ್ಯವಂತೆ! ಬೇಗ ಹುಷಾರಾಗಿ ಅಂತಿದ್ದಾರೆ ಫ್ಯಾನ್ಸ್

Urfi Javed Hospitalized: ಅವರು ಹಾಕುವ ಬಟ್ಟೆಗಳನ್ನು ನೋಡಿದರೆ ಅವರ ಮೈ ಮೇಲೆ ಬಟ್ಟೆ ನಿಲ್ಲುವುದಿಲ್ಲ ಅನಿಸುತ್ತದೆ. ಅಷ್ಟು ಕಡಿಮೆ ಬಟ್ಟೆಯನ್ನು ಇವರು ಧರಿಸುವುದು. ಯಾವಾಗಲೂ ವಿಚಿತ್ರ ಅವತಾರದಿಂದ ಸುದ್ದಿಯಾಗುತ್ತಾರೆ.

ಉರ್ಫಿ ಜಾವೇದ್​

ಉರ್ಫಿ ಜಾವೇದ್​

  • Share this:
ಬಿಗ್ ಬಾಸ್ ಒಟಿಟಿ (Bigg Boss Ott) ಖ್ಯಾತಿಯ ಉರ್ಫಿ ಜಾವೇದ್ (Urfi Javed) ಸಾಮಾಜಿಕ ಮಾಧ್ಯಮದಲ್ಲಿ ಈಗ ಹೊಸ ಸೆನ್ಸೇಷನ್ (Sensation) ಸೃಷ್ಟಿಸಿದ್ದಾರೆ. ತಮ್ಮ ಮಾದಕ ನೋಟದಿಂದಲೇ ಎಲ್ಲರನ್ನೂ ಬೆರಗುಗೊಳಿಸುವ ಉರ್ಫಿ ಜಾವೇದ್​ ಸದಾ ಸುದ್ದಿಯಲ್ಲಿರುತ್ತಾರೆ. ಹೆಚ್ಚು ಟ್ರೋಲ್ (Troll) ಆಗುವ ಸೆಲೆಬ್ರಿಟಿ ಎಂದು ಹೆಸರು ಪಡೆದಿದ್ದಾರೆ. ಅವರು ಹಾಕುವ ಬಟ್ಟೆಗಳನ್ನು ನೋಡಿದರೆ ಅವರ ಮೈ ಮೇಲೆ ಬಟ್ಟೆ ನಿಲ್ಲುವುದಿಲ್ಲ ಅನಿಸುತ್ತದೆ. ಅಷ್ಟು ಕಡಿಮೆ ಬಟ್ಟೆಯನ್ನು ಇವರು ಧರಿಸುವುದು. ಯಾವಾಗಲೂ ವಿಚಿತ್ರ ಅವತಾರದಿಂದ ಸುದ್ದಿಯಾಗುತ್ತಾರೆ. ಅವರನ್ನು ಪೂರ್ತಿ ಮೈ ಮುಚ್ಚುವ ಬಟ್ಟೆಯಲ್ಲಿ ನೋಡಿರುವುದು ಬಲು ಅಪರೂಪ. ಆದರೆ ಈ ಬಾರಿ ಅವರು ಸುದ್ದಿಯಲ್ಲಿರುವುದು ಬೇರೆಯೇ ವಿಚಾರಕ್ಕೆ. ಅದು ಅವರ ಆರೋಗ್ಯದ ವಿಚಾರವಾಗಿ.

ಜ್ವರವಂತೆ ಉರ್ಫಿಗೆ

ಹೌದು, ಸದ್ಯ ಉರ್ಫಿಗೆ ಆರೋಗ್ಯ ಸರಿಯಿಲ್ಲವಂತೆ. ಉರ್ಫಿ ಜಾವೇದ್ ಜ್ವರದಿಂದ ಬಳಲುತ್ತಿದ್ದಾರಂತೆ. 104 ಡಿಗ್ರಿಯಷ್ಟು ಜ್ವರವಿದ್ದು, ಮುಂಬೈನ ಖಾಸಗಿ ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವಿಚಾರವನ್ನು ಅವರೇ ಬಹಿರಂಗಪಡಿಸಿದ್ದಾರೆ.  ಈ ಬಗ್ಗೆ ನಟಿ ಉರ್ಫಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಸ್ಟೋರಿಸ್​ ಹಂಚಿಕೊಂಡಿದ್ದು, ಅಭಿಮಾನಿಗಳು ಬೇಗ ಹುಷಾರಾಗಿ ಬನ್ನಿ ಎಂದು ಹಾರೈಸಿದ್ದಾರೆ.  ಫೋಟೋವನ್ನು ಹಂಚಿಕೊಂಡ ಉರ್ಫಿ, ನಾನು ಇಲ್ಲಿರುವಾಗ ತುಂಬಾ ಸಮಯ ಸಿಕ್ಕಿತು. ಹೌದು, ನನ್ನ ಆರೋಗ್ಯ ಹಾಳಾಗಿದೆ. ನಾನು ನನ್ನ ಆರೋಗ್ಯವನ್ನು ನಿರ್ಲಕ್ಷಿಸುತ್ತಿದ್ದೇ, ಈಗ ಈ ರೀತಿ ಆಗಿದೆ ಎಂದಿದ್ದಾರೆ. ಅಲ್ಲದೇ, ಉರ್ಫಿಗೆ ಹಲವಾರು ಪರೀಕ್ಷೆಗಳನ್ನು ಮಾಡಲಾಗುತ್ತಿದೆ ಎಂದು ಸಹ ವರದಿ ಇದೆ.ಉರ್ಫಿ ಜಾವೇದ್ ಇತ್ತೀಚೆಗೆ ನಟಿ ಚಾಹತ್ ಖನ್ನಾ ಜೊತೆ ವಾಗ್ವಾದ ಮಾಡಿಕೊಂಡಿದ್ದಾರೆ. ನಟಿ ಚಾಹತ್ ಖನ್ನಾ, ಉರ್ಫಿ ಹಾಕಿದ್ದ ಬಟ್ಟೆಯ ಬಗ್ಗೆ ಕಾಮೆಂಟ್​ ಮಾಡಿದ್ದರು. ಇವರನ್ನು ಸೆಲೆಬ್ರಿಟಿ ಎಂದು ಲೇವಲ್ ಮಾಡಿರುವ ಬಗ್ಗೆ ಮಾಧ್ಯಮವನ್ನು ಟೀಕಿಸಿದ್ದರು. ಅಲ್ಲದೇ, ಅವರು ಹಾಕಿದ್ದ ಬಟ್ಟೆ ನೋಡಿ, ಈ ರೀತಿಯಾಗಿ ಯಾರು ಹೊರಗೆ ಹೋಗುತ್ತಾರೆ ಎಂದಿದ್ದಾರೆ.
View this post on Instagram


A post shared by Uorfi (@urf7i)


ಇದನ್ನೂ ಓದಿ: ಹೊಂಬಾಳೆ ಫಿಲ್ಸ್ಮ್​ ಮೂಲಕ ರಮ್ಯಾ ಕಮ್​ ಬ್ಯಾಕ್, ಪುನೀತ್ ಆಸೆ ಈಡೇರಿಸುತ್ತಾ ಸಂಸ್ಥೆ​?

ಚಾಹತ್ ಖನ್ನಾ ಜೊತೆ ವಾಗ್ವಾದ

ಇದಕ್ಕೆ ಉತ್ತರ ನೀಡಿದ್ದ ಉರ್ಫಿ, “ಕನಿಷ್ಠ ನಾನು ಫಾಲೋವರ್ಸ್​ಗಳನ್ನು ಖರೀದಿಸುವುದಿಲ್ಲ! ನಿಮ್ಮ ಹೋಮ್​ವರ್ಕ್​ ನೀವು ಮಾಡಿದರೆ, ನಾನು ಸಂದರ್ಶನಕ್ಕೆ ಇದ್ದೆ, ನಾನು ಸಂದರ್ಶನಕ್ಕೆ ರೆಡಿಯಾಗಿದ್ದೆ, ಅದು ನಿಮ್ಮ ವ್ಯವಹಾರವಲ್ಲ, @chahattkhanna ಸಹ ಈ ಭೂಮಿಯ ಮೇಲೆ ಯಾರಾದರೂ ಏನು ಮಾಡಿದರೂ ಅದು ನಿಮ್ಮ ವ್ಯವಹಾರವಲ್ಲ, ನೀವು ಈ ಕಥೆಯನ್ನು ರಣವೀರ್ ಸಿಂಗ್‌ ವಿಚಾರವಾಗಿ ಏಕೆ ಹೇಳಲಿಲ್ಲ. ಇದು ನಿಮ್ಮ ಬೂಟಾಟಿಕೆ ತೋರಿಸುತ್ತದೆ. ನಿಮ್ಮ ಎರಡು ವಿಚ್ಛೇದನಗಳ ಬಗ್ಗೆ ನಾನು ಮಾತನಾಡಿಲ್ಲ, ನಿಮಗಿಂತ ಕಿಚ್ಚ ವಯಸ್ಸಿನ ಹುಡುಗನ ಜೊತೆ ಡೇಟಿಂಗ್ ಮಾಡುತ್ತಿದ್ದೀರಾ, ಅದರ ಬಗ್ಗೆ ನಾನು ಕೇಳಿಲ್ಲ, ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಬಿಗ್​ಬಾಸ್​ ಮನೆಗೆ ಹೋಗಿಲ್ಲ ಕಾಫಿನಾಡು ಚಂದು, ಕಾಯ್ತಿದ್ದ ಫ್ಯಾನ್ಸ್​ಗೆ ನಿರಾಸೆ

ಇದೀಗ ಉರ್ಫಿ ಹೆಸರು ಹೇಳಿದರೆ ಅವರ ಬಟ್ಟೆಗಳೇ ನೆನಪಾಗುವಷ್ಟರ ಮಟ್ಟಿಗೆ ನಟಿ ಫೇಮಸ್ ಆಗಿದ್ದಾರೆ. ಇನ್ನು ಮೊನ್ನೆಯಷ್ಟೇ, ಜೇಡರ ಬಲೆ ರೀತಿ ಬಟ್ಟೆ ಹಾಕಿ ಸುದ್ದಿಯಲ್ಲಿದ್ದರು. ಉರ್ಫಿ ಜಾವೇದ್ ಅವರ ಪ್ರತಿಯೊಂದು ಲುಕ್ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಉರ್ಫಿ ಜಾವೇದ್ ಅವರ ಡ್ರೆಸ್ಸಿಂಗ್ ಶೈಲಿ ಹಾಗೂ ಕೆಲವೊಮ್ಮೆ ಅವರು ನೀಡುವ ಹೇಳಿಕೆ ಹಲವು ಬಾರಿ ಟ್ರೋಲ್ ಆಗಿದೆ. ಉರ್ಫಿ ಜಾವೇದ್ ಅವರನ್ನು ಕಾಂಟ್ರವರ್ಸಿಯಲ್ ಕ್ವೀನ್ ಎಂದು ಕರೆಯಲಾಗುತ್ತದೆ.
Published by:Sandhya M
First published: