Urfi Javed: ಈ ಉರ್ಫಿ ಜಾವೇದ್‌ಗೆ ಬಟ್ಟೆ ಅಂದ್ರೆ ಅಲರ್ಜಿನಾ? ಇಲ್ಲಿ ನೋಡಿ ಹೆಂಗೆ ಪೋಸ್ ಕೊಟ್ಟಿದ್ದಾಳೆ ಅಂತ!

ನಟಿ ಉರ್ಫಿ ಜಾವೇದ್ ತಮ್ಮ ಹಾಟ್ ಹಾಟ್ ಫೋಟೋ ಮೂಲಕ ಪೋಲಿ ಅಭಿಮಾನಿಗಳಿಗೆ 'ಗಿಫ್ಟ್' ನೀಡಿದ್ದಾರೆ. 'ಬಟ್ಟೆ ಅಂದ್ರೆ ಅಲರ್ಜಿ'ಯೇನೋ ಎನಿಸುವಷ್ಟು ಕಡಿಮೆ ಬಟ್ಟೆಯಲ್ಲೇ ಮೈಮಾಟ ತೋರುವ ಈ ಬ್ಯೂಟಿ ಕ್ವೀನ್, ಈಗ ಬಟ್ಟೆ ಅಲ್ಲ, ಫೋಟೋ ಅಲ್ಲ ಅಂತ ಹೊಸ ಫೋಟೋ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ!

ನಟಿ ಉರ್ಫಿ ಜಾವೇದ್

ನಟಿ ಉರ್ಫಿ ಜಾವೇದ್

  • Share this:
ಯುಗಾದಿ (Yugadi) ಹಬ್ಬದ (Festival) ಹೊಸ್ತಿಲಲ್ಲೇ ನಟಿ ಉರ್ಫಿ ಜಾವೇದ್ (Urfi Javed) ಅಭಿಮಾನಿಗಳ ಮುಂದೆ ಪ್ರತ್ಯಕ್ಷರಾಗಿದ್ದಾರೆ. ತನ್ನ ಹಾಟ್ ಹಾಟ್ (Hot) ಫೋಟೋದ (Photo) ಮೂಲಕ ಪೋಲಿ ಅಭಿಮಾನಿಗಳಿಗೆ (Fans) ಗಿಫ್ಟ್ (Gift) ನೀಡಿದ್ದಾರೆ. ಬಟ್ಟೆ (Cloth) ಅಂದ್ರೆ ಅಲರ್ಜಿಯೇ (Allergy) ನೋ ಎನಿಸುವಷ್ಟು ಕಡಿಮೆ ಬಟ್ಟೆಯಲ್ಲೇ ಮೈಮಾಟ ತೋರುವ ಈ ಬ್ಯೂಟಿ ಕ್ವೀನ್ (Beauty Queen), ಈಗ ಬಟ್ಟೆ ಅಲ್ಲ, ಫೋಟೋ ಅಲ್ಲ ಅಂತ ಹೊಸ ಫೋಟೋ ಇನ್ಸ್‌ಸ್ಟಾಗ್ರಾಮ್‌ನಲ್ಲಿ (Instagram) ಶೇರ್ (Share) ಮಾಡಿದ್ದಾರೆ. ಅಂದರೆ ಈ ಸುರಸುಂದರಿ ಉರ್ಫಿ ನಾನಾ ಅವತಾರಗಳಲ್ಲಿ ತಾನು ತೆಗೆಸಿಕೊಂಡ ಫೋಟೋಗಳನ್ನೇ ತನ್ನ ಮೈಮೇಲೆ ಹೊದ್ದುಕೊಂಡು, ಬಟ್ಟೆಯಂತೆ ಮಾಡಿಕೊಂಡಿದ್ದಾರೆ. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ (Viral) ಆಗಿದೆ.

ಮತ್ತೆ ಹೊಸ ಅವತಾರದಲ್ಲಿ ಉರ್ಫಿ ಜಾವೇದ್

ಆಧುನಿಕ ಫ್ಯಾಷನ್ ಮತ್ತು ಟ್ರೆಂಡ್ ಹೆಸರಿನಲ್ಲಿ ವಿಶಿಷ್ಟ ವಿನ್ಯಾಸದ ಉಡುಪು ಧರಿಸುವುದರಲ್ಲಿ ನಟಿ ಉರ್ಫಿ ಜಾವೇದ್ ಎತ್ತಿದ ಕೈ. ಅದರಲ್ಲೂ, ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುವ ಫೋಟೊ, ವಿಡಿಯೊಗಳು ವೈರಲ್ ಆಗುವ ಜತೆಗೇ, ಟ್ರೋಲ್ ಕೂಡ ಆಗುತ್ತವೆ. ಈ ಬಾರಿ ಉರ್ಫಿ ಜಾವೇದ್ ಅವರು, ತಮ್ಮದೇ ಫೋಟೊಗಳ ಪ್ರಿಂಟ್ ಬಳಸಿ ತಯಾರಿಸಿದ ಉಡುಪು ಧರಿಸಿ ಪ್ರತ್ಯಕ್ಷರಾಗಿದ್ದಾರೆ.

ಫೋಟೋಗಳಲ್ಲೇ ಮೈಮುಚ್ಚಿಕೊಂಡ ಉರ್ಫಿ

ಈ ಹಿಂದೆ ಚಿತ್ರ ವಿಚಿತ್ರ ರೀತಿಯ ಡ್ರೆಸ್ ತೊಟ್ಟಿ ಉರ್ಫಿ ಸುದ್ದಿ ಮಾಡಿದ್ದರು. ಆಕೆ ಫೋಟೋಗಳು ಸಾಕಷ್ಟು ವೈರಲ್ ಆಗಿದ್ದವು. ಇದೀಗ ಉರ್ಫಿ ಜಾವೇದ್ ಮೈಮುಚ್ಚುವಷ್ಟೇ ಫೋಟೊ ಬಳಸಿ, ಅದರಿಂದ ವಸ್ತ್ರ ತಯಾರಿಸಲಾಗಿದ್ದು, ಅದನ್ನು ಧರಿಸಿ ಉರ್ಫಿ ಫೋಟೊಗೆ ಪೋಸ್ ಕೊಟ್ಟಿದ್ದಾರೆ.

ಇದನ್ನೂ ಓದಿ: Urfi Javed: ಇವಳೇನು ಉರ್ಫಿಯೋ, ಸ್ವರ್ಗದಿಂದ ಧರೆಗಿಳಿದ ಊರ್ವಶಿಯೋ! ಮತ್ತೆ ವೈರಲ್ ಆಯ್ತಪ್ಪಾ ಹೊಸ ಅವತಾರ

ಇಂಟರ್‌ನೆಟ್ ನೋಡಿ ಈ ತರ ಐಡಿಯಾ ಬಂದಂತೆ!

ಅಂದಹಾಗೆ ಉರ್ಫಿ ಜಾವೇದ್‌ಗೆ  ವಿನ್ಯಾಸದ ವಿಚಾರ ಹೊಳೆದಿದ್ದು ಇಂಟರ್‌ನೆಟ್ ನೋಡಿದ ಬಳಿಕವಂತೆ.. ಈ ಬಗ್ಗೆ ಉರ್ಫಿ ಸ್ವತಃ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹೇಳಿಕೊಂಡಿದ್ದಾರೆ. ಆನ್‌ಲೈನ್‌ನಲ್ಲಿ ಈ ವಿನ್ಯಾಸ ನೋಡಿದ ಬಳಿಕ ತಾನೇಕೆ ಟ್ರೈ ಮಾಡಬಾರದು ಎಂದು ಎನಿಸಿತು. ಅದೇ ರೀತಿ ಪ್ರಯತ್ನಿಸಿದ್ದು, ಅದರ ಫಲಿತಾಂಶ ಇಲ್ಲಿದೆ ಎಂದು ಉರ್ಫಿ ವಿಡಿಯೋ ಕೂಡ ಪೋಸ್ಟ್ ಮಾಡಿದ್ದಾರೆ.

ಹೊಸ ಅವತಾರದಲ್ಲಿ ಉರ್ಫಿ ಜಾವೇದ್


ಬೆನ್ನು ತೋರಿಸಿ ಕಿಚ್ಚು ಹಚ್ಚಿದ್ದ ಉರ್ಫಿ

ನಟಿ ಉರ್ಪಿ ಜಾವೇದ್ ತಮ್ಮ ತುಂಬಾ ಹಾಟ್ ಟು ಹ್ಯಾಂಡಲ್ ಲುಕ್‌ನಿಂದ ಸಾಮಾಜಿಕ ಮಾಧ್ಯಮಕ್ಕೆ ಬೆಂಕಿ ಹಚ್ಚುತ್ತಿದ್ದಾರೆ. ಈ ಹಿಂದೆ ತಮ್ಮ ಬೆತ್ತಲೆ ಬೆನ್ನು ತೋರಿಸಿರುವ ಉರ್ಫಿ, ಹುಡುಗರ ಎದೆಗೆ ಕಿಚ್ಚು ಹಚ್ಚಿದ್ದರು. ವೀಡಿಯೊದಲ್ಲಿ, ಉರ್ಫಿ ಜಾವೇದ್ ಕಂದು ಬಣ್ಣದ ಪ್ಯಾಂಟ್ ಮತ್ತು ಬ್ಯಾಕ್‌ಲೆಸ್ ಟಾಪ್ ಧರಿಸಿದ್ದಾಳೆ. ಬೆತ್ತಲೆ ಬೆನ್ನ ಮೇಲೆ ಹರಡಿರುವ ಕೂದಲ ರಾಶಿ ಸರಿ ಮಾಡಿಕೊಳ್ಳುತ್ತಾ ಫೋಸ್ ಕೊಡುತ್ತಾರೆ.

ಹಿಂದೊಮ್ಮೆ ಸರಪಳಿ ಧರಿಸಿ ಬಂದಿದ್ದ ಉರ್ಫಿ

ಇದಕ್ಕೂ ಮುನ್ನ ಉರ್ಫಿ ಜಾವೇದ್ ಮುಂಬೈನಲ್ಲಿ ಕಪ್ಪು ಸ್ಕರ್ಟ್‌ನೊಂದಿಗೆ ಚಂಕಿ ಸರಪಳಿಗಳನ್ನು ಧರಿಸಿ ಹೊರಬಂದಿದ್ದರು. ಸಾಮಾನ್ಯ ಟಾಪ್ ಬದಲಿಗೆ ತನ್ನ ಕುತ್ತಿಗೆಗೆ ಭಾರವಾದ ಮತ್ತು ಉದ್ದವಾದ ಪದರದ ಸರಪಳಿಗಳನ್ನು ಧರಿಸಿದ್ದರು. ಈ ಫೋಟೋ ಕೂಡ ಸಾಕಷ್ಟು ವೈರಲ್ ಆಗಿದ್ದವು.

ಮ್ಯೂಸಿಕ್ ಆಲ್ಬಂನಲ್ಲಿ ಮ್ಯಾಜಿಕ್ ಉರ್ಫಿ

ಉರ್ಫಿ ಜಾವೇದ್ ಇತ್ತೀಚೆಗೆ ತನ್ನ ಗೆಳೆಯ, ಗಾಯಕ ಕುನ್ವಾರ್ ಜೊತೆಗೆ ಮ್ಯೂಸಿಕ್ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದಾಳೆ. ಇದಲ್ಲದೆ, ಉರ್ಫಿ ಕಳೆದ ವರ್ಷ ಬಿಗ್ ಬಾಸ್ ಒಟಿಟಿಯಲ್ಲಿ ಭಾಗವಹಿಸಿದ್ದರು. ಆದರೆ ಕಾರ್ಯಕ್ರಮದಿಂದ ಎಲಿಮಿನೇಟ್ ಆದ ಮೊದಲ ಸ್ಪರ್ಧಿಯಾಗಿದ್ದರು.

ಇದನ್ನೂ ಓದಿ: Urfi Javed: ಪಡ್ಡೆ ಹುಡುಗರ ಎದೆಗೆ ಕಿಚ್ಚು ಹಚ್ಚಿದ ಉರ್ಫಿ ಅವತಾರ! ಚೈನ್‌ನಲ್ಲೇ ಮೈ ಮುಚ್ಚಿಕೊಳ್ತಾಳೆ ಈಕೆ!


ಅವರು ಬಡೇ ಭಯ್ಯಾ ಕಿ ದುಲ್ಹನಿಯಾ, ಮೇರಿ ದುರ್ಗಾ, ಬೇಪನ್ನಾ ಮತ್ತು ಪಂಚ್ ಬೀಟ್ ಸೀಸನ್ 2 ಸೇರಿದಂತೆ ಹಲವಾರು ಟಿವಿ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ‘ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ’ ಧಾರಾವಾಹಿಯಲ್ಲಿ ಸ್ವಲ್ಪ ಸಮಯದವರೆಗೆ ನಟಿಸಿದ್ದರು. ಬಳಿಕ ‘ಕಸೌಟಿ ಜಿಂದಗಿ ಕೇ 2’ ನಲ್ಲಿ ತನಿಶಾ ಚಕ್ರವರ್ತಿ ಪಾತ್ರದಲ್ಲಿ ನಟಿಸಿದ್ದರು.
Published by:Annappa Achari
First published: