• Home
  • »
  • News
  • »
  • entertainment
  • »
  • Urfi Javed Bridal Look: ಲೆಹಂಗಾ ಧರಿಸಿದ ಉರ್ಫಿ! ಫುಲ್ ಡ್ರೆಸ್ ಧರಿಸಿದ್ರೆ ಲೈಕ್ಸ್ ಕೊಡ್ತಿಲ್ಲ ಜನ

Urfi Javed Bridal Look: ಲೆಹಂಗಾ ಧರಿಸಿದ ಉರ್ಫಿ! ಫುಲ್ ಡ್ರೆಸ್ ಧರಿಸಿದ್ರೆ ಲೈಕ್ಸ್ ಕೊಡ್ತಿಲ್ಲ ಜನ

ಉರ್ಫಿ ಜಾವೇದ್

ಉರ್ಫಿ ಜಾವೇದ್

Urfi Javed: ಉರ್ಫಿ ಜಾವೇದ್ ತುಂಡುಡುಗೆ ಧರಿಸಿದ್ರೆ ಟ್ರೋಲ್ ಮಾಡಿ ಹಿಗ್ಗಾ ಮುಗ್ಗ ಬೈಯುವ ಜನ ಈಗ ಫುಲ್ ಡ್ರೆಸ್ ಹಾಕಿದ್ರೆ ನೋಡ್ತಾನೆ ಇಲ್ಲ. ಹೌದು ಸುಂದರವಾದ ಲೆಹಂಗಾ ಧರಿಸಿದ ಉರ್ಫಿ ವಿಡಿಯೋ ಬರೀ 200 ಲೈಕ್ಸ್ ಬಂದಿದೆ.

  • Share this:

ಉರ್ಫಿ ಜಾವೇದ್ ತಮ್ಮ ಡ್ರೆಸ್​​ನಿಂದಲೇ ಫೇಮಸ್. ಈಗ ನಟಿ ಸುಂದರವಾಗಿ ಡ್ರೆಸ್ ಮಾಡಿದರೂ ಕೂಡಾ ನೆಟ್ಟಿಗರ ಅಚ್ಚರಿಗೆ ಕಾರಣವಾಗಿದ್ದಾರೆ. ಅಯ್ಯೋ ಮೇಡಂ ನಿಮಗೆ ಈ ತರ ಡ್ರೆಸ್ ಮಾಡೋಕೂ ಬರುತ್ತಾ ಎನ್ನುತ್ತಿದ್ದಾರೆ ನೆಟ್ಟಿಗರು. ಹೌದು ಉರ್ಫಿ ಬ್ರೈಡಲ್ ಲೆಹಂಗಾದಲ್ಲಿ ಕಾಣಿಸಿಕೊಂಡಿದ್ದಾರೆ. ಬರೀ ತುಂಡುಡುಗೆಯಲ್ಲಿಯೇ ಕಾಣಿಸಿಕೊಳ್ಳುವ ಹಿಂದಿ ಕಿರುತೆರೆ ನಟಿ ಹಾಗೂ ಹಿಂದಿ ಬಿಗ್​ಬಾಸ್ ಒಟಿಟಿ ಸ್ಪರ್ಧಿ ಉರ್ಫಿ ಈಗ ಲೆಹಂಗಾ (Lehanga) ಧರಿಸಿದ್ದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಸೋಷಿಯಲ್ ಮೀಡಿಯಾ ಬ್ಯೂಟಿ, ಕಿರುತೆರೆ ಸುಂದರಿ, ಬಿಗ್​ಬಾಸ್ ಒಟಿಟಿ (Bigg Boss OTT) ಚೆಲುವೆ ಉರ್ಫಿಗೆ (Urfi Javed) ಡ್ರೆಸ್ ಮಾಡೋದು ಬಿಟ್ಟು ಬೇರೆ ಕೆಲಸವೇ ಇಲ್ಲ. ಹೌದು. ಡಿಫರೆಂಟಾಗಿ ಡ್ರೆಸ್ (Dress) ಮಾಡಿ ಫೋಟೋ ತೆಗೆಸಿಕೊಳ್ಳೋದೇ ಉರ್ಫಿಯ ಫುಲ್ ಟೈಂ ಜಾಬ್. ಡಿಫರೆಂಟಾಗಿ ಡ್ರೆಸ್ ಮಾಡಿ ನೆಟ್ಟಿಗರನ್ನು ಸೆಳೆಯುವ ಉರ್ಫಿ ಬಹಳಷ್ಟು ಜನರಿಂದ ಟೀಕೆ ಎದುರಿಸುತ್ತಲೇ ಇರುತ್ತಾರೆ. ಅದೇ ರೀತಿ ಇವರನ್ನು ಬೆಂಬಲಿಸುವ ಒಂದಷ್ಟು ಜನರೂ ಇದ್ದಾರೆ.


ಬ್ರೈಡಲ್ ಲೆಹಂಗಾದಲ್ಲಿ ಉರ್ಫಿ ಜಾವೇದ್


ನಟಿ ಉರ್ಫಿ ಸುಂದರವಾದ ಲೆಹಂಗಾದಲ್ಲಿ ಕಾಣಿಸಿಕೊಂಡಿದ್ದು ವಿಡಿಯೋವನ್ನು ವೈರಲ್ ಭಯಾನಿ ಶೇರ್ ಮಾಡಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ವೈರಲ್ ಆಗಿರುವ ಈ ವಿಡಿಯೋ 274 ಲೈಕ್ಸ್ ಮಾತ್ರ ಗಳಿಸಿದೆ.
ಮಾಡರ್ನ್ ಡ್ರೆಸ್ ಹಾಕಿದ್ರೆ ಬೈಯೋ ಜನ ಲೆಹಂಗಾ ಹಾಕಿದ್ರೆ ಇಷ್ಟಪಡ್ತಿಲ್ಲ


ಉರ್ಫಿ ತುಂಡುಡುಗೆಗಳನ್ನು ನೋಡಿ ಸಿಕ್ಕಾಪಟ್ಟೆ ಟ್ರೋಲ್ ಮಾಡುವ ಜನರು ನಟಿಯ ಟ್ರೆಡಿಷನಲ್ ಡ್ರೆಸ್ ನೋಡಿ ಫಿದಾ ಆಗಿಲ್ಲ. ಸುಂದರವಾದ ಬ್ರೈಡಲ್ ಲೆಹಂಗಾ ಧರಿಸಿದರೂ ಉರ್ಫಿಗೆ ಡಿಮ್ಯಾಂಡ್ ಇಲ್ಲ.


ಇದನ್ನೂ ಓದಿ: Urfi Javed: ಬೆತ್ತಲೆ ಫೋಟೋ ಶೂಟ್ ಮಾಡಿದ ಉರ್ಫಿ! ಗ್ಲಾಸ್ ಹಿಡಿದಿದ್ದಕ್ಕೆ ಬಚಾವ್ 


ಉರ್ಫಿ ಮತ್ತು ಚಾಹತ್​ ನಡುವೆ ಕಿತ್ತಾಟ!


ಇತ್ತೀಚೆಗೆ ಉರ್ಫಿ ಮತ್ತು ನಟಿ ಚಾಹತ್ ಖನ್ನಾ ನಡುವೆ ಜಗಳ ನಡೆದಿತ್ತು . ಇಬ್ಬರೂ ಒಬ್ಬರನ್ನೊಬ್ಬರ ಮೇಲೆ ಆರೋಪಗಳನ್ನು ಮಾಡುತ್ತಿದ್ದರು. ಚಾಹತ್ ಈಗ ಮತ್ತೊಮ್ಮೆ ಉರ್ಫಿಯನ್ನು ಲೇವಡಿ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸ್ಟೋರಿ ಇಟ್ಟುಕೊಂಡು ಉರ್ಫಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.ದರೋಡೆಕೋರ ಸುಖೇಶ್ ಚಂದ್ರಶೇಖರ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಚಾಹತ್ ಹೆಸರು ಕೇಳಿಬಂದಾಗ, ಉರ್ಫಿ ಚಹತ್ ನನ್ನು ಲೇವಡಿ ಮಾಡಿದ್ದರು.


ಇದನ್ನೂ ಓದಿ: Urfi Javed: ವೈಟ್ ಡ್ರೆಸ್​​ಗೆ ಬ್ಲೂ ಲಿಪ್​​ಸ್ಟಿಕ್! ಪೆನ್ ತಿಂದ್ರಾ ಅಂತ ಕೇಳ್ತಿದ್ದಾರೆ ನೆಟ್ಟಿಗರು


ಸೋಷಿಯಲ್​ ಮೀಡಿಯಾದಲ್ಲಿ ಜೋರಾಯ್ತು ಚರ್ಚೆ!


ಇದರ ನಂತರ ಅಭಿಮಾನಿಗಳು ಕೋಪದಿಂದ ಉರ್ಫಿ ದೀದಿ ಎಂದು ಕರೆದರು ಮತ್ತು ಉರ್ಫಿ ಕೂಡ ಚಾಹತ್ ಆಂಟಿ ಎಂದು ಕರೆದರು. ಇದೀಗ ಚಾಹತ್ ಸೋಷಿಯಲ್ ಮೀಡಿಯಾದಲ್ಲಿ ಸ್ಟೋರಿ ಇಟ್ಟುಕೊಂಡು ಉರ್ಫಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಇದೇ ಚರ್ಚೆಯಾಗುತ್ತಿದೆ. 'ಸತ್ಯವನ್ನು ತಿಳಿಯದೆ ಪ್ರಚಾರಕ್ಕಾಗಿ ತೊಡಗಿಸಿಕೊಳ್ಳುವುದು ಮೂರ್ಖತನ.
ಬುದ್ಧಿಯಿಲ್ಲದ ಜನರೊಂದಿಗೆ ಏನು ವಾದಿಸಬೇಕು. ತಲೆ ಇದ್ದಿದ್ದರೆ ಸೆಮಿ ನ್ಯೂಡ್ ಸ್ಪಾಟಿಂಗ್ ಮಾಡುತ್ತಿರಲಿಲ್ಲ. ನೀನು ಯಾರೊಬ್ಬರ ತಾಯಿ, ಹೆಂಡತಿ, ಚಿಕ್ಕಮ್ಮ ಆಗುವ ಅರ್ಹತೆಯಿಲ್ಲ, ಆದ್ದರಿಂದ ಇತರರನ್ನು ಚಿಕ್ಕಮ್ಮ ಎಂದು ಕರೆಯಲು ಸಂತೋಷವಾಗಿರಿ' ಎಂದು ನಟಿ ಚಾಹತ್​ ಉರ್ಫಿ ಕಾಲೆಳೆದಿದ್ದಾರೆ.

Published by:Divya D
First published: