ಬೆಳಕಿನ ಹಬ್ಬ ದೀಪಾವಳಿ (Deepavali) ಅಂದ್ರೆ ಎಲ್ಲೆಲ್ಲೂ ಸಂಭ್ರಮ ಮನೆ ಮಾಡಿದೆ. ಬಾಲಿವುಡ್ ಅಂಗಳದಲ್ಲೂ ದೀಪಾವಳಿ ಪಾರ್ಟಿ (Deepavali Party) ಜೋರಾಗಿದೆ. ದೀಪಾವಳಿ ಅಂದ್ರೆ ಬಾಲಿವುಡ್ ನಟರು ಪಾರ್ಟಿಗಳಲ್ಲಿ ಬ್ಯುಸಿ ಆಗಿತ್ತಾರೆ. ಇನ್ನು ನಟಿಯರಂತೂ ಟ್ರೆಡಿಷನಲ್ ಲುಕ್ನಲ್ಲಿ ಮಿಂಚುತ್ತಾರೆ. ಆದ್ರೆ ಉರ್ಫಿ ಜಾವೇದ್ (Urfi Javed) ಫುಲ್ ಡಿಫರೆಂಟ್, ತನ್ನ ವಿಭಿನ್ನ ಉಡುಗೆಗಳ ಮೂಲಕವೇ ಫುಲ್ ಫೇಮಸ್ ಆಗಿರೋ ಉರ್ಫಿ ಜಾವೇದ್, ದೀಪಾವಳಿಗೆ ಅರೆ ಬೆತ್ತಲಾಗಿ ಅಭಿಮಾನಿಗಳಿಗೆ (Fans) ಶಾಕ್ ಕೊಟ್ಟಿದ್ದಾರೆ.
ಟಾಪ್ ಲೆಸ್ ಆಗಿ ಬಂದ ಉರ್ಫಿ
ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ವಿಭಿನ್ನವಾಗಿ ಶುಭ ಹಾರೈಸಿದ್ದಾರೆ. ತನ್ನ ವಿಭಿನ್ನ ಸ್ಟೈಲ್ ಮೂಲಕ ಹೆಸರುವಾಸಿಯಾಗಿರುವ ಇಂಟರ್ನೆಟ್ ಸೆನ್ಸೇಷನ್ ಉರ್ಫಿ ಜಾವೇದ್, ಈ ಬಾರಿ ದೀಪಾವಳಿಗೆ ಅರೆಬೆತ್ತಲೆ ವೀಡಿಯೋ ಒಂದನ್ನು ಟ್ವೀಟ್ ಮಾಡಿದ್ದಾರೆ. ತನ್ನ ದೀಪಾವಳಿ ಶುಭಾಶಯವನ್ನು ಸಹ ವಿಭಿನ್ನವಾಗಿ ಹೇಳಿದ್ದಾರೆ. ಉರ್ಫಿ, ಟಾಪ್‌ಲೆಸ್ ಆಗಿ ಉದ್ದನೆಯ ಸ್ಕರ್ಟ್ ಅನ್ನು ಮಾತ್ರ ಧರಿಸಿದ್ದಳು.
ದೀಪದ ಬೆಳಕಲ್ಲಿ ಫೋಸ್ ಕೊಟ್ಟ ಉರ್ಫಿ
ಉರ್ಫಿ ತನ್ನ ಎದೆಯ ಭಾಗವನ್ನು ತನ್ನ ಒಂದು ಕೈಯಿಂದ ಮುಚ್ಚಿಕೊಂಡಿದ್ದಾಳೆ. ಮತ್ತೊಂದು ಕೈಯಿಂದ ಉರ್ಫಿ ಲಡ್ಡುವನ್ನು ತಿನ್ನುವುದನ್ನು ಕಾಣಬಹುದಾಗಿದೆ. ಉರ್ಫಿ ತನ್ನ ಉದ್ದನೆಯ ಕೆಂಪು ಸ್ಕರ್ಟ್ ಧರಿಸಿದ್ದು, ಮ್ಯಾಚಿಂಗ್ ಕಿವಿಯೋಲೆ ಹಾಕಿ ಲೂಸ್ ಹೇರ್ ಬಿಟ್ಟಿದ್ದಾಳೆ. ವೀಡಿಯೊಗೆ ದೀಪಾವಳಿಯ ವೈಬ್ ಅನ್ನು ನೀಡುವ ಸಲುವಾಗಿ, ನಟಿ ಮುಂದೆ ಮಣ್ಣಿನ ದೀಪ ಬೆಳಗಿಸಲಾಗಿದ್ದು, ಕಡುಗೆಂಪು ಮಂಚದ ಮೇಲೆ ಮಲಗಿ ನಟಿ ಉರ್ಫಿ ಜಾವೇದ್ ಪೋಸ್ ಕೊಟ್ಟಿದ್ದಾರೆ.
View this post on Instagram
ಉಯ್ಯಾಲೆಯಿಂದ ಜಾರಿದ ಉರ್ಫಿ
View this post on Instagram
ಉರ್ಫಿ ಜಾವೇದ್ ಕೆಂಬಣ್ಣದ ಸೀರೆ ಉಟ್ಟು ಹಾಟ್ ಲುಕ್ನಲ್ಲಿ ಕಾಣಿಸಿಕೊಂಡಿದ್ದು ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ. ಅರೆಬರೆಯಾಗಿ ಸೀರೆ ಉಟ್ಟ ಉರ್ಫಿ ಜಾವೇದ್ ಉಯ್ಯಾಲೆ ಹಿಡಿದು ಜಾಲಿಯಾಗಿ ಡ್ಯಾನ್ಸ್ ಮಾಡಿದ್ದಾರೆ. ಗಾಳಿಯೂ ಜೋರಾಗಿ ಬೀಸುತ್ತಿತ್ತು. ಅಚಾನಕ್ ಆಗಿ ನಟಿ ಜಾರಿ ಬಿದ್ದಿದ್ದು ಯುವಕರೆಲ್ಲ ಓಡೋಡಿ ಬಂದು ನಟಿಯನ್ನು ಹಿಡಿದುಕೊಂಡಿದ್ದಾರೆ.
ಇದನ್ನೂ ಓದಿ: Urfi Javed: ಬೆತ್ತಲೆ ಫೋಟೋ ಶೂಟ್ ಮಾಡಿದ ಉರ್ಫಿ! ಗ್ಲಾಸ್ ಹಿಡಿದಿದ್ದಕ್ಕೆ ಬಚಾವ್
ವಿಡಿಯೋ ಶೇರ್ ಮಾಡಿದ ಉರ್ಫಿ
ಉರ್ಫಿ ಈ ಬಿಟಿಎಸ್ ವಿಡಿಯೋ ಶೇರ್ ಮಾಡಿದ್ದು ಇದಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ನೆಟ್ಟಿಗರು ಕಾಮೆಂಟ್ ಮಾಡಿ ಸದ್ಯ ಹುಷಾರಾಗಿರಿ ಎಂದು ತಿಳಿಸಿದ್ದಾರೆ. ಇನ್ನೂ ಕೆಲವರು ಕಾಮಿನಿ ಎಂದಿದ್ದಾರೆ. ನೆಟ್ಟಿಗರಂತೂ ಈ ವಿಡಿಯೋದಲ್ಲಿಯೂ ಉರ್ಫಿಯನ್ನು ಟ್ರೋಲ್ ಮಾಡುವುದನ್ನು ಬಿಟ್ಟಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ