• Home
  • »
  • News
  • »
  • entertainment
  • »
  • Urfi Javed: ಹೇಗೇಗೋ ಸೀರೆ ಉಟ್ಟ ಉರ್ಫಿ! ಉಯ್ಯಾಲೆಯಿಂದ ಬಿದ್ದಾಗ ಹಿಡಿಯೋಕೆ ಯುವಕರ ದಂಡೇ ಬಂತು!

Urfi Javed: ಹೇಗೇಗೋ ಸೀರೆ ಉಟ್ಟ ಉರ್ಫಿ! ಉಯ್ಯಾಲೆಯಿಂದ ಬಿದ್ದಾಗ ಹಿಡಿಯೋಕೆ ಯುವಕರ ದಂಡೇ ಬಂತು!

ಉರ್ಫಿ ಜಾವೇದ್

ಉರ್ಫಿ ಜಾವೇದ್

Urfi Javed: ನಟಿ ಉರ್ಫಿ ಜಾವೇದ್ ಸ್ಟೈಲಿಷ್ ಆಗಿ ಸೀರೆ ಉಟ್ಟು ಉಯ್ಯಾಲೆ ಮೇಲೆ ಡ್ಯಾನ್ಸ್ ಮಾಡಿದ್ದಾರೆ. ಆದರೆ ಆಯತಪ್ಪಿ ಬಿದ್ದಿದ್ದಾರೆ. ಅಯ್ಯೋ ಏನ್ ಹವಾ ಅಂತೀರಾ? ಉರ್ಫಿಯನ್ನು ಹಿಡಿಯೋಕೆ ಬಂತು ಯುವಕರ ದಂಡು!

  • News18 Kannada
  • Last Updated :
  • Bangalore, India
  • Share this:

ಹಿಂದಿ ಕಿರುತೆರೆ ನಟಿ, ಬಿಗ್ ಬಾಸ್ ಒಟಿಟಿ ಖ್ಯಾತಿಯ ಉರ್ಫಿ ಜಾವೇದ್ (Urfi javed) ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟಿವ್. ವಿಡಿಯೋ, ಫೋಟೋಗಳನ್ನು  (Photos) ಶೇರ್ ಮಾಡುತ್ತಲೇ ಇರುವ ನಟಿ ತಮ್ಮ ಡ್ರೆಸ್ಸಿಂಗ್ ಸ್ಟೈಲ್​ನಿಂದಲೇ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಈಗ ನಟಿ ಇನ್ನೊಂದು ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸೀರೆ (Saree) ಉಟ್ಟು ಕಾಣಿಸಿಕೊಂಡಿರೋ ನಟಿ ಉಯ್ಯಾಲೆ ಮೇಲೆ ಹತ್ತಿ ಡ್ಯಾನ್ಸ್ ಮಾಡಿದ್ದಾರೆ. ಬಿಗ್‌ ಬಾಸ್‌ನಿಂದ (Big Boss) ಖ್ಯಾತಿ ಗಳಿಸಿದ ಉರ್ಫಿ ಜಾವೇದ್ ಸಾಮಾಜಿಕ ಜಾಲತಾಣಗಳಲ್ಲಿ (Social Media) ಸಾಕಷ್ಟು ಸುದ್ದಿ ಹಾಗೂ ಸದ್ದು ಮಾಡುತ್ತಲೇ ಇರುತ್ತಾರೆ. ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ  ಉರ್ಫಿ ವಿಡಿಯೋಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾ ಇರುತ್ತಾರೆ. ನಮ್ಮ ಪಡ್ಡೆ ಹುಡುಗರೇನು ಕಡಿಮೆನಾ? ಉರ್ಫಿ ಜಾವೇದ್‌ರನ್ನು ಇನ್ಸ್ಟ್ರಾಗ್ರಾಮ್ (Instagram) ಸೇರಿದಂತೆ ಸಿಕ್ಕ ಸಿಕ್ಕ ಸಾಮಾಜಿಕ ಜಾಲತಾಣದಲ್ಲೆಲ್ಲ ಫಾಲೋ ಮಾಡ್ತಾನೇ ಇರ್ತಾರೆ.


ಸೀರೆ ಉಟ್ಟ ಉರ್ಫಿ


ಈ ಉರ್ಫಿ ಸೀರೆ ಉಟ್ಟಿದ್ದಾರೆ. ಸೀರೆ ಉಟ್ಟಿದ್ದೂ ಸರಿಯಾಗಿಲ್ಲ, ಅದರ ಜೊತೆ ಇದು ಬೇರೆ ಬೇಕಾ ಎಂದು ಜನ ಕೇಳುವಾಗಲೇ ಉರ್ಫಿ ಉಯ್ಯಾಲೆಯಿಂದ ಜಾರಿ ಬಿದ್ದುಬಿಟ್ಟಿದ್ದಾರೆ. ತಪ್ಪಿ ನೆಲಕ್ಕೆ ಬಿದ್ದಿದ್ದರೆ ಒಂಚೂರು ಏಟಾಗುತ್ತಿತ್ತೇನೋ.. ಏನ್ ಹವಾ ಅಂತೀರಾ? ಉರ್ಫಿ ಜಾರಿದ ಕೂಡಲೇ ಯುವಕರ ದಂಡು ಓಡಿ ಬಂದು ಅವರನ್ನು ಹಿಡಿದುಕೊಂಡಿದೆ.


ಕೆಂಪು ಸೀರೆಯಲ್ಲಿ ನಟಿಯ ಹಾಟ್ ಅವತಾರ


ಉರ್ಫಿ ಜಾವೇದ್ ಕೆಂಬಣ್ಣದ ಸೀರೆ ಉಟ್ಟು ಹಾಟ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದು ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ. ಅರೆಬರೆಯಾಗಿ ಸೀರೆ ಉಟ್ಟ ಉರ್ಫಿ ಜಾವೇದ್ ಉಯ್ಯಾಲೆ ಹಿಡಿದು ಜಾಲಿಯಾಗಿ ಡ್ಯಾನ್ಸ್ ಮಾಡಿದ್ದಾರೆ. ಗಾಳಿಯೂ ಜೋರಾಗಿ ಬೀಸುತ್ತಿತ್ತು. ಅಚಾನಕ್ ಆಗಿ ನಟಿ ಜಾರಿ ಬಿದ್ದಿದ್ದು ಯುವಕರೆಲ್ಲ ಓಡೋಡಿ ಬಂದು ನಟಿಯನ್ನು ಹಿಡಿದುಕೊಂಡಿದ್ದಾರೆ.









View this post on Instagram






A post shared by Uorfi (@urf7i)





ಇದನ್ನೂ ಓದಿ: Kantara-Kangana Ranaut: ಕಾಂತಾರ ಸಿನಿಮಾ ನೋಡೋಕೆ ಕುತೂಹಲ ತಡೆಯೋಕಾಗ್ತಿಲ್ಲ ಎಂದ ಕಂಗನಾ




ವಿಡಿಯೋ ಶೇರ್ ಮಾಡಿದ ಉರ್ಫಿ


ಉರ್ಫಿ ಈ ಬಿಟಿಎಸ್ ವಿಡಿಯೋ ಶೇರ್ ಮಾಡಿದ್ದು ಇದಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ನೆಟ್ಟಿಗರು ಕಾಮೆಂಟ್ ಮಾಡಿ ಸದ್ಯ ಹುಷಾರಾಗಿರಿ ಎಂದು ತಿಳಿಸಿದ್ದಾರೆ. ಇನ್ನೂ ಕೆಲವರು ಕಾಮಿನಿ ಎಂದಿದ್ದಾರೆ. ನೆಟ್ಟಿಗರಂತೂ ಈ ವಿಡಿಯೋದಲ್ಲಿಯೂ ಉರ್ಫಿಯನ್ನು ಟ್ರೋಲ್ ಮಾಡುವುದನ್ನು ಬಿಟ್ಟಿಲ್ಲ.


ಇದನ್ನೂ ಓದಿ: Urfi Javed: ಬೆತ್ತಲೆ ಫೋಟೋ ಶೂಟ್ ಮಾಡಿದ ಉರ್ಫಿ! ಗ್ಲಾಸ್ ಹಿಡಿದಿದ್ದಕ್ಕೆ ಬಚಾವ್


ಉರ್ಫಿ ಜಾವೇದ್ ಅವರು ಬಡೇ ಭಯ್ಯಾ ಕಿ ದುಲ್ಹನಿಯಾ, ಮೇರಿ ದುರ್ಗಾ, ಬೇಪನ್ನಾ ಮತ್ತು ಪಂಚ್ ಬೀಟ್ ಸೀಸನ್ 2 ಸೇರಿದಂತೆ ಹಲವಾರು ಟಿವಿ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ‘ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ’ ಧಾರಾವಾಹಿಯಲ್ಲಿ ಸ್ವಲ್ಪ ಸಮಯದವರೆಗೆ ನಟಿಸಿದ್ದರು. ಬಳಿಕ ‘ಕಸೂಟಿ ಜಿಂದಗಿ ಕೇ 2’ ನಲ್ಲಿ ತನಿಶಾ ಚಕ್ರವರ್ತಿ ಪಾತ್ರದಲ್ಲಿ ನಟಿಸಿದ್ದರು.


ಬಿಗ್ ಬಾಸ್ ಒಟಿಟಿಗೆ ಬಂದ ನಂತರ ಉರ್ಫಿ ಹೆಚ್ಚು ಹೈಲೈಟ್ ಆದರು. ಮೊದಲ ವಾರದಲ್ಲಿಯೇ ಎಲಿಮಿನೇಟ್ ಆದರೂ ಉರ್ಫಿ ಇನ್​ಸ್ಟಾಗ್ರಾಮ್​ನಲ್ಲಿ ಆ್ಯಕ್ಟಿವ್ ಆಗಿ ಅಭಿಮಾನಿಗಳನ್ನು ಗಳಿಸಿದರು. ಈಗ ಸೋಷಿಯಲ್ ಮೀಡಿಯಾ ಸೆನ್ಸೇಷನ್ ಆಗಿ ಪಡ್ಡೆ ಹುಡುಗರ ಫೇವರೇಟ್ ಆಗಿದ್ದಾರೆ.

Published by:Divya D
First published: