Urfi Javed: ವೈಟ್ ಡ್ರೆಸ್​​ಗೆ ಬ್ಲೂ ಲಿಪ್​​ಸ್ಟಿಕ್! ಪೆನ್ ತಿಂದ್ರಾ ಅಂತ ಕೇಳ್ತಿದ್ದಾರೆ ನೆಟ್ಟಿಗರು

ಉರ್ಫಿ ಜಾವೇದ್ ಈಗ ನೀಲಿ ಬಣ್ಣದ ಲಿಪ್​​ಸ್ಟಿಕ್ ಹಚ್ಚಿಕೊಂಡು ಕಾಣಿಸಿಕೊಂಡಿದ್ದಾರೆ. ವಿಚಿತ್ರ ಲುಕ್​ನಲ್ಲಿ ನಟಿ ಕಾಣಿಸಿಕೊಂಡಿದ್ದು ಇದನ್ನು ನೋಡಿದ ನೆಟ್ಟಿಗರು ನಟಿಯನ್ನು ಟ್ರೋಲ್ ಮಾಡುತ್ತಿದ್ದಾರೆ.

ಉರ್ಫಿ ಜಾವೇದ್

ಉರ್ಫಿ ಜಾವೇದ್

  • Share this:
ಉರ್ಫಿ ಜಾವೇದ್ (Urfi Javed) ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಡ್ರೆಸ್​​ನಲ್ಲಿ ಎಕ್ಸ್​ಪರಿಮೆಂಟ್ ಮಾಡುತ್ತಲೇ ಇರುವ ನಟಿ ಧರಿಸಿದ್ದೇ ಫ್ಯಾಷನ್ (Fashion) ಎಂಬಂತಾಗಿದೆ. ಉರ್ಫಿ ಯಾರ ಬಗ್ಗೆಯೂ ತಲೆ ಕೆಡಿಸಿಕೊಳ್ಳುವುದಿಲ್ಲ. ತಮಗೆ ಬೇಕಾದ ಬಟ್ಟೆ ಬೇಕಾದಂತೆ ಧರಿಸುತ್ತಾರೆ. ನೆಟ್ಟಿಗರು ಟ್ರೋಲ್ (Troll) ಮಾಡಿದರೂ ನಟಿ ತಮ್ಮ ಫ್ಯಾಷನ್ ಬಿಟ್ಟುಕೊಡುವುದಿಲ್ಲ. ಬ್ಲೇಡ್​ಗಳ ಡ್ರೆಸ್, ಕಲ್ಲಿನ ಡ್ರೆಸ್ ಹೀಗೆ ಸಿಕ್ಕ ಸಿಕ್ಕ ಡ್ರೆಸ್ ಎಲ್ಲವನ್ನೂ ಟ್ರೈ ಮಾಡಿದ್ದಾರೆ ಉರ್ಫಿ. ಈಗ ನಟಿ (Actress) ಡ್ರೆಸ್ ಜೊತೆಗೆ ಮೇಕಪ್ ಕೂಡಾ ಬದಲಾಯಿಸುತ್ತಿದ್ದಾರೆ. ಮೇಕಪ್​ನಲ್ಲಿ ತಕ್ಕಮಟ್ಟಿನ ಬದಲಾವಣೆಗಳನ್ನು ತರಲು ಟ್ರೈ ಮಾಡುತ್ತಿದ್ದಾರೆ ಬಿಗ್ ಬಾಸ್ ಖ್ಯಾತಿಯ ಉರ್ಫಿ ಜಾವೇದ್.

ಗಾಢ ನೀಲಿ ಬಣ್ಣದ ಲಿಪ್​ಸ್ಟಿಕ್

ಲಿಪ್​​ಸ್ಟಿಕ್ ಎಂದರೆ ರೆಡ್, ಮೆರೂನ್, ಬೇಬಿ ಪಿಂಕ್ ಈ ರೀತಿಯ ಕಲರ್ ಬಳಸುವವರು ಹೆಚ್ಚು. ಇದು ಸಖತ್ ಟ್ರೆಂಡಿಯಾಗಿ ಕಾಣಿಸುತ್ತದೆ. ಸಾಧಾರಣ ಎಲ್ಲ ಉಡುಪಿಗೂ ಇದು ಹೊಂದಿಕೆಯಾಗುತ್ತದೆ. ಆದರೆ ಉಫ್ರಿ ಜಾವೇದ್ ಈಗ ಗಾಢ ನೀಲಿ ಬಣ್ಣದ ಲಿಪ್​ಸ್ಟಿಕ್ ಹಚ್ಚಿಕೊಂಡಿದ್ದಾರೆ. ಈ ಕಾರಣದಿಂದಲೇ ನಟಿ ಟ್ರೋಲ್ ಆಗುತ್ತಿದ್ದಾರೆ.






ಪೆನ್ ತಿಂದ್ರಾ ಅಂತ ಕೇಳ್ತಿದ್ದಾರೆ ನೆಟ್ಟಿಗರು

ಉರ್ಫಿಯ ಈ ಅವತಾರ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಮೇಕಪ್ ಅಂತ ಹೇಳಿಕೊಂಡು ಹೀಗೆಲ್ಲಾ ಅವತಾರಾ ಮಾಡ್ತಾರಾ ಎಂದು ಪ್ರಶ್ನಿಸುತ್ತಿದ್ದಾರೆ ನೆಟ್ಟಿಗರು. ಇನ್ನೂ ಕೆಲವರು ಊಟಕ್ಕೇನು ಪೆನ್ನು ತಿಂದಿರಾ ಎಂದು ಕಾಲೆಳೆಯುತ್ತಿದ್ದಾರೆ.

ನೆಟ್ಟಿಗರು ಏನೇನು ಕಮೆಂಟ್ ಮಾಡಿದ್ರು?

ಬಾಲಿವುಡ್​ ಆಮೇಲೆ ಬಾಯ್ಕಾಟ್ ಮಾಡೋಣ, ಮೊದಲು ಉರ್ಫಿಯನ್ನು ಬಾಯ್ಕಾಟ್ ಮಾಡಿ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಇಂಕಗ್ ಪೆನ್​​ನ ಶಾಯಿ ತಿಂದುಬಿಟ್ಟಿದ್ದೀರಾ ಎಂದು ಪಶ್ನಿಸಿದ್ದಾರೆ. ಇನ್ನೂ ಕೆಲವರು ಉರ್ಫಿಗೆ ಮೇಕಪ್ ಟೇಸ್ಟ್ ಇಲ್ಲ ಎಂದಿದ್ದಾರೆ.

ಇದನ್ನೂ ಓದಿ: Urfi Javed: ಯಾರೋ ಅದು ಉರ್ಫಿ ಹಾರ್ಟ್ ಬ್ರೇಕ್​ ಮಾಡಿದ್ದು? ಬೇಜಾರಲ್ಲಿ ಅದೇ ಅವತಾರದಲ್ಲೇ ಬಂದಿದ್ದಾರೆ!

ಈಗಾಗಲೇ ತಮ್ಮ ಔಟ್‌ಫಿಟ್‌ಗಳ ವಿಚಾರದಲ್ಲಿ ಉರ್ಫಿ ಜಾವೇದ್ ಹಲವು ಬಾರಿ ಟ್ರೋಲ್ ಆಗಿದ್ದಾರೆ. ಹಾಗ್ನೋಡಿದ್ರೆ, ಉರ್ಫಿ ಜಾವೇದ್ ಯಾವುದೇ ಡ್ರೆಸ್ ತೊಟ್ಟರೂ ಟ್ರೋಲ್ಆಗುತ್ತಿದ್ದಾರೆ. ಟ್ರೋಲ್​ ಆಗುವ ರೀತಿಯಲ್ಲೇ ಪ್ರತಿಬಾರಿ ವಿಚಿತ್ರ ಉಡುಗೆಗಳನ್ನು ಧರಿಸಿ ಉರ್ಫಿ ಕ್ಯಾಮರಾಗೆ ಪೋಸ್​ ಕೊಡುತ್ತಾರೆ. ಈಗಲೂ ಅಷ್ಟೇ ಹೆಸರೆ ಹೇಳಲು ಸಾಧ್ಯವಾಗದ ಉಡುಗೆ ತೊಟ್ಟು ಕ್ಯಾಮರಾಗೆ ಪೋಸ್​ ಕೊಟ್ಟಿದ್ದಾರೆ.

ಆಕೆಯ ಫ್ಯಾಶನ್ ಉಡುಪುಗಳಿಂದಾಗಿ ಆಕೆಯ ಫೊಟೋಗಳು ಮತ್ತು ವೀಡಿಯೊಗಳು ಆಗಾಗ ಇಂಟರ್ನೆಟ್​ನಲ್ಲಿ ಹೊಸ ಕ್ರೇಜ್ ಸೃಷ್ಟಿಸುತ್ತದೆ. ಈ ನಟಿ ಪಾಪರಾಜಿಗಳ ಅತ್ಯಂತ ಪ್ರೀತಿಯ ಸೆಲೆಬ್ರಿಟಿಯಾಗಿದ್ದಾರೆ. ಉರ್ಫಿಯನ್ನು ಹೆಚ್ಚಾಗಿ ನೆಟಿಜನ್‌ಗಳು ಟ್ರೋಲ್ ಮಾಡುತ್ತಾರೆ.

ಇದನ್ನೂ ಓದಿ: Urfi Javed: ಕೆಂಪು, ಬಿಳಿ, ನೀಲಿ ಹೂಗಳನ್ನು ದೇಹಕ್ಕೆ ಅಂಟಿಸಿದ ಉರ್ಫಿ! ಅಬ್ಬಾ ಸಾಕಮ್ಮಾ ಅಂತಿದ್ದಾರೆ ನೆಟ್ಟಿಗರು

ಉರ್ಫಿಗೆ ಟ್ರೋಲ್ ಹೊಸದೇನಲ್ಲ

‘ಉರ್ಫಿ ಜಾವೇದ್​ ಟ್ರೋಲ್​ಗೆ ಒಳಗಾಗೋದು ಹೊಸದೇನಲ್ಲ. ಪ್ರತಿ ಭಾರಿ ಟ್ರೋಲ್​ಗೆ ಒಳಗಾಗ್ತಾರೆ. ಆದರೆ, ಯಾವುದಕ್ಕೂ ತಲೆಕೆಡಿಸಿಕೊಳ್ಳಲ್ಲ. ತನಗಿಷ್ಟ ಬಂದ ಉಡುಗೊರೆ ತೊಟ್ಟು ಖುಷಿ ಪಡುತ್ತಾರೆ. ಉರ್ಫಿ ಅಷ್ಟಾಗಿ ಫೇಮಸ್ ಆಗಿರಲಿಲ್ಲ. ಯಾವಾಗ ಬೋಲ್ಡ್ ಅವತಾರದಲ್ಲಿ ಏರ್​​ಪೋರ್ಟ್​ನಲ್ಲಿ(Airport) ಕಾಣಿಸಿಕೊಂಡರೋ ಅಂದಿನಿಂದ ಉರ್ಫಿ ಸಖತ್ ಫೇಮಸ್ ಆದರು.

ಕೆಲವರು ಉರ್ಫಿ ಜಾವೇದ್‌ರನ್ನ ಫ್ಯಾಶನ್ ಡಿಸಾಸ್ಟರ್(Fashion Disaster) ಅಂತಲೇ ಕರೆಯುತ್ತಿದ್ದಾರೆ. ಪ್ರತಿದಿನ ಚಿತ್ರ, ವಿಚಿತ್ರ ಬಟ್ಟೆಗಳನ್ನು ಧರಿಸಿ ಪಾಪಾರಾಜಿಗಳ ಕಣ್ಣಿಗೆ ಕಾಣಿಸಿಕೊಳ್ಳುತ್ತಾರೆ.

ಯಾರು ಏನಾದ್ರೂ ಹೇಳಲಿ ಉರ್ಫಿ ಇರೋದೇ ಹೀಗೆ

ಬಹಳಷ್ಟು ನಟಿಯರು, ಜನರು ನಟಿಯನ್ನು ಟ್ರೋಲ್ ಮಾಡಿ ಕಾಲೆಳೆದರೂ ಉರ್ಫಿ ಒಂಚೂರು ತೆಲೆ ಕೆಡಿಸಿಕೊಳ್ಳುವುದಿಲ್ಲ. ಈ ಕಾರಣದಿಂದಲೇ ನಟಿ ಸೋಷಿಯಲ್ ಮೀಡಿಯಾದಲ್ಲಿ ದಿನದಿಂದ ದಿನಕ್ಕೆ ಫಾಲೋವರ್ಸ್ ಸಂಖ್ಯೆ ಏರಿಸಿಕೊಳ್ಳುತ್ತಲೇ ಇದ್ದಾರೆ.
Published by:Divya D
First published: