Urfi Javed: ಸ್ವೀಟ್ ಮೇಲೆ ಹಾಕೋ ಸಿಲ್ವರ್ ಲೇಯರ್​ನಿಂದಲೇ ಮೈಮುಚ್ಚಿಕೊಂಡ ಉರ್ಫಿ, ಕಾಜು ಕಟ್ಲಿ ಎಂದ ನೆಟ್ಟಿಗರು

Urfi Javed: ಪ್ರತಿ ಬಾರಿ ಉರ್ಫಿಯದ್ದು ಕ್ಯಾಂಡಿ ಡ್ರೆಸ್, ಗ್ಯಾಲಕ್ಸಿ ಡ್ರೆಸ್ ಎಂದರೆ ಈ ಬಾರಿ ಡ್ರೆಸ್ ಎನ್ನುವ ಹಾಗೆಯೇ ಇಲ್ಲ. ಕಾರಣ ನಟಿ ಡ್ರೆಸ್ ಧರಿಸಿಲ್ಲ. ಸ್ವೀಟ್ ಮೇಲ್ಭಾಗದಿಂದ ಹಾಕುವ ಸಿಲ್ವರ್ ವರಾಖ್​ನಿಂದ ಮೈ ಮುಚ್ಚಿಕೊಂಡಿದ್ದಾರೆ.

ಉರ್ಫಿ ಜಾವೇದ್

ಉರ್ಫಿ ಜಾವೇದ್

  • Share this:
ಉರ್ಫಿ ಜಾವೇದ್ (Urfi Javed) ಆ ಡ್ರೆಸ್ ಧರಿಸಿದ್ರು, ಹೀಗಿತ್ತು ಫ್ಯಾಷನ್ (Fashion) ಅಂತೆಲ್ಲ ಕೇಳಿರುತ್ತೀರಿ. ಆದರೆ ಈ ಬಾರಿ ಡಿಫರೆಂಟ್. ಒಂದೇ ಒಂದು ಸಣ್ಣ ಬಟ್ಟೆಯೇ ಇಲ್ಲದೆ ನಟಿ ಈ ಬಾರಿ ಫ್ಯಾಷನ್ ಮಾಡಿದ್ದಾರೆ. ಬಟ್ಟೆ ಇಲ್ಲದೆ ಎಂಥಾ ಫ್ಯಾಷನ್ ಅಂತೀರಾ? ಹೌದು ನಟಿ ಸಿಲ್ವರ್ ವರಾಖ್ (Silver Varakh) ಬಳಸಿಕೊಂಡು ದೇಹ ಮುಚ್ಚಿಕೊಂಡಿದ್ದಾರೆ. ಸ್ವೀಟ್, ಸಿಹಿ ತಿನಿಸು, ಬರ್ಫಿಗಳ ಮೇಲ್ಭಾಗದಿಂದ ಕವರ್ ಮಾಡಲಾಗುವ ಸಿಲ್ವರ್ ಕಲರ್ ಪದರವನ್ನು ನೋಡಿದ್ದೀರಾ? ಅದೇ ಪದರವನ್ನು ಬಳಸಿಕೊಂಡು ನಟಿ (Actress) ದೇಹ ಮುಚ್ಚಿದ್ದಾರೆ. ಅಭಿಮಾನಿಗಳು ಸ್ವೀಟ್ ಅಂತ ಕಮೆಂಟ್ ಮಾಡೋದನ್ನು ನೋಡಿ ತಮ್ಮನ್ನು ತಾವೇ ಸ್ವೀಟ್ ಎಂದುಕೊಂಡು ಬಿಟ್ಟರೋ ಗೊತ್ತಿಲ್ಲ. ಆದರೆ ಈ ಲುಕ್ ಮಾತ್ರ ಈಗ ವೈರಲ್ (Viral) ಆಗಿದೆ.

ಉರ್ಫಿ ಜಾವೇದ್ ಈಗ ಟಾಪ್ ಸೆಲೆಬ್ರಿಟಿಗಳನ್ನೂ ಮೀರಿಸಿ ಫಾಲೋವರ್ಸ್​ಗಳನ್ನು ಪಡೆಯುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಅಕ್ಷರಶಃ ಉರ್ಫಿ ರಾಕಿಂಗ್. ತಮ್ಮ ಚಿತ್ರ ವಿಚಿತ್ರ ಉಡುಪುಗಳಿಂದ, ಫ್ಯಾಷನ್​ಗಳಿಂದ ನಟಿ ಟ್ರೋಲ್ಆಗುವುದರ ಜೊತೆ ಜೊತೆಗೆ ಸಿಕ್ಕಾಪಟ್ಟೆ ಅಭಿಮಾನಿಗಳ ಪ್ರೀತಿ ಗಳಿಸಿದ್ದಾರೆ.

ಸಾಲದ್ದಕ್ಕೆ ಪಾಪ್ಪರಾಜಿಗಳ ಮೋಸ್ಟ್ ಫೇವರೇಟ್ ಆಗಿದ್ದಾರೆ. ಉರ್ಫಿ ಜಾವೇದ್ ಹಾಟ್ ಲ್ಯಾವೆಂಡರ್ ಬ್ಯಾಕ್‌ಲೆಸ್ ಮಿನಿ ಡ್ರೆಸ್‌ನಲ್ಲಿ ಉತ್ಕೃಷ್ಟತೆಯನ್ನು ವ್ಯಕ್ತಪಡಿಸಿದ್ದಾರೆ. ಉರ್ಫಿ ಜಾವೇದ್ ಮತ್ತೊಮ್ಮೆ ತಮ್ಮ ವಿಶಿಷ್ಟ ಮತ್ತು ಪ್ರಾಯೋಗಿಕ ಫ್ಯಾಷನ್ ಸೆನ್ಸ್‌ನೊಂದಿಗೆ (Fashion Sense) ಮರಳಿದ್ದಾರೆ. ನೆಟಿಜನ್‌ಗಳು ಉತ್ಸುಕರಾಗಿದ್ದಾರೆ.

ಫೊಟೋಸ್ ವೈರಲ್

ಒಂದು ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆದಿರುವ ಉರ್ಫಿಯ ಫೊಟೋ  5694ಕ್ಕೂ ಹೆಚ್ಚು ಕಮೆಂಟ್​ಗಳನ್ನು ಗಳಿಸಿರುವುದು ವಿಶೇಷ. ಸದ್ಯ ಈ ಸ್ವೀಟ್ ಲೇಯರ್ ಫೋಟೋ ವೈರಲ್ ಆಗುತ್ತಿದೆ.

ಇದನ್ನೂ ಓದಿ: Urfi Javed: ಲ್ಯಾವೆಂಡರ್ ಬಣ್ಣದ ಬ್ಯಾಕ್​ಲೆಸ್ ಡ್ರೆಸ್​ನಲ್ಲಿ ಮಿಂಚಿದ ಉರ್ಫಿ!

ಸಿಲ್ವರ್ ವರಾಖ್ ಎಂದರೇನು?

ವರಾಖ್ ಶುದ್ಧ ಲೋಹದ ಉತ್ತಮವಾದ ಫಿಲಿಗ್ರೀ ಫಾಯಿಲ್ ಶೀಟ್ ಆಗಿದೆ. ಸಾಮಾನ್ಯವಾಗಿ ಬೆಳ್ಳಿ ಆದರೆ ಕೆಲವೊಮ್ಮೆ ಚಿನ್ನ, ಇದನ್ನು ದಕ್ಷಿಣ ಏಷ್ಯಾದ ಸಿಹಿತಿಂಡಿಗಳು ಮತ್ತು ಆಹಾರವನ್ನು ಅಲಂಕರಿಸಲು ಬಳಸಲಾಗುತ್ತದೆ. ಬೆಳ್ಳಿ ಮತ್ತು ಚಿನ್ನವು ರುಚಿಯಿಲ್ಲದಿದ್ದರೂ ತಿನ್ನಲು ಯೋಗ್ಯವಾಗಿದೆ.










View this post on Instagram






A post shared by Uorfi (@urf7i)






ಒಂದು ಮೈಕ್ರೊಮೀಟರ್‌ಗಿಂತ ಕಡಿಮೆ ದಪ್ಪವಿರುವ, ಸಾಮಾನ್ಯವಾಗಿ 0.2 μm-0.8 μm ಶೀಟ್‌ಗಳಿಗೆ ಬೆಳ್ಳಿಯನ್ನು ಬಡಿಯುವ ಮೂಲಕ ವರಕ್ ಅನ್ನು ತಯಾರಿಸಲಾಗುತ್ತದೆ.

ಉರ್ಫಿಗೆ ಟ್ರೋಲ್ ಹೊಸದೇನಲ್ಲ

‘ಉರ್ಫಿ ಜಾವೇದ್​ ಟ್ರೋಲ್​ಗೆ ಒಳಗಾಗೋದು ಹೊಸದೇನಲ್ಲ. ಪ್ರತಿ ಭಾರಿ ಟ್ರೋಲ್​ಗೆ ಒಳಗಾಗ್ತಾರೆ. ಆದರೆ, ಯಾವುದಕ್ಕೂ ತಲೆಕೆಡಿಸಿಕೊಳ್ಳಲ್ಲ. ತನಗಿಷ್ಟ ಬಂದ ಉಡುಗೊರೆ ತೊಟ್ಟು ಖುಷಿ ಪಡುತ್ತಾರೆ. ಉರ್ಫಿ ಅಷ್ಟಾಗಿ ಫೇಮಸ್ ಆಗಿರಲಿಲ್ಲ. ಯಾವಾಗ ಬೋಲ್ಡ್ ಅವತಾರದಲ್ಲಿ ಏರ್​​ಪೋರ್ಟ್​ನಲ್ಲಿ(Airport) ಕಾಣಿಸಿಕೊಂಡರೋ ಅಂದಿನಿಂದ ಉರ್ಫಿ ಸಖತ್ ಫೇಮಸ್ ಆದರು.

ಇದನ್ನೂ ಓದಿ: Urfi Javed Galaxy Dress: ಪಾಪ್ಸ್ ಬಳಿ ಚೈನ್ ಕೇಳಿದ ಉರ್ಫಿ ಜಾವೇದ್! ಗ್ಯಾಲಕ್ಸಿ ಡ್ರೆಸ್​ನಲ್ಲಿ ಶೈನ್, ತಲೆಯ ಮೇಲೆ ತಾರೆಗಳು!

ಕೆಲವರು ಉರ್ಫಿ ಜಾವೇದ್‌ರನ್ನ ಫ್ಯಾಶನ್ ಡಿಸಾಸ್ಟರ್(Fashion Disaster) ಅಂತಲೇ ಕರೆಯುತ್ತಿದ್ದಾರೆ. ಪ್ರತಿದಿನ ಚಿತ್ರ, ವಿಚಿತ್ರ ಬಟ್ಟೆಗಳನ್ನು ಧರಿಸಿ ಪಾಪಾರಾಜಿಗಳ ಕಣ್ಣಿಗೆ ಕಾಣಿಸಿಕೊಳ್ಳುತ್ತಾರೆ.

ಯಾರು ಏನಾದ್ರೂ ಹೇಳಲಿ ಉರ್ಫಿ ಇರೋದೇ ಹೀಗೆ

ಬಹಳಷ್ಟು ನಟಿಯರು, ಜನರು ನಟಿಯನ್ನು ಟ್ರೋಲ್ ಮಾಡಿ ಕಾಲೆಳೆದರೂ ಉರ್ಫಿ ಒಂಚೂರು ತೆಲೆ ಕೆಡಿಸಿಕೊಳ್ಳುವುದಿಲ್ಲ. ಈ ಕಾರಣದಿಂದಲೇ ನಟಿ ಸೋಷಿಯಲ್ ಮೀಡಿಯಾದಲ್ಲಿ ದಿನದಿಂದ ದಿನಕ್ಕೆ ಫಾಲೋವರ್ಸ್ ಸಂಖ್ಯೆ ಏರಿಸಿಕೊಳ್ಳುತ್ತಲೇ ಇದ್ದಾರೆ.
Published by:Divya D
First published: