ಬಿಗ್ ಬಾಸ್ ಒಟಿಟಿಯಿಂದ ಫೇಮಸ್ ಆಗಿರೋ ಉರ್ಫಿ ಜಾವೇದ್ (Urfi Javed) ಸೋಶಿಯಲ್ ಮೀಡಿಯಾದಲ್ಲಿ (Social Media) ಸಖತ್ ಸುದ್ದಿಯಲ್ಲಿದ್ದಾರೆ. ತನ್ನ ಹೊಸ ಹೊಸ ವಿಡಿಯೋ, ಫೋಟೋಗಳ (Photo) ಮೂಲಕ ಸಂಚಲನ ಮೂಡಿಸಿದ್ದಾರೆ. ಉರ್ಫಿ ತನ್ನ ವಿಚಿತ್ರ ಡ್ರೆಸ್ ನೆಸ್ಸ್ನಿಂದ ಎಲ್ಲರ ಗಮನಸೆಳೆಯುತ್ತಾರೆ. ಕೆಲವೊಮ್ಮೆ ಜನರು ಉರ್ಫಿಯ ಫ್ಯಾಷನ್ (Fashion) ಸೆನ್ಸ್ ಇಷ್ಟಪಡುತ್ತಾರೆ. ಇನ್ನೂ ಕೆಲವೊಮ್ಮೆ ತನ್ನ ಫ್ಯಾಷನ್ನಿಂದಲೇ ಉರ್ಫಿ ಭಾರೀ ಟ್ರೋಲ್‌ಗಳಿಗೆ ಗುರಿಯಾಗುತ್ತಾರೆ. ಈ ಬಾರಿ ಕೂಡ ವಿಚಿತ್ರವಾಗಿ ಡ್ರೆಸ್ ಧರಿಸಿ ಜನರ ಮುಂದೆ ಬಂದಿದ್ದಾರೆ. ಉರ್ಫಿ ನೋಡಿದ ನೆಟ್ಟಿಗರು ಇದೇನಮ್ಮಾ ನಿನ್ನ ಅವತಾರ ಎನ್ನುತ್ತಿದ್ದಾರೆ.
ಮಲ್ಲಿಗೆ ಹೂವಿನಿಂದ ಮೈ ಮುಚ್ಚಿಕೊಂಡು ಬಂದ ಉರ್ಫಿ
ಇಷ್ಟು ದಿನ ಉರ್ಫಿ ಜಾವೇದ್ ಅವರ ನಾನಾ ಅವತಾರಗಳನ್ನು ನೋಡಿದ್ದೀರಾ, ಆದ್ರೆ ಇದು ಹೊಸ ಅವತಾರ. ಹೆಣ್ಣು ಮಕ್ಕಳು ಅಚ್ಚುಕಟ್ಟಾಗಿ ಸೀರೆಯುಟ್ಟು ಜಡೆಗೆ ಮಲ್ಲಿಗೆ ಮುಡಿದರೆ ನೋಡಕೆ ಎರಡು ಕಣ್ಣು ಸಾಲದು. ಹೂವು ಮಹಿಳೆಯ ಅಂದ ಹೆಚ್ಚುಸುತ್ತದೆ ಎಂದು ಹೇಳಬಹುದು. ಆದ್ರೆ ಇದೀಗ ಉರ್ಫಿ ಜಾವೇದ್ ಹೂವಿನಿಂದಲೇ ತನ್ನ ಮೈ ಮುಚ್ಚಿಕೊಂಡು ಬಂದಿದ್ದಾರೆ.
ಮತ್ತೆ ಟಾಪ್ ಲೆಸ್ ಆಗಿ ಕಾಣಿಸಿಕೊಂಡ ಉರ್ಫಿ
ಮತ್ತೆ ಟಾಪ್ ಲೆಸ್ ಆಗಿ ಕಾಣಿಸಿಕೊಂಡ ಉರ್ಫಿ ಜಾವೇದ್ ಜಡೆಗೆ ಮುಡಿದ ಮಲ್ಲಿಗೆ ಹೂವಿನಲ್ಲಿ ಮೈ ಮುಚ್ಚಿಕೊಂಡಿದ್ದಾರೆ. ಉರ್ಫಿ ವಿಡಿಯೋ ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ. ಇದೇನಮ್ಮಾ ನಿನ್ನ ಅವತಾರ ಎಂದು ಕಮೆಂಟ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಿಂದ ಮೊದಲು ಉರ್ಫಿಯನ್ನು ಬ್ಯಾನ್ ಮಾಡ್ಬೇಕು ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.
View this post on Instagram
ಇತ್ತೀಚಿಗೆ ಉರ್ಫಿ ಬಾಲ್ಯದ ಬಗ್ಗೆ ಮಾತಾಡಿದ್ದಾರೆ. ನನಗೆ 15 ವರ್ಷ ಆಗಿದ್ದಾಗ ಯಾರೋ ನನ್ನ ಫೋಟೋವನ್ನು ಅಶ್ಲೀಲ ಜಾಲತಾಣದಲ್ಲಿ ಅಪ್ಲೋಡ್ ಮಾಡಿದರು. ಅದು ತುಂಬ ಸರಳವಾದ ಫೋಟೋ ಆಗಿತ್ತು. ನನ್ನ ಫೇಸ್ಬುಕ್ ಖಾತೆಯಿಂದ ಅದನ್ನು ತೆಗೆದುಕೊಳ್ಳಲಾಗಿತ್ತು. ನನ್ನ ತಂದೆ ನನ್ನನ್ನು ಅಶ್ಲೀಲ ಸಿನಿಮಾ ನಟಿ ಎಂದರು. ಅಶ್ಲೀಲ ಜಾಲತಾಣದವರು 50 ಲಕ್ಷ ರೂಪಾಯಿ ಕೇಳುತ್ತಿದ್ದಾರೆ ಅಂತ ಎಲ್ಲರ ಬಳಿಯೂ ಅಪ್ಪ ಹೇಳುತ್ತಿದ್ದರು. ತಂದೆ ನಿತ್ಯ ನನಗೆ ಹೊಡೆಯುತ್ತಿದ್ದರು ಎಂದು ಉರ್ಫಿ ಜಾವೇದ್ ಹೇಳಿದ್ದರು.
ಜಡೆಯಲ್ಲಿ ಮೈ ಮುಚ್ಚಿಕೊಂಡ ಉರ್ಫಿ
ಕೆಲ ದಿನಗಳ ಹಿಂದೆ ನಟಿ ಉರ್ಫಿ ಜಾವೇದ್ ಜಡೆಯಲ್ಲಿ ತಮ್ಮ ಮೈ ಮುಚ್ಚಿಕೊಂಡಿದ್ದರು. ಅರೆ ಬರೆ ಬಟ್ಟೆ ತೊಟ್ಟು ವಿಡಿಯೋ ಮಾಡುತ್ತಿದ್ದ ಉರ್ಫಿ ಈ ಬಾರಿ ಬಟ್ಟೆಯನ್ನೇ ಹಾಕದೆ ಜಡೆಯಲ್ಲಿ ಮೈ ಮುಚ್ಚಿಕೊಂಡು ಜನರ ಮುಂದೆ ಬಂದು ನಿಂತಿದ್ದರು. ಉರ್ಫಿ ಹೊಸ ರೀಲ್ಸ್ ಇದೀಗ ಸಖತ್ ವೈರಲ್ ಆಗಿತ್ತು.
View this post on Instagram
ಉರ್ಫಿ ಜಾವೇದ್ ಅನೇಕ ವಿಡಿಯೋ ಹಾಗೂ ಫೋಟೋಗಳು ಸಖತ್ ಟ್ರೋಲ್ ಆಗಿದೆ. ಜಡೆಯಲ್ಲೇ ಮೈ ಮುಚ್ಚಿಕೊಂಡು ಬಂದ ಉರ್ಫಿ ಜಾವೇದ್ ವಿಡಿಯೋ ಕೂಡ ಸಖತ್ ಟ್ರೋಲ್ ಆಗಿದ್ದು, ವಿಡಿಯೋ ನೋಡಿದ ನೆಟ್ಟಿಗರು ಬಗೆ ಬಗೆ ಕಮೆಂಟ್ ಮಾಡ್ತಿದ್ದರು. ಏನ್ ತಾಯಿ ನಿನ್ನ ಅವತಾರ ಅಂತಿದ್ದಾರೆ. ಮೊದಲು ಬಟ್ಟೆ ಧರಿಸೋದು ಕಲಿ ಅಂತಿದ್ದಾರೆ. ಇನ್ನು ಕೆಲವರು ಉರ್ಫಿ ಜಾವೇದ್ ಬೋಲ್ಡ್ ಅವಾತರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ