ಹಿಂದಿ ಕಿರುತೆರೆ ನಟಿ ಉರ್ಫಿ ಜಾವೇದ್ (Urfi Javed) ಹೆಸರು ತಿಳಿಯದವರಿಲ್ಲ. ಎಲ್ಲರಿಗೂ ನಟಿಯ (Actress) ಹೆಸರು ಹಾಗೂ ಲುಕ್ ಪರಿಚಿತ. ಹಿಂದಿ ಕೆಲವು ಸೀರಿಯಲ್ಗಳಲ್ಲಿ (Serial) ನಟಿಸಿದ ಉರ್ಫಿ ಫೇಮಸ್ ಆಗಿದ್ದು ಮಾತ್ರ ಡ್ರೆಸ್ (Dress) ನಿಂದಾಗಿ. ಬಿಗ್ಬಾಸ್ ಒಟಿಟಿಯಲ್ಲಿ (Bigg Boss OTT) ಭಾಗವಹಿಸಿದ ಉರ್ಫಿ ಜಾವೇದ್ ಒಂದೇ ವಾರಕ್ಕೆ ಮನೆಯಿಂದ ಹೊರ ಬೀಳಬೇಕಾಯ್ತು. ಆದರೆ ಬಿಗ್ಬಾಸ್ನಲ್ಲಿ ಭಾಗವಹಿಸಿ ಅಲ್ಲಿಂದ ಹೊರ ಬರುತ್ತಲೇ ನಟಿ ಕ್ಲಿಕ್ ಆಗಿ ಬಿಟ್ಟರು. ವಿಚಿತ್ರ ಉಡುಗೆ ಧರಿಸಿ ಏರ್ಪೋರ್ಟ್ಗೆ ಬಂದ ಉರ್ಫಿ ಜಾವೇದ್ನನ್ನು ನೋಡಿದ ಜನ ಅಚ್ಚರಿಪಟ್ಟರು. ನಟಿ ಮಾಧ್ಯಮಗಳ ಕೇಂದ್ರ ಬಿಂದುವಾದರು. ಈ ಮೂಲಕ ನಟಿಯ ಪಾಪ್ಯುಲಾರಿಟಿಯೇ ಬದಲಾಯಿತು.
ಕ್ರಿಸ್ಮಸ್ಗೆ ಸ್ಪೆಷಲ್ ಡ್ರೆಸ್
ಉರ್ಫಿ ಜಾವೇದ್ ಇಸ್ಲಾಂ. ಧರ್ಮಕ್ಕೆ ಸೇರಿದರೂ ಬೇರೆ ಯಾವುದೇ ಹಬ್ಬಗಳು ಬಂದರೂ ಅದಕ್ಕೆ ತಕ್ಕದಾಗಿ ಡ್ರೆಸ್ ಮಾಡುತ್ತಾರೆ. ಅದು ಗಣೇಶ ಹಬ್ಬವಿರಲಿ, ದೀಪಾವಳಿ ಇರಲಿ ಏನೇ ಇರಲಿ ನಟಿ ಅದಕ್ಕೆ ಟ್ರೆಂಡಿ ಡ್ರೆಸ್ ಧರಿಸಿ ಪೋಸ್ ಕೊಡುತ್ತಾರೆ. ಈಗ ಕ್ರಿಸ್ಮಸ್ ವೀಕ್. ನಟಿ ಕ್ರಿಸ್ಮಸ್ಗೂ ವಿಶೇಷವಾಗಿ ಡ್ರೆಸ್ ಮಾಡಿಕೊಂಡು ರೆಡಿಯಾಗಿದ್ದಾರೆ. ವಿಡಿಯೋ ಕೂಡಾ ಶೇರ್ ಮಾಡಿದ್ದಾರೆ.
ಹೇಗಿದೆ ಡ್ರೆಸ್?
ಬ್ರೈಟ್ ರೆಡ್ ಕಲರ್ ಡ್ರೆಸ್ ಧರಿಸಿರುವ ಉರ್ಫಿ ಜಾವೇದ್ ಕ್ಯೂಟ್ ಆಗಿ ಕಾಣಿಸಿದ್ದಾರೆ. ಆದರೆ ಈ ಡ್ರೆಸ್ನಲ್ಲಿ ಒಂದು ಕಾಲು ಮಾತ್ರ ಇದೆ. ಇನ್ನೊಂದು ಕಾಲು ಶಾರ್ಟ್ ಆಗಿದೆ. ವೆಲ್ವೆಟ್ನಂತೆ ಕಾಣಿಸೋ ಈ ಬಟ್ಟೆ ಖಾಲಿ ಕೆಂಪು ಕಲರ್ ಮಾತ್ರ ಇದ್ದು ಪ್ಲೈನ್ ಆಗಿದೆ.
View this post on Instagram
ಇದನ್ನೂ ಓದಿ: Urfi Javed: ಕೋಲಾ ಕ್ಯಾಪ್ನಲ್ಲಿ ರೆಡಿಯಾಯ್ತು ಉರ್ಫಿಯ ಡ್ರೆಸ್!
ವೈರಲ್ ಆಯ್ತು ವಿಡಿಯೋ
ನಟಿಯ ವಿಡಿಯೋಗೆ 90 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. 1700ಕ್ಕೂ ಹೆಚ್ಚು ಜನರು ವಿಡಿಯೋಗೆ ಕಾಮೆಂಟ್ ಮಾಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಎಲ್ಲರೂ ನಟಿಯ ವಿಡಿಯೋ ಮೆಚ್ಚಿಕೊಂಡು ವೈರಲ್ ಮಾಡಿದ್ದಾರೆ.
ಹೀಗಾ ವಿಶ್ ಮಾಡೋದು?
ಒಬ್ಬ ಬಳಕೆದಾರ ನಟಿಯ ವಿಡಿಯೋಗೆ ಕಾಮೆಂಟ್ ಮಾಡಿ ವಿಶ್ ಮಾಡಿ ಎಂದು ಕೇಳಿದ್ದಕ್ಕೆ ಒಂದು ಕೋರಿಕೆ ಇಟ್ಟಿದ್ದಾರೆ. ನಿಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ಬ್ಲಾಕ್ ಆಗಲಿ ಎಂದು ಹೇಳಿದ್ದಾರೆ ನೆಟ್ಟಿಗರು.
ಉರ್ಫಿಗೆ 3 ಮಿಲಿಯನ್ ಫಾಲೋವರ್ಸ್
ಸದ್ಯ ನಟಿ ಉರ್ಫಿ ಜಾವೇದ್ಗೆ 3.9 ಮಿಲಿಯನ್ ಫಾಲೋವರ್ಸ್ ಇದ್ದಾರೆ. ನಟಿ 380 ಜನರನ್ನು ಫಾಲೋ ಮಾಡುತ್ತಿದ್ದು ಇದುವರೆಗೆ 2000ಕ್ಕೂ ಹೆಚ್ಚು ಪೋಸ್ಟ್ಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಮೂಲಕ ಪ್ರತಿದಿನ ಫಾಲೋವರ್ಸ್ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಲೇ ಹೋಗುತ್ತಿದ್ದಾರೆ. ಅದಕ್ಕೆ ಬೇಕಾದಂತೆ ಪೋಸ್ಟ್ ಕೂಡಾ ಹಾಕುತ್ತಾರೆ.
ಕೆಲಸ ಇಲ್ವಾ?
ಉರ್ಫಿಗೆ ಯಾವುದೇ ಕೆಲಸ ಇಲ್ವಾ ಎನ್ನುವುದು ಬಹಳಷ್ಟು ಜನರ ಡೌಟ್. ಕಾರಣ ಉರ್ಫಿ ಜಾವೇದ್ ಫುಲ್ ಟೈಂ ಡ್ರೆಸ್ ಮಾಡಿಕೊಂಡು ಫೋಟೋ ವಿಡಿಯೋ ಶೇರ್ ಮಾಡುತ್ತಲೇ ಇರುತ್ತಾರೆ. ಆದರೆ ಯಾವುದೇ ಸೀರಿಯಲ್, ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಆದರೆ ಕೆಲವೊಂದು ಆ್ಯಡ್ ಮೂಲಕ ಸ್ವಲ್ಪಮಟ್ಟಿಗೆ ಗಳಿಸುತ್ತಾರೆ ಉರ್ಫಿ ಜಾವೇದ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ