Urfi Javed: ಲ್ಯಾವೆಂಡರ್ ಬಣ್ಣದ ಬ್ಯಾಕ್​ಲೆಸ್ ಡ್ರೆಸ್​ನಲ್ಲಿ ಮಿಂಚಿದ ಉರ್ಫಿ!

Urfi Javed: ಹಿಂದಿ ಕಿರುತೆರೆಯ ಸೆಲೆಬ್ರಿಟಿ ಉರ್ಫಿ ಜಾವೇದ್ ಬಿಗ್​ಬಾಸ್ ಒಟಿಟಿಗೆ ಹೋಗಿದ್ದೇ ಹೋಗಿದ್ದು ಫುಲ್ ಫೇಮಸ್ ಆಗಿ ಬಿಟ್ಟರು. ಅವರ ಚಿತ್ರ ವಿಚಿತ್ರ ಉಡುಗೆಗಳು ಅವರಿಗೆ ಇನ್ನಷ್ಟು ಅಭಿಮಾನಿಗಳನ್ನು ತಂದುಕೊಟ್ಟಿದೆ.

ಉರ್ಫಿ ಜಾವೇದ್

ಉರ್ಫಿ ಜಾವೇದ್

  • Share this:
ಉರ್ಫಿ ಜಾವೇದ್ (Urfi Javed) ಈಗ ಟಾಪ್ ಸೆಲೆಬ್ರಿಟಿಗಳನ್ನೂ (Celebrity) ಮೀರಿಸಿ ಫಾಲೋವರ್ಸ್​ಗಳನ್ನು ಪಡೆಯುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ (Social Media) ಅಕ್ಷರಶಃ ಉರ್ಫಿ ರಾಕಿಂಗ್. ತಮ್ಮ ಚಿತ್ರ ವಿಚಿತ್ರ ಉಡುಪುಗಳಿಂದ, ಫ್ಯಾಷನ್​ಗಳಿಂದ ನಟಿ ಟ್ರೋಲ್ (Troll) ಆಗುವುದರ ಜೊತೆ ಜೊತೆಗೆ ಸಿಕ್ಕಾಪಟ್ಟೆ ಅಭಿಮಾನಿಗಳ ಪ್ರೀತಿ ಗಳಿಸಿದ್ದಾರೆ. ಸಾಲದ್ದಕ್ಕೆ ಪಾಪ್ಪರಾಜಿಗಳ ಮೋಸ್ಟ್ ಫೇವರೇಟ್ ಆಗಿದ್ದಾರೆ. ಉರ್ಫಿ ಜಾವೇದ್ (Urfi Javed) ಹಾಟ್ ಲ್ಯಾವೆಂಡರ್ ಬ್ಯಾಕ್‌ಲೆಸ್ (Backless) ಮಿನಿ ಡ್ರೆಸ್‌ನಲ್ಲಿ ಉತ್ಕೃಷ್ಟತೆಯನ್ನು ವ್ಯಕ್ತಪಡಿಸಿದ್ದಾರೆ. ಉರ್ಫಿ ಜಾವೇದ್ (Urfi Javed) ಮತ್ತೊಮ್ಮೆ ತಮ್ಮ ವಿಶಿಷ್ಟ ಮತ್ತು ಪ್ರಾಯೋಗಿಕ ಫ್ಯಾಷನ್ ಸೆನ್ಸ್‌ನೊಂದಿಗೆ (Fashion Sense) ಮರಳಿದ್ದಾರೆ. ನೆಟಿಜನ್‌ಗಳು ಉತ್ಸುಕರಾಗಿದ್ದಾರೆ. ತನ್ನ ಬೋಲ್ಡ್ ವ್ಯಕ್ತಿತ್ವ ಮತ್ತು ಸೀದಾ ಸಾದಾ ಹೇಳಿಕೆಗಳಿಗೆ ಹೆಸರುವಾಸಿಯಾಗಿರುವ ಹಾಟ್ ಚೆಲುವೆ ಇತ್ತೀಚೆಗೆ ಸಿಜ್ಲಿಂಗ್ ಮಿನಿ ಡ್ರೆಸ್ (Mini Dress) ಧರಿಸಿದ್ದರು. ಉರ್ಫಿ ಅವರು ಶಟರ್‌ಬಗ್‌ಗಳಿಗೆ ಪೋಸ್ ನೀಡುವಾಗ ಲ್ಯಾವೆಂಡರ್ ಬ್ಯಾಕ್‌ಲೆಸ್ ಉಡುಪನ್ನು ಧರಿಸಿದ್ದರು.

ಈಗಾಗಲೇ ತಮ್ಮ ಔಟ್‌ಫಿಟ್‌(Outfit)ಗಳ ವಿಚಾರದಲ್ಲಿ ಉರ್ಫಿ ಜಾವೇದ್ ಹಲವು ಬಾರಿ ಟ್ರೋಲ್ ಆಗಿದ್ದಾರೆ. ಹಾಗ್ನೋಡಿದ್ರೆ, ಉರ್ಫಿ ಜಾವೇದ್ ಯಾವುದೇ ಡ್ರೆಸ್ ತೊಟ್ಟರೂ ಟ್ರೋಲ್(Troll) ಆಗುತ್ತಿದ್ದಾರೆ. ಟ್ರೋಲ್​ ಆಗುವ ರೀತಿಯಲ್ಲೇ ಪ್ರತಿಬಾರಿ ವಿಚಿತ್ರ ಉಡುಗೆಗಳನ್ನು ಧರಿಸಿ ಉರ್ಫಿ ಕ್ಯಾಮರಾಗೆ ಪೋಸ್​ ಕೊಡುತ್ತಾರೆ. ಈಗಲೂ ಅಷ್ಟೇ ಹೆಸರೆ ಹೇಳಲು ಸಾಧ್ಯವಾಗದ ಉಡುಗೆ ತೊಟ್ಟು ಕ್ಯಾಮರಾಗೆ ಪೋಸ್​ ಕೊಟ್ಟಿದ್ದಾರೆ.

ಆಕೆಯ ಫ್ಯಾಶನ್ ಉಡುಪುಗಳಿಂದಾಗಿ ಆಕೆಯ ಫೊಟೋಗಳು ಮತ್ತು ವೀಡಿಯೊಗಳು ಆಗಾಗ ಇಂಟರ್ನೆಟ್​ನಲ್ಲಿ ಹೊಸ ಕ್ರೇಜ್ ಸೃಷ್ಟಿಸುತ್ತದೆ. ಈ ನಟಿ ಪಾಪರಾಜಿಗಳ ಅತ್ಯಂತ ಪ್ರೀತಿಯ ಸೆಲೆಬ್ರಿಟಿಯಾಗಿದ್ದಾರೆ. ಉರ್ಫಿಯನ್ನು ಹೆಚ್ಚಾಗಿ ನೆಟಿಜನ್‌ಗಳು ಟ್ರೋಲ್ ಮಾಡುತ್ತಾರೆ.

ಲ್ಯಾವೆಂಡರ್ ಮಿನಿ ಡ್ರೆಸ್

ಆಕೆಯ ವಿಚಿತ್ರ ಮತ್ತು ವಿಲಕ್ಷಣವಾದ ಉಡುಪಿನ ಆಯ್ಕೆಗಳಿಗಾಗಿ ಆಕೆಯನ್ನು ಟೀಕಿಸಿದ್ದಾರೆ. ಆದರೆ ಅದು ತನ್ನ ಜೀವನ ಮತ್ತು ಅವಳು ತನಗೆ ಅನಿಸಿದ್ದನ್ನು, ಬೇಕಾದ್ದನ್ನು ಧರಿಸುತ್ತಾಳೆ ಎಂದು ನಟಿ ಹೇಳಿದ್ದಾರೆ. ಲ್ಯಾವೆಂಡರ್ ಬ್ಯಾಕ್‌ಲೆಸ್ ಮಿನಿ ಡ್ರೆಸ್‌ನಲ್ಲಿ ಉರ್ಫಿ ಆಕರ್ಷಕವಾಗಿ ಕಾಣಿಸಿದ್ದಾರೆ.






ಛಾಯಾಗ್ರಾಹಕ ವೈರಲ್ ಭಯಾನಿ ಹಂಚಿಕೊಂಡ ವೀಡಿಯೊದಲ್ಲಿ ನಟಿ ನೆಟಿಜನ್‌ಗಳಿಂದ ಅಗಾಧ ಪ್ರತಿಕ್ರಿಯೆಗಳನ್ನು ಪಡೆದರು. ವೀಡಿಯೋದಲ್ಲಿ ಉರ್ಫಿಯನ್ನು ನೋಡಿ ಕಮೆಂಟಿಸಿದ ವ್ಯಕ್ತಿ, "ನಾನು ಈ ಉಡುಗೆಯನ್ನು ಇಷ್ಟಪಡುತ್ತೇನೆ" ಎಂದು ಬರೆದಿದ್ದಾರೆ. ಅಭಿಮಾನಿಯೊಬ್ಬರು "ಹೃದಯದ ಎಮೋಜಿ" ಕಾಮೆಂಟ್ ಮಾಡಿದ್ದಾರೆ. ಉಡುಪನ್ನು ಇಷ್ಟಪಡದ ವ್ಯಕ್ತಿಯೊಬ್ಬರು, ಬಕ್ವಾಸ್ ಎಂದು ಕಾಲೆಳೆದಿದ್ದಾರೆ.

ಉರ್ಫಿಗೆ ಟ್ರೋಲ್ ಹೊಸದೇನಲ್ಲ

‘ಉರ್ಫಿ ಜಾವೇದ್​ ಟ್ರೋಲ್​ಗೆ ಒಳಗಾಗೋದು ಹೊಸದೇನಲ್ಲ. ಪ್ರತಿ ಭಾರಿ ಟ್ರೋಲ್​ಗೆ ಒಳಗಾಗ್ತಾರೆ. ಆದರೆ, ಯಾವುದಕ್ಕೂ ತಲೆಕೆಡಿಸಿಕೊಳ್ಳಲ್ಲ. ತನಗಿಷ್ಟ ಬಂದ ಉಡುಗೊರೆ ತೊಟ್ಟು ಖುಷಿ ಪಡುತ್ತಾರೆ. ಉರ್ಫಿ ಅಷ್ಟಾಗಿ ಫೇಮಸ್ ಆಗಿರಲಿಲ್ಲ. ಯಾವಾಗ ಬೋಲ್ಡ್ ಅವತಾರದಲ್ಲಿ ಏರ್​​ಪೋರ್ಟ್​ನಲ್ಲಿ(Airport) ಕಾಣಿಸಿಕೊಂಡರೋ ಅಂದಿನಿಂದ ಉರ್ಫಿ ಸಖತ್ ಫೇಮಸ್ ಆದರು. ಕೆಲವರು ಉರ್ಫಿ ಜಾವೇದ್‌ರನ್ನ ಫ್ಯಾಶನ್ ಡಿಸಾಸ್ಟರ್(Fashion Disaster) ಅಂತಲೇ ಕರೆಯುತ್ತಿದ್ದಾರೆ. ಪ್ರತಿದಿನ ಚಿತ್ರ, ವಿಚಿತ್ರ ಬಟ್ಟೆಗಳನ್ನು ಧರಿಸಿ ಪಾಪಾರಾಜಿಗಳ ಕಣ್ಣಿಗೆ ಕಾಣಿಸಿಕೊಳ್ಳುತ್ತಾರೆ.

urfi javed
ಉರ್ಫಿ ಜಾವೇದ್​


ಕ್ಯಾಂಡಿ ಡ್ರೆಸ್

ಅಜ್ಜಿ ಕೂದಲು ಹತ್ತಿ ಮಿಠಾಯಿ ನಿಮಗೆ ತಿಳಿದಿದೆಯೇ? ಇದು ಪ್ರತಿಯೊಬ್ಬ ವ್ಯಕ್ತಿಯ ಬಾಲ್ಯದ ಸಿಹಿ ನೆನಪು.ಇಂದಿಗೂ ಅನೇಕ ಮಕ್ಕಳು ಹತ್ತಿ ಕ್ಯಾಂಡಿಯನ್ನು ಆನಂದಿಸುತ್ತಾರೆ. ಇವಾಗ ಯಾಕಪ್ಪ ಈ ಅಜ್ಜಿ ಕೂದಲು ಅಂತ ಹೇಳುತ್ತಾ ಇದ್ದೀವಿ ಅಂತ ಶಾಕ್​ ಆಯಿತಾ? ಆಗಲೇಬೇಕು. ಯಾಕಂದರೆ ಈ ಕ್ಯಾಂಡಿಯಲ್ಲೇ ಮೈ ಮುಚ್ಚಿಕೊಂಡು ಬಂದಿದ್ದರು ಉರ್ಪಿ ಜಾವೇದ್​.
Published by:Divya D
First published: