Urfi Javed: ಓ ಗುಲಾಬಿಯೇ, ಹೂಗಳ ರಾಶಿ ಮಧ್ಯೆ ನೀ ಎಲ್ಲಿರುವೆಯೇ! ಬಟ್ಟೆನೇ ಹಾಕದೆ ಪೋಸ್​ ಕೊಟ್ಟ ಉರ್ಫಿ

ಚಿತ್ರವಿಚಿತ್ರವಾದ ತರಹೇವಾರಿ ಡ್ರೆಸ್‌(Dress)ಗಳನ್ನ ತೊಡುವುದರಲ್ಲಿ ಉರ್ಫಿ ಜಾವೇದ್ ಸದಾ ಮುಂದು. ಪ್ರತಿದಿನ ಒಂದಲ್ಲ ಒಂದು ವಿಚಿತ್ರ ಉಡುಗೆ ತೊಟ್ಟು ಕ್ಯಾಮರಾಗೆ ಪೋಸ್​ ಕೊಡುತ್ತಾರೆ. ಇವಳ ಚಿತ್ರ ವಿಚಿತ್ರ ಅವತಾರ ಕಂಡುನೆಟ್ಟಿಗರು ಬೇಸತ್ತು ಹೋಗಿದ್ದಾರೆ.

ಉರ್ಫಿ ಜಾವೇದ್

ಉರ್ಫಿ ಜಾವೇದ್

  • Share this:
ಬಿಗ್ ಬಾಸ್ ಒಟಿಟಿ (Bigg Boss Ott) ಖ್ಯಾತಿಯ ಉರ್ಫಿ ಜಾವೇದ್ (Urfi Javed) ಸಾಮಾಜಿಕ ಮಾಧ್ಯಮದಲ್ಲಿ ಈಗ ಹೊಸ ಸೆನ್ಸೇಷನ್ (Sensation) ಸೃಷ್ಟಿಸಿದ್ದಾರೆ. ತಮ್ಮ ಮಾದಕ ನೋಟದಿಂದಲೇ ಎಲ್ಲರನ್ನೂ ಬೆರಗುಗೊಳಿಸುವ ಉರ್ಪಿ ಜಾವೇದ್, ಆಗಾಗೊಮ್ಮೆ ತಮ್ಮ ಸಾಮಾಜಿಕ ಮಾಧ್ಯಮಗಳ ವೇದಿಕೆಯಲ್ಲಿ ಹಂಚಿಕೊಳ್ಳುವ ಪೋಸ್ಟ್ ಗಳ ಮೂಲಕ ನಿರಂತವಾಗಿ ಸುದ್ದಿಯಲ್ಲಿ ಇರುತ್ತಾರೆ. ಕಿರುತೆರೆ ನಟಿ ಕಮ್ ಮಾಡೆಲ್ (Small Screen Actress) ಉರ್ಫಿ ಜಾವೇದ್ ಹೆಚ್ಚಾಗಿ ಸದ್ದು ಮಾಡಿರುವುದೇ ತಮ್ಮ ಡ್ರೆಸ್‌ಗಳ ಮೂಲಕ. ಚಿತ್ರವಿಚಿತ್ರವಾದ ತರಹೇವಾರಿ ಡ್ರೆಸ್‌ (Dress) ಗಳನ್ನ ತೊಡುವುದರಲ್ಲಿ ಉರ್ಫಿ ಜಾವೇದ್ ಸದಾ ಮುಂದು. ಪ್ರತಿದಿನ ಒಂದಲ್ಲ ಒಂದು ವಿಚಿತ್ರ ಉಡುಗೆ ತೊಟ್ಟು ಕ್ಯಾಮರಾಗೆ ಪೋಸ್​ ಕೊಡುತ್ತಾರೆ. ಇವಳ ಚಿತ್ರ ವಿಚಿತ್ರ ಅವತಾರ ಕಂಡು ಬೇಸತ್ತು ಹೋಗಿದ್ದಾರೆ.

ಗುಲಾಬಿಗಳ ಮಧ್ಯೆ ಸೇರಿಕೊಂಡ ಉರ್ಫಿ ಜಾವೇದ್​!

ಈಗಾಗಲೇ ತಮ್ಮ ಔಟ್‌ಫಿಟ್‌(Outfit)ಗಳ ವಿಚಾರದಲ್ಲಿ ಉರ್ಫಿ ಜಾವೇದ್ ಹಲವು ಬಾರಿ ಟ್ರೋಲ್ ಆಗಿದ್ದಾರೆ. ಹಾಗ್ನೋಡಿದ್ರೆ, ಉರ್ಫಿ ಜಾವೇದ್ ಯಾವುದೇ ಡ್ರೆಸ್ ತೊಟ್ಟರೂ ಟ್ರೋಲ್(Troll) ಆಗುತ್ತಿದ್ದಾರೆ. ಟ್ರೋಲ್​ ಆಗುವ ರೀತಿಯಲ್ಲೇ ಪ್ರತಿಬಾರಿ ವಿಚಿತ್ರ ಉಡುಗೆಗಳನ್ನು ಧರಿಸಿ ಉರ್ಫಿ ಕ್ಯಾಮರಾಗೆ ಪೋಸ್​ ಕೊಡುತ್ತಾರೆ. ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಗುಲಾಬಿಗಳ ರಾಶಿಯಲ್ಲಿ ಬಟ್ಟೆ ಹಾಕಿಕೊಳ್ಳದೇ ಕಾಣಿಸಿಕೊಂಡಿದ್ದಾರೆ. ಹೂಗಳ ರಾಶಿಯಲ್ಲೇ ತನ್ನ ಮೈ ಮುಚ್ಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.



ಬೋಲ್ಡ್​ ಅವತಾರದಿಂದಲಲೇ ಫೇಮಸ್​ ಆದ ಉರ್ಫಿ!

ಉರ್ಫಿ ಜಾವೇದ್​ ಟ್ರೋಲ್​ಗೆ ಒಳಗಾಗೋದು ಹೊಸದೇನಲ್ಲ. ಪ್ರತಿ ಭಾರಿ ಟ್ರೋಲ್​ಗೆ ಒಳಗಾಗ್ತಾರೆ. ಆದರೆ, ಯಾವುದಕ್ಕೂ ತಲೆಕೆಡಿಸಿಕೊಳ್ಳಲ್ಲ. ತನಗಿಷ್ಟ ಬಂದ ಉಡುಗೊರೆ ತೊಟ್ಟು ಖುಷಿ ಪಡುತ್ತಾರೆ. ಉರ್ಫಿ ಅಷ್ಟಾಗಿ ಫೇಮಸ್ ಆಗಿರಲಿಲ್ಲ. ಯಾವಾಗ ಬೋಲ್ಡ್ ಅವತಾರದಲ್ಲಿ ಏರ್​​ಪೋರ್ಟ್​ನಲ್ಲಿ(Airport) ಕಾಣಿಸಿಕೊಂಡರೋ ಅಂದಿನಿಂದ ಉರ್ಫಿ ಸಖತ್ ಫೇಮಸ್ ಆದರು.  ಕೆಲವರು ಉರ್ಫಿ ಜಾವೇದ್‌ರನ್ನ ಫ್ಯಾಶನ್ ಡಿಸಾಸ್ಟರ್(Fashion Disaster) ಅಂತಲೇ ಕರೆಯುತ್ತಿದ್ದಾರೆ. ಪ್ರತಿದಿನ ಚಿತ್ರ, ವಿಚಿತ್ರ ಬಟ್ಟೆಗಳನ್ನು ಧರಿಸಿ ಪಾಪಾರಾಜಿಗಳ ಕಣ್ಣಿಗೆ ಕಾಣಿಸಿಕೊಳ್ಳುತ್ತಾರೆ.

ಇದನ್ನೂ ಓದಿ: ಸೊಳ್ಳೆ ಬತ್ತಿಯಲ್ಲಿ ಮೈ ಮುಚ್ಚಿಕೊಂಡು ಬಂದ ಉರ್ಫಿ! ಕಳಚಿದ್ರೆ ನಿನ್ನ ಕಥೆ ಗೋವಿಂದ ಅಂತ ಟ್ರೋಲ್

ಕ್ಯಾಂಡಿಲೇ ಮೈ ಮುಚ್ಚಿಕೊಂಡು ಬಂದಿದ್ದ ಉರ್ಫಿ!

ಅಜ್ಜಿ ಕೂದಲು ಹತ್ತಿ ಮಿಠಾಯಿ ನಿಮಗೆ ತಿಳಿದಿದೆಯೇ? ಇದು ಪ್ರತಿಯೊಬ್ಬ ವ್ಯಕ್ತಿಯ ಬಾಲ್ಯದ ಸಿಹಿ ನೆನಪು.ಇಂದಿಗೂ ಅನೇಕ ಮಕ್ಕಳು ಹತ್ತಿ ಕ್ಯಾಂಡಿಯನ್ನು ಆನಂದಿಸುತ್ತಾರೆ. ಇವಾಗ ಯಾಕಪ್ಪ ಈ ಅಜ್ಜಿ ಕೂದಲು ಅಂತ ಹೇಳುತ್ತಾ ಇದ್ದೀವಿ ಅಂತ ಶಾಕ್​ ಆಯಿತಾ? ಆಗಲೇಬೇಕು. ಯಾಕಂದರೆ ಈ ಕ್ಯಾಂಡಿಯಲ್ಲೇ ಮೈ ಮುಚ್ಚಿಕೊಂಡು ಬಂದಿದ್ದಾರೆ ಉರ್ಪಿ ಜಾವೇದ್​.

ಉರ್ಫಿ ಜಾವೇದ್ ಧರಿಸಿರುವ ಉಡುಗೆ. ಆ ಉಡುಪನ್ನು ಚಕ್ಕಿ ಕಾಟನ್ ಕ್ಯಾಂಡಿಯಿಂದ ತಯಾರಿಸಲಾಗಿದೆ ಉರ್ಫಿ ಜಾವೇದ್ ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಹಸಿರು ಮತ್ತು ಗುಲಾಬಿ ಬಣ್ಣದ ಹತ್ತಿ ಕ್ಯಾಂಡಿಯಿಂದ ಮಾಡಿದ ಉಡುಪನ್ನು ಧರಿಸಿದ್ದಾಳೆ. ಅಷ್ಟೇ ಅಲ್ಲ ಈ ಡ್ರೆಸ್ ನಲ್ಲಿದ್ದ ಕಾಟನ್ ಕ್ಯಾಂಡಿಯನ್ನೂ ತಿನ್ನುತ್ತಾ ಪೋಸ್​ ನೀಡಿದ್ದರು.


ಚಕ್ಕುಲಿ ರೀತಿಯ ವಸ್ತುವಿನಿಂದ ಮೈ ಮುಚ್ಚಿಕೊಂಡು ಬಂದ ಉರ್ಫಿ!

ಟ್ರೋಲ್​ ಆಗುವ ರೀತಿಯಲ್ಲೇ ಪ್ರತಿಬಾರಿ ವಿಚಿತ್ರ ಉಡುಗೆಗಳನ್ನು ಧರಿಸಿ ಉರ್ಫಿ ಕ್ಯಾಮರಾಗೆ ಪೋಸ್​ ಕೊಡುತ್ತಾರೆ. ಕೆಲವರು ಉರ್ಫಿ ಜಾವೇದ್‌ರನ್ನ ಫ್ಯಾಶನ್ ಡಿಸಾಸ್ಟರ್(Fashion Disaster) ಅಂತಲೇ ಕರೆಯುತ್ತಿದ್ದಾರೆ. ಪ್ರತಿದಿನ ಏರ್​​ಪೋರ್ಟ್​ಗೆ ಹೋಗಿ ಪೋಸ್​ ಕೊಡ್ತಾರೆ ಉರ್ಫಿ. ಹಾಗಿದ್ದರೆ ಇವರು ಪ್ರತಿದಿನ ಫ್ಲೈಟ್​ನಲ್ಲಿ ಓಡಾಡ್ತಾರಾ ಅಂತ ಕೇಳಬೇಡಿ. ಫ್ಲೈಟ್​ ಹತ್ತೋದಿರಲಿ, ಅದರ ಹತ್ತಿರನೂ ಉರ್ಫಿ ಹೋಗಲ್ಲಾ ಎಂದು ಗೊತ್ತಾಗಿದೆ. ಈ ಬಾರಿ ಉರ್ಫಿ ಇನ್ನು ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಚಕ್ಕುಲಿ ರೀತಿಯ ವಸ್ತುವಿನಿಂದ ತನ್ನ ಮೈ ಮುಚ್ಚಿಕೊಂಡು ಕ್ಯಾಮರಾಗೆ ಪೋಸ್​ ಕೊಟ್ಟಿದ್ದಾರೆ.

Published by:Vasudeva M
First published: