ಉರ್ಫಿ ಜಾವೇದ್ (Urfi Javed) ಸ್ಟೈಲಿಷ್ ಆಗಿ ಡ್ರೆಸ್ ಮಾಡಿಕೊಂಡು ಪಬ್ಲಿಕ್ ಪ್ಲೇಸ್ನಲ್ಲಿ ಜುಂ ಅಂತ ಓಡಾಡಿ ಪಬ್ಲಿಸಿಟಿ (Publicity) ಗಿಟ್ಟಿಸಿಕೊಳ್ತಾರೆ. ಈಗ ಬಿಜೆಪಿ ನಾಯಕಿ ಉರ್ಫಿ ವಿರುದ್ಧ ದೂರು ಕೂಡಾ ದಾಖಲಿಸಿದ್ದಾರೆ. ಆದರೆ ಉರ್ಫಿ ಜಾವೇದ್ ಇದಕ್ಕೆಲ್ಲ ಬಗ್ಗುವಂತೆ ಕಾಣುತ್ತಿಲ್ಲ. ನಟಿ ಈಗ ಮತ್ತೊಂದು ಫ್ಯಾಷನ್ ವಿಡಿಯೋವನ್ನು (Fashion Video) ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ಈ ಬಾರಿಯ ನಟಿಯ ದೇಹದಲ್ಲಿ ಬಟ್ಟೆ ಇಲ್ಲ, ಯಾವುದೇ ಸ್ಪಾಂಜ್ನಂತಹ ಒಂದು ವಸ್ತುವನ್ನು ಜೋಡಿಸಿಕೊಂಡಿದ್ದಾರೆ ಅಷ್ಟೆ.
ನಟಿ ಆಕಾಶ ನೀಲಿಬಣ್ಣದ ಬಾಟಂ ವೇರ್ ಧರಿಸಿದ್ದರೂ ಕೂಡಾ ದೇಹಕದ ಮೇಲರ್ಧ ಭಾಗದಲ್ಲಿ ಬಟ್ಟೆಯನ್ನೇ ಬಳಸಿಲ್ಲ. ಈ ಮೂಲಕ ತಮ್ಮ ವಿರುದ್ಧ ಕೇಸ್ ಕೊಟ್ಟರೂ ಡೋಂಟ್ ಕೇರ್ ಎನ್ನುವಂತೆ ವರ್ತಿಸಿದ್ದಾರೆ.
ವೈರಲ್ ಆಯ್ತು ವಿಡಿಯೋ
ಉರ್ಫಿ ಜಾವೇದ್ ಪೋಸ್ಟ್ ಮಾಡಿರುವ ಈ ವಿಡಿಯೋ ಸಖತ್ ವೈರಲ್ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಉರ್ಫಿ ಜಾವೇದ್ನ ಈ ವಿಡಿಯೋಗೆ ಒಂದೂವರೆಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಎಂಟೂವರೆ ಸಾವಿರ ಜನರು ಉರ್ಫಿಯ ಫೋಟೋಗೆ ಕಮೆಂಟ್ ಮಾಡಿದ್ದಾರೆ.
View this post on Instagram
ನಟಿ ಹಿಂದೂ ಸಂಸ್ಕೃತಿ ಬಗ್ಗೆ ತಿಳಿದುಕೊಳ್ಳಿ ಎಂದು ತಮ್ಮ ಲೇಟೆಸ್ಟ್ ಟ್ವೀಟ್ ಮೂಲಕ ಕ್ಲಾಸ್ ತೆಗೆದುಕೊಂಡಿದ್ದಾರೆ. ಇತ್ತೀಚೆಗಷ್ಟೇ ಉರ್ಫಿ ಜಾವೇದ್ ವಿರುದ್ದ ಬಿಜೆಪಿ ನಾಯಕಿ ದೂರು ದಾಖಲಿಸಿದ್ದರು. ಇದರ ನಂತರ ಉರ್ಫಿಯನ್ನು 2 ಗಂಟೆಗಳ ಕಾಲ ವಿಚಾರಣೆ ಕೂಡಾ ಮಾಡಲಾಗಿತ್ತು. ಇದಕ್ಕೆ ಉತ್ತರಿಸಿದ ಉರ್ಫಿ ಬಿಜೆಪಿ ನಾಯಕಿ ಆರೋಪ ಮಾಡೋ ಮೊದಲು ಪ್ರಾಚೀನ ಹಿಂದೂ ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳಬೇಕು ಎಂದು ಉತ್ತರ ನೀಡಿದ್ದಾರೆ. ಹಿಂದೂಗಳು ಉದಾರವಾದಿಗಳು, ವಿದ್ಯಾವಂತರು, ಮಹಿಳೆಯರಿಗೆ ಬಟ್ಟೆಗಳನ್ನು ಆಯ್ಕೆ ಮಾಡಲು ಸ್ವತಂತ್ರ ನೀಡಿದ್ದರು ಅಂತ ಹೇಳಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪ್ರಾಚೀನ ಶಿಲೆಯ ಫೋಟೋ ಹಂಚಿಕೊಂಡಿದ್ದರು.
This is how ancient Hindu women used to dress . Hindus were liberal , educated , women were allowed to choose their clothes , actively participated in sports, politics . They were sex and females body positive people. Go learn about Bhartiya Sanskriti first. pic.twitter.com/IeH1tHcEFG
— Uorfi (@uorfi_) January 14, 2023
ಲೈಂಗಿಕತೆ ಮತ್ತು ಸ್ತ್ರೀ ದೇಹ ಧನಾತ್ಮಕವಾಗಿ ಚಿತ್ರಿಸಲಾಗಿತ್ತು. ಮೊದಲು ಭಾರತೀಯ ಸಂಸ್ಕೃತಿಯ ಬಗ್ಗೆ ಕಲಿಯಿರಿ ಎಂದು ಹೇಳಿದ್ದರು. ಅಂತೂ ಉರ್ಫಿ ಜಾವೇದ್ ತಮ್ಮ ಡ್ರೆಸ್ಸಿಂಗ್ ಸ್ಟೈಲ್ ಬದಲಾಯಿಸೋ ಯಾವ ಸೂಚನೆಯೂ ಕಾಣಿಸುತ್ತಿಲ್ಲ.
ಬಿಜೆಪಿ ನಾಯಕಿ ಚಿತ್ರಾ ವಾಘ್ ಅವರ ಪೊಲೀಸ್ ದೂರಿನ ಭಾಗವಾಗಿ ಉರ್ಫಿ ಜಾವೇದ್ ಅವರನ್ನು ಅಂಬೋಲಿ ಪೊಲೀಸರು ವಿಚಾರಣೆಗೆ ಕರೆದಿದ್ದಾರೆ. ನೋಟಿಸ್ ನಂತರ ಉರ್ಫಿ ಜಾವೇದ್ ವಿಚಾರಣೆಗೆ ಬಂದರು. ಉರ್ಫಿಯನ್ನು ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು. ಈ ಎರಡು ಗಂಟೆಯ ವಿಚಾರಣೆಯಲ್ಲಿ ಉರ್ಫಿ ಹೇಳಿದ್ದೇನು ಎಂದು ಎಲ್ಲರೂ ಆಶ್ಚರ್ಯಪಟ್ಟಿದ್ದರು. ನಟಿಯಲ್ಲಿ ಏನು ಪ್ರಶ್ನೆ ಕೇಳಲಾಗಿತ್ತು? ಪೊಲೀಸರ ತನಿಖೆಯ ವೇಳೆ ಉರ್ಫಿ ಜಾವೇದ್ ಅವರು ನಿರಾಳವಾಗಿರುವುದು ಕಂಡುಬಂತು. ಅವರು ಭಯಬಿದ್ದಂತೆ ಕಂಡುಬರಲಿಲ್ಲ.
ಉರ್ಫಿ ಅವರು ನಾನು ಭಾರತೀಯಳು, ನನ್ನ ಆಯ್ಕೆಯ ಬಟ್ಟೆಗಳನ್ನು ಧರಿಸಲು ನನಗೆ ಸಂಪೂರ್ಣ ಹಕ್ಕಿದೆ. ಭಾರತದ ಸಂವಿಧಾನ ನನಗೆ ಆ ಹಕ್ಕನ್ನು ನೀಡಿದೆ ಎಂದಿದ್ದಾರೆ.ನನ್ನ ಕೆಲಸಕ್ಕೆ ತಕ್ಕಂತೆ ನಾನು ಈ ಬಟ್ಟೆಗಳನ್ನು ಧರಿಸುತ್ತೇನೆ. 'ನಾನು ಫೋಟೋ ಶೂಟ್ ಮಾಡುತ್ತೇನೆ. ಕೆಲವೊಮ್ಮೆ ಕೆಲಸದ ಗಡಿಬಿಡಿಯಲ್ಲಿ ಬಟ್ಟೆ ಬದಲಾಯಿಸಲು ಸಮಯ ಸಿಗುವುದಿಲ್ಲ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ